AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK vs RCB, IPL 2021 Match 19 Result: ಮೊದಲ ಸೋಲು ಕಂಡ ಆರ್​ಸಿಬಿ; ಚೆನ್ನೈ ಪಾಲಿಗೆ ಜಡೇಜಾ ಸೂಪರ್ ಕಿಂಗ್!

CSK vs RCB Scorecard: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2021 ಟೂರ್ನಿಯ 19ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

CSK vs RCB, IPL 2021 Match 19 Result: ಮೊದಲ ಸೋಲು ಕಂಡ ಆರ್​ಸಿಬಿ; ಚೆನ್ನೈ ಪಾಲಿಗೆ ಜಡೇಜಾ ಸೂಪರ್ ಕಿಂಗ್!
ಈ ಬಗ್ಗೆ ಮಾತನಾಡಿರುವ CSK CEO ಕಾಶಿ ವಿಶ್ವನಾಥನ್, ಡುಪ್ಲೆಸಿಸ್​ ತಂಡವನ್ನು ಸೇರಿಕೊಂಡಿದ್ದಾರೆ. ಇದಾಗ್ಯೂ ಅವರ ಆಯ್ಕೆ ಬಗ್ಗೆ ಪಂದ್ಯದ ಆರಂಭಕ್ಕೂ ಮೊದಲು ನಿರ್ಧರಿಸಲಾಗುತ್ತದೆ. ಭಾನುವಾರ ಅವರ ಫಿಟ್​ನೆಸ್​ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ಲೇಯಿಂಗ್ ಇಲೆವೆನ್​ನಲ್ಲಿ ಆಯ್ಕೆ ಮಾಡುವ ಬಗ್ಗೆ ನಿರ್ಧರಿಸಲಿದ್ದೇವೆ ಎಂದಿದ್ದಾರೆ.
TV9 Web
| Updated By: ganapathi bhat|

Updated on:Sep 05, 2021 | 10:45 PM

Share

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುಂಡಿದೆ. ಧೋನಿ ಪಡೆ 69 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಆರ್‌ಸಿಬಿ ಪರ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 34 (15), ನಂತರ ಬಂದ‌ ಮ್ಯಾಕ್ಸ್‌ವೆಲ್ 22 (15) ಹೊರತುಪಡಿಸಿ ಇನ್ಯಾರೂ ಉತ್ತಮ ಆಟ ಪ್ರದರ್ಶಿಸಿಲ್ಲ. ಎಬಿಡಿ, ಕೊಹ್ಲಿ ಸಹಿತ ಪ್ರಮುಖ ದಾಂಡಿಗರು 10 ರನ್ ದಾಟದೇ ಔಟ್ ಆಗಿದ್ದಾರೆ. ಈ ಮೂಲಕ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಗೆದ್ದು ಬೀಗಿದೆ. ಚೆನ್ನೈ ಪರ ಜಡೇಜಾ ಬೌಲಿಂಗ್‌ನಲ್ಲೂ ಮಿಂಚಿದ್ದಾರೆ. 4 ಓವರ್‌ಗೆ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಇಮ್ರಾನ್ ತಾಹಿರ್ 2 ವಿಕೆಟ್ ಪಡೆದಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 192 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಚೆನ್ನೈ ಪರ ಡುಪ್ಲೆಸಿಸ್ 50 (41), ಗಾಯಕ್‌ವಾಡ್ 33 (25) ಉತ್ತಮ ಆರಂಭ ನೀಡಿದ್ದರು. ನಂತರ ಬಂದ ರೈನಾ 24, ರಾಯುಡು 14, ಧೋನಿ 3 ಬಾಲ್ ಆಡಿ 2 ರನ್ ದಾಖಲಿಸಿ ಇನ್ನಿಂಗ್ಸ್ ಕಟ್ಟಿದ್ದರು. ಆರಂಭಿಕ ಎರಡು ವಿಕೆಟ್ ಕುಸಿತದ ಬಳಿಕ ಚೆನ್ನೈ ಅಲ್ಪಮೊತ್ತದ ಟಾರ್ಗೆಟ್ ನೀಡುವ ನಿರೀಕ್ಷೆ ಮೂಡಿಸಿತ್ತು. ಆದರೆ ಅಂತಿಮವಾಗಿ ಜಡೇಜಾ ಅಬ್ಬರಿಸಿದರು. ಜಡೇಜಾ 28 ಬಾಲ್‌ಗೆ 5 ಸಿಕ್ಸರ್, 4 ಬೌಂಡರಿ ಸಹಿತ 62 ರನ್ ಕಲೆಹಾಕಿದ್ದರು.

