AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

FIFA ವಿಶ್ವಕಪ್ 2026 ರ ಬಹುಮಾನ ಪ್ರಕಟ: ವಿಜೇತರಿಗೆ 481 ಕೋಟಿ..! ಉಳಿದವರಿಗೆ?

FIFA World Cup 2026: 2026ರ ಫಿಫಾ ವಿಶ್ವಕಪ್ ಜೂನ್ 11 ರಿಂದ ಜುಲೈ 19 ರವರೆಗೆ ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕಾದಲ್ಲಿ ನಡೆಯಲಿದೆ. ಮೊದಲ ಬಾರಿಗೆ ಮೂರು ದೇಶಗಳು ಜಂಟಿಯಾಗಿ ಆಯೋಜಿಸುತ್ತಿರುವ ಈ ಪಂದ್ಯಾವಳಿಯಲ್ಲಿ 48 ತಂಡಗಳು ಭಾಗವಹಿಸಿ, ಒಟ್ಟು 104 ಪಂದ್ಯಗಳು ಜರುಗಲಿವೆ. ಸ್ವರೂಪ ಬದಲಾಗಿದ್ದು, ಬಹುಮಾನದ ಮೊತ್ತ US$655 ಮಿಲಿಯನ್‌ಗೆ (ಸುಮಾರು ₹6300 ಕೋಟಿ) ಏರಿಕೆ ಕಂಡಿದೆ. ಚಾಂಪಿಯನ್ ತಂಡಕ್ಕೆ ₹481 ಕೋಟಿ ಸಿಗಲಿದೆ.

FIFA ವಿಶ್ವಕಪ್ 2026 ರ ಬಹುಮಾನ ಪ್ರಕಟ: ವಿಜೇತರಿಗೆ 481 ಕೋಟಿ..! ಉಳಿದವರಿಗೆ?
Fifa 2026
ಪೃಥ್ವಿಶಂಕರ
|

Updated on: May 21, 2026 | 6:26 PM

Share

2026 ರ ಫಿಫಾ ವಿಶ್ವಕಪ್ (FIFA World Cup 2026) ಇದೇ ಜೂನ್ 11, 2026 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೂರು ದೇಶಗಳು ಜಂಟಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಈ ಪಂದ್ಯಾವಳಿ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದೆ. ಅದರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 11, ಮೆಕ್ಸಿಕೊದಲ್ಲಿ ಮೂರು ಮತ್ತು ಕೆನಡಾದಲ್ಲಿ ಎರಡು ಸೇರಿದಂತೆ ಒಟ್ಟು 16 ನಗರಗಳು ಪಂದ್ಯಗಳನ್ನು ಆಯೋಜಿಸುತ್ತವೆ. ಫೈನಲ್ ಪಂದ್ಯವು ಜುಲೈ 19, 2026 ರಂದು ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಬಾರಿಯ ವಿಶೇಷವೇನು?

ಈ ಬಾರಿಯ ಫಿಫಾ ವಿಶ್ವಕಪ್​ನ ವಿಶೇಷತೆ ಏನೆಂದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 32 ತಂಡಗಳು ಭಾಗವಹಿಸುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ 48 ತಂಡಗಳು ಕಣಕ್ಕಿಳಿಯಲಿವೆ. ಇದರ ಜೊತೆಗೆ ಸ್ವರೂಪವನ್ನು ಸಹ ಬದಲಾಯಿಸಲಾಗಿದೆ. 48 ತಂಡಗಳನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು, ಜೊತೆಗೆ ಮೂರನೇ ಸ್ಥಾನ ಪಡೆದ ಎಂಟು ಅತ್ಯುತ್ತಮ ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.

ಬಹುಮಾನದ ಮೊತ್ತದಲ್ಲಿ ದಾಖಲೆಯ ಏರಿಕೆ

ಈ ವರ್ಷ ಫಿಫಾ ಬಹುಮಾನದ ಹಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಒಟ್ಟು US$655 ಮಿಲಿಯನ್ (ಸುಮಾರು 6300 ಕೋಟಿ ರೂ.) ಮೊತ್ತವನ್ನು 48 ತಂಡಗಳ ನಡುವೆ ಹಂಚಲಾಗುತ್ತದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತದಲ್ಲಿ ಸುಮಾರು 50% ಹೆಚ್ಚಳವಾಗಿದೆ.

ಯಾವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ?

  • ಚಾಂಪಿಯನ್ ತಂಡ: ಸುಮಾರು 481 ಕೋಟಿ ರೂ.
  • ರನ್ನರ್ ಅಪ್: ಸುಮಾರು 317 ಕೋಟಿ ರೂ.
  • 3ನೇ ಸ್ಥಾನ: ಸುಮಾರು 279 ಕೋಟಿ ರೂ.
  • 4ನೇ ಸ್ಥಾನ: ಸುಮಾರು 259 ಕೋಟಿ ರೂ.
  • 5 ರಿಂದ 8 ನೇ ಶ್ರೇಯಾಂಕಿತ ತಂಡಗಳು: ಸುಮಾರು 182 ಕೋಟಿ ರೂ.
  • 9 ರಿಂದ 16 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 144 ಕೋಟಿ ರೂ.
  • 17 ರಿಂದ 32 ನೇ ಸ್ಥಾನದಲ್ಲಿರುವ ತಂಡಗಳು: ಸುಮಾರು 105 ಕೋಟಿ ರೂ.
  • 33 ರಿಂದ 48 ನೇ ಸ್ಥಾನ: ಸುಮಾರು 86 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ರಿಷಬ್ ಶೆಟ್ಟಿ; ಕಾರಣ ಏನು?
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು