AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಅದ್ಭುತ ಫೀಲ್ಡಿಂಗ್​ನಿಂದ ಪಂದ್ಯದ ದಿಕ್ಕನ್ನು ಬದಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ 5 ಕ್ರಿಕೆಟಿಗರ ಬಗ್ಗೆ ನಿಮಗೆಷ್ಟು ಗೊತ್ತು?

ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ 5 ಫೀಲ್ಡರ್‌ಗಳು ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರೆಲ್ಲರೂ ಸೂಪರ್ ಫೀಲ್ಡಿಂಗ್‌ನೊಂದಿಗೆ ಪಂದ್ಯದ ದಿಕ್ಕನ್ನು ಬದಲಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.

ತಮ್ಮ ಅದ್ಭುತ ಫೀಲ್ಡಿಂಗ್​ನಿಂದ ಪಂದ್ಯದ ದಿಕ್ಕನ್ನು ಬದಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ 5 ಕ್ರಿಕೆಟಿಗರ ಬಗ್ಗೆ ನಿಮಗೆಷ್ಟು ಗೊತ್ತು?
ಅದ್ಭುತ ಫೀಲ್ಡಿಂಗ್​ನಿಂದ ಪಂದ್ಯದ ದಿಕ್ಕನ್ನು ಬದಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ 5 ಕ್ರಿಕೆಟಿಗರು
ಪೃಥ್ವಿಶಂಕರ
|

Updated on: Jun 21, 2021 | 7:23 PM

Share

ತಮ್ಮ ಅದ್ಭುತ ಫೀಲ್ಡಿಂಗ್​ನಿಂದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದ ಕ್ರಿಕೆಟಿಗರ ಬಗ್ಗೆ ನಿಮಗೆ ತಿಳಿದಿದೆಯಾ? ಹೌದು ಇಲ್ಲಿಯವರೆಗೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಅಥವಾ ಬೌಲರ್‌ಗಳು ಅಥವಾ ಎಲ್ಲಾ ಸುತ್ತಿನ ಪ್ರತಿಭೆಗಳು ಪಂದ್ಯಶ್ರೇಷ್ಠರಾಗಿದ್ದಾರೆ. ಇದಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ 5 ಫೀಲ್ಡರ್‌ಗಳು ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರೆಲ್ಲರೂ ಸೂಪರ್ ಫೀಲ್ಡಿಂಗ್‌ನೊಂದಿಗೆ ಪಂದ್ಯದ ದಿಕ್ಕನ್ನು ಬದಲಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಅಂತಹ ಆಟಗಾರರನ್ನು ಈಗ ನೋಡೋಣ..

ಡೇವಿಡ್ ಮಿಲ್ಲರ್ (4 ಕ್ಯಾಚ್, 2 ರನ್ ಔಟ್) ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಬಗ್ಗೆ ಹೇಳಲು ವಿಶೇಷ ಏನೂ ಇಲ್ಲ. ಈತ ಯಾವುದೇ ಪಂದ್ಯವನ್ನು ಬದಲಾಯಿಸುವ ಸಾಮಥ್ರ್ಯ ಹೊಂದಿದ್ದಾನೆ. ಈತನ ಅತ್ಯುತ್ತಮ ಫೀಲ್ಡಿಂಗ್‌ ಎದುರಾಳಿಗಳನ್ನು ಗೊಂದಲಗೊಳಿಸುತ್ತದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಮಿಲ್ಲರ್ ಆಟವನ್ನು ನಾವು ನೋಡಿದ್ದೇವೆ. 2019 ರಲ್ಲಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ 20 ಸರಣಿ ನಡೆಯಿತು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 193 ರನ್‌ಗಳ ಗುರಿ ನೀಡಿತು. ನಂತರ ಮಿಲ್ಲರ್ ಪಾಕಿಸ್ತಾನ ಬ್ಯಾಟಿಂಗ್ ಬೆನ್ನೆಲುಬು ಮುರಿದರು, ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಸತತವಾಗಿ ವಿಕೆಟ್ ಪಡೆದುಕೊಂಡರು. ಈ ಪಂದ್ಯದಲ್ಲಿ ಮಿಲ್ಲರ್ 2 ರನ್‌ ಔಟ್‌ಗಳ ಜೊತೆಗೆ 4 ಕ್ಯಾಚ್‌ಗಳನ್ನು ಪಡೆದರು. ಇದು ಡೇವಿಡ್ ಮಿಲ್ಲರ್​ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಂದುಕೊಟ್ಟಿತು.

ಗಸ್ ಲೋಗಿ (3 ಕ್ಯಾಚ್ಗಳು, 1 ರನ್ ಔಟ್) ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಟಗಾರ 3 ಕ್ಯಾಚ್, 1 ರನ್ ಔಟ್ ಮಾಡಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಪಾಕಿಸ್ತಾನಕ್ಕೆ ಗುಸ್ ಲೋಗಿ ಸರಿಯಾಗಿಯೇ ಆಘಾತ ನೀಡಿದರು. ಇದರಿಂದ ಪಾಕಿಸ್ತಾನ ತಂಡವು ಕೇವಲ 143 ರನ್ ಗಳಿಸಲು ಸಾಧ್ಯವಾಯಿತು. ಪ್ರಮುಖ ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸಿದ್ದಕ್ಕಾಗಿ ಮತ್ತು ವೆಸ್ಟ್ ಇಂಡೀಸ್‌ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಗುಸ್‌ಲಾಗ್ ಅವರನ್ನು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಹೆಸರಿಸಲಾಯಿತು.