ಆರ್‌ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಹಾಗೂ ಚಹಾಲ್ 1 ವಿಕೆಟ್ ಪಡೆದಿದ್ದರು.

LIVE NEWS & UPDATES

The liveblog has ended.
  • 25 Apr 2021 07:20 PM (IST)

    ಚೆನ್ನೈಗೆ 69 ರನ್ ಗೆಲುವು

    ಚೆನ್ನೈ ಸೂಪರ್ ಕಿಂಗ್ಸ್ 69 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ಆರ್​ಸಿಬಿ ಐಪಿಎಲ್ 2021 ಟೂರ್ನಿಯ ಮೊದಲ ಸೋಲು ಕಂಡಿದೆ. ಆರ್​ಸಿಬಿ 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಗಿದೆ.

  • 25 Apr 2021 07:13 PM (IST)

    ಆರ್​ಸಿಬಿ 111/9 (19 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್​ಗೆ 9 ವಿಕೆಟ್ ಕಳೆದುಕೊಂಡು 111 ರನ್ ದಾಖಲಿಸಿದೆ. ಚೆನ್ನೈ ಗೆಲುವು ಖಚಿತವಾಗಿದೆ. ಆರ್​ಸಿಬಿ 6 ಬಾಲ್​ಗೆ 81 ರನ್ ಗಳಿಸಬೇಕಾಗಿದ್ದು, ಅಸಾಧ್ಯವಾಗಿದೆ.

  • 25 Apr 2021 07:09 PM (IST)

    ಆರ್​ಸಿಬಿ ಗೆಲ್ಲಲು 12 ಬಾಲ್​ಗೆ 83 ರನ್ ಬೇಕು

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 12 ಬಾಲ್​ಗೆ 83 ರನ್ ಬೇಕು. ತಂಡ 19 ಓವರ್​ಗೆ 9 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ.

  • 25 Apr 2021 06:58 PM (IST)

    100 ರನ್ ಗಡಿ ದಾಟಿದ ಆರ್​ಸಿಬಿ

    ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 103 ರನ್ ದಾಖಲಿಸಿದೆ. ಕೈಲ್ ಜಾಮಿಸನ್ ಕೂಡ ತಾಹಿರ್​ಗೆ ರನ್ ಔಟ್ ಆಗಿದ್ದಾರೆ. ಸಿರಾಜ್ ಹಾಗೂ ಚಹಾಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 24 ಬಾಲ್​ಗೆ 89 ರನ್ ಬೇಕಿದೆ.

  • 25 Apr 2021 06:46 PM (IST)

    ನವದೀಪ್ ಸೈನಿ ಔಟ್

    ಇಮ್ರಾನ್ ತಾಹಿರ್ ಬೌಲಿಂಗ್​ಗೆ ನವದೀಪ್ ಸೈನಿ ಔಟ್ ಆಗಿದ್ದಾರೆ. 4 ಬಾಲ್​ಗೆ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಚಹಾಲ್ ಹಾಗೂ ಜಾಮಿಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 06:44 PM (IST)

    ಆರ್​ಸಿಬಿ 94/7 (13 ಓವರ್)

    ಆರ್​ಸಿಬಿ ಗೆಲ್ಲಲು 42 ಬಾಲ್​ಗೆ 98 ರನ್ ಬೇಕಿದೆ. 13 ಓವರ್​ಗೆ 7 ವಿಕೆಟ್ ಕಳೆದುಕೊಂಡು 94 ರನ್ ದಾಖಲಿಸಿದೆ. ಆರಂಭಿಕ ವೇಗದ ಆಟ ಆಡಿದ್ದ ರಾಯಲ್ ಚಾಲೆಂಜರ್ಸ್ ನಂತರ ಪ್ರಮುಖ ದಾಂಡಿಗರ ವಿಕೆಟ್​ಗಳನ್ನು ಒಂದರ ಹಿಂದೆ ಒಂದರಂತೆ ಕಳೆದುಕೊಂಡಿದೆ.

