ಫುಟ್ಬಾಲ್ ದೇವರು ಮರಡೊನ ಎರಡು ಬಾರಿ ಕೊಲ್ಕತಾಗೆ ಬಂದಿದ್ದರು!

ಬುಧವಾರದಂದು ಕಣ್ಮರೆಯಾದ ಫುಟ್ಬಾಲ್ ಲೆಜೆಂಡ್ ಡೀಗೊ ಮರಡೊನ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಎರಡೂ ಬಾರಿ ಅವರು ಭೇಟಿ ನೀಡಿದ್ದು ಭಾರತದಲ್ಲ್ಲಿಯೇ ಅತಿಹೆಚ್ಚು ಪುಟ್ಬಾಲ್ ಅಭಿಮಾನಿಗಳಿಂದ ತುಂಬಿರುವ ಮತ್ತು ಈ ಆಟಕ್ಕಾಗಿ ಸರ್ವವನ್ನೂ ತ್ಯಾಗ ಮಾಡಲು ಸಿದ್ಧರಿರುವ ಜನರಿಂದ ತುಂಬಿರುವ ‘ಸಿಟಿ ಆಫ್ ಜಾಯ್’ ಕೊಲ್ಕತಾಗೆ.

ಫುಟ್ಬಾಲ್ ದೇವರು ಮರಡೊನ ಎರಡು ಬಾರಿ ಕೊಲ್ಕತಾಗೆ ಬಂದಿದ್ದರು!
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 26, 2020 | 10:27 PM

1996ರಲ್ಲಿ ಜಗದ್ವಿಖ್ಯಾತ ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ಮುಂಬೈಗೆ ಬಂದಿದ್ದು ನಿಮಗೆ ನೆನಪಿದೆಯೇ? ಆತನ ಆಗಮನ ಕೇವಲ ಮುಂಬೈ ಮಹಾನಗರ ಮಾತ್ರವಲ್ಲ ಇಡೀ ಭಾರತವನ್ನೇ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಜಾಕ್ಸನ್ ಮುಂಬೈಯಲ್ಲಿ ಬಾಳಾ ಸಾಹೇಬ ಠಾಕ್ರೆಯವರನ್ನು ಬೇಟಿಯಾಗಿದ್ದು, ಅವರು ಮಾತೋಶ್ರೀಯಿಂದ ನಿರ್ಮಿಸಿದ ನಂತರ ಠಾಕ್ರೆಯವರು, ‘ಜಾಕ್ಸನ್ ನನ್ನ ಬಾತ್​ರೂಮ್ ಉಪಯೋಗಿಸಿದ!’ ಅಂತ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವಿದೇಶಿಯರು ಭಾರತಕ್ಕೆ ಬಂದಾಗ ಆವರಿಗೆ ಅದ್ಧೂರಿಯ ಸ್ವಾಗತ ಸಿಕ್ಕಿದೆ.

ನಿನ್ನೆಯಷ್ಟೇ ಕಣ್ಮರೆಯಾದ ಫುಟ್ಬಾಲ್ ಲೆಜೆಂಡ್ ಡೀಗೊ ಮರಡೊನ ಒಮ್ಮೆಯಲ್ಲ, ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಎರಡೂ ಬಾರಿ ಅವರು ಭೇಟಿ ನೀಡಿದ್ದು ಭಾರತದಲ್ಲ್ಲಿಯೇ ಅತಿಹೆಚ್ಚು ಪುಟ್ಬಾಲ್ ಹುಚ್ಚಿರುವ, ಈ ಆಟಕ್ಕಾಗಿ ಏನೆಲ್ಲವನ್ನು ತ್ಯಾಗ ಮಾಡಲು ಸಿದ್ಧರಿರುವ ಜನರಿಂದ ತುಂಬಿರುವ ‘ಸಿಟಿ ಆಫ್ ಜಾಯ್’ ಕೊಲ್ಕತಾಗೆ. ಮರಡೋನಗೂ ಈ ನಗರವೆಂದರೆ ಪಂಚಪ್ರಾಣ.

ಮೊದಲಬಾರಿಗೆ ಅವರು ಪಶ್ವಿಮ ಬಂಗಾಳದ ರಾಜಧಾನಿಗೆ ಬಂದಿದ್ದು 2008ರಲ್ಲಿ. ಅವರ ಭೇಟಿಯ ಉದ್ದೇಶ ಫುಟ್ಬಾಲ್ ಹುಚ್ಚಿನ ಯುವಕರೊಂದಿಗೆ ಆಟದ ಬಗ್ಗೆ ತಮ್ಮ ವ್ಯಾಮೋಹ ಮತ್ತು ಅನುಭವವನ್ನು ಹಂಚಿಕೊಳ್ಳುವುದಾಗಿತ್ತು. ಆಮೇಲೆ ಅವರು 2017ರಲ್ಲಿ ಭಾರತ ಕ್ರಿಕೆಟ್ ಟೀಮಿನ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಲಿ ಆಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೆ ಸಹಾಯಾರ್ಥ ಸಾಕರ್ ಪಂದ್ಯದಲ್ಲಿ ಆಡಲು ಬಂದಿದ್ದರು.

