Afro-Asia Cup: ಆಫ್ರೊ-ಏಷ್ಯಾ ಕಪ್ ಟೂರ್ನಿಗೆ ಮತ್ತೆ ಚಾಲನೆ

Afro-Asia Cup: 2007 ರಲ್ಲಿ ನಡೆದಿದ್ದ ಆಫ್ರೊ-ಏಷ್ಯಾ ಕಪ್​ಗೆ ಮತ್ತೆ ಚಾಲನೆ ನೀಡಲು ಆಯೋಜಕರು ಆಸಕ್ತಿ ಹೊಂದಿದ್ದಾರೆ. ಅದರಂತೆ 2025 ರಲ್ಲಿ ಏಷ್ಯಾ-ಆಫ್ರಿಕಾ ಖಂಡಗಳ ನಡುವಣ ಕ್ರಿಕೆಟ್ ಟೂರ್ನಿ ಮತ್ತೆ ನಡೆಯುವ ಸಾಧ್ಯತೆಯಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಆಟಗಾರರು ಒಂದೇ ಟೀಮ್ ಪರ ಕಣಕ್ಕಿಳಿಯಲಿರುವುದು ವಿಶೇಷ.

Afro-Asia Cup: ಆಫ್ರೊ-ಏಷ್ಯಾ ಕಪ್ ಟೂರ್ನಿಗೆ ಮತ್ತೆ ಚಾಲನೆ
Afro-Asia Cup
Follow us
| Updated By: ಝಾಹಿರ್ ಯೂಸುಫ್

Updated on: Nov 06, 2024 | 10:24 AM

ಆಫ್ರೊ-ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ಸಾಧ್ಯತೆಯಿದೆ. ಆಫ್ರಿಕಾ ಮತ್ತು ಏಷ್ಯಾ ಖಂಡಗಳ ನಡುವಣ ಈ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಹಾಗೂ ಆಫ್ರಿಕಾ ಇಲೆವೆನ್ ಕಣಕ್ಕಿಳಿಯಲಿದೆ. 2007 ರಲ್ಲಿ ಕೊನೆಯ ಬಾರಿ ಆಯೋಜನೆಗೊಂಡಿದ್ದ ಈ ಟೂರ್ನಿಗೆ ಮತ್ತೆ ಚಾಲನೆ ನೀಡಲು ಆಯೋಜಕರು ಮುಂದಾಗಿದ್ದಾರೆ.

ಈ ಟೂರ್ನಿಗೆ ಚಾಲನೆ ನೀಡಲು ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಅಲ್ಲದೆ ಆಫ್ರಿಕನ್ ತಂಡಗಳು ಆಫ್ರೋ-ಏಷ್ಯಾ ಕಪ್ ಅನ್ನು ಪುನರುಜ್ಜೀವನಗೊಳಿಸಬೇಕೆಂದು ಬಯಸುತ್ತಿದ್ದಾರೆ ಎಂದು ಝಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷರೂ ಆಗಿರುವ ACA ಯ ಹಂಗಾಮಿ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ತಿಳಿಸಿದ್ದಾರೆ.

ನಾವು ಆಫ್ರೊ-ಏಷ್ಯಾ ಕಪ್ ಅನ್ನು ಮತ್ತೆ ಶುರು ಮಾಡಲು ಪ್ರಯತ್ನಿಸಿದ್ದೇವೆ. ಈ ಬಗ್ಗೆ ನಡೆದ ಚರ್ಚೆಗಳಲ್ಲಿ ಜಯ್ ಶಾ ಮತ್ತು ಮಹಿಂದಾ ವಲ್ಲಿಪುರಂ (ಮಲೇಷ್ಯಾ ಕ್ರಿಕೆಟ್ ಮುಖ್ಯಸ್ಥ ಮತ್ತು ಪ್ರಸ್ತುತ ಐಸಿಸಿ ನಿರ್ದೇಶಕ) ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಈ ಹಿಂದೆ ಸುಮೋದ್ ದಾಮೋದರ್ ತಿಳಿಸಿದ್ದರು.