  • 25 Apr 2021 06:41 PM (IST)

    ಹರ್ಷಲ್ ಪಟೇಲ್ ಔಟ್

    ಆರ್​ಸಿಬಿ 7 ವಿಕೆಟ್ ಕಳೆದುಕೊಂಡಿದೆ. ಹರ್ಷಲ್ ಪಟೇಲ್ 8 ಬಾಲ್ ಆಡಿ ರನ್ ಗಳಿಸದೇ ಇಮ್ರಾನ್ ತಾಹಿರ್ ಬಾಲ್​ಗೆ ಬೌಲ್ಡ್ ಆಗಿದ್ದಾರೆ. ಕೈಲ್ ಜಾಮಿಸನ್ ಹಾಗೂ ನವದೀಪ್ ಸೈನಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 06:33 PM (IST)

    ಎಬಿಡಿ ಬೌಲ್ಡ್!

    ರವೀಂದ್ರ ಜಡೇಜಾ ಬಾಲ್​ಗೆ ಎಬಿ ಡಿವಿಲಿಯರ್ಸ್ ಬೌಲ್ಡ್ ಆಗಿದ್ದಾರೆ. ಕೈಲ್ ಜಾಮಿಸನ್ ಹಾಗೂ ಹರ್ಲ್ ಪಟೇಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 06:29 PM (IST)

    ಡೇನಿಯಲ್ ಕ್ರಿಶ್ಚಿಯನ್ ರನೌಟ್

    ಡೇನಿಯಲ್ ಕ್ರಿಶ್ಚಿಯನ್ 3 ಬಾಲ್​ಗೆ 1 ರನ್ ಗಳಿಸಿ ರನ್ ಔಟ್​ಗೆ ಬಲಿಯಾಗಿದ್ದಾರೆ. ಆರ್​ಸಿಬಿ 10 ಓವರ್​ಗೆ 83 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. 60 ಬಾಲ್​ಗೆ 109 ರನ್ ಬೇಕಿದೆ.

  • 25 Apr 2021 06:24 PM (IST)

    ಮ್ಯಾಕ್ಸ್​ವೆಲ್ ಔಟ್!

    ರಾಯಲ್ ಚಾಲೆಂಜರ್ಸ್ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ ಔಟ್ ಆಗಿದ್ದಾರೆ. 15 ಬಾಲ್​ಗೆ 22 ರನ್ ಗಳಿಸಿ ರವೀಂದ್ರ ಜಡೇಜಾಗೆ ಬೌಲ್ಡ್ ಆಗಿದ್ದಾರೆ.

  • 25 Apr 2021 06:20 PM (IST)

    ಆರ್​ಸಿಬಿ 73/3 (8 ಓವರ್)

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 72 ಬಾಲ್​ಗೆ 119 ರನ್ ಬೇಕಿದೆ. 8 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ಮ್ಯಾಕ್ಸ್​ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 25 Apr 2021 06:15 PM (IST)

    ಸುಂದರ್ ವಿಕೆಟ್ ಪತನ

    ವಾಷಿಂಗ್ಟನ್ ಸುಂದರ್ 11 ಬಾಲ್​ಗೆ 7 ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ನೀಡಿದ್ದಾರೆ. ಋತುರಾಜ್ ಗಾಯಕ್​ವಾಡ್ ಕ್ಯಾಚ್ ಪಡೆದಿದ್ದಾರೆ. ಆರ್​​ಸಿಬಿ ಪರ ಮ್ಯಾಕ್ಸ್​ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಆಡುತ್ತಿದ್ದಾರೆ.

  • 25 Apr 2021 06:12 PM (IST)

    ಪವರ್​ಪ್ಲೇ ಅಂತ್ಯಕ್ಕೆ 65/2

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಓವರ್​ಗೆ 2 ಮುಖ್ಯ ವಿಕೆಟ್ ಕಳೆದುಕೊಂಡು 65 ರನ್ ದಾಖಲಿಸಿದೆ. ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 84 ಬಾಲ್​ಗೆ 127 ರನ್ ಬೇಕಿದೆ.

  • 25 Apr 2021 06:07 PM (IST)

    ದೇವದತ್ ಪಡಿಕ್ಕಲ್ ಔಟ್

    ದೇವದತ್ ಪಡಿಕ್ಕಲ್ 15 ಬಾಲ್​ಗೆ 34 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಠಾಕುರ್ ಬೌಲಿಂಗ್​ಗೆ ರೈನಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 06:00 PM (IST)

    ಕೊಹ್ಲಿ ವಿಕೆಟ್ ಪತನ

    ವಿರಾಟ್ ಕೊಹ್ಲಿ 7 ಬಾಲ್​ಗೆ 8 ರನ್ ಗಳಿಸಿ ಔಟ್ ಆಗಿದ್ದಾರೆ. ಸ್ಯಾಮ್ ಕುರ್ರನ್ ಬಾಲ್​ಎ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಪಡಿಕ್ಕಲ್ ಹಾಗೂ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ.

  • 25 Apr 2021 05:58 PM (IST)

    ಆರ್​ಸಿಬಿ 44/0 (3 ಓವರ್)

    ಅದ್ಭುತ ಓಪನಿಂಗ್ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಓವರ್ ಅಂತ್ಯಕ್ಕೆ 44 ರನ್ ದಾಖಲಿಸಿದೆ. ಪಡಿಕ್ಕಲ್ 12 ಬಾಲ್​ಗೆ 32 ರನ್ ಕಲೆಹಾಕಿದ್ದಾರೆ.

  • 25 Apr 2021 05:53 PM (IST)

    ಪಡಿಕ್ಕಲ್ ಅಬ್ಬರ ಶುರು

    ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಪಡಿಕ್ಕಲ್ ವೇಗದ ಆಟಕ್ಕೆ ಮುಂದಾಗಿದ್ದಾರೆ. ಎರಡನೇ ಓವರ್​ನಲ್ಲಿ ಸಿಕ್ಸರ್ ಸಹಿತ 18 ರನ್ ಕಲೆಹಾಕಿದ್ದಾರೆ. 2 ಓವರ್​ಗೆ ಆರ್​ಸಿಬಿ ವಿಕೆಟ್ ನಷ್ಟವಿಲ್ಲದೆ 28 ರನ್ ಕಲೆಹಾಕಿದೆ.

  • 25 Apr 2021 05:47 PM (IST)

    ಆರ್​ಸಿಬಿ 10/0 (1 ಓವರ್)

    1 ಓವರ್​ನ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಆರಂಭಿಸಿದ್ದಾರೆ.

  • 25 Apr 2021 05:29 PM (IST)

    ಚೆನ್ನೈ ಸೂಪರ್ ಕಿಂಗ್ಸ್ 191/4 (20 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಓವರ್ ಹಾಗೂ ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದೆ. ಭರ್ಜರಿ 191 ರನ್ ಕಲೆಹಾಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು 192 ರನ್ ಬೇಕಿದೆ.

  • 25 Apr 2021 05:27 PM (IST)

    ಅರ್ಧಶತಕ ಪೂರೈಸಿದ ಜಡೇಜಾ

    ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹರ್ಷಲ್ ಪಟೇಲ್ ಓವರ್​​ಗೆ 5 ಸಿಕ್ಸ್, 1 ಫೋರ್ ಸಹಿತ 37 ರನ್ ಬಾರಿಸಿದ್ದಾರೆ. ಚೆನ್ನೈ ಪರ ಜಡೇಜಾ 28 ಬಾಲ್​ಗೆ 62 ರನ್ ದಾಖಲಿಸಿದ್ದಾರೆ.

