Zimbabwe vs India 2nd T20, Highlights: ಜಿಂಬಾಬ್ವೆ ಮಣಿಸಿದ ಭಾರತಕ್ಕೆ ಟಿ20 ಸರಣಿ

IND vs ZIM 2nd T20 Live Cricket Score: ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನು 90 ರನ್​ಗಳಿಂದ ಸೋಲಿಸಿದ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿತು

Zimbabwe vs India 2nd T20, Highlights: ಜಿಂಬಾಬ್ವೆ ಮಣಿಸಿದ ಭಾರತಕ್ಕೆ ಟಿ20 ಸರಣಿ
India

Updated on: Jul 25, 2026 | 8:14 PM

ಎರಡನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆಯನ್ನು 90 ರನ್​ಗಳಿಂದ ಸೋಲಿಸಿದ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ. ಹರಾರೆಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್​ನನಲ್ಲಿ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 219 ರನ್‌ಗಳ ಸ್ಕೋರ್​ಗೆ ಕೊಂಡೊಯ್ದರು. ಇದರ ನಂತರ, ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಿ ಜಿಂಬಾಬ್ವೆಯನ್ನು ಕೇವಲ 129 ರನ್‌ಗಳಿಗೆ ಆಲೌಟ್ ಮಾಡಿದರು. ಹೀಗಾಗಿ, ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಸತತ ಎರಡು ಸರಣಿ ಸೋಲುಗಳ ನಂತರ, ಟೀಂ ಇಂಡಿಯಾ ಅಂತಿಮವಾಗಿ ತನ್ನ ಮೊದಲ ಟ್ರೋಫಿಯನ್ನು ಎತ್ತಿಹಿಡಿದಿದೆ.

LIVE Cricket Score & Updates

The liveblog has ended.
  • 25 Jul 2026 08:10 PM (IST)

    IND vs ZIM 2nd T20 Live: ಭಾರತಕ್ಕೆ 90 ರನ್ ಜಯ

    ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 219 ರನ್ ಕಲೆಹಾಕಿ ಜಿಂಬಾಬ್ವೆ ಗೆಲುವಿಗೆ 220 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 18ನೇ ಓವರ್​ನಲ್ಲಿ 129 ರನ್​ಗಳಿಗೆ ಆಲೌಟ್ ಆಗುವ ಮೂಲಕ 90 ರನ್​ಗಳಿಂದ ಸೋಲೊಪ್ಪಿಕೊಂಡಿತು.

  • 25 Jul 2026 07:50 PM (IST)

    IND vs ZIM 2nd T20 Live: ಅಭಿಷೇಕ್​ಗೆ ವಿಕೆಟ್

    3 ರನ್ ಗಳಿಸಿದ್ದ ನ್ಯೂಮನ್ ನ್ಯಾಮುರಿ ಅವರನ್ನು ಔಟ್ ಮಾಡುವ ಮೂಲಕ ಅಭಿಷೇಕ್ ಶರ್ಮಾ ಭಾರತಕ್ಕೆ 8 ನೇ ವಿಕೆಟ್ ನೀಡಿದರು.

  • 25 Jul 2026 07:45 PM (IST)

    IND vs ZIM 2nd T20 Live: 7ನೇ ವಿಕೆಟ್‌ ಪತನ

    ಅಭಿಷೇಕ್ ಬೌಲಿಂಗ್​ನಲ್ಲಿ ಬ್ರಾಡ್ ಇವಾನ್ಸ್ 19 ರನ್‌ಗಳಿಸಿ ಔಟ್ ಆದರು. ಜಿಂಬಾಬ್ವೆ ಗೆಲ್ಲಲು ಈಗ 36 ಎಸೆತಗಳಲ್ಲಿ 112 ರನ್‌ಗಳ ಅಗತ್ಯವಿದೆ. 14 ಓವರ್‌ಗಳಲ್ಲಿ 7 ವಿಕೆಟ್‌ಗೆ 108 ರನ್ ಗಳಿಸಿದೆ.

  • 25 Jul 2026 07:18 PM (IST)

    IND vs ZIM 2nd T20 Live: ಸಿಕಂದರ್ ರಝಾ ಶೂನ್ಯಕ್ಕೆ ಔಟ್

    ನಾಯಕ ಸಿಕಂದರ್ ರಝಾ ಅವರನ್ನು ಪ್ರಿನ್ಸ್ ಯಾದವ್ ಶೂನ್ಯಕ್ಕೆ ಔಟ್ ಮಾಡಿದರು, ಇದರಿಂದಾಗಿ ಭಾರತಕ್ಕೆ ಪಂದ್ಯದ ನಾಲ್ಕನೇ ವಿಕೆಟ್ ಸಿಕ್ಕಿತು. ಇದು ಅವರ ಈ ಪಂದ್ಯದ ಎರಡನೇ ವಿಕೆಟ್ ಕೂಡ ಆಗಿತ್ತು.

