WTC Final | ಮೊಹಮ್ಮದ್ ಶಮಿ ಇಂಗ್ಲೆಂಡ್ನಲ್ಲಿ ಬೌಲ್ ಮಾಡುವಾಗ ಅದೃಷ್ಟಹೀನ ಎನ್ನುವುದನ್ನು ಅಂಕಿ-ಅಂಶಗಳು ಸಾಬೀತು ಮಾಡುತ್ತವೆ.
ಪಿಚ್ ಕಂಡೀಶನ್ ಹೇಗಿದ್ದರೂ ಉತ್ತಮವಾಗಿ ಬೌಲ್ ಮಾಡುವ ಮೊಹಮ್ಮದ್ ಶಮಿ, ರವಿವಾರವೂ ತಮ್ಮ ಖ್ಯಾತಿಗೆ ತಕ್ಕ ದಾಳಿ ನಡೆಸಿದರು. ಆದರೆ ಅದೃಷ್ಟ ಅವರಿಗೆ ಸಾತ್ ನೀಡಲಿಲ್ಲ. ಅವರ ಬೌಲಿಂಗ್ನಲ್ಲಿ ಬ್ಯಾಟ್ಗಳ ಅಂಚಿಗೆ ತಾಕಿದ ಬಾಲು ಕೆಲ ಸಲ ಫೀಲ್ಡರ್ಗಳ ತಲೆ ಮೇಲಿಂದ ಹಾರಿದರೆ, ಒಂದೆರಡು ಸಲ ಫೀಲ್ಡರ್ಗಳ ಮುಂದೆ ಗ್ರೌಂಡ್ ಆಯಿತು.
ಸೌತಾಂಪ್ಟನ್ ರೋಸ್ ಬೋಲ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪೈನಲ್ ಪಂದ್ಯದಲ್ಲಿ ಮೂರು ದಿನಗಳ ಆಟ ಮುಗಿದಿದೆಯಾರೂ ಪಂದ್ಯ ಕೇವಲ ಕಾಲು ಭಾಗದಷ್ಟು ಆಟ ಮಾತ್ರ ಸಾಧ್ಯವಾಗಿದೆ, ಮಳೆರಾಯ ಈ ಪಂದ್ಯವನ್ನು ಬೆಂಬಿಡದೆ ಕಾಡುತ್ತಿದ್ದಾನೆ. ಪಂದ್ಯದ ನಾಲ್ಕನೇ ದಿನವಾಗಿರುವ ಸೋಮವಾರವೂ ಮಳೆ ಮತ್ತು ಮೈದಾನದ ಔಟ್ಫೀಲ್ಟ್ ಒದ್ದೆಯಾಗಿರುವುದರಿಂದ ದಿನದಾಟದ ಆರಂಭ ವಿಳಂಬಗೊಂಡಿದೆ. ರವಿವಾರ ಅಂದರೆ ಪಂದ್ಯದ ಮೂರನೇ ದಿನ ಭಾರತ 217 ಮೊತ್ತಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡ ಮೇಲೆ, ತನ್ನ ಇನ್ನಿಂಗ್ಸ್ ಆಂಭಿಸಿದ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತ್ತು. ಅದರರ್ಥ ಇಂಗ್ಲಿಷ್ ಕಂಡೀಷನ್ಗಳಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ಕಿವೀಸ್ ಬೌಲರ್ಗಳಷ್ಟು ಪರಿಣಾಮಕಾರಿಯಾಗಿ ಬೌಲ್ ಮಾಡಲಿಲ್ಲ. ಆರಂಭ ಆಟಗಾರ ಡೆವೊನ್ ಕಾನ್ವೇ ಅರ್ಧ ಶತಕ ಬಾರಿಸಿದ ನಂತರ ಮೂರನೇ ದಿನದಾಟದ ಕೊನೆಯ ಓವರ್ನಲ್ಲಿ ಔಟಾಗಿರದಿದ್ದರೆ, ನ್ಯೂಜಿಲೆಂಡ್ ಸ್ಥಿತಿ ಮತ್ತಷ್ಟು ಇಂಪೋಸಿಂಗ್ ಅನಿಸುತಿತ್ತ್ತು. ಭಾರತದ ಬೌಲರ್ಗಳು ಉತ್ತಮ ಏರಿಯಾಗಳಲ್ಲಿ ಬಾಲನ್ನು ಪಿಚ್ ಮಾಡಿ ಎದುರಾಳಿ ಬ್ಯಾಟ್ಸ್ಮನ್ಗಳನ್ನು ತೊಂದರೆಗೆ ಸಿಲುಕಿಸುವಲ್ಲಿ ವಿಫಲರಾದರು ಎನ್ನುವುದರಲ್ಲಿ ಅನುಮಾನವಿಲ್ಲ.
