AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA World Cup: ಇಂದು ಅರ್ಜೆಂಟೀನಾ ಸೇರಿದಂತೆ 6 ತಂಡಗಳ ನಡುವೆ ಪಂದ್ಯ: ಭಾರತದಲ್ಲಿ ಪಂದ್ಯ ವೀಕ್ಷಿಸುವುದು ಹೇಗೆ?

FIFA World Cup 2022: ಇಂದು ಫಿಫಾ ವಿಶ್ವಕಪ್ 2022ರಲ್ಲಿ 6 ತಂಡಗಳು ಮೈದಾನಕ್ಕಿಳಿಯುತ್ತಿವೆ. ಅಂದರೆ ಒಟ್ಟು 3 ಪಂದ್ಯಗಳು ನಡೆಯಲಿವೆ. ಇಂದು ಮೈದಾನಕ್ಕಿಳಿಯಲಿರುವ 6 ತಂಡಗಳಲ್ಲಿ ಅರ್ಜೆಂಟೀನಾ ಕೂಡ ಒಂದು ತಂಡವಾಗಿರುವುದು ಫುಟ್ಬಾಲ್ ಅಭಿಮಾನಿಗಳಿಗೆ ಅತ್ಯಂತ ಸಂತಸದ ಸಂಗತಿಯಾಗಿದೆ.

FIFA World Cup: ಇಂದು ಅರ್ಜೆಂಟೀನಾ ಸೇರಿದಂತೆ 6 ತಂಡಗಳ ನಡುವೆ ಪಂದ್ಯ: ಭಾರತದಲ್ಲಿ ಪಂದ್ಯ ವೀಕ್ಷಿಸುವುದು ಹೇಗೆ?
ಅರ್ಜೆಂಟೀನಾ ತಂಡ
TV9 Web
| Updated By: ಪೃಥ್ವಿಶಂಕರ|

Updated on:Nov 22, 2022 | 10:32 AM

Share

ಇಂದು ಫಿಫಾ ವಿಶ್ವಕಪ್ 2022ರಲ್ಲಿ (FIFA World Cup 2022) 6 ತಂಡಗಳು ಮೈದಾನಕ್ಕಿಳಿಯುತ್ತಿವೆ. ಅಂದರೆ ಒಟ್ಟು 3 ಪಂದ್ಯಗಳು ನಡೆಯಲಿವೆ. ಇಂದು ಮೈದಾನಕ್ಕಿಳಿಯಲಿರುವ 6 ತಂಡಗಳಲ್ಲಿ ಅರ್ಜೆಂಟೀನಾ (Argentina) ಕೂಡ ಒಂದು ತಂಡವಾಗಿರುವುದು ಫುಟ್ಬಾಲ್ ಅಭಿಮಾನಿಗಳಿಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ಇದಲ್ಲದೇ ಸೌದಿ ಅರೇಬಿಯಾ, ಟ್ಯುನೀಶಿಯಾ, ಡೆನ್ಮಾರ್ಕ್, ಮೆಕ್ಸಿಕೊ ಮತ್ತು ಪೋಲೆಂಡ್ ತಂಡಗಳು ಕೂಡ ಇಂದು ತಮ್ಮ ಮೊದಲ ಪಂದ್ಯವನ್ನು ಆಡಲಿವೆ. ಇಂದಿನ ಮೊದಲ ಪಂದ್ಯವು ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ನಡುವಿನ ಕದನದೊಂದಿಗೆ ಪ್ರಾರಂಭವಾಗಲಿದೆ.

ಇದಕ್ಕೂ ಮೊದಲು 2022ರ ಫಿಫಾ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ಮತ್ತು ಇಂಗ್ಲೆಂಡ್ ಗೆಲುವಿನೊಂದಿಗೆ ಪಯಣ ಆರಂಭಿಸಿವೆ. ಪಂದ್ಯಾವಳಿಯ ಎರಡನೇ ದಿನದಂದು ನೆದರ್ಲೆಂಡ್ಸ್ 2-0 ಗೋಲುಗಳಿಂದ ಸೆನೆಗಲ್ ತಂಡವನ್ನು ಸೋಲಿಸಿದರೆ, ಇಂಗ್ಲೆಂಡ್ 6-2 ಗೋಲುಗಳಿಂದ ಇರಾನ್ ತಂಡವನ್ನು ಸೋಲಿಸಿತು. ಅದೇ ಸಮಯದಲ್ಲಿ, ಅಮೆರಿಕ ಮತ್ತು ವೇಲ್ಸ್ ನಡುವಿನ ಪಂದ್ಯವು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು.

ಇಂದಿನ ಪಂದ್ಯಗಳ ಬಗ್ಗೆ ಪೂರ್ಣ ಮಾಹಿತಿ

ಫಿಫಾ ವಿಶ್ವಕಪ್ 2022 ರಲ್ಲಿ ಮಂಗಳವಾರ ಯಾವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ?

ಫಿಫಾ ವಿಶ್ವಕಪ್‌ನಲ್ಲಿ ಮಂಗಳವಾರ 3 ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯ ಅರ್ಜೆಂಟೀನಾ vs ಸೌದಿ ಅರೇಬಿಯಾ ನಡುವೆ, ಎರಡನೇ ಪಂದ್ಯ ಡೆನ್ಮಾರ್ಕ್ vs ಟುನೀಶಿಯಾ ನಡುವೆ ಮತ್ತು ಮೂರನೇ ಪಂದ್ಯ ಮೆಕ್ಸಿಕೋ ಮತ್ತು ಪೋಲೆಂಡ್ ನಡುವೆ ನಡೆಯಲಿದೆ.

ಫಿಫಾ ವಿಶ್ವಕಪ್ 2022ರ ಎಲ್ಲಾ ಮೂರು ಪಂದ್ಯಗಳನ್ನು ಯಾವಾಗ ಆಡಲಾಗುತ್ತದೆ?

ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವಿನ ಫಿಫಾ ವಿಶ್ವಕಪ್ ಪಂದ್ಯವು ನವೆಂಬರ್ 22 (ಮಂಗಳವಾರ) ರಂದು ನಡೆಯಲಿದೆ. ಇದೇ ದಿನ ಡೆನ್ಮಾರ್ಕ್-ಟುನೀಶಿಯಾ ಮತ್ತು ಮೆಕ್ಸಿಕೊ-ಪೋಲೆಂಡ್ ನಡುವಿನ ಪಂದ್ಯವೂ ನಡೆಯಲಿದೆ.

ಫಿಫಾ ವಿಶ್ವಕಪ್ 2022ರ ಎಲ್ಲಾ ಮೂರು ಪಂದ್ಯಗಳು ಪ್ರಾರಂಭವಾಗುವ ಸಮಯ?

ಭಾರತೀಯ ಕಾಲಮಾನದ ಪ್ರಕಾರ ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವಿನ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಇದಲ್ಲದೇ ಡೆನ್ಮಾರ್ಕ್ ಹಾಗೂ ಟುನೀಶಿಯಾ ನಡುವಿನ ಪಂದ್ಯ ಸಂಜೆ 6:30ಕ್ಕೆ ನಡೆಯಲಿದ್ದು, ಮೆಕ್ಸಿಕೊ ಮತ್ತು ಪೋಲೆಂಡ್ ನಡುವೆ ರಾತ್ರಿ 9:30ರಿಂದ ಪಂದ್ಯ ಆರಂಭವಾಗಲಿದೆ.

ಫಿಫಾ ವರ್ಲ್ಡ್ ಕಪ್ 2022ರ ಎಲ್ಲಾ ಮೂರು ಪಂದ್ಯಗಳ ಲೈವ್ ಟೆಲಿಕಾಸ್ಟ್ ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಮಂಗಳವಾರ ಫಿಫಾ ವಿಶ್ವಕಪ್‌ನಲ್ಲಿ ನಡೆಯಲಿರುವ ಎಲ್ಲಾ ಮೂರು ಪಂದ್ಯಗಳ ನೇರ ಪ್ರಸಾರವು ಸ್ಫೋಟ್ರ್ಸ್ 18 (Sports18) ಮತ್ತು ಸ್ಫೋಟ್ರ್ಸ್ 18 ಹೆಚ್​ಡಿ (Sports18 HD) ಚಾನೆಲ್​ನಲ್ಲಿ ವೀಕ್ಷಿಸಬಹುದು.

ಫಿಫಾ ವಿಶ್ವಕಪ್ 2022 ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಫಿಫಾ ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.

Published On - 10:32 am, Tue, 22 November 22