  • 25 Jul 2026 07:03 PM (IST)

    IND vs ZIM 2nd T20 Live: 3ನೇ ವಿಕೆಟ್

    ಡಿಯೋನ್ ಮೈಯರ್ಸ್ ಅವರನ್ನು ರವಿ ಬಿಷ್ಣೋಯ್ 12 ರನ್‌ಗಳಿಗೆ ಔಟ್ ಮಾಡುವ ಮೂಲಕ ಭಾರತಕ್ಕೆ ಮೂರನೇ ಬ್ರೇಕ್‌ಥ್ರೂ ನೀಡಿದರು. ಆತಿಥೇಯರು ಆರು ಓವರ್‌ಗಳಲ್ಲಿ 3 ವಿಕೆಟ್‌ಗೆ 49 ರನ್ ಗಳಿಸಿದ್ದಾರೆ. ಭಾರತ ತನ್ನ ಹಿಡಿತವನ್ನು ಬಿಗಿಗೊಳಿಸಿದೆ.

  • 25 Jul 2026 06:53 PM (IST)

    IND vs ZIM 2nd T20 Live: ಬೆನೆಟ್ ಔಟ್

    ಬ್ರಿಯಾನ್ ಬೆನೆಟ್ 32 ರನ್ ಬಾರಿಸಿ ಔಟಾದರು. ಜಿಂಬಾಬ್ವೆ 4 ಓವರ್‌ಗಳಲ್ಲಿ 1 ವಿಕೆಟ್‌ಗೆ 34 ರನ್ ಗಳಿಸಿದೆ.

  • 25 Jul 2026 06:38 PM (IST)

    IND vs ZIM 2nd T20 Live: 220 ರನ್ ಗುರಿ

    ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಅವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 219 ರನ್ ಗಳಿಸಿತು, ಇಶಾನ್ 81 ರನ್ ಗಳಿಸಿದರೆ, ತಿಲಕ್ ವರ್ಮಾ ಅಜೇಯ 60 ರನ್ ಗಳಿಸಿದರು.

  • 25 Jul 2026 06:10 PM (IST)

    IND vs ZIM 2nd T20 Live: ರಿಂಕು ಸಿಂಗ್ ಔಟ್

    ಭಾರತದ ಐದನೇ ವಿಕೆಟ್‌ ಪತನವಾಯಿತು, ರಿಂಕು ಸಿಂಗ್ ಔಟಾದರು. ಅವರು ಎಂಟು ಎಸೆತಗಳಲ್ಲಿ ಒಂದು ಸಿಕ್ಸರ್ ಸೇರಿದಂತೆ 12 ರನ್ ಗಳಿಸಿದರು.

  • 25 Jul 2026 06:10 PM (IST)

    IND vs ZIM 2nd T20 Live: 200 ರನ್ ಪೂರ್ಣ

    ಭಾರತ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 210 ರನ್‌ ಕಲೆಹಾಕಿದೆ. ತಿಲಕ್ ಮತ್ತು ರಿಂಕು ಸಿಂಗ್ ಕ್ರೀಸ್‌ನಲ್ಲಿದ್ದಾರೆ.

  • 25 Jul 2026 05:59 PM (IST)

    IND vs ZIM 2nd T20 Live: ಕಿಶನ್ ಔಟ್

    ಭಾರತ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ 81 ರನ್ ಗಳಿಸಿ ಔಟಾದರು. ಇಶಾನ್ ಮತ್ತು ತಿಲಕ್ ನಾಲ್ಕನೇ ವಿಕೆಟ್‌ಗೆ 43 ಎಸೆತಗಳಲ್ಲಿ 94 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

  • 25 Jul 2026 05:55 PM (IST)

    IND vs ZIM 2nd T20 Live: ತಿಲಕ್ ಅರ್ಧಶತಕ

    ತಿಲಕ್ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು, ಭಾರತ 17 ಓವರ್‌ಗಳಲ್ಲಿ 3 ವಿಕೆಟ್‌ಗೆ 188 ರನ್ ಗಳಿಸಿದೆ. ಇಶಾನ್ ಮತ್ತು ತಿಲಕ್ 42 ಎಸೆತಗಳಲ್ಲಿ 94 ರನ್​ಗಳ ಜೊತೆಯಾಟವನ್ನಾಡಿದ್ದಾರೆ.

  • 25 Jul 2026 05:45 PM (IST)

    IND vs ZIM 2nd T20 Live: ಭಾರತದ 150 ರನ್ ಪೂರ್ಣ

    ಭಾರತ 15 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 158 ರನ್ ಗಳಿಸಿದೆ. ಇಶಾನ್ ಮತ್ತು ತಿಲಕ್ ಈಗಾಗಲೇ ನಾಲ್ಕನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಈಗ ಉತ್ತಮ ಸ್ಥಿತಿಯಲ್ಲಿದೆ.

  • 25 Jul 2026 05:23 PM (IST)

    IND vs ZIM 2nd T20 Live: ಶ್ರೇಯಸ್ ಅಯ್ಯರ್ ಔಟ್

    ನಾಯಕ ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ನಿರ್ಗಮಿಸಿದರು. ಭಾರತ 10 ಓವರ್‌ಗಳಲ್ಲಿ 3 ವಿಕೆಟ್‌ಗೆ 95 ರನ್ ಗಳಿಸಿದೆ. ಶ್ರೇಯಸ್ ಮತ್ತು ಇಶಾನ್ ಮೂರನೇ ವಿಕೆಟ್‌ಗೆ 66 ರನ್ ಸೇರಿಸಿದರು.

  • 25 Jul 2026 05:16 PM (IST)

    IND vs ZIM 2nd T20 Live: 9 ಓವರ್‌ಗಳಲ್ಲಿ 80 ರನ್‌

    ಇಶಾನ್ ಮತ್ತು ಶ್ರೇಯಸ್ ಭಾರತದ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದ್ದಾರೆ, ಭಾರತ ಒಂಬತ್ತು ಓವರ್‌ಗಳಲ್ಲಿ 2 ವಿಕೆಟ್‌ಗೆ 80 ರನ್ ಗಳಿಸಿದೆ. ಮೂರನೇ ವಿಕೆಟ್‌ಗೆ 37 ಎಸೆತಗಳಲ್ಲಿ 55 ರನ್ ಸೇರಿಸಿದ್ದಾರೆ.

  • 25 Jul 2026 04:51 PM (IST)

    IND vs ZIM 2nd T20 Live: ವೈಭವ್ ಔಟ್

    ವೈಭವ್ 9 ಎಸೆತಗಳಲ್ಲಿ 20 ರನ್ ಗಳಿಸಿ ಬೇಗನೆ ಔಟಾದರು. ಭಾರತ ಎರಡನೇ ವಿಕೆಟ್ ಕಳೆದುಕೊಂಡಿತು. ಭಾರತ 3 ಓವರ್‌ಗಳಲ್ಲಿ 2 ವಿಕೆಟ್‌ಗೆ 29 ರನ್ ಗಳಿಸಿದೆ.

  • 25 Jul 2026 04:45 PM (IST)

    IND vs ZIM 2nd T20 Live: ಅಭಿಷೇಕ್ ಔಟ್

    ಎರಡನೇ ಪಂದ್ಯದಲ್ಲಿಯೂ ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಲಿಲ್ಲ, 8 ಎಸೆತಗಳಲ್ಲಿ 8 ರನ್ ಗಳಿಸಿ ಮಜ್ರಬಾನಿ ಬೌಲಿಂಗ್ ನಲ್ಲಿ ಔಟಾದರು. ಭಾರತದ ಮೊದಲ ವಿಕೆಟ್ ಪತನವಾಯಿತು. ಭಾರತ 2 ಓವರ್ ಗಳಲ್ಲಿ 1 ವಿಕೆಟ್ ಗೆ 10 ರನ್ ಗಳಿಸಿದೆ.

  • 25 Jul 2026 04:18 PM (IST)

    IND vs ZIM 2nd T20 Live: ಜಿಂಬಾಬ್ವೆ ತಂಡ

    ಬ್ರಿಯಾನ್ ಬೆನೆಟ್, ಬೆನ್ ಕರ್ರನ್ (ಚೊಚ್ಚಲ ಪಂದ್ಯ), ಡಿಯೋನ್ ಮೈಯರ್ಸ್, ಸಿಕಂದರ್ ರಝಾ (ನಾಯಕ), ರಿಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ (ಚೊಚ್ಚಲ ಪಂದ್ಯ), ರಿಚರ್ಡ್ ನಾಗರವಾ ಮತ್ತು ಬ್ಲೆಸ್ಸಿಂಗ್ ಮುಜರಬಾನಿ.

  • 25 Jul 2026 04:18 PM (IST)

    IND vs ZIM 2nd T20 Live: ಭಾರತ ತಂಡ

    ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಪ್ರಿನ್ಸ್ ಯಾದವ್, ಯಶ್ ಠಾಕೂರ್ ( ಚೊಚ್ಚಲ ಪಂದ್ಯ) ಮತ್ತು ಮಯಾಂಕ್ ಯಾದವ್.

  • 25 Jul 2026 04:05 PM (IST)

    IND vs ZIM 2nd T20 Live: ಟಾಸ್ ಗೆದ್ದ ಜಿಂಬಾಬ್ವೆ

    ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - 4:04 pm, Sat, 25 July 26

Loading...
Unable to load recommendations.
Follow Us