AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2025: ಥೈಲ್ಯಾಂಡ್ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿದ ಭಾರತ ಮಹಿಳಾ ಹಾಕಿ ತಂಡ

Women's Hockey Asia Cup 2025: ಭಾರತದ ಮಹಿಳಾ ಹಾಕಿ ತಂಡವು ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ಥೈಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 11-0 ಅಂತರದ ಗೆಲುವಿನೊಂದಿಗೆ ತಂಡ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಕೆಲವು ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿಯ ಹೊರತಾಗಿಯೂ, ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ಅವರ ಅದ್ಭುತ ಪ್ರದರ್ಶನ ಗೆಲುವಿಗೆ ಕಾರಣವಾಯಿತು. ಈ ಗೆಲುವು ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Asia Cup 2025: ಥೈಲ್ಯಾಂಡ್ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿದ ಭಾರತ ಮಹಿಳಾ ಹಾಕಿ ತಂಡ
Women's Hockey Asia Cup 2025
ಪೃಥ್ವಿಶಂಕರ
|

Updated on: Sep 05, 2025 | 8:50 PM

Share

ಒಂದೆಡೆ ಬಿಹಾರದ ರಾಜ್‌ಗಿರ್‌ನಲ್ಲಿ ಪುರುಷರ ಹಾಕಿ ಏಷ್ಯಾಕಪ್ ನಡೆಯುತ್ತಿದ್ದು, ಆತಿಥೇಯ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್​ನತ್ತ ಹೆಜ್ಜೆ ಇಟ್ಟಿದೆ. ಇನ್ನೊಂದೆಡೆ ಚೀನಾದಲ್ಲಿ ಇಂದಿನಿಂದ ಮಹಿಳಾ ಹಾಕಿ ಏಷ್ಯಾಕಪ್ (Women’s Hockey Asia Cup 2025) ಆರಂಭವಾಗಿದೆ. ಈ ಟೂರ್ನಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು 11-0 ಗೋಲುಗಳಿಂದ ಸೋಲಿಸಿ ಗೆಲುವಿನ ಶುಭಾರಂಭ ಮಾಡಿದೆ. ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಹಾಕಿ ಫೀಲ್ಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ ಆಕ್ರಮಣಕಾರಿಯಾಗಿ ಆಟವಾಡಿ ಥೈಲ್ಯಾಂಡ್ ತಂಡವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತು.

ಅಭೂತಪೂರ್ವ ಗೆಲುವು

ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಕೆಳ ಶ್ರೇಯಾಂಕದ ಥೈಲ್ಯಾಂಡ್ ವಿರುದ್ಧದ ಗೆಲುವು ತಂಡದ ಮನೋಬಲವನ್ನು ಹೆಚ್ಚಿಸಿದೆ. ಏಕೆಂದರೆ ಅನುಭವಿ ಗೋಲ್‌ಕೀಪರ್ ಸವಿತಾ, ಡ್ರ್ಯಾಗ್ ಫ್ಲಿಕರ್ ಮತ್ತು ಸ್ಟಾರ್ ಫಾರ್ವರ್ಡ್ ದೀಪಿಕಾ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದ ಕಾರಣ ಭಾರತ ತಂಡ ದುರ್ಬಲವಾಗಿ ಕಾಣುತ್ತಿತ್ತು. ಆದರೆ ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ, ಭಾರತ ತಂಡ ಸುಲಭ ಗೆಲುವು ದಾಖಲಿಸಿತು.

ಭಾರತ ಆರಂಭದಿಂದಲೂ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ತಲಾ ಎರಡು ಗೋಲುಗಳನ್ನು ಗಳಿಸಿದರೆ, ಸಂಗೀತಾ ಕುಮಾರಿ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ಶರ್ಮಿಳಾ ದೇವಿ ಮತ್ತು ರುತುಜಾ ದಾದಾಸೊ ಪಿಸಲ್ ತಲಾ ಒಂದು ಗೋಲು ಬಾರಿಸಿದರು. ಹೀಗಾಗಿ ಮೊದಲಾರ್ಧದಲ್ಲಿ ಭಾರತ 5-0 ಮುನ್ನಡೆ ಸಾಧಿಸಿತು. ಇದರ ನಂತರ, ದ್ವಿತೀಯಾರ್ಧದಲ್ಲಿಯೂ ಪಾರುಪತ್ಯ ಮುಂದುವರೆಸಿದ ಭಾರತ ಪಂದ್ಯದ ಅಂತ್ಯದ ವೇಳೆಗೆ 11 ಗೋಲುಗಳನ್ನು ಗಳಿಸಿತು.

ವಿಶ್ವಕಪ್ ಟಿಕೆಟ್​ಗಾಗಿ ಫೈಟ್

ಭಾರತ ತಂಡವು ಏಷ್ಯಾಕಪ್ ಚಾಂಪಿಯನ್ ಜಪಾನ್, ಥೈಲ್ಯಾಂಡ್ ಮತ್ತು ಸಿಂಗಾಪುರ್ ತಂಡಗಳನ್ನು ಒಳಗೊಂಡ ಪೂಲ್ ಬಿ ನಲ್ಲಿ ಸ್ಥಾನ ಪಡೆದಿದ್ದರೆ, ಪೂಲ್ ಎ ನಲ್ಲಿ ಆತಿಥೇಯ ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಚೈನೀಸ್ ತೈಪೆ ತಂಡಗಳು ಸ್ಥಾನ ಪಡೆದಿವೆ. ಈ ಪಂದ್ಯಾವಳಿಯು ಸೆಪ್ಟೆಂಬರ್ 5 ರಿಂದ 14, 2025 ರವರೆಗೆ ನಡೆಯಲಿದೆ. ಥೈಲ್ಯಾಂಡ್ ನಂತರ, ಭಾರತವು ಈಗ ಶನಿವಾರ ಜಪಾನ್ ಮತ್ತು ಸೆಪ್ಟೆಂಬರ್ 8 ರಂದು ಸಿಂಗಾಪುರವನ್ನು ಎದುರಿಸಲಿದೆ. ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಈಗ ನಡೆಯುತ್ತಿರುವ ಏಷ್ಯಾಕಪ್ ಅರ್ಹತಾ ಪಂದ್ಯಾವಳಿಯಾಗಿದೆ. ಹೀಗಾಗಿ ಈ ಟೂರ್ನಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಕಿರೀಟ ಅಲಂಕರಿಸಿದರೆ, ವಿಶ್ವಕಪ್​ಗೆ ಅರ್ಹತೆ ಪಡೆದುಕೊಳ್ಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್