Hockey World Cup: ಹಾಕಿ ವಿಶ್ವಕಪ್​ಗೆ ಕೌಂಟ್‌ಡೌನ್ ಪ್ರಾರಂಭ; ಮಹಾ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

| Updated By: ಪೃಥ್ವಿಶಂಕರ

Updated on: Jan 07, 2023 | 11:43 AM

Hockey World Cup 2023: ಇಡೀ ವಿಶ್ವವೇ 2023ರ ಹಾಕಿ ವಿಶ್ವಕಪ್‌ಗಾಗಿ ಕಾತರದಿಂದ ಕಾಯುತ್ತಿದೆ. ಸತತ ಎರಡನೇ ಬಾರಿಗೆ ಭಾರತದಲ್ಲಿ ಹಾಕಿ ವಿಶ್ವಕಪ್ ಆಯೋಜಿಸಿರುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.

Hockey World Cup: ಹಾಕಿ ವಿಶ್ವಕಪ್​ಗೆ ಕೌಂಟ್‌ಡೌನ್ ಪ್ರಾರಂಭ; ಮಹಾ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಹಾಕಿ ವಿಶ್ವಕಪ್ ವೇಳಾಪಟ್ಟಿ
Follow us on

ಇಡೀ ವಿಶ್ವವೇ 2023ರ ಹಾಕಿ ವಿಶ್ವಕಪ್‌ಗಾಗಿ (Hockey World Cup 2023) ಕಾತರದಿಂದ ಕಾಯುತ್ತಿದೆ. ಸತತ ಎರಡನೇ ಬಾರಿಗೆ ಭಾರತದಲ್ಲಿ ಹಾಕಿ ವಿಶ್ವಕಪ್ ಆಯೋಜಿಸಿರುವುದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. 2018 ರಲ್ಲಿಯೂ ಹಾಕಿ ವಿಶ್ವಕಪ್ ಭಾರತದಲ್ಲಿಯೇ ನಡೆದಿತ್ತು. ಈಗ ಜನವರಿ 13 ರಿಂದ 29 ರ ನಡುವೆ ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ (Bhubaneswar and Rourkela) ಹಾಕಿ ವಿಶ್ವಕಪ್ ನಡೆಯಲಿದೆ. ಈ ಬಾರಿಯ ಹಾಕಿ ವಿಶ್ವಕಪ್​ನಲ್ಲಿ ಒಟ್ಟು 288 ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ವಿಶ್ವಕಪ್‌ನ 51 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನ ಪಂದ್ಯಗಳು 2 ನಗರಗಳಲ್ಲಿ ನಡೆಯಲಿವೆ. 15ನೇ ಹಾಕಿ ವಿಶ್ವಕಪ್‌ನ 44 ಪಂದ್ಯಗಳು ಭುವನೇಶ್ವರದ ಕಳಿಂಗ ಸ್ಟೇಡಿಯಂ ಮತ್ತು ರೂರ್ಕೆಲಾದ ಬಿರ್ಸಾ ಮುಂಡಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ (Kalinga Stadium in Bhubaneswar and Birsa Munda International Stadium in Rourkela) ನಡೆಯಲಿವೆ.

ಹಾಕಿ ವಿಶ್ವಕಪ್​ನ ತಂಡಗಳ ಗುಂಪುವಾರು ವಿಭಾಗ

ಎ – ಆಸ್ಟ್ರೇಲಿಯಾ, ಅರ್ಜೆಂಟೀನಾ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ.

ಬಿ – ಬೆಲ್ಜಿಯಂ, ಜರ್ಮನಿ, ಕೊರಿಯಾ ಮತ್ತು ಜಪಾನ್.

ಸಿ – ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ಮಲೇಷ್ಯಾ ಮತ್ತು ಚಿಲಿ.

ಡಿ – ಭಾರತ, ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್.