  • 25 Apr 2021 05:22 PM (IST)

    ಜಡೇಜಾ ಭರ್ಜರಿ ಸಿಕ್ಸರ್

    ಹರ್ಷಲ್ ಪಟೇಲ್ ಅಂತಿಮ ಓವರ್​ಗೆ ರವೀಂದ್ರ ಜಡೇಜಾ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸುತ್ತಿದ್ದಾರೆ. 3 ಬಾಲ್​ಗೆ ಸಿಕ್ಸ್ ಬಾರಿಸಿ ತಂಡದ ಮೊತ್ತ 170 ರನ್ ದಾಟುವಂತೆ ಮಾಡಿದ್ದಾರೆ. ಹರ್ಷಲ್ ಪಟೇಲ್ ಅಂತಿಮ ಓವರ್​ನಲ್ಲಿ ದುಬಾರಿಯಾಗಿದ್ದಾರೆ.

  • 25 Apr 2021 05:20 PM (IST)

    150 ರನ್ ಗಡಿದಾಟಿದ ಚೆನ್ನೈ

    ಚೆನ್ನೈ ಸೂಪರ್ ಕಿಂಗ್ಸ್ 19 ಓವರ್​​ಗೆ 4 ವಿಕೆಟ್ ಕಳೆದುಕೊಂಡು 154 ರನ್ ದಾಖಲಿಸಿದೆ. ಧೋನಿ ಹಾಗೂ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 05:15 PM (IST)

    ಸಿಎಸ್​ಕೆ 145/4 (18 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 18 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿದೆ. ಇನ್ನು 2 ಓವರ್​ಗಳು ಬಾಕಿ ಇದ್ದು, 150 ರನ್ ಗಡಿದಾಟುವುದು ಖಚಿತವಾಗಿದೆ.

  • 25 Apr 2021 05:11 PM (IST)

    ರಾಯುಡು ಔಟ್

    ಹರ್ಷಲ್ ಪಟೇಲ್​ಗೆ ಮತ್ತೊಂದು ವಿಕೆಟ್ ಸಿಕ್ಕಿದೆ. 7 ಬಾಲ್​ಗೆ 14 ರನ್ ಗಳಿಸಿ ಆಡುತ್ತಿದ್ದ ಅಂಬಟಿ ರಾಯುಡು ಜಾಮಿಸನ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ ಹಾಗೂ ನಾಯಕ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 05:01 PM (IST)

    ಸಿಎಸ್​ಕೆ 134/3 (16 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 16 ಓವರ್​ಗೆ 3 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದೆ. ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಕ್ರಿಸ್​ನಲ್ಲಿದ್ದಾರೆ. ಆರ್​ಸಿಬಿ ಪರ ಹರ್ಷಲ್ ಪಟೇಲ್ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಹರ್ಷಲ್​ಗೆ ಇನ್ನೂ 2 ಓವರ್ ಬಾಕಿ ಇದೆ.

  • 25 Apr 2021 04:54 PM (IST)

    ಕ್ಯಾಚ್ ಡ್ರಾಪ್!

    ಡೇನಿಯಲ್ ಕ್ರಿಶ್ಚಿಯನ್ ಒಂದು ಕ್ಯಾಚ್ ಡ್ರಾಪ್ ಮಾಡಿದ್ದಾರೆ. ರವೀಂದ್ರ ಜಡೇಜಾ ಹೊಡೆತವನ್ನು ಕೈಚೆಲ್ಲಿದ್ದಾರೆ. 15 ಓವರ್​ಗಳಿಗೆ 3 ವಿಕೆಟ್ ಕಳೆದುಕೊಂಡು 117 ರನ್ ದಾಖಲಿಸಿರುವ ಚೆನ್ನೈ, ತನ್ನ ರನ್ ವೇಗ ಕಡಿಮೆ ಮಾಡಿಕೊಂಡು ಆಡುತ್ತಿದೆ.

  • 25 Apr 2021 04:52 PM (IST)

    ಸಿಎಸ್​ಕೆ 111/3 (14 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 14 ಓವರ್​ಗೆ 3 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿದೆ. ರೈನಾ ಹಾಗೂ ಡುಪ್ಲೆಸಿಸ್ ಒಬ್ಬರ ಹಿಮದೆ ಒಬ್ಬರಂತೆ ವಿಕೆಟ್ ಕಳೆದುಕೊಂಡಿದ್ದಾರೆ. ಆ ಬಳಿಕ ಅಂಬಟಿ ರಾಯುಡು ಮತ್ತು ರವೀಂದ್ರ ಜಡೇಜಾ ಕ್ರೀಸ್​ಗೆ ಇಳಿದಿದ್ದಾರೆ.

  • 25 Apr 2021 04:49 PM (IST)

    ಅರ್ಧಶತಕ ಸಿಡಿಸಿದ ಡುಪ್ಲೆಸಿಸ್ ಔಟ್

    ಅರ್ಧಶತಕ ಸಿಡಿಸಿ ಚೆನ್ನೈಗೆ ಉತ್ತಮ ಆರಂಭ ನೀಡಿದ್ದ ಫಫ್ ಡುಪ್ಲೆಸಿಸ್ ಕೂಡ ಔಟ್ ಆಗಿದ್ದಾರೆ. ರೈನಾ ಬೆನ್ನಲ್ಲೇ ಡುಪ್ಲೆಸಿಸ್ ಹರ್ಷಲ್ ಪಟೇಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೇನಿಯಲ್ ಕ್ರಿಶ್ಚಿಯನ್​ಗೆ ಕ್ಯಾಚ್ ನೀಡಿ 41 ಬಾಲ್​ಗೆ 50 ರನ್ ಗಳಿಸಿ ನಿರ್ಗಮಿಸಿದ್ದಾರೆ.

  • 25 Apr 2021 04:46 PM (IST)

    ರೈನಾ ಔಟ್

    18 ಬಾಲ್​ಗೆ 24 ರನ್ ಗಳಿಸಿ ವೇಗದ ಆಟವಾಡುತ್ತಿದ್ದ ಸುರೇಶ್ ರೈನಾ ಔಟ್ ಆಗಿದ್ದಾರೆ. ಹರ್ಷಲ್ ಪಟೇಲ್ ಬಾಲ್​ಗೆ ಸಿಕ್ಸರ್​ ಸಿಡಿಸಲು ಹೋಗಿ, ದೇವದತ್ತ್ ಪಡಿಕ್ಕಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

  • 25 Apr 2021 04:40 PM (IST)

    ಶತಕ ಪೂರೈಸಿದ ಚೆನ್ನೈ

    ಚೆನ್ನೈ ಸೂಪರ್ ಕಿಂಗ್ಸ್ 100 ರನ್​ಗಳ ಗಡಿ ದಾಟಿದೆ. 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 110 ರನ್ ದಾಖಲಿಸಿದೆ. ಸುರೇಶ್ ರೈನಾ ಸಿಕ್ಸರ್​ಗಳ ಆಟ ಆಡುತ್ತಿದ್ದಾರೆ. ಡುಪ್ಲೆಸಿಸ್ 49 ರನ್​ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 25 Apr 2021 04:35 PM (IST)

    ಸಿಎಸ್​ಕೆ 97/1 (12 ಓವರ್)

    12 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದೆ. ಸುರೇಶ್ ರೈನಾ 12 ಬಾಲ್​ಗೆ 2 ಸಿಕ್ಸರ್ ಸಹಿತ 17 ರನ್ ದಾಖಲಿಸಿದ್ದಾರೆ. ಡುಪ್ಲೆಸಿಸ್ 36 ಬಾಲ್​ಗೆ 43 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 25 Apr 2021 04:25 PM (IST)

