AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey Asia Cup 2025: ಸೂಪರ್ 4 ಸುತ್ತಿನಲ್ಲಿ ಮಲೇಷ್ಯಾವನ್ನು ಮಕಾಡೆ ಮಲಗಿಸಿದ ಭಾರತ ಹಾಕಿ ತಂಡ

Hockey Asia Cup 2025: 2025ರ ಪುರುಷರ ಹಾಕಿ ಏಷ್ಯಾಕಪ್‌ನ ಸೂಪರ್ 4 ಹಂತದಲ್ಲಿ ಭಾರತ ತಂಡ ಮಲೇಷ್ಯಾವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿ ಮಹತ್ವದ ಗೆಲುವು ಸಾಧಿಸಿದೆ. ಪೂಲ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದ ಭಾರತ, ಸೂಪರ್ 4ನಲ್ಲಿ ಕೊರಿಯಾ ವಿರುದ್ಧ ಡ್ರಾ ಆಡಿದ ನಂತರ ಈ ಗೆಲುವು ಪಡೆದುಕೊಂಡಿದೆ. ಮನ್ಪ್ರೀತ್ ಸಿಂಗ್, ಸುಖ್ಜೀತ್ ಸಿಂಗ್, ಶಿಲಾನಂದ್ ಲಾಕ್ರಾ ಮತ್ತು ವಿವೇಕ್ ಸಾಗರ್ ಪ್ರಸಾದ್ ಗೋಲುಗಳನ್ನು ಗಳಿಸಿದರು. ಈ ಗೆಲುವು ಭಾರತದ ಫೈನಲ್ ಪ್ರವೇಶದ ಆಸೆಗಳನ್ನು ಜೀವಂತವಾಗಿರಿಸಿದೆ.

Hockey Asia Cup 2025: ಸೂಪರ್ 4 ಸುತ್ತಿನಲ್ಲಿ ಮಲೇಷ್ಯಾವನ್ನು ಮಕಾಡೆ ಮಲಗಿಸಿದ ಭಾರತ ಹಾಕಿ ತಂಡ
Hockey Asia Cup
ಪೃಥ್ವಿಶಂಕರ
|

Updated on: Sep 04, 2025 | 9:52 PM

Share

2025 ರ ಪುರುಷರ ಹಾಕಿ ಏಷ್ಯಾಕಪ್​ನ (Hockey Asia Cup 2025) ಸೂಪರ್ 4 ಸುತ್ತಿನಲ್ಲಿ ಭಾರತ ತಂಡ ಮೊದಲ ಗೆಲುವು ದಾಖಲಿಸಿದೆ. ಗುಂಪು ಹಂತದಲ್ಲಿ ತಾನು ಆಡಿದ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡು ಸೂಪರ್ 4 ಸುತ್ತಿಗೆ ಎಂಟ್ರಿಕೊಟ್ಟಿದ್ದ ಭಾರತ ತಂಡ ಇದೀಗ, ಈ ಸುತ್ತಿನ ಎರಡನೇ ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ದಾಖಲಿಸಿದೆ. ವಾಸ್ತವವಾಗಿ ಈ ಸುತ್ತಿನಲ್ಲಿ ತನ್ನ ಮೊದಲ ಪಂದ್ಯವನ್ನು ಕೊರಿಯಾ ವಿರುದ್ಧ ಆಡಿದ್ದ ಭಾರತ ತಂಡ ಈ ಪಂದ್ಯವನ್ನು 2-2 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ಆದರೀಗ ತನ್ನ ಎರಡನೇ ಪಂದ್ಯದಲ್ಲಿ ಮಲೇಷ್ಯಾವನ್ನು 4-1 ಗೋಲುಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಆರಂಭದಲ್ಲಿ ಮಲೇಷ್ಯಾ ಮೇಲುಗೈ

ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ 2025 ರ ಏಷ್ಯಾಕಪ್‌ನ ಸೂಪರ್-4 ಸುತ್ತಿನ ಮೊದಲ ಪಂದ್ಯವನ್ನು 2-2 ರಿಂದ ಡ್ರಾದಲ್ಲಿ ಅಂತ್ಯಗೊಳಿಸಿದ್ದ ಭಾರತ, ಎರಡನೇ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಿತ್ತು. ವಾಸ್ತವವಾಗಿ ಪೂಲ್ ಹಂತದಲ್ಲಿ ಇದೇ ಮಲೇಷ್ಯಾ ತಂಡ, ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿತ್ತು. ಹೀಗಾಗಿ ಭಾರತ ಹಾಗೂ ಮಲೇಷ್ಯಾ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು.