ಮೋಹನ್ ಬಾಗನ್, ಈಸ್ಟ್ ಬೆಂಗಾಲ್ ಮತ್ತು ಮಹ್ಮಡನ್ ಸ್ಪೋರ್ಟಿಂಗ್ ಕೊಲ್ಕಾತದ ಮೂರು ಪ್ರಸಿದ್ಧ ಫುಟ್ಬಾಲ್ ಕ್ಲಬ್​ಗಳು. 2008ರಲ್ಲಿ ಮೋಹನ್ ಬಾಗನ್ ಮೈದಾನಕ್ಕೆ ತೆರಳಿದ್ದ ಮರಡೊನ ಬಹು-ಚರ್ಚಿತ ಎಡಗಾಲಿನಿಂದ ಚಮತ್ಕಾರಿಕ ಆಟವನ್ನು ಪ್ರದರ್ಶಿಸಿದ್ದರು. ಅದೇ ಸಮಯದಲ್ಲಿ ಮರಡೊನ ತಮ್ಮ ಮೇಣದ ಪ್ರತಿಮೆಯನ್ನು ಸಹ ಅನಾವರಣಗೊಳಿಸಿದ್ದರು. ತಮ್ಮ ಕೊಲ್ಕತಾ ಭೇಟಿಯ ಸಂದರ್ಭದಲ್ಲಿ ಅವರು ಆಗಿನ ರಕ್ಷಣಾ ಸಚಿವರಾಗಿದ್ದ ದಿವಂಗತ ಪ್ರಣಬ್ ಮುಖರ್ಜಿಯವರನ್ನು ಸಹ ಭೇಟಿಯಾಗಿದ್ದರು.

ಗಂಗೂಲಿ ಒಬ್ಬ ಕ್ರಿಕೆಟರ್​ ಆದರೂ ಅವರಿಗೆ ಫುಟ್ಬಾಲ್ ಮೇಲೆ ಎಲ್ಲಿಲ್ಲದ ಪ್ರೀತಿ. ಮರಡೊನ ಜೊತೆ 2017ರಲ್ಲಿ ಸಮಯ ಕಳೆದಿದ್ದು ತಮ್ಮ ಬದುಕಿನ ಅವಿಸ್ಮರಣೀಯ ಘಟನೆಗಳಲ್ಲೊಂದು ಅಂತ ದಾದಾ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಸ್ವಭಾವತಃ ಮುಂಗೋಪಿ, ಧಾಷ್ಟ್ಯತೆ ಮತ್ತು ನಿರ್ಭಿಡೆ ಮಾತಿಗೆ ಹೆಸರಾಗಿದ್ದ ಮರಡೊನ ಕೊಲ್ಕತಾದ ಜನರೆದುರು ಮಾತ್ರ ಅತ್ಯಂತ ವಿನಮ್ರತೆಯಿಂದ ಮಾತಾಡಿದ್ದರು.

‘‘ನನ್ನ ಹೃದಯದಲ್ಲಿ ಕೊಲ್ಕತಾಗೆ ವಿಶೇಷವಾದ ಸ್ಥಾನವಿದೆ. 2008ರಲ್ಲಿ ನಾನು ಈ ನಗರಕ್ಕೆ ನೀಡಿದ ಭೇಟಿ ಅದ್ಭುತವಾಗಿತ್ತು ಮತ್ತು ಅದನ್ನು ನಾನ್ಯಾವತ್ತೂ ಮರೆಯಲಾರೆ. ಇಲ್ಲಿನ ಜನ ಅಪ್ರತಿಮ ಫುಟ್ಬಾಲ್ ಅಭಿಮಾನಿಗಳು ಎಂದು ಹೇಳಲಿಚ್ಛಿಸುತ್ತೇನೆ, ನಾನು ಖಂಡಿತವಾಗಿಯೂ ಫುಟ್ಬಾಲ್ ದೇವರಲ್ಲ, ಒಬ್ಬ ಸಾಮಾನ್ಯ ಆಟಗಾರ, ಅಷ್ಟೇ,’’ ಎಂದು ಮರಡೊನ ಹೇಳಿದ್ದರು. 2017ರಲ್ಲಿ ಅವರು ಗಂಗೂಲಿ ಜೊತೆ ಸಹಾಯಾರ್ಥ ಫುಟ್ಬಾಲ್ ಪಂದ್ಯ ಆಡದಿದ್ದರೂ ನಗರದಲ್ಲಿ ಸ್ಥಾಪಿಸಲಾಗಿರುವ ಅವರ 12-ಅಡಿ ಎತ್ತರದ ಪ್ರತಿಮೆಯನ್ನು ಅಂದು ಅನಾವರಣಗೊಳಿಸಿದ್ದರು.

ಡೀಗೊ ಮರಡೊನ ಮತ್ತು ಪ್ರಣಬ್ ಮುಖರ್ಜಿ

ಡೀಗೊ ಮರಡೊನ ಮತ್ತು ಸೌರವ್ ಗಂಗೂಲಿ

ಈಗ ಇವೆಲ್ಲ ನೆನೆಪುಗಳು ಮಾತ್ರ. ಆದರೆ ಮರಡೋನ ಭಾರತೀಯರ ಅದರಲ್ಲೂ ವಿಶೇಷವಾಗಿ ಕೊಲ್ಕತಾ ನಗವಾಸಿಗಳ ಹೃದಯಗಳಲ್ಲಿ ಶಾಶ್ವತವಾದ ನೆಲೆ ಕಂಡುಕೊಂಡಿದ್ದಾರೆ ಅಂತ ಹೇಳಿದರೆ ಉತ್ಪ್ರೇಕ್ಷೆಯೆನಿಸದು.

Published On - 10:19 pm, Thu, 26 November 20

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್