    ಚೆನ್ನೈ ಸೂಪರ್ ಕಿಂಗ್ಸ್ 83/1 (10 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 10 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 83 ರನ್ ದಾಖಲಿಸಿದೆ. ಗಾಯಕ್​ವಾಡ್ ಔಟ್ ಆದ ಬಳಿಕ, ಸುರೇಶ್ ರೈನಾ ಕ್ರೀಸ್​ಗೆ ಇಳಿದಿದ್ದಾರೆ. ಡುಪ್ಲೆಸಿಸ್- ರೈನಾ ಜೊತೆಯಾಗಿದ್ದಾರೆ.

  • 25 Apr 2021 04:22 PM (IST)

    ಗಾಯಕ್​ವಾಡ್ ಔಟ್!

    ಚೆನ್ನೈಗೆ ಉತ್ತಮ ಆರಂಭ ನೀಡಿದ್ದ ಋತುರಾಜ್ ಗಾಯಕ್​ವಾಡ್ 33 (25) ಔಟ್ ಆಗಿದ್ದಾರೆ. ಚಹಾಲ್​ ಬೌಲಿಂಗ್​ಗೆ ಜಾಮಿಸನ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ.

  • 25 Apr 2021 04:19 PM (IST)

    ಚೆನ್ನೈ ಸೂಪರ್ ಕಿಂಗ್ಸ್ 74/0 (9 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 9 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿದೆ. ಋತುರಾಜ್ ಗಾಯಕ್​ವಾಡ್ 33 ಹಾಗೂ ಡುಪ್ಲೆಸಿಸ್ 38 ರನ್ ಗಳಿಸಿ ಆಡುತ್ತಿದ್ದಾರೆ.

  • 25 Apr 2021 04:10 PM (IST)

    ಗಾಯಕ್​ವಾಡ್ ಸಿಕ್ಸರ್

    ಫಾಫ್ ಡುಪ್ಲೆಸಿಸ್ ಹಾಗೂ ಗಾಯಕ್​ವಾಡ್ ಭರ್ಜರಿ ಆರಂಭ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 7 ಓವರ್​ಗೆ 1 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ.

  • 25 Apr 2021 04:04 PM (IST)

    ಪವರ್​ಪ್ಲೇ ಅಂತ್ಯಕ್ಕೆ 51/0

    ಚೆನ್ನೈ ಸೂಪರ್ ಕಿಂಗ್ಸ್ 6 ಓವರ್​ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 51 ರನ್ ಕಲೆಹಾಕಿದೆ. ಪವರ್​ಪ್ಲೇ ಅವಧಿಯಲ್ಲಿ ಆರ್​ಸಿಬಿ ವಿಕೆಟ್ ಕಬಳಿಸಲು ವಿಫಲವಾಗಿದೆ. ಡುಪ್ಲೆಸಿಸ್ ಹಾಗೂ ಗಾಯಕ್​ವಾಡ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರ್​ಸಿಬಿ ಪರ ಸಿರಾಜ್, ಜಾಮಿಸನ್, ಚಹಾಲ್ ಮತ್ತು ಸೈನಿ ಬೌಲಿಂಗ್ ಮಾಡಿದ್ದಾರೆ.

  • 25 Apr 2021 03:58 PM (IST)

    ಡುಪ್ಲೆಸಿಸ್ ಅಬ್ಬರ; ಚೆನ್ನೈಗೆ ಉತ್ತಮ ಆರಂಭ

    ಚೆನ್ನೈ ಸೂಪರ್ ಕಿಂಗ್ಸ್ 5 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದ್ದಾರೆ. ಚೆನ್ನೈ ಪರ ಡುಪ್ಲೆಸಿಸ್ 25 (17) ಹಾಗೂ ಗಾಯಕ್‌ವಾಡ್ 12 (14) ಬ್ಯಾಟಿಂಗ್ ಮಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ಗೆ ಉತ್ತಮ ಆರಂಭ ದೊರಕಿದೆ.

