Yuzvendra Chahal: ಶಾಕಿಂಗ್ ಘಟನೆಯ ನಂತರ ಕ್ರಿಕೆಟ್​​ ಆಟದ ಈ ನಿಯಮ ಬದಲಾವಣೆ ಆಗಲೇಬೇಕು ಎಂದು ಒತ್ತಾಯಿಸಿದ ಚಹಾಲ್

| Updated By: shivaprasad.hs

Updated on: May 15, 2022 | 2:02 PM

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಒಂಬತ್ತನೇ ಓವರ್​ನಲ್ಲಿ ಶಾಕಿಂಗ್ ಘಟನೆಯೊಂದು ನಡೆದಿತ್ತು. ಚೆಂಡು ವಿಕೆಟ್​ಗೆ ತಾಗಿದರೂ ಬೇಲ್ಸ್​ ಬಿದ್ದಿರಲಿಲ್ಲ. ಪಂದ್ಯದಲ್ಲಿ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿದ್ದ ರಾಜಸ್ಥಾನದ ಕನಸು ಇದರಿಂದ ಕಮರಿಹೋಯಿತು. ಇದೀಗ ಈ ಘಟನೆಯ ಬಗ್ಗೆ ಯಜುವೇಂದ್ರ ಚಹಾಲ್ ಪ್ರತಿಕ್ರಿಯಿಸಿದ್ದಾರೆ.

Yuzvendra Chahal: ಶಾಕಿಂಗ್ ಘಟನೆಯ ನಂತರ ಕ್ರಿಕೆಟ್​​ ಆಟದ ಈ ನಿಯಮ ಬದಲಾವಣೆ ಆಗಲೇಬೇಕು ಎಂದು ಒತ್ತಾಯಿಸಿದ ಚಹಾಲ್
ಯಜುವೇಂದ್ರ ಚಾಹಲ್
Follow us on

ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಪಂದ್ಯದ ವೇಳೆ ಶಾಕಿಂಗ್​ ಘಟನೆಯೊಂದು ನಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬೌಲರ್ ಯಜುವೇಂದ್ರ ಚಹಾಲ್ (Yuzvendra Chahal) ಎಸೆದ ಬಾಲ್ ವಿಕೆಟ್​ಗೆ ಬಡಿದರೂ ಬೇಲ್ಸ್​ ಕೆಳಗೆ ಬಿದ್ದಿರಲಿಲ್ಲ. ಈ ಸಂದರ್ಭದಲ್ಲಿ ರೆಡ್ ಲೈಟ್ ಕೂಡ ಬಂದು ಮಾಯವಾಗಿತ್ತು. ಆದರೆ ಬೇಲ್ಸ್ ಕೆಳಗೆ ಬೀಳದ ಕಾರಣ ಔಟ್ ಎಂದು ತೀರ್ಪು ನೀಡಲಾಗಿರಲಿಲ್ಲ. ಇದೀಗ ಈ ನಿಯಮದ ಬದಲಾವಣೆಯಾಗಬೇಕು ಎಂದಿದ್ದಾರೆ ಚಹಾಲ್. ಇಎಸ್​ಪಿಎನ್ ಕ್ರಿಕ್​ಇನ್ಫೊ ಜತೆ ಮಾತನಾಡಿದ ಅವರು, ಅನಿವಾರ್ಯವಾಗಿರುವ ಪಂದ್ಯಗಳಲ್ಲಿ ಇಂತಹ ಘಟನೆ ನಡೆದಾಗ ಅವು ಪಂದ್ಯದ ದಿಕ್ಕನ್ನೇ ಬದಲಾಯಿಸುತ್ತವೆ. ಚೆಂಡು ವಿಕೆಟ್​​ಗೆ ತಾಗಿದರೆ ಅದನ್ನೂ ಔಟ್ ಎಂದು ನೀಡಬೇಕು ಎಂದಿದ್ದಾರೆ ಚಹಾಲ್.

ಪ್ರಸ್ತುತ ಐಪಿಎಲ್​ನಲ್ಲಿ 23 ವಿಕೆಟ್ ಪಡೆದು ವನಿಂದು ಹಸರಂಗ ಜತೆ ಪರ್ಪಲ್ ಕ್ಯಾಪ್ ಹಂಚಿಕೊಂಡಿರುವ ಚಾಹಲ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕವಾಗಿದ್ದರು. ರಾಜಸ್ಥಾನ್ ನೀಡಿದ್ದ 161 ರನ್​ಗಳ ಗುರಿ ಬೆನ್ನಟ್ಟಿದ್ದ ಡೆಲ್ಲಿಗೆ ಡೇವಿಡ್ ವಾರ್ನರ್ 52 ರನ್​ಗಳ ಅಮೂಲ್ಯ ಕಾಣಿಕೆ ನೀಡಿ ಜಯ ತಂದುಕೊಟ್ಟಿದ್ದರು. ಆದರೆ 9ನೇ ಓವರ್​ನಲ್ಲಿ ಅವರು ಚಾಹಲ್ ಎಸೆತವನ್ನು ಎದುರಿಸವಾಗ ಬಾಲ್ ವಿಕೆಟ್​ಗೆ ಬಡಿದಿತ್ತು. ಆದರೆ ಅದನ್ನು ಔಟ್ ಎಂದು ನೀಡಲಾಗಿರಲಿಲ್ಲ. ಒಂದು ವೇಳೆ ವಾರ್ನರ್ ಔಟ್ ಆಗಿದ್ದರೆ ಪಂದ್ಯದ ಗತಿ ಬೇರೆಯಾಗುವ ಸಂದರ್ಭವಿತ್ತು. ಇದನ್ನೇ ಚಹಾಲ್ ಕೂಡ ಹೇಳಿದ್ದಾರೆ.