ಅದರೆ ಗಮನಿಸಬೇಕಾದ ಅಂಶವೆಂದರೆ, ಪಿಚ್ ಕಂಡೀಶನ್ ಹೇಗಿದ್ದರೂ ಉತ್ತಮವಾಗಿ ಬೌಲ್ ಮಾಡುವ ಮೊಹಮ್ಮದ್ ಶಮಿ, ರವಿವಾರವೂ ತಮ್ಮ ಖ್ಯಾತಿಗೆ ತಕ್ಕ ದಾಳಿ ನಡೆಸಿದರು. ಆದರೆ ಅದೃಷ್ಟ ಅವರಿಗೆ ಸಾತ್ ನೀಡಲಿಲ್ಲ. ಅವರ ಬೌಲಿಂಗ್ನಲ್ಲಿ ಬ್ಯಾಟ್ಗಳ ಅಂಚಿಗೆ ತಾಕಿದ ಬಾಲು ಕೆಲ ಸಲ ಫೀಲ್ಡರ್ಗಳ ತಲೆ ಮೇಲಿಂದ ಹಾರಿದರೆ, ಒಂದೆರಡು ಸಲ ಫೀಲ್ಡರ್ಗಳ ಮುಂದೆ ಗ್ರೌಂಡ್ ಆಯಿತು. ನಿನ್ನೆ ನ್ಯೂಜಿಲೆಂಡ್ ಕಳೆದುಕೊಂಡ 2 ವಿಕೆಟ್ಗಳಲ್ಲಿ ಶಮಿಗೆ ಒಂದೂ ಸಿಗಲಿಲ್ಲವಾದರೂ ಭಾರತೀಯ ಬೌಲರ್ಗಳ ಪೈಕಿ ಅವರೇ (11 ಓವರ್ಗಳಲ್ಲಿ 0/19) ಹೆಚ್ಚು ಪರಿಣಾಮಕಾರಿಯಾಗಿದ್ದರು. ಹಾಗಾಗಿ ಭಾರತೀಯ ವೀಕ್ಷಕ ವಿವರಣೆಕಾರರು ಶಮಿಯನ್ನು ಅದೃಷ್ಟಹೀನ ಬೌಲರ್ ಎಂದು ಹೇಳುತ್ತಲೇ ಇದ್ದರು.
ಅವರ ದಾಳಿಯಲ್ಲಿ ಅದೃಷ್ಟದ ಬೆಂಬಲ ಪಡೆದವರಲ್ಲಿ ಮೊದಲಿಗರೆಂದರೆ, ಕಾನ್ವೇ. ಶಮಿಯ ಒಂದು ಎಸೆತ ಎಡಗೈ ಆಟಗಾರನ ಬ್ಯಾಟ್ ಹೊರ ಅಂಚನ್ನು ಸವರಿ ಮೂರನೇ ಸ್ಲಿಪ್ನಲ್ಲಿದ್ದ ವಿರಾಟ್ ಕೊಹ್ಲಿ ತಲೆ ಮೇಲಿಂದ ಹಾರಿತು. ಎರಡು ಓವರ್ಗಳ ನಂತರ ಮತ್ತ್ತೊಬ್ಬ ಆರಂಭಿಕ ಟಾಮ್ ಲಾಥಮ್ ಅವರ ಬ್ಯಾಟಿನ ಅಂಚಿಗೆ ತಾಕಿದ ಚೆಂಡು ಗಲ್ಲಿಯಲ್ಲಿ ಡೈವ್ ಮಾಡಿ ಕ್ಯಾಚ್ ಹಿಡಿಯಲೆತ್ನಿಸಿದ ಅಜಿಂಕ್ಯಾ ರಹಾನೆ ಅವರ ಮುಂದೆ ಬಿತ್ತು. ಮತ್ತೆರಡು ಎಸೆತಗಳ ನಂತರ ಅವರ ದಾಳಿಯಲ್ಲೇ ಬಾಲು ಲಾಥಮ್ ಅವರ ಬ್ಯಾಟಿನ ಒಳ ಅಂಚಿಗೆ ತಾಕಿದ ಬಾಲು ವಿಕೆಟ್ಗಳ ಮೇಲಿಂದ ಹಾರಿತು.
