India vs Sri lanka: ಹಾರ್ದಿಕ್-ಧವನ್ ಅಲ್ಲ: ಲಂಕಾ ಸರಣಿಯಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ ಈತನಂತೆ!

ಭಾರತ ತಂಡದಲ್ಲಿ ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಸ್ಟಾರ್ ಆಟಗಾರರಿದ್ದಾರೆ. ಆದರೆ, ಇವರನ್ನೂ ಮೀರಿಸಿ ಈ ಸರಣಿಯಲ್ಲಿ ಪೃಥ್ವಿ ಶಾ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ರಸೆಲ್ ಹೇಳಿದ್ದಾರೆ.

India vs Sri lanka: ಹಾರ್ದಿಕ್-ಧವನ್ ಅಲ್ಲ: ಲಂಕಾ ಸರಣಿಯಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ ಈತನಂತೆ!
ಟೀಂ ಇಂಡಿಯಾ ಆಟಗಾರರು

ಟೀಮ್ ಇಂಡಿಯಾ ಶ್ರೀಲಂಕಾ (India vs Sri lanka) ವಿರುದ್ಧದ ಸರಣಿಗೆ ಸಂಪೂರ್ಣ ಸಜ್ಜಾಗಿದೆ. ಜುಲೈ 18 ರಂದು ನಾಳೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಭಾರತೀಯ ಯುವ ತಂಡ ಅಗ್ನಿಪರೀಕ್ಷೆಗೆ ಇಳಿಯಲಿದೆ. ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ ಹೀಗೆ ಪ್ರಮುಖ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್ ಧವನ್ (Shikhar Dhawan) ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತ ಲಂಕಾ ತಂಡದಲ್ಲಿ ಕೂಡ ಹೆಚ್ಚಿನ ಆಟಗಾರರು ಹೊಸಬರೇ ಆಗಿದ್ದಾರೆ.

ಭಾರತ ಪರ ಧವನ್, ಭುವನೇಶ್ವರ್ ಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಬಿಟ್ಟರೆ ಉಳಿದ ಬಹುತೇಕರು ಯುವ ಆಟಗಾರರೇ ಆಗಿದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾದ ಗೇಮ್ ಚೇಂಜರ್ ಯಾರಿರಬಹುದು ಎಂದು ಶ್ರೀಲಂಕಾ ತಂಡದ ಮಾಜಿ ಬ್ಯಾಟ್ಸ್​ಮನ್ ರಸೆಲ್ ಆರ್ನಾಲ್ಡ್ ಹೇಳಿದ್ದಾರೆ.

ಭಾರತ ತಂಡದಲ್ಲಿ ಶಿಖರ್ ಧವನ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಸ್ಟಾರ್ ಆಟಗಾರರಿದ್ದಾರೆ. ಆದರೆ, ಇವರನ್ನೂ ಮೀರಿಸಿ ಈ ಸರಣಿಯಲ್ಲಿ ಪೃಥ್ವಿ ಶಾ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಅವರ ಮೇಲೆ ಸಾಕಷ್ಟಟು ನಿರೀಕ್ಷೆಗಳಿವೆ ಎಂದು ರಸೆಲ್ ಹೇಳಿದ್ದಾರೆ.

“ಶ್ರೀಲಂಕಾ ತಂಡ ಈ ಬಾರಿ ಆವಿಶ್ಕಾ ಫೆರ್ನಾಂಡೊ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇತ್ತ ಭಾರತ ಪರ ಎಲ್ಲರೂ ಧವನ್ ಮತ್ತು ಹಾರ್ದಿಕ್ ಅವರ ಆಟದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾನು ಪೃಥ್ವಿ ಶಾ ಆಟವನ್ನು ಎದುರುನೋಡುತ್ತಿದ್ದೇನೆ. ಈ ಸರಣಿಯಲ್ಲಿ ಶಾ ಅವರು ಎಲ್ಲರನ್ನು ರಂಜಿಸಲಿದ್ದಾರೆಂದು ಅಂದುಕೊಂಡಿದ್ದೇನೆ. ಅವರೊಬ್ಬ ಗೇಮ್ ಚೇಂಜರ್ ಆಗುವುದು ಖಚಿತ” ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.

ಏಕದಿನ ಸರಣಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲೇ ಶಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಕಳೆದ ವಿಜಯ್ ಹಜಾರೆ ಟ್ರೋಫಿ, ಐಪಿಎಲ್ 2021 ರಿಂದ ಭರ್ಜರಿ ಫಾರ್ಮ್​ನಲ್ಲಿದ್ದಾರೆ.

ಇತ್ತೀಚೆಗಷ್ಟೆ ಶ್ರೀಲಂಕಾ ಕ್ರಿಕೆಟ್ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಭಾರತದ ಅಭ್ಯಾಸ ಪಂದ್ಯದ ವಿಡಿಯೋವನ್ನು ಹಂಚಿಕೊಂಡಿತ್ತು. ಇದರಲ್ಲಿ ಶಾ ