Fact Check: ಬೀಚ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ-ಸಾರ ಅಲಿ ಖಾನ್?

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋಗಳು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ತನಿಖೆಯ ನಂತರ, ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಈ ಫೋಟೋವನ್ನು ತನಿಖೆ ಮಾಡಲು, ನಾವು ಮೊದಲು ಈ ಚಿತ್ರಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ.

Fact Check: ಬೀಚ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯ-ಸಾರ ಅಲಿ ಖಾನ್?
ವೈರಲ್​ ಫೋಟೋ
Edited By:

Updated on: Jan 02, 2025 | 10:42 AM

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಒಟ್ಟಿಗೆ ಕಾಣಿಸಿಕೊಂಡಿರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಕ್ರಿಸ್‌ಮಸ್ ಹಬ್ಬವನ್ನು ಇಬ್ಬರೂ ಒಟ್ಟಿಗೆ ಆಚರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಬೀಚ್​ನಲ್ಲಿ ಕುಳಿತು ಕಾಫಿ ಸೇವಿಸುತ್ತಿರುವ ಹಾಗೂ ಫೋಟೋಕ್ಕೆ ಪೋಸ್ ನೀಡುತ್ತಿರುವುದು ಇದರಲ್ಲಿದೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ?

ಫೇಸ್‌ಬುಕ್ ಬಳಕೆದಾರರು ಹಾರ್ದಿಕ್ ಹಾಗೂ ಸಾರಾ ಬೀಚ್​ನಲ್ಲಿರುವ ಮೂರು ಫೋಟೀಗಳನ್ನು ಹಂಚಿಕೊಂಡು, ‘‘ಹಾರ್ದಿಕ್ ಪಾಂಡ್ಯ ಮತ್ತು ಸಾರಾ ಅಲಿ ಖಾನ್ ಕ್ರಿಸ್ಮಸ್ ಆನಂದಿಸುತ್ತಿದ್ದಾರೆ…’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋಗಳು ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ತನಿಖೆಯ ನಂತರ, ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಫೋಟೋವನ್ನು ತನಿಖೆ ಮಾಡಲು, ನಾವು ಮೊದಲು ಈ ಚಿತ್ರಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದೇವೆ. ಈ ಫೋಟೋದಲ್ಲಿ ಮುಖವು ತುಂಬಾ ಮೃದುವಾಗಿದೆ, ನೆರಳುಗಳು ಸರಿಯಾಗಿ ಕಾಣಿಸುತ್ತಿಲ್ಲ, ಬಟ್ಟೆಗಳು ಕೂಡ ವಿರೂಪಗೊಂಡಿದೆ, ಬೆಳಕು ಕೂಡ ನೈಜ್ಯ ರೀತಿಯಲ್ಲಿಲ್ಲ, ಬ್ಯಾಕ್​ಗ್ರೌಂಡ್ ಕೂಡ ಅಸ್ಪಷ್ಟವಾಗಿದೆ. ಅಲ್ಲದೆ, ಸಾರಾ ಅಲಿ ಖಾನ್ ಅವರ ಮುಖದ ರಚನೆಯು ಗೊಂಬೆಯಂತಿದೆ. ಇದನ್ನೆಲ್ಲ ನೋಡಿದರೆ ಎಐ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ. ದೃಢೀಕರಣಕ್ಕಾಗಿ, AI ಇಮೇಜ್ ಡಿಟೆಕ್ಷನ್ ಟೂಲ್‌ಗಳಲ್ಲಿ ನಾವು ಈ ಚಿತ್ರಗಳನ್ನು ಒಂದೊಂದಾಗಿ ಪರಿಶೀಲಿಸಿದ್ದೇವೆ.

ಮೊದಲ ಚಿತ್ರವನ್ನು AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್‌ನೊಂದಿಗೆ ನಾವು ಪರಿಶೀಲಿಸಿದ್ದೇವೆ, ಇದರಲ್ಲಿ AI ನಿಂದ ಈ ಚಿತ್ರವನ್ನು ರಚಿಸುವ ಸಂಭವನೀಯತೆ 98.9 ಪ್ರತಿಶತ ಎಂದು ಹೇಳಲಾಗಿದೆ. ಎರಡನೇ ಫೋಟೋಕ್ಕೆ 99.8 ಪ್ರತಿಶತ ಮತ್ತು ಮೂರನೇ ಫೋಟೋವನ್ನು AI ಇಮೇಜ್ ಡಿಟೆಕ್ಷನ್ ಟೂಲ್ ಹೈವ್ ಮಾಡರೇಶನ್‌ನೊಂದಿಗೆ ಪರಿಶೀಲಿಸಿದಾಗ ಇದು 99.9 ಪ್ರತಿಶತ ಎಂದು ಹೇಳಲಾಗಿದೆ ಎಂದು ಕಂಡುಬಂದಿದೆ.

ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವಂತೆ ಹಾರ್ದಿಕ್ ಪಾಂಡ್ಯ ಮತ್ತು ಸಾರಾ ಅಲಿ ಖಾನ್ ಕ್ರಿಸ್‌ಮಸ್ ಆಚರಿಸುತ್ತಿರುವುದು ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ಚಿತ್ರಗಳನ್ನು AI ನಿಂದ ರಚಿಸಲಾಗಿದೆ ಎಂದು ಸಾಬೀತಾಗಿದೆ.

2024ರ ಹಿನ್ನೋಟದ ವಿಡಿಯೋ ಹಂಚಿಕೊಂಡ ಹಾರ್ದಿಕ್:

ಈ ವರ್ಷ ಹಾರ್ದಿಕ್ ಪಾಂಡ್ಯ ತನ್ನ ಜೀವನದಲ್ಲಿ ಏನಾಯಿತು ಎಂಬುದನ್ನು ವಿಡಿಯೋ ರೂಪದಲ್ಲಿ ತೆರೆದಿಟ್ಟಿದ್ದಾರೆ. ಪಾಂಡ್ಯ ಸಾಮಾಜಿಕ ಮಾಧ್ಯಮ ಖಾತೆ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಎಲ್ಲಾ ಸಿಹಿ ನೆನಪುಗಳನ್ನು ಸಂಗ್ರಹಿಸಿದ್ದಾರೆ. ಈ ವಿಡಿಯೋದ ಆರಂಭದಲ್ಲಿ, ಹಾರ್ದಿಕ್ ತನ್ನ ಮಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಅವರ ಈ ವಿಡಿಯೋದಲ್ಲಿ, ಟಿ20 ವಿಶ್ವಕಪ್ 2024 ರ ನೆನಪುಗಳನ್ನು ಸಹ ಕಾಣಬಹುದು, “ನನಗೆ ಸಾಕಷ್ಟು ಏರಿಳಿತಗಳನ್ನು ತಂದ ವರ್ಷವನ್ನು ಹಿಂತಿರುಗಿ ನೋಡುವಾಗ, ಕೆಲವು ಪಾಠಗಳನ್ನು ಕಲಿತಿದ್ದೇನೆ. ನನಗೆ ಕೆಲವೊಂದು ಸಿಕ್ಕಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ ಮತ್ತು ಹೊಸ ವರ್ಷವನ್ನು ಆಶೀರ್ವಾದ, ಸಂಕಲ್ಪ ಮತ್ತು ಪ್ರೀತಿಯೊಂದಿಗೆ ಎದುರು ನೋಡುತ್ತಿದ್ದೇನೆ. ಸೈನ್ ಇನ್. ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ 2024 ರ ಈ ಜರ್ನಿ ವಿಡಿಯೋದಲ್ಲಿ ನತಾಶಾ ಎಲ್ಲಿಯೂ ಕಾಣಿಸಿಕೊಂಡಿಲ್ಲ ಎಂಬುದು ಗಮನಾರ್ಹವಾಗಿದೆ.

ಫ್ಯಾಕ್ಟ್ ಚೆಕ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