ಜಾಂಟಿ ರೋಡ್ಸ್ (5 ಕ್ಯಾಚ್ಗಳು) ಜಾಂಟಿ ರೋಡ್ಸ್ ಎಂದರೆ ಫೀಲ್ಡಿಂಗ್. ಫೀಲ್ಡಿಂಗ್ ಎಂದರೆ ಜಂತಿ ರೋಡ್ಸ್. ದಕ್ಷಿಣ ಆಫ್ರಿಕಾದ ಆಟಗಾರ 1993 ರಲ್ಲಿ ಅತ್ಯುತ್ತಮ ಫೀಲ್ಡಿಂಗ್ಗಾಗಿ ಪ್ರಶಸ್ತಿಯನ್ನು ಪಡೆದರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು 5 ಕ್ಯಾಚ್ಗಳನ್ನು ಪಡೆದರು. ಜಾಂಟಿ ರೋಡ್ಸ್ ಬ್ರಿಯಾನ್ ಲಾರಾ ಅವರನ್ನು ಸೂಪರ್ ಡೈವ್ ಮೂಲಕ ಪೆವಿಲಿಯನ್‌ಗೆ ಸೇರಿಸಿದರು. ನಂತರ ಫಿಲ್ ಕ್ಯಾಮನ್‌ರನ್ನು ಮತ್ತೊಂದು ಕ್ಯಾಚ್‌ನೊಂದಿಗೆ ಔಟ್ ಮಾಡಿದರು. ಜಿಮ್ಮಿ ಆಡಮ್ಸ್, ಆಂಡರ್ಸನ್ ಕಮ್ಮಿನ್ಸ್, ಡೆಸ್ಮಂಡ್ ಹೈನ್ಸ್ ಅವರು ಕ್ಯಾಚ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಮಾರ್ಕ್ ಟೇಲರ್ (4 ಕ್ಯಾಚ್ಗಳು) ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್ 1992 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ವೆಸ್ಟ್ ಇಂಡೀಸ್​ನ ನಾಲ್ಕು ನಿರ್ಣಾಯಕ ಕ್ಯಾಚ್‌ಗಳನ್ನು ಸ್ವೀಕರಿಸುವ ಮೂಲಕ ತಂಡಕ್ಕೆ ಆಘಾತ ನೀಡಿದರು. ಸ್ಲಿಪ್‌ನಲ್ಲಿ ಅತ್ಯುತ್ತಮ ಕ್ಯಾಚ್‌ಗಳನ್ನು ಪಡೆದ ನಂತರ ಗುಸ್ ಲೋಗಿ, ಕಾರ್ಲ್ ಹೂಪರ್, ಜೂನಿಯರ್ ಮುರ್ರೆ ಮತ್ತು ಕೀಲ್ ಆರ್ಥರ್ಟನ್ ಅವರನ್ನು ಪೆವಿಲಿಯನ್‌ಗೆ ಅಟ್ಟಲಾಯಿತು. ಪಂದ್ಯವನ್ನು ಆಸೀಸ್ 14 ರನ್‌ಗಳಿಂದ ಗೆದ್ದುಕೊಂಡಿತು.

ವೀವಿ ರಿಚರ್ಡ್ಸ್ (3 ಕ್ಯಾಚ್ಗಳು) ಕ್ರಿಕೆಟ್‌ನ ದಂತಕಥೆಯಾದ ಸರ್ ವೀವಿ ರಿಚರ್ಡ್ಸ್ 1989 ರಲ್ಲಿ ತಮ್ಮ ಫೀಲ್ಡಿಂಗ್‌ನಿಂದ ಹೆಸರು ವಾಸಿಯಾಗಿದ್ದರು. ಭಾರತ ವಿರುದ್ಧದ ಸೆಮಿಫೈನಲ್‌ನಲ್ಲಿ ರಿಚರ್ಡ್ಸ್ 3 ಕ್ಯಾಚ್‌ಗಳನ್ನು ಪಡೆದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತವನ್ನು ವೀವಿ ರಿಚರ್ಡ್ಸ್ 165 ಕ್ಕೆ ಆಲೌಟ್ ಮಾಡಿದರು. ದಿಲೀಪ್ ವೆಂಗ್ಸರ್ಕರ್, ರಾಮನ್ ಲಂಬಾ ಮತ್ತು ಮನೋಜ್ ಪ್ರಭಾಕರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಲಾಯಿತು. ಇದರಿಂದ ಭಾರತದ ಸೋಲಬೇಕಾಯಿತು. ವೀವಿ ರಿಚರ್ಡ್ಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?