AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC Final: ಮಳೆಯಿಂದ ಪಂದ್ಯ ರದ್ದಾದರೆ ಏನು ಮಾಡಬೇಕು? ಭಾರತದ ಮಾಜಿ ಕ್ರಿಕೆಟಿಗರು ನೀಡಿದ್ದಾರೆ ಸೂಕ್ತ ಸಲಹೆ

WTC Final: ಪಂದ್ಯದ ಫಲಿತಾಂಶವು ಹೊರಬರದಿದ್ದರೆ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಆದರೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಹೀಗೆ ಅಂತ್ಯವಾಗುವುದನ್ನು ಯಾರು ಒಪ್ಪುವುದಿಲ್ಲ.

WTC Final: ಮಳೆಯಿಂದ ಪಂದ್ಯ ರದ್ದಾದರೆ ಏನು ಮಾಡಬೇಕು? ಭಾರತದ ಮಾಜಿ ಕ್ರಿಕೆಟಿಗರು ನೀಡಿದ್ದಾರೆ ಸೂಕ್ತ ಸಲಹೆ
ಕೇನ್ ವಿಲಿಯಮ್ಸನ್, ವಿರಾಟ್ ಕೊಹ್ಲಿ ಟ್ರೋಪಿಯೊಂದಿಗೆ
ಪೃಥ್ವಿಶಂಕರ
|

Updated on: Jun 21, 2021 | 8:20 PM

Share

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (ಐಸಿಸಿ ಡಬ್ಲ್ಯೂಟಿಸಿ ಫೈನಲ್) ಗಾಗಿ ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿತ್ತು. ಐದು ದಿನಗಳವರೆಗೆ ವಿಶ್ವದ ಎರಡು ಅತ್ಯುತ್ತಮ ಟೆಸ್ಟ್ ತಂಡಗಳು ತಮ್ಮೆಲ್ಲರನ್ನೂ ರಂಜಿಸುತ್ತವೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಮಳೆ ಇಡೀ ಮೋಜನ್ನು ಹಾಳು ಮಾಡಿತು. ಮೊದಲ ದಿನದ ಆಟವು ಮಳೆಯಿಂದಾಗಿ ಸಂಪೂರ್ಣವಾಗಿ ಕಳೆದುಹೋದರೆ, ಎರಡನೆಯ ಮತ್ತು ಮೂರನೆಯ ದಿನದಲ್ಲಿ ಕಡಿಮೆ ಬೆಳಕಿನಿಂದಾಗಿ ದಿನದ ಆಟವು ಮುಂಚೆಯೇ ಕೊನೆಗೊಂಡಿತು. ಮಳೆಯಿಂದಾಗಿ ನಾಲ್ಕನೇ ದಿನದ ಆಟ ಇನ್ನೂ ಪ್ರಾರಂಭವಾಗಿಲ್ಲ, ಆದ್ದರಿಂದ ಈ ಪಂದ್ಯದ ಫಲಿತಾಂಶದ ಬಗ್ಗೆ ಚರ್ಚೆ ನಡೆಯುತ್ತಿದೆ.

ಅಂದಹಾಗೆ, ಪಂದ್ಯದ ಫಲಿತಾಂಶವು ಹೊರಬರದಿದ್ದರೆ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಆದರೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವು ಹೀಗೆ ಅಂತ್ಯವಾಗುವುದನ್ನು ಯಾರು ಒಪ್ಪುವುದಿಲ್ಲ. ಐಸಿಸಿ ಈ ಬಗ್ಗೆ ಯೋಚಿಸಬೇಕು ಮತ್ತು ಜಂಟಿ ವಿಜೇತರ ಬದಲು ಬೇರೆ ಯಾವುದಾದರೂ ಆಯ್ಕೆಯನ್ನು ನೋಡಬೇಕು ಎಂದು ಭಾರತದ ಮಾಜಿ ನಾಯಕ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಮತ್ತು ಮಾಜಿ ಆಟಗಾರ ಮದನ್ ಲಾಲ್ ಹೇಳಿದ್ದಾರೆ.