ಇದಕ್ಕೆ ಪೂರಲವಾಗಿ ಪಂದ್ಯ ಆರಂಭವಾದ ಕೇವಲ 50 ಸೆಕೆಂಡುಗಳಲ್ಲಿ ಮಲೇಷ್ಯಾ ಮೊದಲ ಗೋಲು ಗಳಿಸಿ ಕ್ರೀಡಾಂಗಣದಲ್ಲಿ ಹಾಜರಿದ್ದ ಎಲ್ಲರನ್ನೂ ಅಚ್ಚರಿಗೊಳಿಸಿತು. ಇತ್ತ ಟೀಂ ಇಂಡಿಯಾ ಕೂಡ ಸತತ ಪ್ರಯತ್ನ ಮಾಡಿ ಪಂದ್ಯದ 17 ನೇ ನಿಮಿಷದಲ್ಲಿ ಮೊದಲು ಗೋಲು ಗಳಿಸಿತು. ಮನ್ಪ್ರೀತ್ ಸಿಂಗ್ ಮೊದಲ ಗೋಲು ಗಳಿಸಿದರು.

ಪಾರುಪತ್ಯ ಸಾಧಿಸಿದ ಭಾರತ

ಇದಾದ ನಂತರ, ಭಾರತ ತಂಡವು ಸಂಪೂರ್ಣ ಪ್ರಾಬಲ್ಯ ಸಾಧಿಸಿ ಮುಂದಿನ 7 ನಿಮಿಷಗಳಲ್ಲಿ ಗೋಲುಗಳ ಅಂತರವನ್ನು 3-1 ಕ್ಕೆ ಏರಿಸಿತು. 19 ನೇ ನಿಮಿಷದಲ್ಲಿ ಸುಖ್ಜೀತ್ ಸಿಂಗ್ ಮತ್ತು 24 ನೇ ನಿಮಿಷದಲ್ಲಿ ಶಿಲಾನಂದ್ ಲಾಕ್ರ ಗೋಲುಗಳನ್ನು ಗಳಿಸಿ, ಮಲೇಷ್ಯಾದ ಪುನರಾಗಮನದ ಆಸೆಯನ್ನು ಭಗ್ನಗೊಳಿಸಿದರು. 38 ನೇ ನಿಮಿಷದಲ್ಲಿ ಅನುಭವಿ ಆಟಗಾರ ವಿವೇಕ್ ಸಾಗರ್ ಪ್ರಸಾದ್ ತಂಡದ ನಾಲ್ಕನೇ ಗೋಲು ದಾಖಲಿಸಿ ಮಲೇಷ್ಯಾ ವಿರುದ್ಧ ತಂಡ ಪೂರ್ಣ ಪ್ರಾಬಲ್ಯ ಸಾಧಿಸುವಂತೆ ಮಾಡಿದರು.

ಇದು ಪಂದ್ಯದ ಸಾರಾಂಶವಾದರೆ.. ಮತ್ತೊಂದೆಡೆ ಈ ಪಂದ್ಯ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್​ಗೆ ಬಹಳ ವಿಶೇಷವಾಗಿತ್ತು. ಏಕೆಂದರೆ ಈ ಪಂದ್ಯ ಅವರ 250 ನೇ ಹಾಕಿ ಪಂದ್ಯವಾಗಿತ್ತು. ಇಲ್ಲಿಯವರೆಗೆ ಭಾರತ ತಂಡದ ಉತ್ತಮ ಪ್ರದರ್ಶನ ನೀಡಿರುವ ಹರ್ಮನ್‌ಪ್ರೀತ್ ಒಟ್ಟು 285 ಗೋಲುಗಳನ್ನು ಬಾರಿಸಿದ್ದಾರೆ.

ಹಾಕಿ ಏಷ್ಯಾಕಪ್‌: ಜಪಾನ್ ವಿರುದ್ಧ ಗೆದ್ದು ಬೀಗಿದ ಭಾರತ ತಂಡ; ವಿಡಿಯೋ ನೋಡಿ

ಪೂಲ್-ಎ ನಲ್ಲಿ ಅಜೇಯ

ಭಾರತ ತಂಡವು ಪೂಲ್-ಎ ನಲ್ಲಿ ತನ್ನ ಮೂರು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಮೊದಲು ಚೀನಾ ತಂಡವನ್ನು ಮಣಿಸಿದ್ದ ಭಾರತ, ಆ ಬಳಿಕ ಜಪಾನ್ ಮತ್ತು ಕಝಾಕಿಸ್ತಾನ್ ತಂಡಗಳನ್ನು ಸೋಲಿಸಿತ್ತು. ಇದಾದ ನಂತರ, ಸೂಪರ್-4 ಪೂಲ್‌ನಲ್ಲಿ, ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 2-2 ಡ್ರಾ ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್