ಹಾಕಿ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ

ಜನವರಿ 13 ರಂದು ನಡೆಯುವ ಪಂದ್ಯಗಳು

ಅರ್ಜೆಂಟೀನಾ vs ದಕ್ಷಿಣ ಆಫ್ರಿಕಾ, ಭುವನೇಶ್ವರ, ಮಧ್ಯಾಹ್ನ 1 ಗಂಟೆ

ಆಸ್ಟ್ರೇಲಿಯಾ vs ಫ್ರಾನ್ಸ್, ಭುವನೇಶ್ವರ, ಮಧ್ಯಾಹ್ನ 3 ಗಂಟೆ

ಇಂಗ್ಲೆಂಡ್ vs ವೇಲ್ಸ್, ರೂರ್ಕೆಲಾ, ಸಂಜೆ 5 ಗಂಟೆ

ಭಾರತ vs ಸ್ಪೇನ್, ರೂರ್ಕೆಲಾ, ಸಂಜೆ 7 ಗಂಟೆ

ಜನವರಿ 14 ರಂದು ನಡೆಯುವ ಪಂದ್ಯಗಳು

ನ್ಯೂಜಿಲೆಂಡ್ vs ಚಿಲಿ, ರೂರ್ಕೆಲಾ, ಮಧ್ಯಾಹ್ನ 1 ಗಂಟೆಗೆ

ನೆದರ್ಲ್ಯಾಂಡ್ಸ್ vs ಮಲೇಷ್ಯಾ, ರೂರ್ಕೆಲಾ, ಮಧ್ಯಾಹ್ನ 3 ಗಂಟೆಗೆ

ಬೆಲ್ಜಿಯಂ vs ಕೊರಿಯಾ, ಭುವನೇಶ್ವರ, ಮಧ್ಯಾಹ್ನ 5 ಗಂಟೆಗೆ

ಜರ್ಮನಿ vs ಜಪಾನ್, ಭುವನೇಶ್ವರ, ಸಂಜೆ 7 ಗಂಟೆಗೆ

ಜನವರಿ 15 ರಂದು ನಡೆಯುವ ಪಂದ್ಯಗಳು

ಸ್ಪೇನ್ vs ವೇಲ್ಸ್, ರೂರ್ಕೆಲಾ, ಸಂಜೆ 5:00 ಗಂಟೆಗೆ

ಇಂಗ್ಲೆಂಡ್ vs ಭಾರತ, ರೂರ್ಕೆಲಾ ಸಂಜೆ 7:00 ಗಂಟೆಗೆ

ಜನವರಿ 16 ರಂದು ನಡೆಯುವ ಪಂದ್ಯಗಳು

ಮಲೇಷ್ಯಾ vs ಚಿಲಿ, ರೂರ್ಕೆಲಾ, ಮಧ್ಯಾಹ್ನ 1:00 ಗಂಟೆಗೆ

ನ್ಯೂಜಿಲೆಂಡ್ vs ನೆದರ್ಲ್ಯಾಂಡ್ಸ್, ರೂರ್ಕೆಲಾ, ಮಧ್ಯಾಹ್ನ 3:00 ಗಂಟೆಗೆ

ಫ್ರಾನ್ಸ್ vs ದಕ್ಷಿಣ ಆಫ್ರಿಕಾ, ಭುವನೇಶ್ವರ, ಸಂಜೆ 5:00 ಗಂಟೆಗೆ

ಅರ್ಜೆಂಟೀನಾ vs ಆಸ್ಟ್ರೇಲಿಯಾ, ಭುವನೇಶ್ವರ, ರಾತ್ರಿ 7:00 ಗಂಟೆಗೆ

ಜನವರಿ 17 ರಂದು ನಡೆಯುವ ಪಂದ್ಯಗಳು

ಕೊರಿಯಾ vs ಜಪಾನ್, ಭುವನೇಶ್ವರ, ಸಂಜೆ 5:00 ಗಂಟೆಗೆ

ಜರ್ಮನಿ vs ಬೆಲ್ಜಿಯಂ, ಭುವನೇಶ್ವರ, ಸಂಜೆ 7:00 ಗಂಟೆಗೆ

ಜನವರಿ 19 ರಂದು ನಡೆಯುವ ಪಂದ್ಯಗಳು