ಕೆಲವು ಆಯ್ಕೆಗಳನ್ನು ಮಾಡಬೇಕು ಆಜ್ ತಕ್​ನೊಂದಿಗೆ ಮಾತನಾಡಿದ ಗವಾಸ್ಕರ್, ಇಲ್ಲಿ ಹವಾಮಾನವನ್ನು ಚೆನ್ನಾಗಿ ಬಲ್ಲ ಇಂಗ್ಲೆಂಡ್‌ನ ಜನರಿದ್ದಾರೆ, ಆ ಜನರು ಹೇಳುತ್ತಿದ್ದಾರೆ, ಪಂದ್ಯದ ಸಾಧ್ಯತೆಯಿಲ್ಲದ ಕಾರಣ ಇಂದು ಬಹುತೇಕ ಪಂದ್ಯ ರದ್ದಾಗುತ್ತದೆ ಎನ್ನುತ್ತಿದ್ದಾರೆ. ಎರಡು ದಿನಗಳು ಉಳಿದಿವೆ ಮತ್ತು ಎರಡು ದಿನಗಳಲ್ಲಿ ಮೂರು ಇನ್ನಿಂಗ್ಸ್ ಆಡುವುದು ಕಷ್ಟವಾಗುತ್ತಿದೆ. ಹೌದು, ಎರಡೂ ತಂಡಗಳು ಕಳಪೆ ಬ್ಯಾಟಿಂಗ್ ಮಾಡಿದರೆ ಅದು ಸಂಭವಿಸಬಹುದು. ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಹಾಗೇ ಆಗುವ ಸಂಭವ ತೀರ ಕಡಿಮೆ. ಹೀಗಾಗಿ ಉಭಯ ತಂಡಗಳನ್ನು ಚಾಂಪಿಯನ್ ಎಂದು ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ ಎಂದರು. ನೀವು ಫುಟ್‌ಬಾಲ್‌ನಲ್ಲಿ ನೋಡಿರುತ್ತೀರಿ, ಅದರಲ್ಲಿ ಪೆನಾಲ್ಟಿ ಶೂಟ್ ಔಟ್‌ಗಳು ಅಥವಾ ಇನ್ನೊಂದು ಆಯ್ಕೆಯೊಂದಿಗೆ ವಿಜೇತ ತಂಡವನ್ನು ಘೋಷಿಸಬಹುದು. ಟೆನಿಸ್‌ನಲ್ಲಿ ಸಹ ನೋಡಿ ಐದು ಸೆಟ್‌ಗಳಿವೆ, ಟೈ ಬ್ರೇಕರ್ ಇದೆ, ಇದರಿಂದ ವಿಜೇತರು ಆಯ್ಕೆಯಾಗುತ್ತಾರೆ. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಏಕೆ ಆ ರೀತಿಯ ಬಹು ಆಯ್ಕೆಗಳಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬೇರೆ ಯಾವುದಾದರೂ ಮಾರ್ಗದಲ್ಲಿ ವಿಜೇತರನ್ನು ಘೋಷಿಸಬೇಕು. ವಿಶ್ವಕಪ್‌ನಲ್ಲಿ ನಾವು ಹೆಚ್ಚು ಬೌಂಡರಿಗಳನ್ನು ಹೊಡೆದವನನ್ನು ವಿಜೇತನೆಂದು ಘೋಷಿಸಿದ್ದೇವೆ. ಇದು ಸರಿಯಲ್ಲ ಎಂದು ಅನೇಕ ಜನರು ಹೇಳಿದರು. ಇಲ್ಲಿ ಕ್ರಿಕೆಟ್ ಸಮಿತಿ ಇದೆ, ಯೋಚಿಸಿದ ನಂತರ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ, ಶೇಕಡಾವಾರು ವ್ಯವಸ್ಥೆಯು ಬಂದಿತು, ಮೊದಲು ಸಂಖ್ಯೆಯ ವ್ಯವಸ್ಥೆ ಇತ್ತು. ಆರಂಭದಲ್ಲಿ ಗೋಲ್‌ಪೋಸ್ಟ್ ಬೇರೆಲ್ಲೋ ಇತ್ತು, ಆದರೆ ಈಗ ಅದೆಲ್ಲಾ ಇಲ್ಲ. ಇದೆಲ್ಲವನ್ನೂ ಪರಿಗಣಿಸಿ ನೀವು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಮತ್ತೆ ಪಂದ್ಯ ಆಯೋಜಿಸಿ – ಮದನ್ ಲಾಲ್ ಗವಾಸ್ಕರ್ ಅವರೊಂದಿಗೆ ಕ್ರಿಕೆಟ್ ಆಡಿದ ಮತ್ತು ಭಾರತದ 1983 ರ ವಿಶ್ವಕಪ್ ವಿಜಯದ ಭಾಗವಾಗಿದ್ದ ಮಾಜಿ ವೇಗದ ಬೌಲರ್ ಮದನ್ ಲಾಲ್, ಫೈನಲ್ ಪಂದ್ಯವನ್ನು ಮತ್ತೆ ಆಯೋಜಿಸೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಡಬ್ಲ್ಯುಟಿಸಿ ಫೈನಲ್ ಲಾರ್ಡ್ಸ್, ಮೆಲ್ಬೋರ್ನ್ ಅಥವಾ ಕೋಲ್ಕತ್ತಾದಲ್ಲಿ ನಡೆದಿದ್ದರೆ, ಅದು ವಿಭಿನ್ನ ಮೋಜಿನ ಸಂಗತಿಯಾಗಿತ್ತು. ಈಗ ಭಾರತ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯನ್ನು ಆಡಬೇಕಾಗಿದ್ದರೆ, ಭಾರತದಲ್ಲಿ ಹವಾಮಾನವು ಉತ್ತಮವಾಗಿದೆ, ಆಗ ಭಾರತದಲ್ಲಿ ಈ ಪಂದ್ಯವನ್ನು ಮತ್ತೆ ಏಕೆ ಆಡಿಸಬಾರದು. ಗೆಲುವು ಅಥವಾ ಸೋಲು, ಅದು ನಿರ್ಧಾರವಾಗಿರಬೇಕು ಏಕೆಂದರೆ ಅದು ಬಹಳ ದೊಡ್ಡ ಟೆಸ್ಟ್ ಚಾಂಪಿಯನ್‌ಶಿಪ್ ಆಗಿದೆ ಎಂದರು.

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್