ಸುಮಾರು 17-18 ವರ್ಷಗಳ ಹಿಂದೆ ಈ ಕಲ್ಪನೆಯನ್ನು ಮೊದಲ ಬಾರಿಗೆ ರೂಪಿಸಿದಾಗ ಮತ್ತು ಕಾರ್ಯಗತಗೊಳಿಸಿದಾಗ ಇದರಲ್ಲಿ ಭಾಗಿಯಾಗಿದ್ದವರಲ್ಲಿ ಸುಮೋದ್ ದಾಮೋದರ್ ಕೂಡ ಒಬ್ಬರು. ಇದೀಗ ಅವರೇ ಆಫ್ರೊ-ಏಷ್ಯಾ ಕಪ್ ಮತ್ತೆ ಚಾಲನೆ ನೀಡುವ ಬಗ್ಗೆ ಚರ್ಚೆಗಳನ್ನು ಶುರು ಮಾಡಿದ್ದಾರೆ.

ಇತ್ತ ಜಯ್ ಶಾ ಐಸಿಸಿ ಅಧ್ಯಕ್ಷರಾಗಿದ್ದು, ಅತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ (ಎಸಿಸಿ) ಅಧ್ಯಕ್ಷರಾಗುವ ಸಾಧ್ಯತೆಯಿದೆ. ಹೀಗಾಗಿಯೇ ಈ ಟೂರ್ನಿಗೆ ಮತ್ತೆ ಚಾಲನೆ ದೊರೆಯುವ ನಿರೀಕ್ಷೆಯಿದೆ.

ಒಂದೇ ತಂಡದಲ್ಲಿ ಇಂಡೊ-ಪಾಕ್ ಆಟಗಾರರು:

ಈ ಟೂರ್ನಿಯಲ್ಲಿ ಏಷ್ಯನ್ ಕ್ರಿಕೆಟ್ ತಂಡಗಳ ಆಟಗಾರರು ಏಷ್ಯಾ ಇಲೆವೆನ್​ನಲ್ಲಿ ಕಾಣಿಸಿಕೊಂಡರೆ, ಆಫ್ರಿಕಾ ಖಂಡದ ಆಟಗಾರರು ಆಫ್ರಿಕಾ ಇಲೆವೆನ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಅದರಂತೆ ಏಷ್ಯನ್ ಇಲೆವೆನ್​​ನಲ್ಲಿ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಜೊತೆಯಾಗಿ ಆಡಲಿದ್ದಾರೆ.

ಆಫ್ರೊ-ಏಷ್ಯಾ ಕಪ್ ಎಷ್ಟು ಬಾರಿ ನಡೆದಿದೆ?

ಈ ಟೂರ್ನಿಯನ್ನು ಕೇವಲ 2 ಬಾರಿ ಮಾತ್ರ ಆಯೋಜಿಸಲಾಗಿದೆ. 2005 ರಲ್ಲಿ ನಡೆದ ಚೊಚ್ಚಲ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಆಫ್ರಿಕಾ ಇಲೆವೆನ್ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಏಷ್ಯಾ ಇಲೆವೆನ್ ಗೆಲುವು ದಾಖಲಿಸಿತ್ತು. ಆದರೆ ಮೂರನೇ ಪಂದ್ಯವು ಮಳೆಗೆ ಅಹುತಿಯಾದ ಕಾರಣ ಟೂರ್ನಿಯು 1-1 ಅಂತರದಲ್ಲಿ ಕೊನೆಗೊಂಡಿತು. ಇನ್ನು 2007 ರಲ್ಲಿ ನಡೆದ 3 ಪಂದ್ಯಗಳ ಆಫ್ರೊ-ಏಷ್ಯಾ ಕಪ್ ಟೂರ್ನಿಯಲ್ಲಿ ಏಷ್ಯನ್ ಇಲೆವೆನ್ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದ್ದರು.

ಕೊನೆಯ ಬಾರಿ ಆಫ್ರೊ-ಏಷ್ಯಾ ಕಪ್ ಆಡಿದ ಆಟಗಾರರು ಯಾರೆಲ್ಲಾ?

ಆಫ್ರಿಕಾ ಇಲೆವೆನ್ ತಂಡ: ಎಬಿ ಡಿವಿಲಿಯರ್ಸ್, ವುಸಿ ಸಿಬಂದ, ಬೋಟಾ ಡಿಪ್ಪೆನಾರ್, ಸ್ಟೀವ್ ಟಿಕೊಲೊ, ಜಸ್ಟಿನ್ ಕೆಂಪ್ (ನಾಯಕ), ಮಾರ್ಕ್ ಬೌಚರ್ (ವಿಕೆಟ್ ಕೀಪರ್), ಶಾನ್ ಪೊಲಾಕ್, ಎಲ್ಟನ್ ಚಿಗುಂಬುರ, ಜೋಹಾನ್ ಬೋಥಾ, ಮೋರ್ನೆ ಮೊರ್ಕೆಲ್, ಪೀಟರ್ ಒಂಗೊಂಡೋ.

