50 ಓವರ್ ಪಂದ್ಯದಲ್ಲಿ 20 ರನ್ ಬಾರಿಸದ ಬ್ಯಾಟ್ಸ್ಮನ್ಗಳು: ಗೆದ್ದಿದ್ದು ಕೇವಲ 1 ವಿಕೆಟ್ನಿಂದ..!
Yorkshire - Derbyshire: ಇಂತಹದೊಂದು ಅಪರೂಪದ ಪಂದ್ಯಕ್ಕೆ ಸಾಕ್ಷಿಯಾಗಿದ್ದು ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್. ಗ್ರೂಪ್-ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ ಡರ್ಬಿಶೈರ್ ಹಾಗೂ ಯಾರ್ಕ್ಶೈರ್ ತಂಡಗಳು ಮುಖಾಮುಖಿಯಾಗಿತ್ತು.

50 ಓವರ್ ಪಂದ್ಯ…ಅಂದರೆ ಬರೋಬ್ಬರಿ 300 ಎಸೆತಗಳು…ಆದರೆ ಇಲ್ಲೊಂದು ತಂಡದ ಬ್ಯಾಟ್ಸ್ಮನ್ಗಳ ವೈಯುಕ್ತಿಕ ಮೊತ್ತ 20 ರನ್ ದಾಟಿರಲಿಲ್ಲ ಎಂಬುದು ವಿಶೇಷ. ಇದಾಗ್ಯೂ 109 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ವೈಡ್-ನೋಬಾಲ್ ಮೂಲಕ 10 ರನ್ಗಳು ಹೆಚ್ಚುವರಿಯಾಗಿ ಲಭಿಸಿತ್ತು. ಅಚ್ಚರಿಯೆಂದರೆ 110 ರನ್ಗಳ ಮೊತ್ತವನ್ನು ಬೆನ್ನತ್ತಿದ ಎದುರಾಳಿ ತಂಡ ಕೂಡ 9 ವಿಕೆಟ್ ಕಳೆದುಕೊಂಡು ರೋಚಕ ಜಯ ಸಾಧಿಸಿತ್ತು.
ಇಂತಹದೊಂದು ಅಪರೂಪದ ಪಂದ್ಯಕ್ಕೆ ಸಾಕ್ಷಿಯಾಗಿದ್ದು ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್. ಗ್ರೂಪ್-ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ ಡರ್ಬಿಶೈರ್ ಹಾಗೂ ಯಾರ್ಕ್ಶೈರ್ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಡರ್ಬಿಶೈರ್ ತಂಡವು ಯಾರ್ಕ್ಶೈರ್ ಬೌಲರ್ಗಳ ದಾಳಿಗೆ ತತ್ತರಿಸಿತು.
ರನ್ಗಳಿಸುವುದು ಇರಲಿ, ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಿದ ಡರ್ಬಿಶೈರ್ ಅಂತಿಮವಾಗಿ 42.4 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಹ್ಯಾರಿ ಕೇಮ್ 58 ಎಸೆತಗಳಲ್ಲಿ 19 ರನ್ಗಳಿಸಿದ್ದು ಗರಿಷ್ಠ ಸ್ಕೋರ್. ಇದಾಗ್ಯೂ ಯಾವುದೇ ಬ್ಯಾಟ್ಸ್ಮನ್ಗಳ ಸ್ಕೋರ್ 20ರ ಗಡಿದಾಟಿರಲಿಲ್ಲ. ಹಾಗೆಯೇ 10 ಹೆಚ್ಚುವರಿ ರನ್ಗಳ ನೆರವಿನಿಂದ ಡರ್ಬಿಶೈರ್ 109 ರನ್ಗಳನ್ನು ಕಲೆಹಾಕಿತು.
110 ರನ್ಗಳ ಸಾಧಾರಣ ಸವಾಲು ಪಡೆದ ಯಾರ್ಕ್ಶೈರ್ ತಂಡವು 78 ರನ್ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಪಂದ್ಯವು ರೋಚಕತೆಯತ್ತ ಸಾಗಲಾರಂಭಿಸಿತು. 101 ರನ್ಗಳಿಗೆ 8 ವಿಕೆಟ್ ಉರುಳಿಸಿದ ಡರ್ಬಿಶೈರ್ ಒಂದು ಹಂತದಲ್ಲಿ ಗೆಲ್ಲುವ ಸೂಚನೆ ನೀಡಿತು. ಆದರೆ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹ್ಯಾರಿಸ್ ಸುಲ್ಲಿವನ್ 17 ಎಸೆತಗಳನ್ನು ಎದುರಿಸಿ 7 ರನ್ ಕಲೆಹಾಕಿದರು. ಇದಾಗ್ಯೂ 109 ರನ್ಗಳಿಸಿದ್ದ ವೇಳೆ 9ನೇ ವಿಕೆಟ್ ಕೂಡ ಪತನಗೊಂಡಿತು. ಈ ಹಂತದಲ್ಲಿ ಎಚ್ಚರಿಕೆಯ ಆಟವಾಡಿದ ಸುಲ್ಲಿವನ್ ಒಂದು ರನ್ಗಳಿಸುವ ಮೂಲಕ ತಂಡಕ್ಕೆ ಒಂದು ವಿಕೆಟ್ನ ರೋಚಕ ಜಯ ತಂದುಕೊಟ್ಟರು.