ಮಲೇಷ್ಯಾ vs ನ್ಯೂಜಿಲೆಂಡ್, ಭುವನೇಶ್ವರ, ಮಧ್ಯಾಹ್ನ 1:00 ಗಂಟೆಗೆ

ನೆದರ್ಲ್ಯಾಂಡ್ಸ್ vs ಚಿಲಿ, ಭುವನೇಶ್ವರ, ಮಧ್ಯಾಹ್ನ 3:00 ಗಂಟೆಗೆ

ಸ್ಪೇನ್ vs ಇಂಗ್ಲೆಂಡ್, ಭುವನೇಶ್ವರ, ಸಂಜೆ 5:00 ಗಂಟೆಗೆ

ಭಾರತ vs ವೇಲ್ಸ್, ಭುವನೇಶ್ವರ, ಸಂಜೆ 7:00 ಗಂಟೆಗೆ

ಜನವರಿ 20 ರಂದು ನಡೆಯುವ ಪಂದ್ಯಗಳು

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರೂರ್ಕೆಲಾ, ಮಧ್ಯಾಹ್ನ 1:00 ಗಂಟೆಗೆ

ಫ್ರಾನ್ಸ್ vs ಅರ್ಜೆಂಟೀನಾ, ರೂರ್ಕೆಲಾ, ಮಧ್ಯಾಹ್ನ 3:00 ಗಂಟೆಗೆ

ಬೆಲ್ಜಿಯಂ vs ಜಪಾನ್, ರೂರ್ಕೆಲಾ, ಸಂಜೆ 5:00 ಗಂಟೆಗೆ

ಕೊರಿಯಾ vs ಜರ್ಮನಿ, ರೂರ್ಕೆಲಾ, – ಸಂಜೆ 7:00 ಗಂಟೆಗೆ

ಜನವರಿ 24 ರಂದು ನಡೆಯುವ ಪಂದ್ಯಗಳು

ಭುವನೇಶ್ವರದಲ್ಲಿ ಮೊದಲ ಕ್ವಾರ್ಟರ್ ಫೈನಲ್, ಮಧ್ಯಾಹ್ನ 4:30 ಗಂಟೆಗೆ

ಭುವನೇಶ್ವರದಲ್ಲಿ ಎರಡನೇ ಕ್ವಾರ್ಟರ್ ಫೈನಲ್, ಸಂಜೆ 7 ಗಂಟೆಗೆ

ಜನವರಿ 25 ರಂದು ನಡೆಯುವ ಪಂದ್ಯಗಳು

3 ನೇ ಕ್ವಾರ್ಟರ್ ಫೈನಲ್ ಭುವನೇಶ್ವರದಲ್ಲಿ, ಮಧ್ಯಾಹ್ನ 4:30 ಗಂಟೆಗೆ

4 ನೇ ಕ್ವಾರ್ಟರ್ ಫೈನಲ್ ಭುವನೇಶ್ವರದಲ್ಲಿ, ಸಂಜೆ 7 ಗಂಟೆಗೆ

ಜನವರಿ 26 ರಂದು ನಡೆಯುವ ಪಂದ್ಯಗಳು

ಪ್ಲೇಸ್‌ಮೆಂಟ್ ಪಂದ್ಯಗಳು (9ನೇ-16ನೇ)

ಜನವರಿ 27 ರಂದು ನಡೆಯುವ ಪಂದ್ಯಗಳು

ಮೊದಲ ಸೆಮಿಫೈನಲ್, ಭುವನೇಶ್ವರ, ಸಂಜೆ 4:30 ಕ್ಕೆ

ಎರಡನೇ ಸೆಮಿಫೈನಲ್, ಭುವನೇಶ್ವರ, ರಾತ್ರಿ 7 ಗಂಟೆಗೆ

ಜನವರಿ 29 ರಂದು ನಡೆಯುವ ಪಂದ್ಯ

ಕಂಚಿನ ಪದಕದ ಪಂದ್ಯ – ಮಧ್ಯಾಹ್ನ 4:30 ಗಂಟೆಗೆ

ಚಿನ್ನದ ಪದಕದ ಪಂದ್ಯ- ಸಂಜೆ 7 ಗಂಟೆಗೆ

Published On - 11:38 am, Sat, 7 January 23