ಇಂಡಿಯಾ-ಪಾಕ್ ಚಾಂಪಿಯನ್​ ಟ್ರೋಫಿಗೂ ಮುನ್ನ ಪಾಕಿಸ್ತಾನದ ಸ್ಕ್ರಾಬಲ್ ಆಟಗಾರರಿಗೆ ಭಾರತೀಯ ವೀಸಾ ನಿರಾಕರಣೆ

ಏಷ್ಯಾ ಕಪ್ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್‌ಗಾಗಿ ಪಾಕಿಸ್ತಾನದ ಹೆಚ್ಚಿನ ಸ್ಕ್ರಾಬಲ್ ಆಟಗಾರರಿಗೆ ಭಾರತ ವೀಸಾ ನಿರಾಕರಿಸಿದೆ. ಪಾಕಿಸ್ತಾನವು ವರ್ಲ್ಡ್​ ಯೂತ್ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಯೂತ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಪಡೆದಿದೆ. ಆದರೆ, ಭಾರತದಲ್ಲಿ ನಡೆಯಲಿರುವ ಪಂದ್ಯಕ್ಕೆ ಪಾಕಿಸ್ತಾನದ ಹೆಚ್ಚಿನ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ.

ಇಂಡಿಯಾ-ಪಾಕ್ ಚಾಂಪಿಯನ್​ ಟ್ರೋಫಿಗೂ ಮುನ್ನ ಪಾಕಿಸ್ತಾನದ ಸ್ಕ್ರಾಬಲ್ ಆಟಗಾರರಿಗೆ ಭಾರತೀಯ ವೀಸಾ ನಿರಾಕರಣೆ
ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್
Follow us
ಸುಷ್ಮಾ ಚಕ್ರೆ
|

Updated on: Nov 12, 2024 | 6:39 PM

ನವದೆಹಲಿ: ಏಷ್ಯಾ ಕಪ್ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್ ಮತ್ತು ದೆಹಲಿ ಕಪ್‌ಗಾಗಿ ಪಾಕಿಸ್ತಾನದ ಹೆಚ್ಚಿನ ಸಂಖ್ಯೆಯ ಸ್ಕ್ರ್ಯಾಬಲ್ ಆಟಗಾರರಿಗೆ ವೀಸಾ ನೀಡಲು ಭಾರತೀಯ ಹೈಕಮಿಷನ್ ನಿರಾಕರಿಸಿದೆ. ಪಾಕಿಸ್ತಾನ ವರ್ಲ್ಡ್ ಯೂತ್ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ಗಳನ್ನು ಪಡೆದಿದೆ. ಇದೀಗ ಭಾರತೀಯ ಹೈಕಮಿಷನ್ ಈ ಆಟಗಾರರಿಗೆ ವೀಸಾ ನೀಡುವುದಿಲ್ಲ ಎಂದು ಖಚಿತಪಡಿಸಿದೆ ಎಂದು ಪಾಕಿಸ್ತಾನ್ ಸ್ಕ್ರ್ಯಾಬಲ್ ಅಸೋಸಿಯೇಷನ್ ​​(PSA) ನಿರ್ದೇಶಕ ತಾರಿಕ್ ಪೆರೇಜ್ ಈ ಬಗ್ಗೆ ತಿಳಿಸಿದ್ದಾರೆ.

“2 ತಿಂಗಳ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ, ಭಾರತೀಯ ಹೈಕಮಿಷನ್ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಆಟಗಾರರು ಹಾಜರಾಗಲು ತಡವಾಗಿ ಕೆಲವು ವೀಸಾಗಳನ್ನು ನೀಡುತ್ತಿದೆ” ಎಂದು ಪೆರೇಜ್ ತಿಳಿಸಿದ್ದಾರೆ. ಯಾವುದೇ ವಿವರಣೆಯಿಲ್ಲದೆ ಅರ್ಧದಷ್ಟು ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ಈ ಹಿಂದೆ ಟೂರ್ನಿಯಲ್ಲಿ ಪಾಲ್ಗೊಂಡು ಕಳೆದ ವರ್ಷ ಗೆದ್ದ ಆಟಗಾರರೂ ಸೇರಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ಕ್ಲಬ್​ನಲ್ಲಿ ಧಾರ್ಮಿಕ ಚುಟುವಟಿಕೆ: ಟೀಮ್ ಇಂಡಿಯಾ ಆಟಗಾರ್ತಿಯ ಸದಸ್ಯತ್ವ ರದ್ದು

ಪಾಕಿಸ್ತಾನದ ಆಟಗಾರರು ಲಾಹೋರ್‌ಗೆ ಹೋದರು. ಅವರಿಗೆ ವೀಸಾಗಳನ್ನು ನಿರೀಕ್ಷಿಸಲಾಗಿತ್ತು. ಆದರೆ, ಈಗ ಕರಾಚಿಗೆ ವಾಪಾಸ್ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ 16 ವರ್ಷದ ಸ್ಕ್ರಾಬಲ್ ಆಟಗಾರ ಅಫಾನ್ ಸಲ್ಮಾನ್ 2 ತಿಂಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ವರ್ಲ್ಡ್​ ಯೂತ್ ಸ್ಕ್ರ್ಯಾಬಲ್ ಅನ್ನು ಗೆದ್ದಿದ್ದರು. ಪಾಕಿಸ್ತಾನ ತಂಡ ಪಂದ್ಯಾವಳಿಯಲ್ಲಿ ಅಗ್ರ ತಂಡವಾಗಿ ಶ್ರೇಯಾಂಕ ಪಡೆದಿದೆ ಮತ್ತು ಟೀಮ್ ಟ್ರೋಫಿಯನ್ನೂ ಗೆದ್ದಿದೆ. ಇದು ಅಗ್ರ 10ರಲ್ಲಿ ನಾಲ್ವರು ಆಟಗಾರರನ್ನು ಹೊಂದಿತ್ತು. ಅಫ್ಫಾನ್ ಅವರ ಸಹೋದರ ಅಲಿ ಸಲ್ಮಾನ್ ಸಹ 2022ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

ಇದನ್ನೂ ಓದಿ: ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಆಸ್ಟ್ರೇಲಿಯಾ

ದೆಹಲಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಯೂತ್ ಸ್ಕ್ರ್ಯಾಬಲ್ ಚಾಂಪಿಯನ್‌ಶಿಪ್ ಎರಡು ವಿಭಾಗಗಳನ್ನು ಹೊಂದಿದೆ. 2007ರ ಜನವರಿ 1ರಂದು ಅಥವಾ ನಂತರ ಜನಿಸಿದ ಆಟಗಾರರು ಈ ಪಂದ್ಯಾವಳಿಯಲ್ಲಿ ಆಡಬಹುದು. ಕಪ್‌ನಲ್ಲಿ ಅಗ್ರ 10 ಆಟಗಾರರಿಗೆ ಮತ್ತು ಪ್ಲೇಟ್ ವಿಭಾಗದಲ್ಲಿ ಅಗ್ರ 5 ಆಟಗಾರರಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುವುದು.

ಅಂದಹಾಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಗೆ ಚಾಂಪಿಯನ್ಸ್ ಟ್ರೋಫಿಗಾಗಿ ಏಕದಿನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರವನ್ನು ತಿಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್