ಮ್ಯಾಕ್ಸ್​ವೆಲ್​ ಅಬ್ಬರಕ್ಕೆ ಗ್ಯಾಲರಿ ಚೇರ್​​ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್​-ಚುಪ್​!

ಕಳಪೆ ಪ್ರದರ್ಶನದ ನಡುವೆಯೂ ಆರ್​ಸಿಬಿ 14.25 ಕೋಟಿ ಕೊಟ್ಟು ಮ್ಯಾಕ್ಸ್​ವೆಲ್​ ಅವರನ್ನು ಖರೀದಿಸಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

ಮ್ಯಾಕ್ಸ್​ವೆಲ್​ ಅಬ್ಬರಕ್ಕೆ ಗ್ಯಾಲರಿ ಚೇರ್​​ ಚೂರು ಚೂರು: 14 ಕೋಟಿ ಹೆಚ್ಚಾಯ್ತು ಅಂದವರು ಗಪ್​-ಚುಪ್​!

Updated on: Mar 03, 2021 | 5:30 PM

2021ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆಸ್ಟ್ರೇಲಿಯಾ ಆಟಗಾರ ಗ್ಲೆನ್​ ಮ್ಯಾಕ್ಸ್​ವೆಲ್​ ಅವರನ್ನು 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಎಲ್ಲ ಚರ್ಚೆಗಳಿಗೆ ಗ್ಲೆನ್​ ಮ್ಯಾಕ್ಸ್​​ವೆಲ್​ ತೆರೆ ಎಳೆದಿದ್ದಾರೆ. ನ್ಯೂಜಿಲೆಂಡ್​ ವಿರುದ್ಧದ ಟಿ20 ಪಂದ್ಯದಲ್ಲಿ 31 ಬಾಲ್​ಗಳಿಗೆ 70 ರನ್​ ಸಿಡಿಸಿ ಭೇಷ್​​ ಎನಿಸಿಕೊಂಡಿದ್ದಾರೆ. ಅಲ್ಲದೆ, ಮ್ಯಾಕ್ಸ್​ವೆಲ್​ ಬಗ್ಗೆ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

ಆರ್​ಸಿಬಿ ಜತೆ ಆಡಲು ಕಾತುರನಾಗಿದ್ದೇನೆ ಎಂದಿದ್ದರು ಮ್ಯಾಕ್ಸ್​ವೆಲ್. ಹೀಗಾಗಿ, 2021ರ ಐಪಿಎಲ್​ ಹರಾಜಿನಲ್ಲಿ ಮ್ಯಾಕ್ಸ್​ವೆಲ್​ ಅವರನ್ನು ಖರೀದಿಸಲು ಆರ್​ಸಿಬಿ ಉತ್ಸುಕತೆ ತೋರಿತ್ತು. ಅಂತೆಯೇ ಅವರನ್ನು, 14.25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.

2020ರ ಐಪಿಎಲ್​ನಲ್ಲಿ ಪಂಜಾಬ್​ ಪರ ಆಡಿದ್ದ ಮ್ಯಾಕ್ಸ್​​ವೆಲ್​ ಕಳಪೆ ಪ್ರದರ್ಶನ ನೀಡಿದ್ದರು. ಆಗ 10.75 ಕೋಟಿ ರೂಪಾಯಿಗೆ ಬಿಕರಿಯಾದರೂ ಆಡಿದ 13 ಪಂದ್ಯಗಳಲ್ಲಿ 15.42ರ ಸರಾಸರಿಯಲ್ಲಿ ಕೇವಲ 103 ರನ್​ ಗಳಿಸಿ, ಇಡೀ ಟೂನಿರ್ಯಲ್ಲಿ ಒಂದೇ ಒಂದು ಸಿಕ್ಸರ್ ಸಹ ಬಾರಿಸಲು ಮ್ಯಾಕ್ಸ್​​ವೆಲ್​ ವಿಫಲರಾಗಿದ್ದರು.

ಕಳಪೆ ಪ್ರದರ್ಶನದ ನಡುವೆಯೂ ಆರ್​ಸಿಬಿ 14.25 ಕೋಟಿ ಕೊಟ್ಟು ಮ್ಯಾಕ್ಸ್​ವೆಲ್​ ಅವರನ್ನು ಖರೀದಿಸಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇನ್ನು, ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್​ ಟಿ20 ಟೂರ್ನಿಯಲ್ಲಿ ಮ್ಯಾಕ್ಸ್​ವೆಲ್​ ರನ್​ ಎರಡಂಕಿ ದಾಟಿರಲಿಲ್ಲ. ಹೀಗಾಗಿ ಮ್ಯಾಕ್ಸ್​​ವೆಲ್​ಗೆ 14 ಕೋಟಿ ಹೆಚ್ಚಾಯ್ತು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇಂದಿನ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಅಬ್ಬರಿಸಿ, ಟ್ರೋಲ್​ಗಳಿಗೆ ಬ್ರೇಕ್​ ಹಾಕಿದ್ದಾರೆ.

31 ಬಾಲ್​ಗಳಲ್ಲಿ ಮ್ಯಾಕ್ಸ್​ವೆಲ್​ 70 ರನ್​ ಸಿಡಿಸಿದ್ದಾರೆ. ಇದರಲ್ಲಿ 8 ಫೋರ್​, 5 ಸಿಕ್ಸ್​ಗಳನ್ನು ಒಳಗೊಂಡಿದೆ. ನೀಶಮ್​ ಓವರ್​ನಲ್ಲಿ 4,6,4,4,4,6 ಬಾರಿಸಿ ಅಚ್ಚರಿ ಮೂಡಿಸಿದ್ದಾರೆ. ಮ್ಯಾಕ್ಸ್​ವೆಲ್​​ ಸಿಕ್ಸ್ ಹೊಡೆದ ಅಬ್ಬರಕ್ಕೆ ಗ್ಯಾಲರಿಯಲ್ಲಿದ್ದ ಚೇರ್​ ಮುರಿದು ಹೋಗಿದೆ. ಇವರ ಅಬ್ಬರದ ಆಟದ ನಂತರ ಸಾಕಷ್ಟು ಮೀಮ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಇದನ್ನೂ ಓದಿ: IPL Auction 2021: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​​ ಜತೆ ಆಡಲು ಕಾತುರನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್​ವೆಲ್

Published On - 5:29 pm, Wed, 3 March 21

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us