NPL 2024: ಹೊಸ ಟಿ20 ಲೀಗ್​ಗೆ ಶಿಖರ್ ಧವನ್ ಎಂಟ್ರಿ

Shikhar Dhawan: IPL ನಲ್ಲಿ ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಒಟ್ಟು 222 ಮ್ಯಾಚ್​ಗಳನ್ನಾಡಿರುವ ಶಿಖರ್ ಧವನ್ 2 ಶತಕ ಹಾಗೂ 51 ಅರ್ಧಶತಕಗಳೊಂದಿಗೆ ಒಟ್ಟು 6768 ರನ್ ಕಲೆಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Nov 14, 2024 | 10:23 AM

ನೇಪಾಳ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ನೇಪಾಳ ಪ್ರೀಮಿಯರ್ ಲೀಗ್​ನಲ್ಲಿ (NPL 2024) ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಗಾಗಿ ಕರ್ನಾಲಿ ಯಾಕ್ಸ್ ಫ್ರಾಂಚೈಸಿ ಜೊತೆ ಧವನ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ ಚೊಚ್ಚಲ ಎನ್​ಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮಾಜಿ ನಾಯಕ ಕಣಕ್ಕಿಳಿಯಲಿದ್ದಾರೆ.

1 / 6
ಚೊಚ್ಚಲ ನೇಪಾಳ ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಕಾಣಿಸಿಕೊಳ್ಳಲಿವೆ. ಈಗಾಗಲೇ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆ ಮುಗಿದಿದ್ದು, ಅದರಂತೆ ಬಿರಾಟ್‌ನಗರ ಕಿಂಗ್ಸ್, ಚಿಟ್ವಾನ್ ರೈನೋಸ್, ಜನಕ್‌ಪುರ್ ಬೋಲ್ಟ್ಸ್, ಕಠ್ಮಂಡು ಗೂರ್ಖಾಸ್, ಲುಂಬಿನಿ ಲಯನ್ಸ್, ಪೋಖರಾ ಅವೆಂಜರ್ಸ್, ಕರ್ನಾಲಿ ಯಾಕ್ಸ್ ಮತ್ತು ಸುದುರ್ಪಶ್ಚಿಮ್ ರಾಯಲ್ಸ್ ತಂಡಗಳು ಕಣಕ್ಕಿಳಿಯಲಿವೆ.

2 / 6
ಇದೀಗ ಈ ಟೂರ್ನಿಗೆ ಸ್ಟಾರ್ ಆಟಗಾರನಾಗಿ ಶಿಖರ್ ಧವನ್ ಎಂಟ್ರಿ ಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿರುವ ಧವನ್ ಈ ಬಾರಿಯ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಧವನ್ ಇತ್ತೀಚೆಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಆಡಿದ್ದರು.

3 / 6
ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಆಡುವ ಭಾರತೀಯ ಆಟಗಾರರು ಯಾವುದೇ ಫ್ರಾಂಚೈಸಿ ಲೀಗ್​ಗಳಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಇತರೆ ಲೀಗ್​ಗಳಲ್ಲಿ ಕಾಣಿಸಿಕೊಂಡರೆ ಅವರು ಐಪಿಎಲ್​ಗೆ ಅನರ್ಹರಾಗಲಿದ್ದಾರೆ. ಅದರಂತೆ ಲೆಜೆಂಡ್ಸ್ ಲೀಗ್ ಆಡಿರುವ ಕಾರಣ ಶಿಖರ್ ಧವನ್​ ಇನ್ಮುಂದೆ ಐಪಿಎಲ್ ಆಡುವಂತಿಲ್ಲ.

4 / 6
ಇದೇ ಕಾರಣದಿಂದಾಗಿ ಇದೀಗ ಶಿಖರ್ ಧವನ್ ವಿದೇಶಿ ಲೀಗ್​ಗಳತ್ತ ಮುಖ ಮಾಡಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ನೇಪಾಳ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಮೂಲಕ ಗಬ್ಬರ ಪಕ್ಕದ ನೇಪಾಳದಲ್ಲೂ ಘರ್ಜಿಸುವ ವಿಶ್ವಾಸದಲ್ಲಿದ್ದಾರೆ.

5 / 6
ಅಂದಹಾಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಶಿಖರ್ ಧವನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್, ಡೆಕ್ಕನ್ ಚಾರ್ಜರ್ಸ್, ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರ ಒಟ್ಟು 222 ಮ್ಯಾಚ್​ಗಳನ್ನಾಡಿರುವ ಅವರು 2 ಶತಕ ಹಾಗೂ 51 ಅರ್ಧಶತಕಗಳೊಂದಿಗೆ ಒಟ್ಟು 6768 ರನ್ ಕಲೆಹಾಕಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಬಳಿಕ ಐಪಿಎಲ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

6 / 6
Follow us
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್

ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?

ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