World Cup 2025: ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ
Women's World Cup 2025: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ ಅವರು ಮೊಣಕಾಲಿನ ಗಾಯದಿಂದಾಗಿ 2025ರ ಮಹಿಳಾ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಉಮಾ ಛೆಟ್ರಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಗಾಯದಿಂದಾಗಿ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ವಿಶ್ವಕಪ್‌ಗೂ ಮುನ್ನ ಈ ಬದಲಾವಣೆ ಭಾರತಕ್ಕೆ ಸವಾಲಾಗಿದೆ. ಉಮಾ ಛೆಟ್ರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

2025 ರ ಮಹಿಳಾ ಏಕದಿನ ವಿಶ್ವಕಪ್ (Women’s World Cup 2025) ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಾವಳಿ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ. ಆದರೆ ಈ ಟೂರ್ನಿ ಆರಂಭಕ್ಕೂ ಮೊದಲು, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಸಹ ಆಡಬೇಕಾಗಿದೆ. ಹೀಗಾಗಿ ನೀತು ಡೇವಿಡ್ ನೇತೃತ್ವದ ಮಹಿಳಾ ಆಯ್ಕೆ ಸಮಿತಿಯು ಆಗಸ್ಟ್ 19 ರಂದು ಭಾರತೀಯ ಮಹಿಳಾ ತಂಡದ ತಂಡವನ್ನು ಘೋಷಿಸಿತ್ತು. ಆದರೆ ಈಗ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಗಾಯದ ಕಾರಣದಿಂದಾಗಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ (Yastika Bhatia) ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಯಾಗಿ ಉಮಾ ಛೆಟ್ರಿ (Uma Chetry) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಯಾಸ್ತಿಕಾ ಭಾಟಿಯಾಗೆ ಇಂಜುರಿ
ಏಕದಿನ ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಭಾರತೀಯ ಮಹಿಳಾ ತಂಡವು ಭಾರಿ ಹಿನ್ನಡೆ ಅನುಭವಿಸಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಐಸಿಸಿ ಮಹಿಳಾ ವಿಶ್ವಕಪ್ 2025 ರಿಂದ ಯಸ್ತಿಕಾ ಭಾಟಿಯಾ ಹೊರಗುಳಿದಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಭಾರತೀಯ ಮಹಿಳಾ ತಂಡದ ತಯಾರಿ ಶಿಬಿರದ ಸಮಯದಲ್ಲಿ ಮೊಣಕಾಲಿನ ಗಾಯಕ್ಕೆ ಯಾಸ್ತಿಕಾ ತುತ್ತಾಗಿದ್ದು, ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ಮಹಿಳಾ ಆಯ್ಕೆ ಸಮಿತಿಯು ಯಾಸ್ತಿಕಾ ಭಾಟಿಯಾ ಬದಲಿಗೆ ಉಮಾ ಛೆಟ್ರಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಈ ಬಗ್ಗೆ ಬಿಸಿಸಿಐ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತರಬೇತಿಯ ಸಮಯದಲ್ಲಿ ಯಾಸ್ತಿಕಾ ಭಾಟಿಯಾ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಯಸ್ತಿಕಾ ಭಾಟಿಯಾ ಅವರ ಗಾಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಹೀಗಾಗಿ ಯಾಸ್ತಿಕಾ ಭಾಟಿಯಾ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದೇವೆ ಎಂದು ಬರೆದುಕೊಂಡಿದೆ.
🚨 NEWS 🚨
Uma Chetry named as a replacement for Yastika Bhatia in #TeamIndia’s squad for the upcoming three-match ODI series against Australia and ICC Women’s Cricket World Cup 2025.
Details 🔽 #WomenInBlue | #CWC25 | #INDvAUS | @IDFCFIRSTBank https://t.co/dD3NBOu2Wp pic.twitter.com/rq8EnNe5EY
— BCCI Women (@BCCIWomen) September 4, 2025
ಉಮಾ ಛೆಟ್ರಿಗೆ ಅವಕಾಶ
ಯಾಸ್ತಿಕಾ ಅವರು ಗಾಯಗೊಂಡಿರುವುದು ಉಮಾ ಛೆಟ್ರಿ ಅವರಿಗೆ ಒಂದು ದೊಡ್ಡ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಏಕೆಂದರೆ ಉಮಾ ಇನ್ನೂ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಈ ಅವಕಾಶದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.
ಏಕದಿನ ವಿಶ್ವಕಪ್ ಟಿಕೆಟ್ ಒಂದು ಕಪ್ ಕಾಫಿಗಿಂತಲೂ ಅಗ್ಗ; ಬೆಲೆ ಇಷ್ಟೊಂದು ಕಡಿಮೆ ನಾ?
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿಕೆಟ್‌ಕೀಪರ್), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಉಮಾ ಛೆಟ್ರಿ ಮತ್ತು ಸ್ನೇಹ ರಾಣಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Thu, 4 September 25
