Year Ender 2022: ಈ ವರ್ಷ ಭಾರತದ ಪರ ಮೂರು ಸ್ವರೂಪಗಳಲ್ಲಿ ಮಿಂಚಿದ ಟಾಪ್ 5 ಕ್ರಿಕೆಟಿಗರಿವರು

Year Ender 2022: ಹಲವು ಪ್ರಮುಖ ಪಂದ್ಯಾವಳಿಗಳ ಸೋಲುಗಳೊಂದಿಗೆ ವರ್ಷ ಮುಗಿಸಿರುವ ಭಾರತಕ್ಕೆ 2023ರಲ್ಲಿ ದೊಡ್ಡ ದೊಡ್ಡ ಸವಾಲುಗಳೇ ಎದುರಾಗುತ್ತಿವೆ. ಮುಂದಿನ ವರ್ಷ ಎರಡು ಐಸಿಸಿ ಈವೆಂಟ್​ಗಳು ನಡೆದರೆ, ಏಷ್ಯಾಕಪ್ ಕೂಡ ಮುಂದಿನ ವರ್ಷವೇ ನಡೆಯಲಿದೆ.

Year Ender 2022: ಈ ವರ್ಷ ಭಾರತದ ಪರ ಮೂರು ಸ್ವರೂಪಗಳಲ್ಲಿ ಮಿಂಚಿದ ಟಾಪ್ 5 ಕ್ರಿಕೆಟಿಗರಿವರು
ರೋಹಿತ್, ರಾಹುಲ್, ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Dec 26, 2022 | 6:28 PM

ಟೀಂ ಇಂಡಿಯಾ (Team India) 2022 ರ ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ. ಮೀರ್‌ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಟೀಂ ಇಂಡಿಯಾ (India Vs Bangladesh) 2-0 ಅಂತರದಿಂದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ. ಆದರೆ ಹಲವು ಪ್ರಮುಖ ಪಂದ್ಯಾವಳಿಗಳ ಸೋಲುಗಳೊಂದಿಗೆ ವರ್ಷ ಮುಗಿಸಿರುವ ಭಾರತಕ್ಕೆ 2023ರಲ್ಲಿ ದೊಡ್ಡ ದೊಡ್ಡ ಸವಾಲುಗಳೇ ಎದುರಾಗುತ್ತಿವೆ. ಮುಂದಿನ ವರ್ಷ ಎರಡು ಐಸಿಸಿ ಈವೆಂಟ್​ಗಳು ನಡೆದರೆ, ಏಷ್ಯಾಕಪ್ ಕೂಡ ಮುಂದಿನ ವರ್ಷವೇ ನಡೆಯಲಿದೆ. ಹೀಗಾಗಿ ಭಾರತ ಮುಂದಿನ ವರ್ಷದ ಸವಾಲುಗಳಿಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ. ಆದರೆ ಅದಕ್ಕೂ ಮುನ್ನ ಈ ವರ್ಷ ಟೀಂ ಇಂಡಿಯಾ ಪರ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದಾನೆ ಎಂಬುದರ ರಿಪೋರ್ಟ್​ ಕಾರ್ಡ್​ ಇಲ್ಲಿದೆ.

ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಎರಡು ಶತಕಗಳನ್ನು ಬಾರಿಸುವ ಮೂಲಕ ಈ ವರ್ಷ ಬರವನ್ನು ಅಂತ್ಯಗೊಳಿಸಿದ್ದಾರೆ. ಆದರೆ 2022ರಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಅವರಲ್ಲ ಎಂಬುದು ಗಮನಾರ್ಹ. ನಾಯಕ ರೋಹಿತ್ ಶರ್ಮಾ ಅವರಿಗೆ ಈ ವರ್ಷ ಮರೆಯಲಾಗದ ವರ್ಷ. ಯಾಕೆಂದರೆ ಈ ವರ್ಷ ಏಷ್ಯಾಕಪ್ ಅಥವಾ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಟೆಸ್ಟ್, ಏಕದಿನ ಮತ್ತು ಟಿ20 ಗಳಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರು ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.

IND vs SL: ಲಂಕಾ ವಿರುದ್ಧದ ಟಿ20 ಸರಣಿಗೆ ಯಾರಿಗೆಲ್ಲಾ ಅವಕಾಶ? ಸಂಭಾವ್ಯ ಟೀಂ ಇಂಡಿಯಾ ಹೀಗಿದೆ

ಟೆಸ್ಟ್​ನಲ್ಲಿ ಪಂತ್ ಮೇಲುಗೈ

ಟೆಸ್ಟ್ ಕ್ರಿಕೆಟ್ ಕುರಿತು ಮಾತನಾಡುವುದಾದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಈ ವರ್ಷ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ರಿಷಬ್ ಪಂತ್ 7 ಪಂದ್ಯಗಳಲ್ಲಿ 61.81 ಸರಾಸರಿಯಲ್ಲಿ 680 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಪಂತ್ ಎರಡು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ. ಆದರೆ ಈ ಟಾಪ್ 5 ಆಟಗಾರರಲ್ಲಿ ಭಾರತದ ಯಾವುದೇ ಸ್ಟಾರ್ ಆಟಗಾರ ಸ್ಥಾನ ಪಡೆದಿಲ್ಲ.

ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು

  • 1. ರಿಷಬ್ ಪಂತ್ – 7 ಪಂದ್ಯಗಳು, 680 ರನ್
  • 2. ಶ್ರೇಯಸ್ ಅಯ್ಯರ್ – 5 ಪಂದ್ಯಗಳು, 422 ರನ್
  • 3. ಚೇತೇಶ್ವರ ಪೂಜಾರ- 5 ಪಂದ್ಯಗಳು, 409 ರನ್
  • 4. ರವೀಂದ್ರ ಜಡೇಜಾ – 3 ಪಂದ್ಯಗಳು, 328 ರನ್
  • 5. ರವಿಚಂದ್ರನ್ ಅಶ್ವಿನ್ – 6 ಪಂದ್ಯಗಳು, 270 ರನ್

ಏಕದಿನದಲ್ಲಿ ಶ್ರೇಯಸ್ ಶೈನ್

ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದಾಖಲೆ ಬರೆದಿದ್ದಾರೆ. ಈ ವರ್ಷ 17 ಏಕದಿನ ಪಂದ್ಯಗಳಲ್ಲಿ ಶ್ರೇಯಸ್ 55.69 ಸರಾಸರಿಯಲ್ಲಿ ಶತಕ ಮತ್ತು 6 ಅರ್ಧಶತಕ ಸೇರಿದಂತೆ 724 ರನ್ ಗಳಿಸಿದ್ದಾರೆ. ಆದರೆ ಇಲ್ಲೂ ಕೂಡ ಸ್ಟಾರ್ ಕ್ರಿಕೆಟಿಗರ ಹೆಸರಿಲ್ಲ.

ಏಕದಿನದಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ನೀಡಿದವರು

  • 1. ಶ್ರೇಯಸ್ ಅಯ್ಯರ್ – 17 ಪಂದ್ಯಗಳು, 724 ರನ್
  • 2. ಶಿಖರ್ ಧವನ್ – 22 ಪಂದ್ಯಗಳು, 688 ರನ್
  • 3. ಶುಭಮನ್ ಗಿಲ್ – 12 ಪಂದ್ಯಗಳು, 638 ರನ್
  • 4. ಇಶಾನ್ ಕಿಶನ್ – 8 ಪಂದ್ಯಗಳು, 417 ರನ್
  • 5. ರಿಷಬ್ ಪಂತ್ – 12 ಪಂದ್ಯಗಳು, 336 ರನ್

ಟಿ20ಯಲ್ಲಿ ಸೂರ್ಯ ಸ್ಫೋಟ

ಸೂರ್ಯಕುಮಾರ್ ಯಾದವ್ ಈ ವರ್ಷದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸೂರ್ಯ 31 ಪಂದ್ಯಗಳಲ್ಲಿ 46.56 ಸರಾಸರಿಯಲ್ಲಿ 1164 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ 20 ಪಂದ್ಯಗಳಲ್ಲಿ 781 ರನ್ ಗಳಿಸುವ ಮೂಲಕ ಈ ಭಾರತೀಯ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟೀಂ ಇಂಡಿಯಾ ಆಟಗಾರರು

  • 1. ಸೂರ್ಯಕುಮಾರ್ ಯಾದವ್- 31 ಪಂದ್ಯಗಳು, 1164 ರನ್
  • 2. ವಿರಾಟ್ ಕೊಹ್ಲಿ – 20 ಪಂದ್ಯಗಳು, 781 ರನ್
  • 3. ರೋಹಿತ್ ಶರ್ಮಾ – 29 ಪಂದ್ಯಗಳು, 656 ರನ್
  • 4. ಹಾರ್ದಿಕ್ ಪಾಂಡ್ಯ – 27 ಪಂದ್ಯಗಳು, 607 ರನ್
  • 5. ಇಶಾನ್ ಕಿಶನ್- 16 ಪಂದ್ಯಗಳು, 476 ರನ್

ಶ್ರೇಯಸ್ ಅಯ್ಯರ್ ಅಗ್ರಸ್ಥಾನದಲ್ಲಿ

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಈ ವರ್ಷ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಶ್ರೇಯಸ್ ಅಯ್ಯರ್ 40 ಇನ್ನಿಂಗ್ಸ್‌ಗಳಲ್ಲಿ 48.75 ಸರಾಸರಿಯಲ್ಲಿ ಒಟ್ಟು 1609 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ.

2022 ರಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳಿಸಿದವರು (ಎಲ್ಲಾ ಮೂರು ಸ್ವರೂಪಗಳನ್ನು ಒಳಗೊಂಡಂತೆ)

  • 1. ಶ್ರೇಯಸ್ ಅಯ್ಯರ್ – 1609 ರನ್
  • 2. ಸೂರ್ಯಕುಮಾರ್ ಯಾದವ್- 1424 ರನ್
  • 3. ರಿಷಬ್ ಪಂತ್ – 1380 ರನ್
  • 4. ವಿರಾಟ್ ಕೊಹ್ಲಿ – 1348 ರನ್
  • 5. ರೋಹಿತ್ ಶರ್ಮಾ – 995 ರನ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Mon, 26 December 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