AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ತಂಡದಲ್ಲಿ ಆಡುವುದು ದಾದಾಗೆ ಇಷ್ಟವಿರಲ್ಲಿಲ್ಲ! ಇದನ್ನು ಸ್ವತಃ ಗಂಗೂಲಿಯೇ ನನ್ನ ಬಳಿ ಹೇಳಿದ್ದರು: ಇರ್ಫಾನ್ ಪಠಾಣ್

ಕ್ಯಾಪ್ಟನ್ ನನ್ನ ಬಳಿಗೆ ಬಂದು ತಂಡದಲ್ಲಿ ನಿನ್ನನ್ನು ಆಡಿಸಲು ನನಗೆ ಇಷ್ಟವಿಲ್ಲ ಎಂದು ಹೇಳಿದರು. ಆ ಸಮಯದಲ್ಲಿ ನನಗೆ 19 ವರ್ಷ, ಆದ್ದರಿಂದ ನಾನು ಆಸ್ಟ್ರೇಲಿಯಾದಲ್ಲಿ ಆಡಲು ತುಂಬಾ ತೊಂದರೆ ಎದುರಿಸಬೇಕಾಗುತ್ತದೆ ಎಂದು ದಾದಾ ಭಾವಿಸಿದರು.

ನಾನು ತಂಡದಲ್ಲಿ ಆಡುವುದು ದಾದಾಗೆ ಇಷ್ಟವಿರಲ್ಲಿಲ್ಲ! ಇದನ್ನು ಸ್ವತಃ ಗಂಗೂಲಿಯೇ ನನ್ನ ಬಳಿ ಹೇಳಿದ್ದರು: ಇರ್ಫಾನ್ ಪಠಾಣ್
ಸೌರವ್ ಗಂಗೂಲಿ
ಪೃಥ್ವಿಶಂಕರ
|

Updated on: Jun 21, 2021 | 6:37 PM

Share

ಇರ್ಫಾನ್ ಪಠಾಣ್ 2003-04ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಸಿಡ್ನಿಯಲ್ಲಿ ನಡೆದ ತನ್ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ಅದ್ಭುತ ಯಾರ್ಕರ್‌ನಿಂದ ಔಟ್ ಮಾಡಿದರು. ಈ ವಿಕೆಟ್‌ನ ನಂತರ, ಇರ್ಫಾನ್ ಪಠಾಣ್ ಅವರು ಮುಂದಿನ ಹಲವು ವರ್ಷಗಳಿಂದ ಟೀಂ ಇಂಡಿಯಾದ ಬೌಲಿಂಗ್‌ನ ಭಾಗವಾಗಿದ್ದರು. ಆದರೆ, ಇತ್ತೀಚಿನ ಸಂಭಾಷಣೆಯೊಂದರಲ್ಲಿ, ಇರ್ಫಾನ್ ಪಠಾಣ್ ಅವರು ಆ ಸಮಯದಲ್ಲಿ ಟೀಮ್ ಇಂಡಿಯಾದ ನಾಯಕ ಸೌರವ್ ಗಂಗೂಲಿ ಅವರನ್ನು ತಂಡದಲ್ಲಿ ತೆಗೆದುಕೊಳ್ಳಲು ಆರಂಭದಲ್ಲಿ ಒಪ್ಪಿರಲಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ಅಂದಹಾಗೆ, ಗಂಗೂಲಿಯನ್ನು ಯುವಕರನ್ನು ಬೆಂಬಲಿಸುವ ನಾಯಕ ಎಂದು ಬಿಂಬಿಸಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021 ರ ಚಹಾ ವಿರಾಮದ ಸಂದರ್ಭದಲ್ಲಿ ಇರ್ಫಾನ್ ಪಠಾಣ್ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನಿನ್ನನ್ನು ಆಡಿಸಲು ನನಗೆ ಇಷ್ಟವಿಲ್ಲ ಎಂದು ಹೇಳಿದರು ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಪಂದ್ಯದಿಂದ ಮಾತನ್ನು ಆರಂಭಿಸಿದ ಪಠಾಣ್, ಕ್ಯಾಪ್ಟನ್ ನನ್ನ ಬಳಿಗೆ ಬಂದು ತಂಡದಲ್ಲಿ ನಿನ್ನನ್ನು ಆಡಿಸಲು ನನಗೆ ಇಷ್ಟವಿಲ್ಲ ಎಂದು ಹೇಳಿದರು. ಆ ಸಮಯದಲ್ಲಿ ನನಗೆ 19 ವರ್ಷ, ಆದ್ದರಿಂದ ನಾನು ಆಸ್ಟ್ರೇಲಿಯಾದಲ್ಲಿ ಆಡಲು ತುಂಬಾ ಚಿಕ್ಕವನಾಗಿದ್ದೇನೆ ಮತ್ತು ನಾನು ತುಂಬಾ ತೊಂದರೆ ಎದುರಿಸಬೇಕಾಗುತ್ತದೆ ಎಂದು ದಾದಾ ಭಾವಿಸಿದರು. ಆದರೆ, ಆಸ್ಟ್ರೇಲಿಯಾ ಪ್ರವಾಸದ ಅಂತ್ಯದ ವೇಳೆಗೆ, ಭಾರತವು ಬೌಲಿಂಗ್‌ನಲ್ಲಿ ಹೊಸ ಭರವಸೆಯ ಆಟಗಾರರನನ್ನು ಪಡೆದಿರುವುದು ಸಾಬೀತಾಯಿತು. ಆಸ್ಟ್ರೇಲಿಯಾದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಇರ್ಫಾನ್ ಪಠಾಣ್ ನಾಲ್ಕು ವಿಕೆಟ್ ಪಡೆದರು. ಈ ಸಮಯದಲ್ಲಿ ಅವರು ಸಿಡ್ನಿ ಟೆಸ್ಟ್ನಲ್ಲಿ ಮೂರು ವಿಕೆಟ್ಗಳನ್ನು ಪಡೆದರು.

ನಂತರ ಸೌರವ್ ಗಂಗೂಲಿ ಅವರ ಬಳಿಗೆ ಬಂದರು ಮತ್ತು ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪಠಾಣ್ ಹೇಳಿದ್ದಾರೆ. ಗಂಗೂಲಿ ನನ್ನ ಬಳಿಗೆ ಬಂದು ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೆ ಎಂದು ಹೇಳಿದರು. ಇದು ನನಗೆ ಆಶ್ಚರ್ಯವನ್ನುಂಟು ಮಾಡಿತು ಏಕೆಂದರೆ ಕ್ಯಾಪ್ಟನ್ ಆಯ್ಕೆಯ ಬಗ್ಗೆ ಬಹಳ ಕಡಿಮೆ ಮಾತನಾಡುತ್ತಾನೆ ಮತ್ತು ನಂತರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ಇರ್ಫಾನ್ ಅವರ ಟೆಸ್ಟ್ ವೃತ್ತಿಜೀವನ ಇರ್ಫಾನ್ ಪಠಾಣ್ ಭಾರತ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 32.26 ರ ಸರಾಸರಿಯಲ್ಲಿ 100 ವಿಕೆಟ್ ಪಡೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಹೆಸರಿಗೆ ಹ್ಯಾಟ್ರಿಕ್ ಕೂಡ ಇದೆ. ಅವರು 2006 ರಲ್ಲಿ ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಇರ್ಫಾನ್ ಪಠಾಣ್ 1105 ರನ್ ಗಳಿಸಿದರು. ಅವರು ಬ್ಯಾಟಿಂಗ್‌ನಲ್ಲಿ ಸರಾಸರಿ 31.57 ಮತ್ತು ಒಂದು ಶತಕ ಮತ್ತು ಆರು ಅರ್ಧಶತಕಗಳನ್ನು ಗಳಿಸಿದರು. ಸ್ವಿಂಗ್ ಬೌಲಿಂಗ್‌ನಿಂದಾಗಿ ಪಠಾಣ್‌ನನ್ನು ಹೊಸ ವಾಸಿಮ್ ಅಕ್ರಮ್ ಎಂದೂ ಕರೆಯಲಾಗುತ್ತಿತ್ತು, ಆದರೆ ಅವರ ವೃತ್ತಿಜೀವನ ಮುಂದುವರೆದಂತೆ ಅವರ ಹೊಳಪು ಮರೆಯಾಯಿತು. ಅವರು 2008 ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡಿದ್ದರು. ಅಂದರೆ, ಅವರ ಟೆಸ್ಟ್ ವೃತ್ತಿಜೀವನವು ಐದು ವರ್ಷಗಳಲ್ಲಿ ಕೊನೆಗೊಂಡಿತು.

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