
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಲೀಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದಿರುವ ಜೈಸ್ವಾಲ್ 144 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಶತಕ ಪೂರೈಸಿದ್ದಾರೆ. ಆರಂಭದಿಂದಲೂ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಜೈಸ್ವಾಲ್, ಮೈದಾನದಲ್ಲಿ ಬೌಂಡರಿಗಳ ಮಳೆ ಸುರಿಸಿದರು. ಅಲ್ಲದೆ ಮತ್ತೊಬ್ಬ ಆರಂಭಿಕ ಕೆಎಲ್ ರಾಹುಲ್ (KL Rahul) ಜೊತೆ ಸೇರಿ ಮೊದಲ ವಿಕೆಟ್‌ಗೆ ದಾಖಲೆಯ 91 ರನ್‌ಗಳ ಜೊತೆಯಾಟವನ್ನು ಕಟ್ಟಿದರು. ಇವರಿಬ್ಬರ ಜೊತೆಯಾಟ ಇಂಗ್ಲೆಂಡ್ ನೆಲದಲ್ಲಿ ಅದರಲ್ಲೂ ಲೀಡ್ಸ್ ಮೈದಾನದಲ್ಲಿ ಭಾರತದ ಆರಂಭಿಕರಿಂದ ದಾಖಲಾದ ಅತ್ಯಧಿಕ ಜೊತೆಯಾಟ ಎಂಬ ದಾಖಲೆಯನ್ನು ಸೃಷ್ಟಿಸಿತು.
ಇಂಗ್ಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಯಶಸ್ವಿ ಜೈಸ್ವಾಲ್ 96 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಬಳಿಕ ಮುಂದಿನ 48 ಎಸೆತಗಳಲ್ಲಿ ಉಳಿದ 50 ರನ್ಗಳನ್ನು ಕಲೆಹಾಕಿ ತಮ್ಮ ಟೆಸ್ಟ್ ವೃತ್ತಿಜೀವನದ ಐದನೇ ಶತಕವನ್ನು ಪೂರೈಸಿದರು. ಇದರೊಂದಿಗೆ, ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೈಸ್ವಾಲ್ಗೂ ಮೊದಲು ಮುರಳಿ ವಿಜಯ್, ವಿಜಯ್ ಮಂಜ್ರೇಕರ್, ಸೌರವ್ ಗಂಗೂಲಿ ಹಾಗೂ ಸಂದೀಪ್ ಪಾಟೀಲ್ ಶತಕದ ಸಾಧನೆ ಮಾಡಿದ್ದರು.
💯 for Yashasvi Jaiswal! 👏 👏
5th hundred in Test cricket! 👍 👍
This has been a fine knock in the series opener! 🙌 🙌
Updates ▶️ https://t.co/CuzAEnAMIW#TeamIndia | #ENGvIND | @ybj_19 pic.twitter.com/pGmPoFYik6
— BCCI (@BCCI) June 20, 2025
ವಾಸ್ತವವಾಗಿ ಇದು ಜೈಸ್ವಾಲ್ ಅವರ ಇಂಗ್ಲೆಂಡ್ ವಿರುದ್ಧದ ಆರನೇ ಪಂದ್ಯವಾಗಿದೆ. ವಿಶೇಷವೆಂದರೆ ಜೈಸ್ವಾಲ್ ಈ ತಂಡದ ವಿರುದ್ಧದ ಪ್ರತಿ ಟೆಸ್ಟ್‌ನಲ್ಲಿಯೂ 50+ ರನ್ ಕಲೆಹಾಕಿದ್ದಾರೆ. ಇದಕ್ಕೂ ಮೊದಲು, ಅವರು ಇಂಗ್ಲೆಂಡ್ ವಿರುದ್ಧ 2 ದ್ವಿಶತಕಗಳನ್ನು ಬಾರಿಸಿದ್ದಾರೆ. ಇದೆಲ್ಲದರ ಜೊತೆಗೆ ಇದು ಇಂಗ್ಲೆಂಡ್ ನೆಲದಲ್ಲಿ ಜೈಸ್ವಾಲ್ ಅವರ ಮೊದಲ ಟೆಸ್ಟ್ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
IND vs ENG: ಲೀಡ್ಸ್‌ನಲ್ಲಿ ಮೊದಲ ದಿನವೇ ಇತಿಹಾಸ ಸೃಷ್ಟಿಸಿದ ರಾಹುಲ್-ಜೈಸ್ವಾಲ್ ಜೋಡಿ
ಈ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ವಿಶೇಷ ದಾಖಲೆಯನ್ನು ನಿರ್ಮಿಸಿದ್ದು, ಲೀಡ್ಸ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಯಾವುದೇ ಭಾರತೀಯ ಆರಂಭಿಕ ಆಟಗಾರ ಈ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಅವರ ಟೆಸ್ಟ್ ವೃತ್ತಿಜೀವನದ ಕೇವಲ 20 ನೇ ಪಂದ್ಯ ಇದಾಗಿದ್ದು, ಅವರು ಇಲ್ಲಿಯವರೆಗೆ 5 ಶತಕಗಳನ್ನು ಬಾರಿಸಿದ್ದಾರೆ. ಈ ಪೈಕಿ 3 ಶತಕಗಳು ಭಾರತದ ಹೊರಗೆ ಬಂದಿವೆ.
Published On - 8:09 pm, Fri, 20 June 25