2018ರಲ್ಲಿ ಬಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೂ, ಅದೃಷ್ಟ ಶಮಿಯನ್ನು ಹಲವು ಸಲ ವಂಚಿಸಿತ್ತು. ಸಹಜವಾಗೇ ಭಾರತದ ಕಾಮೆಂಟೇಟರ್ಗಳು ಶಮಿ ಈಗಲೂ ಅದೃಷ್ಟಹೀನರಾಗಿದ್ದಾರೆ ಎಂದು ಹೇಳಿದರು. ‘ಅದೆಷ್ಟು ಸಲ ನೀವು ಶಮಿ ಇಂಗ್ಲೆಂಡ್ನಲ್ಲಿ ಅದೃಷ್ಟಹೀನ ಬೌಲರ್ ಅಂತ ಉಲ್ಲೇಖಿಸುವಿರಿ?’ ಎಂದು ಇಂಗ್ಲೆಂಡ್ ಮಾಜಿ ನಾಯಕ ಮತ್ತು ಈಗ ಕಾಮೆಂಟೇಟರ್ ಆಗಿರರುವ ಮೈಕೆಲ್ ಆಥರ್ಟನ್ ಕೇಳಿದರಲ್ಲದೆ. ಶಮಿ ಇಂಗ್ಲೆಂಡ್ನಲ್ಲಿ ಆಡಿರುವ 9 ಟೆಸ್ಟ್ಗಳಲ್ಲಿ 47 ಸರಾಸರಿಯಲ್ಲಿ ಕೇವಲ 21 ವಿಕೆಟ್ ಪಡೆದಿರುವ ಅಂಕಿ-ಅಂಶಗಳನ್ನು ಮುಂದಿಟ್ಟರು.
ಅವರ ಜೊತೆ ಕಾಮೆಂಟೇಟರ್ ಮತ್ತು 2018ರಲ್ಲಿ ಶಮಿಯೊಂದಿಗೆ ಟೀಮ್ ಇಂಡಿಯಾದ ಸದಸ್ಯರಾಗಿದ್ದ ದಿನೇಶ್ ಕಾರ್ತೀಕ್, ಬೌಲರ್ಗಳು ಪಡೆಯುವ ವಿಕೆಟ್ಗಳೊಂದಿಗೆ ಅವರ ದಾಳಿಯಲ್ಲಿ ಮಿಸ್ ಆದ ಚಾನ್ಸ್ಗಳ ಬಗ್ಗೆಯೂ ದಾಖಲೆಗಳಿರುವಂತಿದ್ದರೆ ಚೆನ್ನಾಗಿರುತಿತ್ತು ಎಂದು ಹೇಳಿದರು.
‘ಕೆಲವು ಸಲ ದುರಾದೃಷ್ಟ ಬೌಲರ್ಗಳನ್ನು ವಿಪರೀತವಾಗಿ ಕಾಡುತ್ತದೆ,’ಎಂದು ಕಾಮೆಂಟೇಟರ್ಗಳು ಚರ್ಚೆಯನ್ನು ಮುಗಿಸಿದರು.
ಆದರೆ ಫ್ರೆಡ್ಡೀ ವೈಲ್ಡ್ ಎನ್ನುವ ಕ್ರಿಕೆಟ್ ಪ್ರೇಮಿ 2018 ರಲ್ಲಿ ಶಮಿ ಎಷ್ಟು ಅದ್ಭುತವಾಗಿ ಬೌಲ್ ಮಾಡಿದರು ಎನ್ನುವದನ್ನು ಅಂಕಿ-ಅಂಶಗಳಲ್ಲಿ ತೋರಿಸಿದ್ದಾರೆ
So @DineshKarthik asks; @DineshKarthik gets. Here are the numbers that underline how well Shami bowled in the 2018 series – drawing a huge number of false shots. #INDvNZ #WTC21 pic.twitter.com/NtTx5xQ13e
— Freddie Wilde (@fwildecricket) June 20, 2021
ಕ್ರಿಕ್ವಿಜ್, 2018 ರಲ್ಲಿ ಶಮಿಯ ದಾಳಿಯಲ್ಲಿ ಮಿಸ್ ಆದ ಚಾನ್ಸ್ಗಳ ಬಗ್ಗೆ ಲೆಕ್ಕವಿಟ್ಟಿದೆ. ಆ ಪ್ರವಾಸದಲ್ಲಿ, ಶಮಿ ಬೌಲ್ ಮಾಡಿದ ಒಟ್ಟು ಎಸೆತಗಳ ಪೈಕಿ ಶೇಕಡಾ 26ರಷ್ಟು ಎಸೆತಗಳು ಬ್ಯಾಟ್ಗಳ ಅಂಚಿಗೆ ತಾಕಿದವು ಇಲ್ಲವೇ ಬ್ಯಾಟ್ಸ್ಮನ್ಗಳನ್ನು ವಂಚಿಸಿದವು. ವಿಕೆಟ್ ಪಡೆಯಲು ಅವರು ಸೃಷ್ಟಿಸಿದ ಅವಕಾಶಗಳಲ್ಲಿ ಶೇಕಡಾ 55 ರಷ್ಟು ಮಾತ್ರ ಯಶಕಂಡವು. ಅವರ ಬೌಲಿಂಗ್ನಲ್ಲಿ ಭಾರತದ ಫೀಲ್ಟರ್ಗಳು 5 ಬಾರಿ ಕ್ಯಾಚ್ಗಳನ್ನು ನೆಲಸಮಗೊಳಿಸಿದರು.
