IPL 2022: ಟೈಫಾಯ್ಡ್ನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮರಳಿದ ಪೃಥ್ವಿ ಶಾ; ಪಂದ್ಯಕ್ಕೆ ಎಂದಿನಿಂದ ಲಭ್ಯ?
Pruthvi Shah: ಪ್ರಸ್ತುತ ಪೃಥ್ವಿ ಶಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ನ ವೈದ್ಯಕೀಯ ತಂಡ ಮೇಲ್ವಿಚಾರಣೆ ಮಾಡುತ್ತಿದೆ. ‘ಪೃಥ್ವಿ ಶಾ ಅವರು ದೆಹಲಿ ತಂಡ ಉಳಿದುಕೊಂಡಿರುವ ಹೋಟೆಲ್ಗೆ ಮರಳಿದ್ದಾರೆ’ ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ (Pruthvi Shah) ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಫ್ರಾಂಚೈಸಿ ಭಾನುವಾರ ಮಾಹಿತಿ ನೀಡಿದೆ. 22 ವರ್ಷದ ಡೆಲ್ಲಿ ಆರಂಭಿಕ ಬ್ಯಾಟರ್ ಪೃಥ್ವಿಯವರನ್ನು ಈ ತಿಂಗಳ ಆರಂಭದಲ್ಲಿ ತೀವ್ರ ಜ್ವರದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಟೈಫಾಯಿಡ್ನಿಂದ ಅವರು ಬಳಲುತ್ತಿರುವುದಾಗಿ ತಿಳಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಪೃಥ್ವಿ ಶಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ನ ವೈದ್ಯಕೀಯ ತಂಡ ಮೇಲ್ವಿಚಾರಣೆ ಮಾಡುತ್ತಿದೆ. ‘ಪೃಥ್ವಿ ಶಾ ಅವರು ದೆಹಲಿ ತಂಡ ಉಳಿದುಕೊಂಡಿರುವ ಹೋಟೆಲ್ಗೆ ಮರಳಿದ್ದಾರೆ’ ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ:
OFFICIAL UPDATE:
Delhi Capitals opener Prithvi Shaw has been discharged from the hospital where he was being treated for a bout of typhoid. Shaw has returned to the team hotel where he is currently recuperating, while being monitored by the DC medical team. pic.twitter.com/EMJ5NACqpP
— Delhi Capitals (@DelhiCapitals) May 15, 2022
ಡಿಸಿ ಪ್ಲೇ ಆಫ್ ಕನಸಿಗೆ ಬಲ ತುಂಬಲಿದ್ದಾರಾ ಪೃಥ್ವಿ ಶಾ?
ಪೃಥ್ವಿ ಶಾ ಐಪಿಎಲ್ 2022ರಲ್ಲಿ ಕೊನೆಯದಾಗಿ ಮೇ 1ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕೊನೆಯ ಪಂದ್ಯವಾಡಿದ್ದರು. ನಂತರ ನಡೆದ ಮೂರು ಪಂದ್ಯಗಳನ್ನು ಅವರು ತಪ್ಪಿಸಿಕೊಂಡಿದ್ದರು. ಇದೀಗ ಪೃಥ್ವಿ ಶಾ ಮರು ಆಗಮನ ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಕಮ್ಬ್ಯಾಕ್ ಬಗ್ಗೆ ಬರೆದುಕೊಂಡಿದ್ದ ಅವರು, ಶೀಘ್ರದಲ್ಲೇ ಮೈದಾನಕ್ಕೆ ವಾಪಸ್ ಆಗುವುದಾಗಿ ಹೇಳಿದ್ದರು.
ಡೆಲ್ಲಿಯ ಪ್ಲೇ ಆಫ್ ಕನಸಿಗೆ ಪೃಥ್ವಿ ಶಾ ಅಗತ್ಯವಾಗಿದ್ದಾರೆ. ಕಾರಣ, ಫಾರ್ಮ್ನಲ್ಲಿರುವ ಡೇವಿಡ್ ವಾರ್ನರ್ಗೆ ಪೃಥ್ವಿ ಉತ್ತಮ ಬೆಂಬಲ ನೀಡುತ್ತಿದ್ದರು. ಆದರೆ ಅವರು ಪಂದ್ಯಗಳಿಂದ ಹೊರಗುಳಿದ ನಂತರ ಶ್ರೀಕಾರ್ ಭರತ್ ಹಾಗೂ ಮಂದೀಪ್ ಸಿಂಗ್ಗೆ ಅವಕಾಶ ನೀಡಿದ್ದರೂ ಕೂಡ ಅವರು ಅದನ್ನು ಉಪಯೋಗಪಡಿಸಿಕೊಂಡಿಲ್ಲ. ಹೀಗಾಗಿ ಡಿಸಿಗೆ ಪೃಥ್ವಿ ಅನಿವಾರ್ಯ ಆಯ್ಕೆಯಾಗಿದ್ದಾರೆ.
ಅದಾಗ್ಯೂ ಪೃಥ್ವಿ ಶಾ ಯಾವ ಪಂದ್ಯಗಳಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ. ಈ ಐಪಿಎಲ್ನಲ್ಲಿ ಆಡಿದ 9 ಪಂದ್ಯಗಳಲ್ಲಿ 259 ರನ್ ಬಾರಿಸಿರುವ ಪೃಥ್ವಿ 28.77 ಸರಾಸರಿ ಹೊಂದಿದ್ದಾರೆ. ಅವರ ಸ್ಟ್ರೈಕ್ ರೇಟ್ 160 ಇದ್ದು, ಪವರ್ಪ್ಲೇಯ ಲಾಭವನ್ನು ದೆಹಲಿಗೆ ತಂದುಕೊಡುತ್ತಿದ್ದಾರೆ. ಹೀಗಾಗಿಯೇ ಡೆಲ್ಲಿ ಪೃಥ್ವಿಯ ಆಗಮನವನ್ನು ಕಾಯುತ್ತಿದೆ.
ಡೆಲ್ಲಿ ಪ್ರಸ್ತುತ 12 ಪಂದ್ಯಗಳಿಂದ 12 ಅಂಕ ಹೊಂದಿದೆ. ಬಾಕಿ ಉಳಿದ ಎರಡೂ ಪಂದ್ಯಗಳನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆ ಡೆಲ್ಲಿಗಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಡೆಲ್ಲಿ ಎದುರಿಸಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Sun, 15 May 22