ಇದನ್ನೂ ಓದಿ: Team India: 55 ವರ್ಷಗಳ ಬಳಿಕ ಯಾಕೆ ಹೀಗಾಯ್ತು..!

ಏಷ್ಯಾ ಇಲೆವೆನ್ ತಂಡ: ವೀರೇಂದ್ರ ಸೆಹ್ವಾಗ್, ಸನತ್ ಜಯಸೂರ್ಯ, ಉಪುಲ್ ತರಂಗ, ಯುವರಾಜ್ ಸಿಂಗ್, ಮೊಹಮ್ಮದ್ ಯೂಸುಫ್, ಮಹೇಲ ಜಯವರ್ಧನೆ (ನಾಯಕ), ಎಂಎಸ್ ಧೋನಿ (ವಿಕೆಟ್ ಕೀಪರ್), ಮುಶ್ರಫೆ ಮೊರ್ತಜಾ, ಹರ್ಭಜನ್ ಸಿಂಗ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಆಸಿಫ್.

ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಪೇಮೆಂಟ್ ಬಗ್ಗೆ ಓಪನ್ ಆಗಿ ಮಾತನಾಡಿದ ಮಾನಸಾ
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ಬಿಗ್ ಬಾಸ್ ಮನೆಯಲ್ಲಿ ಸೇವೆ ಭಾಗ್ಯ; ಕಂಡ ಕಂಡಿದ್ದನ್ನೆಲ್ಲ ಮಾಡಿಸಿಕೊಂಡ್ರು
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?
ನಿಂಬೆಹಣ್ಣು, ಮೆಣಸಿನಕಾಯಿ ದೃಷ್ಟಿಯಿಂದ ಹೇಗೆ ಕಾಪಾಡುತ್ತೆ?
Nithya Bhavishya: ಈ ರಾಶಿಯವರು ಇಂದು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವರು
Nithya Bhavishya: ಈ ರಾಶಿಯವರು ಇಂದು ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವರು
ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್
ಬೆಂಗಳೂರಿನಲ್ಲಿ ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್
ಕಾಲಿಗೆ ಸರಪಳಿ ಹಾಕಿದರೂ ಕೈದಿ ಪರಾರಿ; ಪೊಲೀಸರಿಗೆ ಟೆನ್ಷನ್
ಕಾಲಿಗೆ ಸರಪಳಿ ಹಾಕಿದರೂ ಕೈದಿ ಪರಾರಿ; ಪೊಲೀಸರಿಗೆ ಟೆನ್ಷನ್
ಮಾನಸಾ ಬಗ್ಗೆ ನೆಗೆಟಿವ್ ಟ್ರೋಲ್; ಪ್ರತಿಕ್ರಿಯೆ ನೀಡಿದ ತುಕಾಲಿ ಸಂತೋಷ್
ಮಾನಸಾ ಬಗ್ಗೆ ನೆಗೆಟಿವ್ ಟ್ರೋಲ್; ಪ್ರತಿಕ್ರಿಯೆ ನೀಡಿದ ತುಕಾಲಿ ಸಂತೋಷ್
ತೆಲಂಗಾಣದ ಶಂಶಾಬಾದ್‌ನಲ್ಲಿ ಹನುಮಾನ್ ಮಂದಿರ ಧ್ವಂಸ
ತೆಲಂಗಾಣದ ಶಂಶಾಬಾದ್‌ನಲ್ಲಿ ಹನುಮಾನ್ ಮಂದಿರ ಧ್ವಂಸ
ಕುಮಾರಣ್ಣನ ನೋಟು ಯೋಗೇಶ್ವರ್​ಗೆ ವೋಟು ನಿಮ್ಮ ಮಂತ್ರವಾಗಿರಬೇಕು: ಸುರೇಶ್
ಕುಮಾರಣ್ಣನ ನೋಟು ಯೋಗೇಶ್ವರ್​ಗೆ ವೋಟು ನಿಮ್ಮ ಮಂತ್ರವಾಗಿರಬೇಕು: ಸುರೇಶ್
ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು
ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು