ಅಬ್ಬಾ… ಎಂಥಾ ಕ್ಯಾಚ್ ಇದು: ಬೌಂಡರಿ ಲೈನ್ ಬಳಿ ಓಡಿ ಬಂದು ಒಂದೇ ಕೈಯಲ್ಲಿ ಹೀಗೊಂದು ಕ್ಯಾಚ್
Viral Cricket Video: ಚೆಂಡು ಅಷ್ಟೊಂದು ವೇಗವಾಗಿ ಇರದಿರದ ಕಾರಣ ಬೌಂಡರಿ ಲೈನ್ ಬಳಿಗೆ ಓಡಿ ಬಂದ ಫಾಬಿನ್ ಅಲೆನ್ ಡೈವ್ ಬಿದ್ದು ಒಂದೇ ಕೈಯಲ್ಲಿ ರೋಚಕ ಕ್ಯಾಚ್ ಹಿಡಿದರು.
ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಅಂತಿಮ ಐದನೇ ಟಿ-20 (5th T20I) ಪಂದ್ಯದಲ್ಲೂ ವೆಸ್ಟ್ ಇಂಡೀಸ್ (West Indies) 16 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕಾಂಗರೂ ಪಡೆಗೆ ಮಣ್ಣುಮುಕ್ಕಿಸಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಅಂತಿಮ ಕದನದಲ್ಲಿ ವಿಂಡೀಸ್ ಆಟಗಾರ ಫಾಬಿನ್ ಅಲೆನ್ (Fabian Allen) ಹಿಡಿದ ಒಂದು ಕ್ಯಾಚ್ ಭರ್ಜರಿ ವೈರಲ್ ಆಗುತ್ತಿದೆ. ಬೌಂಡರಿ ಲೈನ್ ಬಳಿ ಓಡಿ ಬಂದು ಒಂದೇ ಕೈಯಲ್ಲಿ ಇವರು ಕ್ಯಾಚ್ ಹಿಡಿದಿದ್ದು ಮೈ ಜುಮ್ ಎನಿಸುವಂತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಬಾರಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಎವಿನ್ ಲೆವಿಸ್ ಕೇವಲ 34 ಎಸೆತಗಳಲ್ಲಿ 4 ಬೌಂಡರಿ ಜೊತೆ ಬರೋಬ್ಬರಿ 9 ಸಿಕ್ಸರ್ ಸಿಡಿಸಿ 79 ರನ್ ಚಚ್ಚಿದರು. ನಾಯಕ ನಿಕೋಲಸ್ ಪೂರನ್ 31, ಕ್ರಿಸ್ ಗೇಲ್ ಹಾಗೂ ಸಿಮಾನ್ಸ್ ತಲಾ 21 ರನ್ ಕಲೆಹಾಕಿದರು. ಆಸೀಸ್ ಪರ ಆಂಡ್ರೆ ಟೈ 3 ವಿಕೆಟ್ ಪಡೆದರು.
200 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಈ ಪಂದ್ಯದಲ್ಲೂ ಮತ್ತೆ ಕಳಪೆ ಆರಂಭ ಪಡೆದುಕೊಂಡಿತು. ಜೋಷ್ ಫಿಲಿಪ್ ಸೊನ್ನೆ ಸುತ್ತಿದರೆ, ನಾಯಕ ಆ್ಯರೋನ್ ಫಿಂಚ್ ಅವರು ಫಾಬಿನ್ ಅಲೆನ್ ಹಿಡಿದು ಮನಮೋಹಕ ಕ್ಯಾಚ್ಗೆ ಬಲಿಯಾಗಬೇಕಾಯಿತು.
10ನೇ ಓವರ್ನ ಹೇಡನ್ ವಾಲ್ಶ್ ಬೌಲಿಂಗ್ನಲ್ಲಿ ಫಿಂಚ್ ಚೆಂಡನ್ನು ನೇರವಾಗಿ ಸಿಕ್ಸರ್ಗೆ ಅಟ್ಟಲು ಯತ್ನಿಸಿದರು. ಆದರೆ, ಚೆಂಡು ಅಷ್ಟೊಂದು ವೇಗವಾಗಿ ಇರದಿರದ ಕಾರಣ ಬೌಂಡರಿ ಲೈನ್ ಬಳಿಗೆ ಓಡಿ ಬಂದ ಫಾಬಿನ್ ಅಲೆನ್ ಡೈವ್ ಬಿದ್ದು ಒಂದೇ ಕೈಯಲ್ಲಿ ರೋಚಕ ಕ್ಯಾಚ್ ಹಿಡಿದರು. 34 ರನ್ ಗಳಿಸಿದ್ದ ಫಿಂಚ್ ಪೆವಿಲಿಯನ್ ಸೇರಬೇಕಾಯಿತು.
What a catch from Fabian Allen pic.twitter.com/w5F042PlSe
— William Mitchell (@news_mitchell) July 17, 2021
ನಂತರ ಬಂದ ಆಸೀಸ್ ಬ್ಯಾಟ್ಸ್ಮನ್ಗಳು ಯಾರು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಮಿಚೆಲ್ ಮಾರ್ಶ್ 30 ರನ್ ಗಳಿಸಿ ಔಟ್ ಆದರೆ, ಮೋಸಿಸ್ ಹೆನ್ರಿಕ್ಯೂಸ್ 21, ಮ್ಯಾಥ್ಯೂ ವೇಡ್ 26 ರನ್ಗೆ ಬ್ಯಾಟ್ ಕೆಳಗಿಟ್ಟರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಲಷ್ಟೇ ಶಕ್ತವಾಯಿತು.
ವೆಸ್ಟ್ ಇಂಡೀಸ್ 16 ರನ್ಗಳ ಭರ್ಜರಿ ಜಯದೊಂದಿಗೆ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 4-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು. ಜುಲೈ 20 ರಂದು ವಿಂಡೀಸ್-ಆಸೀಸ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
India vs Sri lanka: ಹಾರ್ದಿಕ್-ಧವನ್ ಅಲ್ಲ: ಲಂಕಾ ಸರಣಿಯಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ ಈತನಂತೆ!
Tokyo Olympic: ಟೋಕಿಯೊ ಒಲಿಂಪಿಕ್ಸ್ ನಡೆಯುವ ಪ್ರದೇಶದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲು
(Fabian Allen brilliant one-handed catch to dismiss Aaron Finch)