ICC World Test Championship: ‘ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಲು ಭಾರತ ಇಷ್ಟು ಮಾಡಿದರೆ ಸಾಕು!’

| Updated By: ಪೃಥ್ವಿಶಂಕರ

Updated on: May 12, 2021 | 2:15 PM

ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಮ್ಮ ಆಟಗಾರರು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿದ್ದರು. ಆದರೂ ಎದೆಗುಂದದೆ ಪರಾಕ್ರಮಿಗಳಾದರು. ಒಟ್ಟಿನಲ್ಲಿ ನಮ್ಮ ತಂಡ ತನ್ನ ಹಾಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಬಿಟ್ಟರೆ ಜಯ ಕಟ್ಟಿಟ್ಟಬುತ್ತಿ ಎಂದು ಥಮ್ಸ್​ಅಪ್​ ಮಾಡುತ್ತಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ.

ICC World Test Championship: ‘ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಲು ಭಾರತ ಇಷ್ಟು ಮಾಡಿದರೆ ಸಾಕು!’
ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್
Follow us on

ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ವೇದಿಕೆ ಸಜ್ಜಾಗುತ್ತಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ವಿಶ್ವ ಮುಕುಟ ಧರಿಸಲು ಸೆಣಸಾಟ ನಡೆಸಲಿವೆ. ಆ ಪಟ್ಟ ಗಿಟ್ಟಿಸಲು ಭಾರತ ತಂಡ ಇಷ್ಟು ಮಾಡಿದರೆ ಸಾಕು ಅಂತಿದ್ದಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಸೆಣೆಸಾಡಲು ಯಾವುದೇ ಕಂಡೀಷನ್​ಗೆ ಒಗ್ಗಿಕೊಳ್ಳಬಲ್ಲ ಆಟಗಾರರು ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡದಲ್ಲಿದ್ದಾರೆ ಅನ್ನುತ್ತಾರೆ ರಿತೀಂದರ್​ ಸಿಂಗ್​ ಸೋಧಿ.

ಜೂನ್ 18ರಿಂದ ಇಂಗ್ಲೆಂಡ್​ನ ಸೌಥಾಂಪ್ಟನ್​ ಮೈದಾನದಲ್ಲಿ World Test Championship (WTC) ಟೆಸ್ಟ್​ ಪಂದ್ಯ ನಡೆಯಲಿದೆ. ಕೊಹ್ಲಿ ಅಂಡ್​ ಕಂಪನಿ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್​ ಆಡಳಿತ ಮಂಡಳಿ ಬಿಸಿಸಿಐ (BCCI) 20 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ. ಜೊತೆಗೆ ನಾಲ್ಕು ಮಂದಿ ರಿಸರ್ವ್​ ಆಟಗಾರರೂ ಇದ್ದಾರೆ.

ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ, WTC ಪಂದ್ಯ ಭಾರತದಲ್ಲಿ ನಡೆಯುವುದಲ್ಲ; ಅದು ಇಂಗ್ಲೆಂಡ್​ನಲ್ಲಿ ಜರುಗಲಿದೆ. ಅಲ್ಲಿನ ಮೈದಾನದ ವಾತಾವರಣ ಭಾರತ ತಂಡಕ್ಕೆ ಪ್ರತಿಕೂಲ ವಾತಾವರಣ (adverse conditions) ಎದುರುಗೊಳ್ಳಲಿದೆ. ಆದರೆ ಭಾರತ ತಂಡದ ಈಗಿನ ಮನಸ್ಥಿತಿ, ದೃಢತೆ, ಫಾರಂ ಅನ್ನು ಗಣನೆಗೆ ತೆಗೆದುಕೊಂಡಾಗ ಮತ್ತು ಭಾರತ ತಂಡ ಈಗಾಗಲೇ ಇಂತಹ ಪ್ರತಿಕೂಲ ವಾತಾವರಣದಲ್ಲಿ ಆಡಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದರಿಂದ ಅದಕ್ಕೆ ಭಾರತ ತಂಡ ಈಗಾಗಲೇ ಒಗ್ಗಿಕೊಂಡಿದೆ ಎಂಬುದು ಅರಿವಿಗೆ ಬರುತ್ತದೆ. ಸಮರ್ಥ ಬೌಲರ್​ಗಳು ನಮ್ಮಲ್ಲಿದ್ದಾರೆ, ಬ್ಯಾಟಿಂಗ್​ ಅದ್ಭುತವಾಗಿದೆ, ಇನ್ನು ಟೆಸ್ಟ್​ ಮ್ಯಾಚ್​ಗಳಲ್ಲಿ ಸ್ಲಿಪ್​ ಕ್ಯಾಚಿಂಗ್ ಸಹ ಸುಧಾರಿಸಿದೆ ಎನ್ನುತ್ತಾರೆ.


