AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಒಲಿಂಪಿಕ್ಸ್‌​ ಆತಿಥ್ಯಕ್ಕೆ ಮಹತ್ವದ ಹೆಜ್ಜೆ

2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯುಎಸ್​ಎನ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿದೆ. ಹಾಗೆಯೇ 2032ರ ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆಯಲಿದೆ. ಇದೀಗ 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ.

ಭಾರತದಲ್ಲಿ ಒಲಿಂಪಿಕ್ಸ್‌​ ಆತಿಥ್ಯಕ್ಕೆ ಮಹತ್ವದ ಹೆಜ್ಜೆ
Olympics
ಝಾಹಿರ್ ಯೂಸುಫ್
|

Updated on: Nov 06, 2024 | 11:04 AM

Share

ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪಕ್ಕೆ ಅನುಗುಣವಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.​ ಇದರ ಮೊದಲ ಭಾಗವಾಗಿ, ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತಾರಾಷ್ಟ್ರೀಯ ಒಲಿಂಪಿಕ್‌ ಅಸೋಸಿಯೇಷನ್‌ನ ಭವಿಷ್ಯದ ಆತಿಥೇಯ ಆಯೋಗಕ್ಕೆ ಆಶಯ ಪತ್ರವನ್ನು ಕಳುಹಿಸಿದೆ. ಈ ಮೂಲಕ 2036 ರಲ್ಲಿ ನಡೆಯಲಿರುವ ಜಾಗತಿಕ ಕ್ರೀಡಾಕೂಟದ ಆತಿಥ್ಯಕ್ಕೆ ಭಾರತವು ಔಪಚಾರಿಕ ಬಿಡ್ ಸಲ್ಲಿಸಿದೆ.

2036 ರಲ್ಲಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಡೆಯಲಿದ್ದು, ಈ ಕ್ರೀಡಾಕೂಟಗಳನ್ನು ಆಯೋಜಿಸುವ ಬಹುದೊಡ್ಡ ಕನಸನ್ನು ಪ್ರಧಾನಿ ಮೋದಿ ಈ ಹಿಂದೆ ಪ್ರಸ್ತಾಪಿಸಿದ್ದರು. ಇದೀಗ ಇದರ ಮೊದಲ ಹೆಜ್ಜೆಯಾಗಿ ಔಪಚಾರಿಕ ಬಿಡ್ ಸಲ್ಲಿಸಲಾಗಿದೆ.

ಕಳೆದ ವರ್ಷ ಮುಂಬೈನಲ್ಲಿ ನಡೆದ 141 ನೇ ಐಒಸಿ ಅಧಿವೇಶನದಲ್ಲಿ, 1.4 ಬಿಲಿಯನ್ ಭಾರತೀಯರು ಕ್ರೀಡಾಕೂಟವನ್ನು ಆಯೋಜಿಸಲು ಬದ್ಧರಾಗಿದ್ದಾರೆ. 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಎದುರು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಈಗಾಗಲೇ ಭಾರತದ ಕೋರಿಕೆಯನ್ನು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಕೂಡ ಬೆಂಬಲಿಸಿದ್ದಾರೆ. ಅಲ್ಲದೆ ಭಾರತವು ಒಲಿಂಪಿಕ್ಸ್ ಆಯೋಜಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೀಗಾಗಿ 2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜನೆ ಹಕ್ಕು ದೊರೆತರೆ, ಅಹಮದಾಬಾದ್​ನಲ್ಲಿ ಮಹಾ ಕ್ರೀಡಾಕೂಟ ನಡೆಯಲಿದೆ. ಇದಕ್ಕಾಗಿ ಹಲವು ಸ್ಟೇಡಿಯಂಗಳ ಅವಶ್ಯಕತೆಯಿದ್ದರೂ, ಅಹಮದಾಬಾದ್​ನಲ್ಲಿ ಈಗಾಗಲೇ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇದೆ. ಹೀಗಾಗಿ ಒಲಿಂಪಿಕ್ಸ್ ಆಯೋಜನೆಗಾಗಿ ಭಾರತವು ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ಸಜ್ಜಾಗಬಹುದು.

ಇದನ್ನೂ ಓದಿ: IPL 2025: 409 ವಿದೇಶಿ ಆಟಗಾರರು; ಯಾವ ದೇಶದಿಂದ ಎಷ್ಟು ಪ್ಲೇಯರ್ಸ್?

2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯುಎಸ್​ಎನ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿದೆ. ಹಾಗೆಯೇ 2032ರ ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆಯಲಿದೆ. ಇದೀಗ 2036ರ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 10 ದೇಶಗಳು ಈ ಕ್ರೀಡಾಕೂಟವನ್ನು ಆಯೋಜಿಸಲು ಆಕಸ್ತಿ ವ್ಯಕ್ತಪಡಿಸಿದ್ದು,  ಈ ದೇಶಗಳ ಪಟ್ಟಿ ಈ ಕೆಳಗಿನಂತಿದೆ…

  • ಮೆಕ್ಸಿಕೋ (ಮೆಕ್ಸಿಕೋ ಸಿಟಿ, ಗ್ವಾಡಲಜರಾ-ಮಾಂಟೆರೆ-ಟಿಜುವಾನಾ)
  • ಇಂಡೋನೇಷ್ಯಾ (ನುಸಂತಾರಾ)
  • ಟರ್ಕಿ (ಇಸ್ತಾನ್‌ಬುಲ್)
  • ಭಾರತ (ಅಹಮದಾಬಾದ್)
  • ಪೋಲೆಂಡ್ (ವಾರ್ಸಾ, ಕ್ರಾಕೋವ್)
  • ಈಜಿಪ್ಟ್ (NAC)
  • ದಕ್ಷಿಣ ಕೊರಿಯಾ (ಸಿಯೋಲ್-ಇಂಚಿಯಾನ್)