AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಸೂಪರ್ ಸಂಡೇ.. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು

IND vs SL: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿಯ ಸ್ಥಾನ ಬಹುತೇಕ ಸ್ಪಷ್ಟವಾಗಿದೆ. ಕ್ಯಾಪ್ಟನ್ ಶಿಖರ್ ಧವನ್ ಮತ್ತು ಪೃಥ್ವಿ ಶಾ ಈ ಸ್ಥಾನಕ್ಕೆ ಸರಿಯಾದ ಆಯ್ಕೆ.

IND vs SL: ಸೂಪರ್ ಸಂಡೇ.. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೀಗಿರಬಹುದು
ಟೀಂ ಇಂಡಿಯಾ
TV9 Web
| Updated By: ಪೃಥ್ವಿಶಂಕರ|

Updated on: Jul 17, 2021 | 3:38 PM

Share

ಟೀಮ್ ಇಂಡಿಯಾದ ಮಿಷನ್ ಇಂಗ್ಲೆಂಡ್ ಪ್ರಾರಂಭವಾಗುವ ಸಮಯ ಇನ್ನು ದೂರವಿದೆ. ಆದರೆ ಶ್ರೀಲಂಕಾದ ವಿಜಯಕ್ಕಾಗಿ ಯುದ್ಧ ಇನ್ನೆನೂ ಪ್ರಾರಂಭವಾಗಲಿದೆ. ಚೆಂಡು ಮತ್ತು ಬ್ಯಾಟ್‌ನೊಂದಿಗೆ ಎರಡೂ ತಂಡಗಳು ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸಮರಕ್ಕಿಳಿಯವುದು ಸನಿಹವಾಗಿದೆ. ಈ ಸರಣಿಯೂ ಭಾರತದ ಯುವ ಪಡೆಗೆ ಅಗ್ನಿ ಪರೀಕ್ಷೆಯಂತಾಗಿದ್ದು, ಇಲ್ಲಿ ಮಿಂಚಿದಚರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಖಚಿತವಾಗಿದೆ. ಅಲ್ಲದೆ ಟಿ20 ವಿಶ್ವಕಪ್​ಗೆ ಆಯ್ಕೆಯಾಗುವ ಸಂಭವವೂ ಹೆಚ್ಚಾಗಿದೆ. ಹೀಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎಲ್ಲರೂ ಶತಪ್ರಯತ್ನ ಮಾಡುತ್ತಿದ್ದಾರೆ. ನಾಳೆಯಿಂದ ಆರಂಭವಾಗುವ ಸರಣಿಗೆ ಭಾರತದ ಆಡುವ 11 ಆಟಗಾರರ ಬಳಗವನ್ನು ಇಲ್ಲಿ ಊಹಿಸಲಾಗಿದೆ. ಟೀಮ್ ಇಂಡಿಯಾ ತನ್ನ 20 ಸೈನಿಕರೊಂದಿಗೆ ಶ್ರೀಲಂಕಾವನ್ನು ತಲುಪಿದೆ, ಆದರೆ ಅವರಲ್ಲಿ ಕೇವಲ 11 ಮಂದಿ ಮಾತ್ರ ಮೈದಾನದಲ್ಲಿ ಘರ್ಜಿಸಲಿದ್ದಾರೆ.

ಯಾವುದೇ ರೀತಿಯ ಸ್ಪರ್ಧೆಯಲ್ಲಿ, ಮೊದಲ ಗೆಲುವು ಮುಖ್ಯವಾಗುತ್ತದೆ. ಪ್ರಾರಂಭವು ಉತ್ತಮವಾಗಿದ್ದರೆ ಯುದ್ಧವನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚು. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಕೂಡ ಅದೇ ಸಾಲಿನಲ್ಲಿ ಇರಲಿದೆ. ಹೀಗಾಗಿ ಭಾರತ ಆಡುವ ಹನ್ನೊಂದರಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.

ಧವನ್ ಮತ್ತು ಶಾ ಓಪನರ್, ಇದು ಮಧ್ಯಮ ಕ್ರಮಾಂಕವಾಗಿರಲಿದೆ! ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿಯ ಸ್ಥಾನ ಬಹುತೇಕ ಸ್ಪಷ್ಟವಾಗಿದೆ. ಕ್ಯಾಪ್ಟನ್ ಶಿಖರ್ ಧವನ್ ಮತ್ತು ಪೃಥ್ವಿ ಶಾ ಈ ಸ್ಥಾನಕ್ಕೆ ಸರಿಯಾದ ಆಯ್ಕೆ. ಒನ್​ಡೌನ್​ ಸ್ಥಾನಕ್ಕೆ ಸೂರ್ಯ ಕುಮಾರ್ ಯಾದವ್ ನೆಚ್ಚಿನ ಆಯ್ಕೆಯಾಗಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲೂ ಅನುಭವದ ಅಗತ್ಯವಿರುತ್ತದೆ, ಆದ್ದರಿಂದ ತಂಡದ ನಿರ್ವಹಣೆ ಮನೀಶ್ ಪಾಂಡೆ ಅವರನ್ನು ನಾಲ್ಕನೇ ಸ್ಥಾನದಲ್ಲಿ ನಿಲ್ಲಿಸಬಹುದು. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ನಲ್ಲಿ ಎರಡು ಆಯ್ಕೆಗಳು. ಇಬ್ಬರೂ ಪ್ರಬಲ ಬ್ಯಾಟ್ಸ್‌ಮನ್‌ಗಳು. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಥಿಂಕ್ ಟ್ಯಾಂಕ್ ಸಂಜು ಅವರ ಸಾಮರ್ಥ್ಯವನ್ನು ಪ್ರಯತ್ನಿಸಲು ಬಯಸುತ್ತದೆ. ನಂತರ, ತಂಡದಲ್ಲಿ ಪಾಂಡ್ಯ ಬ್ರದರ್ಸ್ ಅವರನ್ನು ಆಲ್‌ರೌಂಡರ್ ಆಗಿ ಆಯ್ಕೆ ಮಾಡುವುದು ಖಚಿತವಾಗಿದೆ.

ಭಾರತ 4 ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಆಡಲಿದೆ ಶ್ರೀಲಂಕಾ ವಿರುದ್ಧ ಭಾರತ 4 ಸ್ಪೆಷಲಿಸ್ಟ್ ಬೌಲರ್‌ಗಳೊಂದಿಗೆ ಹೋಗಬಹುದು, ಇದರಲ್ಲಿ 2 ವೇಗದ ಬೌಲರ್‌ಗಳು ಮತ್ತು 2 ಸ್ಪಿನ್ನರ್‌ಗಳು ಇರಬಹುದು. ಈ ಸರಣಿಯಲ್ಲಿನ ದೀರ್ಘ ಅಂತರದ ನಂತರ, ಜನರು ‘ಕುಲ್ಚಾ’ ಅಂದರೆ ಕುಲದೀಪ್ ಮತ್ತು ಚಹಲ್ ಜೋಡಿ ಮೈದಾನದಲ್ಲಿ ಒಟ್ಟಿಗೆ ಆಡುವುದನ್ನು ನೋಡಬಹುದು. ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್‌ ನಿರ್ವಾಹಣೆ ವಹಿಸಲಿದ್ದಾರೆ. ಅವರಲ್ಲದೆ ನವದೀಪ್ ಸೈನಿ ಅವರನ್ನು ಮತ್ತೊಬ್ಬ ವೇಗಿಗಳಾಗಿ ಕಣಕ್ಕಿಳಿಸಬಹುದು.

ಮೊದಲ ಏಕದಿನ ಪಂದ್ಯಕ್ಕೆ ಭಾರತದ ತಂಡ ಹೀಗಿರಬಹುದು ಶಿಖರ್ ಧವನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ನವದೀಪ್ ಸೈನಿ, ಯುಜ್ವೇಂದ್ರ ಚಹಲ್

ಇದನ್ನೂ ಓದಿ:IND vs SL: ಭಾರತ ವಿರುದ್ಧದ ಸರಣಿಗೆ ಶ್ರೀಲಂಕಾ ತಂಡ ಪ್ರಕಟ; ಆಲ್​ರೌಂಡರ್​ಗೆ ನಾಯಕನ ಪಟ್ಟ ಕಟ್ಟಿದ ಲಂಕಾ ಮಂಡಳಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