ಭಾರತದ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ

ಪ್ರಚಲಿತ ಭಾರತ ತಂಡ ಒತ್ತಡದಲ್ಲಿ ಕುಸಿಯುವುದಿಲ್ಲ. ನಮ್ಮ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ಗೆಲುವಿನ ಪತಾಕೆ ಹಾರಿಸಬಲ್ಲದು ಅನ್ನುತ್ತಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ.

ಇದೇ ಪರಿಸ್ಥಿತಿಯನ್ನು ಹಿಂದಿನ ವರ್ಷಗಳಿಗೆ ಹೋಲಿಸಿ ನೋಡಿದರೆ ನಾವು ಪ್ರೆಷರ್​ನಲ್ಲಿ ಆಡುವಾಗ ವಿಫಲರಾಗುತ್ತಿದ್ದೆವು. ಏನೋ ಒಂದು ಸಮಸ್ಯೆ ಎದುರಾಗುತ್ತಿತ್ತು. ಆದರೆ ಈಗಿನ ತಂಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಂತಹ ಯಾವುದೇ ಪ್ರೆಷರ್​ ಇದ್ದರೂ ಅದನ್ನು ನೀಗಿಕೊಂಡು ಜಯ ಸಾಧಿಸಬಲ್ಲದು ಅಂತಾ ನನಗೆ ಅನ್ನಿಸುತ್ತದೆ. ತಾಜಾ ಉದಾಹರಣೆ ಅಂದ್ರೆ ಆಸ್ಟ್ರೇಲಿಯಾ ಪ್ರವಾಸ. ನಮ್ಮ ಆಟಗಾರರು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿದ್ದರು. ಆದರೂ ಎದೆಗುಂದದೆ ಪರಾಕ್ರಮಿಗಳಾದರು. ಒಟ್ಟಿನಲ್ಲಿ ನಮ್ಮ ತಂಡ ತನ್ನ ಹಾಲಿ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಬಿಟ್ಟರೆ ಜಯ ಕಟ್ಟಿಟ್ಟಬುತ್ತಿ ಎಂದು ಥಮ್ಸ್​ಅಪ್​ ಮಾಡುತ್ತಾರೆ ಮಾಜಿ ಕ್ರಿಕೆಟಿಗ ರಿತೀಂದರ್​ ಸಿಂಗ್​ ಸೋಧಿ.

(If India plays to their potential, the first World Test Championship will definitely be ours says Former cricketer Reetinder Singh Sodhi)

ಭಾರತದಲ್ಲಿ ಕ್ರಿಕೆಟ್​ ವ್ಯವಸ್ಥೆ ಬಲಿಷ್ಠವಾಗಿದ್ದು, ಉಚ್ಛ್ರಾಯ ಸ್ಥಿತಿಯಲ್ಲಿದೆ.. ಇದಕ್ಕೆ ಬಿಸಿಸಿಐ ದಾದಾ ಗಂಗೂಲಿ ಕೊಡುವ ಕಾರಣಗಳು ಏನು ಗೊತ್ತಾ!?

Published On - 4:35 pm, Tue, 11 May 21