‘‘ಒಂದು ಅನಿವಾರ್ಯ ಪಂದ್ಯ ಅಥವಾ ಫೈನಲ್ ಪಂದ್ಯವನ್ನು ಆಡುವಾಗ ಇಂತಹ ಘಟನೆಗಳು ಸಂಭವಿಸಿದರೆ ಅದು ಬಹಳ ನಿರ್ಣಾಯಕವಾಗಿರುತ್ತದೆ. ಹೀಗಾಗಿ, ಚೆಂಡು ವಿಕೆಟ್​ಗೆ ತಾಗಿದರೆ ಅದನ್ನು ಔಟ್ ಎಂದು ನೀಡಬೇಕು. ಕೇವಲ ಬೇಲ್ಸ್ ಬಿದ್ದಿಲ್ಲ ಎಂಬ ಕಾರಣದಿಂದ ಔಟ್ ನೀಡದಿದ್ದರೆ ಅದು ಸೋಲಿಗೆ ಕಾರಣವಾಗಲೂಬಹುದು. ಜತೆಗೆ ಅದು ಬೌಲಿಂಗ್ ತಂಡದ ಮೇಲೆ ಪರಿಣಾಮ ಬೀಡುತ್ತದೆ’’ ಎಂದಿದ್ದಾರೆ ಚಹಾಲ್.

ಇದನ್ನೂ ಓದಿ
IPL 2022: ಟೈಫಾಯ್ಡ್​​​​ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮರಳಿದ ಪೃಥ್ವಿ ಶಾ; ಪಂದ್ಯಕ್ಕೆ ಎಂದಿನಿಂದ ಲಭ್ಯ?
Shreyas Iyer: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಆಡಿದ ಮಾತುಗಳೇನು ಕೇಳಿ
Andrew Symonds Death: 3 ತಿಂಗಳ ಅವಧಿಯಲ್ಲಿ ಮೂವರು ದಿಗ್ಗಜರ ಸಾವು; ಕ್ರಿಕೆಟ್​ ಲೋಕಕ್ಕೆ ಸಾಲುಸಾಲು ಆಘಾತ
IPL 2022 Points Table: ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಇಬ್ಬರು ಆರ್​ಸಿಬಿ ಪ್ಲೇಯರ್ಸ್: ಪಾಯಿಂಟ್ ಟೇಬಲ್, ಆರೆಂಜ್ ಕ್ಯಾಪ್ ಮಾಹಿತಿ ಇಲ್ಲಿದೆ

ಘಟನೆಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡ ಚಹಾಲ್, ‘‘ಈ ಅನುಭವ ನನಗೆ ಮೊದಲ ಬಾರಿಗೆ ಆಗಿದೆ. ವಾರ್ನರ್​ರಂತಹ ಅಪಾಯಕಾರಿ ಬ್ಯಾಟರ್​ ಎದುರು ಇಂತಹ ಘಟನೆಗಳು ನಡೆದರೆ.. ಅದರಲ್ಲೂ ಬೌಲರ್​ಗಳಿಗೆ ವಿಕೆಟ್ ಪಡೆಯಲು ಅತ್ಯಂತ ಕಡಿಮೆ ಅವಕಾಶ ನೀಡುವ ಅಂತಹ ಬ್ಯಾಟರ್​ಗಳಿಗೆ ಜೀವದಾನ ಲಭಿಸಿದರೆ ಅದು ಪಂದ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ನಾನು ಆ ವಿಕೆಟ್ ಪಡೆದಿದ್ದರೆ ಪಂದ್ಯದ ಗತಿ ಬೇರೆಯಾಗಿರುತ್ತಿತ್ತೇನೋ..’’ ಎಂದಿದ್ದಾರೆ ಚಹಾಲ್.

ಪ್ರಸ್ತುತ ಕ್ರಿಕೆಟ್ ಪಂದ್ಯಗಳಲ್ಲಿ ಎಲ್​ಇಡಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಬೌಲ್ಡ್, ಸ್ಟಂಪಿಂಗ್ಸ್ ಮತ್ತು ರನ್​ ಔಟ್​ಗಳಿಗೆ ಇದನ್ನು ಬಳಸಲಾಗುತ್ತದೆ. ಪ್ರಸ್ತುತ ನಿಯಮದ ಪ್ರಕಾರ,​​​ ಔಟ್ ಆಗಬೇಕಾದರೆ ಬೇಲ್ಸ್​​ಗಳು ಸ್ಟಂಪ್​ಗಳಿಂದ ಬೇರ್ಪಡಬೇಕು. ಹಾಗಿದ್ದರೆ ಮಾತ್ರ ಔಟ್ ಎಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:59 pm, Sun, 15 May 22