  • 25 Apr 2021 03:46 PM (IST)

    ಡುಪ್ಲೆಸಿಸ್ ಸಿಕ್ಸರ್

    ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್​ಮನ್ ಫಾಫ್ ಡುಪ್ಲೆಸಿಸ್ ಬೌಂಡರಿ, ಸಿಕ್ಸರ್ ಸಿಡಿಸಿದ್ದಾರೆ. ಸಿರಾಜ್ ಬೌಲಿಂಗ್​ನ 3ನೇ ಓವರ್​ಗೆ ವೇಗದ ಆಟ ಆಡುತ್ತಿದ್ದಾರೆ. ಚೆನ್ನೈ ತಂಡದ ಮೊತ್ತ 3 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ಆಗಿದೆ.

  • 25 Apr 2021 03:42 PM (IST)

    ಸಿಎಸ್​ಕೆ 10/0 (2 ಓವರ್)

    ಎರಡನೇ ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ. ಆರ್​ಸಿಬಿ ಪರ ಎರಡನೇ ಓವರ್​ನ್ನು ಕೈಲ್ ಜಾಮಿಸನ್ ಬೌಲ್ ಮಾಡಿದ್ದಾರೆ.

  • 25 Apr 2021 03:38 PM (IST)

    ಎರಡೂ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ

    ಎರಡೂ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್​​ನಲ್ಲಿ ಬದಲಾವಣೆ ಮಾಡಿಕೊಂಡಿವೆ. ವಿವರ ಇಲ್ಲಿದೆ

  • 25 Apr 2021 03:36 PM (IST)

    ಬ್ಯಾಟಿಂಗ್ ಆರಂಭಿಸಿದ ಚೆನ್ನೈ

    ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ಋತುರಾಜ್ ಗಾಯಕ್ವಾಡ್ ಹಾಗೂ ಫಫ್ ಡುಪ್ಲೆಸಿಸ್ ಕ್ರೀಸ್​ಗೆ ಇಳಿದಿದ್ದಾರೆ. ಮೊದಲ ಓವರ್ ಅಂತ್ಯಕ್ಕೆ ಚೆನ್ನೈ 6 ರನ್ ಗಳಿಸಿದೆ. ವಿಕೆಟ್ ಕಳೆದುಕೊಂಡಿಲ್ಲ. ಆರ್​ಸಿಬಿ ಪರ ಸಿರಾಜ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.

  • 25 Apr 2021 03:06 PM (IST)

    ಆರ್​ಸಿಬಿ- ಸಿಎಸ್​ಕೆ ಬಲಾಬಲ

    ಆರ್​ಸಿಬಿ ಹಾಗೂ ಸಿಎಸ್​ಕೆ ಮುಖಾಮುಖಿ ಆಗಿರುವ ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 16 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ಪಂದ್ಯಗಳನ್ನು ಗೆದ್ದಿದೆ.

  • 25 Apr 2021 03:04 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ವಿನ್

    ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಲಿದೆ.

  • 25 Apr 2021 02:54 PM (IST)

    ಕೊವಿಡ್-19 ನಿಯಮಗಳನ್ನು ಪಾಲಿಸಿ

    ಕೊರೊನಾ ಪ್ರಕರಣಗಳನ್ನು ತಡೆಗಟ್ಟಲು ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ವಚ್ಛತೆಯ ಕಡೆಗೆ ಗಮನಕೊಡಿ

  • 25 Apr 2021 02:51 PM (IST)

    ವಾಂಖೆಡೆಯಲ್ಲಿ ರನ್ ಮಳೆ?

    ಬ್ಯಾಟಿಂಗ್​ಗೆ ಸಹಕಾರಿ ಎಂದು ಗುರುತಿಸಿಕೊಂಡಿರುವ ಮುಂಬೈ ವಾಂಖೆಡೆ ಮೈದಾನದಲ್ಲಿ ಇಂದು ರನ್ ಹೊಳೆ ಹರಿಯಬಹುದೇ?

Published On - Apr 25,2021 7:29 PM

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