Yuzvendra Chahal Birthday: ಚಹಲ್ ಚಮತ್ಕಾರಕ್ಕೆ ಧನಶ್ರೀ ಫಿದಾ: ಗಂಡನ ಹುಟ್ಟುಹಬ್ಬಕ್ಕೆ ಭಾವನಾತ್ಮಕ ಸಂದೇಶ
Dhanashree Verma; ಯುಜ್ವೇಂದ್ರ ಮತ್ತು ಧನಶ್ರೀ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ವೃತ್ತಿಪರ ನರ್ತಕಿ ಹಾಗೂ ಯೂಟ್ಯೂಬರ್ ಆಗಿರುವ ಧನಶ್ರೀ ದಂತವೈದ್ಯೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಇಂದು ಭಾರತೀಯ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ (ಜುಲೈ 23) ಅವರ 31ನೇ ಜನ್ಮದಿನ. ಪ್ರಸ್ತುತ ಅವರು ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿರುವ ಚಹಲ್ ಮೊದಲ ಎರಡು ಪಂದ್ಯಗಳಿಂದ ಐದು ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸುವ ಮುನ್ನವೇ ಚಹಲ್ ಚೆಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ ಕಿರಿಯರ ಚೆಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 2009 ರ ಕೂಚ್ ಬೆಹರ್ ಅಂಡರ್ -19 ಟ್ರೋಫಿಯಲ್ಲಿ 34 ವಿಕೆಟ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದ ಬಳಿಕ ಅವರಿಗೆ ಹರಿಯಾಣ ಪ್ರಥಮ ದರ್ಜೆ ತಂಡದಲ್ಲಿ ಸ್ಥಾನ ಲಭಿಸಿತು. ಇದರ ಬೆನ್ನಲ್ಲೇ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪಾಲಾದರು. ಇದೀಗ ಐಪಿಎಲ್ನಲ್ಲಿ ಆರ್‌ಸಿಬಿ ತಂಡದ ಖಾಯಂ ಸದಸ್ಯರಾಗಿದ್ದಾರೆ.
ಇನ್ನು ಚಹಲ್ ಅವರ 31ನೇ ಹುಟ್ಟುಹಬ್ಬದಂದು ಪತ್ನಿ ಧನಶ್ರೀ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸಿದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿಯೊಂದಿಗಿನ ಫೋಟೋ ಹಂಚಿಕೊಂಡಿದ್ದ ಧನಶ್ರೀ, “ವಿನಮ್ರತೆ, ದಯೆ ತೋರಿಸುವುದು, ಸಹಾಯ ಮಾಡುವುದು, ಸಭ್ಯತೆ, ನಿಸ್ವಾರ್ಥಿ ಮತ್ತು ಕೆಲವು ಅತ್ಯುತ್ತಮ ಕೌಶಲ್ಯಗಳನ್ನು ಹೊಂದಿರುವ ವ್ಯಕ್ತಿತ್ವ ನಿಮ್ಮದು. ನಿಮ್ಮ ನಿಲುವು ಮತ್ತು ಸ್ಥಾನಮಾನದ ಬಗ್ಗೆ ನಿಮಗೆ ಯಾವುದೇ ಹೆಮ್ಮೆ ಇಲ್ಲ. ಈ ಮಟ್ಟವನ್ನು ತಲುಪುವುದು ಮತ್ತು ಅಂತಹ ದೊಡ್ಡ ಮೈಲಿಗಲ್ಲು ಸಾಧಿಸುವುದು ಸುಲಭವಲ್ಲ. ಜನರಿಗೆ ಮತ್ತು ದೇಶಕ್ಕಾಗಿ ನೀವು ಏನು ಮಾಡುತ್ತಿದ್ದೀರಿ ಎಂಬುದು ನಿಜಕ್ಕೂ ಅದ್ಭುತವಾಗಿದೆ. ನೀವು ಹೃದಯವಂತರು. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ … ನಾನು ಯಾವಾಗಲೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ಜನ್ಮದಿನದ ಶುಭಾಶಯಗಳು. ‘ ಎಂದು ಧನಶ್ರೀ ಚಹಲ್ಗೆ ಶುಭಾಶಯ ತಿಳಿಸಿದ್ದಾರೆ.
ಯುಜ್ವೇಂದ್ರ ಮತ್ತು ಧನಶ್ರೀ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ವೃತ್ತಿಪರ ನರ್ತಕಿ ಹಾಗೂ ಯೂಟ್ಯೂಬರ್ ಆಗಿರುವ ಧನಶ್ರೀ ದಂತವೈದ್ಯೆ ಎಂಬುದು ಅನೇಕರಿಗೆ ತಿಳಿದಿಲ್ಲ. 2014 ರಲ್ಲಿ ಡಿವೈ ಪಾಟೀಲ್ ಡೆಂಟಲ್ ಕಾಲೇಜಿನಿಂದ ಪದವಿ ಪಡೆದಿರುವ ಧನಶ್ರೀ, ಸದ್ಯ ಚಹಲ್ ಅವರ ಅರ್ಧಾಂಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಈ ದಂಪತಿಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ತಮ್ಮದೆಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
2011ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಯ್ಕೆಯಾಗುವ ಮೂಲಕ ಲೈಮ್ ಲೈಟ್ಗೆ ಬಂದ ಲೆಗ್ ಸ್ಪಿನ್ನರ್ ಚಹಲ್, ಆ ಬಳಿಕ 2014 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡರು. 2015 ರಲ್ಲಿ ಆರ್‌ಸಿಬಿ ಪರ 23 ಮತ್ತು 2016 ರಲ್ಲಿ 21 ವಿಕೆಟ್‌ಗಳನ್ನು ಪಡೆಯುವ ಮೂಲಕ ಗಮನ ಸೆಳೆದರು. ಈ ಸಾಧನೆಯಿಂದಾಗಿ, ಅವರು 2016 ರಲ್ಲಿ ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಜೂನ್ 11, 2016 ರಂದು ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಚಹಲ್, ಇದೇ ಪ್ರವಾಸದಲ್ಲಿ ಅವರು ಟಿ 20 ಚೊಚ್ಚಲ ಪಂದ್ಯವನ್ನೂ ಆಡಿದ್ದರು. ಮುಂದಿನ ವರ್ಷ, ಅವರು ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಗೆ ಮತ್ತೆ ಆಯ್ಕೆಯಾದರು. ಬೆಂಗಳೂರಿನಲ್ಲಿ ನಡೆದ ಈ ಸರಣಿಯ ಟಿ20 ಪಂದ್ಯದಲ್ಲಿ25 ರನ್‌ಗಳಿಗೆ 6 ವಿಕೆಟ್ ಉರುಳಿಸುವ ಮೂಲಕ ತಮ್ಮ ಸ್ಪಿನ್ ಮೋಡಿಯನ್ನು ತೋರಿಸಿದ್ದರು. ಟೀಮ್ ಇಂಡಿಯಾ ಪರ ಚಹಲ್ ಇದುವರೆಗೆ 56 ಏಕದಿನ ಪಂದ್ಯಗಳಿಂದ 97 ವಿಕೆಟ್ ಮತ್ತು 48 ಟಿ20 ಪಂದ್ಯಗಳಿ 62 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: The Hundred League: ದಿ ಹಂಡ್ರೆಡ್ ಲೀಗ್ ಆಡಲು ತೆರಳಿದ ಆಟಗಾರನಿಗೆ ತಕ್ಷಣವೇ ದೇಶ ತೊರೆಯುವಂತೆ ಸೂಚನೆ..!
(Yuzvendra Chahal Birthday: Dhanashree Verma pens heartfelt note to wish husband)
Published On - 3:29 pm, Fri, 23 July 21