AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರವೇ ನಡೆಸಲಿದೆ ಡಿಯೆಗೊ ಮರಡೋನಾ ಅಂತ್ಯಕ್ರಿಯೆ; ಅರ್ಜಂಟೀನಾದಲ್ಲಿ ಮೂರುದಿನ ಶೋಕಾಚರಣೆ

ಇತ್ತೀಚೆಗಷ್ಟೇ ಮಿದುಳು ಸರ್ಜರಿ ಮಾಡಿಸಿಕೊಂಡು ಮನೆಗೆ ಬಂದಿದ್ದ ಮರಡೋನಾಗೆ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ತಿಂಡಿಗೆಂದು ಎದ್ದುಬಂದರೂ ತುಂಬ ಸುಸ್ತಾದವರಂತೆ ಕಾಣುತ್ತಿದ್ದರು. ಅಲ್ಲದೆ ನನಗೆ ಶೀತವಾಗಿದೆ, ಐ ಫೀಲ್​ ಸಿಕ್​..(ಆರೋಗ್ಯ ಸರಿಯಿಲ್ಲದಂತೆ ಅನ್ನಿಸುತ್ತಿದೆ) ಎಂದು ಮನೆಯಲ್ಲಿದ್ದ ಸಂಬಂಧಿಯ ಬಳಿ ಹೇಳಿಕೊಂಡಿದ್ದರಂತೆ.

ಸರ್ಕಾರವೇ ನಡೆಸಲಿದೆ ಡಿಯೆಗೊ ಮರಡೋನಾ ಅಂತ್ಯಕ್ರಿಯೆ; ಅರ್ಜಂಟೀನಾದಲ್ಲಿ ಮೂರುದಿನ ಶೋಕಾಚರಣೆ
ಡಿಯೆಗೊ ಮರಡೋನಾ (ಸಂಗ್ರಹ ಚಿತ್ರ)
Lakshmi Hegde
| Edited By: |

Updated on: Nov 26, 2020 | 6:44 PM

Share

ಹೃದಯಾಘಾತದಿಂದ ಬುಧವಾರ (ನ.25) ನಿಧನರಾದ ಫುಟ್​ಬಾಲ್​ ದಿಗ್ಗಜ ಡಿಯಾಗೋ ಮರಡೋನಾ ಅಂತ್ಯಕ್ರಿಯೆಯನ್ನು ಸರ್ಕಾರವೇ ನಡೆಸಲಿದೆ ಎಂದು ಅರ್ಜೆಂಟೀನಾ ಅಧ್ಯಕ್ಷ ಅಲ್ಬೆರ್ಟೋ ಫರ್ನಂಡೀಸ್ ತಿಳಿಸಿದ್ದಾರೆ. ಹಾಗೇ, ರಾಷ್ಟ್ರದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಡಿಯಾಗೋ ಅವರು ವಿಶ್ವ ಕಂಡ ಶ್ರೇಷ್ಠ ಫುಟ್​ಬಾಲ್ ಆಟಗಾರರಾಗಿದ್ದು, 1986ರ ವಿಶ್ವಕಪ್​ ವಿಜೇತ ತಂಡದ ನಾಯಕನಾಗಿದ್ದರು. ಇತ್ತೀಚೆಗಷ್ಟೇ ಮಿದುಳು ಶಸ್ತ್ರಚಿಕಿತ್ಸೆಗೆ ಒಳಗಾಗಿ, ಮನೆಗೆ ಬಂದಿದ್ದರು. ಆದರೆ ನಿನ್ನೆ ಹೃದಯಾಘಾತದಿಂದ ಮರಣಹೊಂದಿದ್ದಾರೆ.

ಅರ್ಜಿಂಟೀನಾ ರಾಜಧಾನಿ ಬ್ಯೂನಸ್ ಐರಿಸ್​​ನಲ್ಲಿರುವ ಸರ್ಕಾರಿ ಭವನದಲ್ಲಿ ಮರಡೋನಾಗೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವುದಾಗಿ ಅವರ ಕುಟುಂಬಕ್ಕೆ ಅಧ್ಯಕ್ಷರು ತಿಳಿಸಿದ್ದಾರೆ. ಈ ಮೂಲಕ ದೇಶದ ಐಕಾನ್ ಆಗಿದ್ದ ಫುಟ್​ಬಾಲ್​ ದಿಗ್ಗಜನಿಗೆ ವಿದಾಯ ಹೇಳಲು ಸರ್ಕಾರ ನಿರ್ಧರಿಸಿದೆ. ಆದರೆ ಅಂತ್ಯಕ್ರಿಯೆ ಯಾವಾಗ ಎಂಬುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಶವಪರೀಕ್ಷೆ ಮುಗಿದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

‘ಐ ಫೀಲ್​ ಸಿಕ್​…’ ಇತ್ತೀಚೆಗಷ್ಟೇ ಮಿದುಳು ಸರ್ಜರಿ ಮಾಡಿಸಿಕೊಂಡು ಮನೆಗೆ ಬಂದಿದ್ದ ಮರಡೋನಾಗೆ ಮನೆಯಲ್ಲೇ ಚಿಕಿತ್ಸೆ ನಡೆಯುತ್ತಿತ್ತು. ಬುಧವಾರ ಬೆಳಗ್ಗೆ ತಿಂಡಿಗೆಂದು ಎದ್ದುಬಂದರೂ ತುಂಬ ಸುಸ್ತಾದವರಂತೆ ಕಾಣುತ್ತಿದ್ದರು. ಅಲ್ಲದೆ ನನಗೆ ಶೀತವಾಗಿದೆ, ಐ ಫೀಲ್​ ಸಿಕ್​..(ಆರೋಗ್ಯ ಸರಿಯಿಲ್ಲದಂತೆ ಅನ್ನಿಸುತ್ತಿದೆ) ಎಂದು ಮನೆಯಲ್ಲಿದ್ದ ಸಂಬಂಧಿಯ ಬಳಿ ಹೇಳಿಕೊಂಡಿದ್ದರಂತೆ. ಅದೇ ಅವರ ಕೊನೇ ಮಾತು..ಮತ್ತೆ ತುಂಬ ಹೊತ್ತು ಬದುಕಲಿಲ್ಲ ಎಂದು ಕುಟುಂಬ ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿವೆ.

ಇದನ್ನೂ ಓದಿ: ಸಾಕರ್ ಫೀಲ್ಡಿಗೆ ಗುಡ್​ಬೈ ಹೇಳಿದ ಫುಟ್ಬಾಲ್ ಮಾಂತ್ರಿಕ ಮರಡೊನ!

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