2018 ರ ಪ್ರವಾಸದ ಓವಲ್ ಟೆಸ್ಟ್ನಲ್ಲಿ ಭಾರತ ಸೋಲು ಅನುಭವಿಸಿದ ನಂತರ, ‘ಕೆಲವು ಸಲ ಯಶಸ್ಸು ಅದೃಷ್ಟ ಮೇಲೆ ಅವಲಂಬಿತವಾಗಿರುತ್ತದೆ,’ ಎಂದು ಹೇಳಿದ್ದ ಶಮಿ, ‘ಒಬ್ಬ ಬೌಲರ್ನಿಗೆ ಸರಿಯಾದ ಏರಿಯಾಗಳಲ್ಲಿ ಬಾಲನ್ನು ಪಿಚ್ ಮಾಡುವುದು ಮೊದಲ ಆದ್ಯತೆ ಆಗಿರಬೇಕು, ವಿಕೆಟ್ ಸಿಗುತ್ತವೆಯೋ ಇಲ್ಲವೋ ಅನ್ನೋದು ಬೇರೆ ವಿಷಯ. ಅದರೆ ಅದೃಷ್ಟ ಕೈಕೊಟ್ಟಾಗ ಬಹಳ ಬೇಸರವಾಗುತ್ತದೆ, ಬಹಲ ಸಲ ಬಾಲು ಬ್ಯಾಟನ್ನು ವಂಚಿಸಿತ್ತು. ಆದಾಗ್ಯೂ ನಾನು ಪಡೆದ ವಿಕೆಟ್ಗಳಿಂದ ಸಂತುಷ್ಟನಾಗಿದ್ದೇನೆ.’ ಎಂದಿದ್ದರು.
ಸೌತಾಂಪ್ಟನ್ನಲ್ಲಿ ಅದೇ ಕತೆ ಪುರಾವರ್ತನೆಯಾಗುತ್ತಿದೆ ಎಂದು ಭಾರತೀಯ ಕಾಮೆಂಟೇಟರ್ಗಳು ಭಾವಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಅದರೆ ಆಥರ್ಟನ್ಗೆ ಗೊತ್ತಿರದ ವಿಷಯವೆಂದರೆ, 2014 ಪ್ರವಾಸದಲ್ಲಿ ಶಮಿಯ ದಾಖಲೆ ಮತ್ತೂ ಕೆಟ್ಟದ್ದಾಗಿದೆ. ಆಗ ಆಡಿದ 3 ಪಂದ್ಯಗಳಲ್ಲಿ 73ರ ಸರಾಸರಿಯಲ್ಲಿ ಅವರು ಕೇವಲ 5 ವಿಕೆಟ್ ಪಡೆದಿದ್ದರು. ಆದರೆ ಶಮಿ ಯಾವಾಗಲೂ ಎರಡನೇ ಇನ್ನಿಂಗ್ಸ್ಗಳಲ್ಲಿ ಅತ್ಯುತ್ತಮವಾಗಿ ಬೌಲ್ ಮಾಡುತ್ತಾರೆ. ಸೌತಾಂಪ್ಟನಲ್ಲೂ ಅವರು ತಮ್ಮ ಈ ಈ ಹೆಗ್ಗಳಿಕೆಯನ್ನು ಕಾಯ್ದುಕೊಂಡರೆ ಆಶ್ಚರ್ಯಪಡಬೇಕಿಲ್ಲ
ಇದನ್ನೂ ಓದಿ: WTC Final Weather Update: 4ನೇ ದಿನದಾಟಕ್ಕೆ ವರುಣನ ಅಡ್ಡಿ! ಒಂದು ಬಾಲ್ ಆಡುವುದು ಕಷ್ಟವಾಗಿದೆ ಎಂದ ದಿನೇಶ್ ಕಾರ್ತಿಕ್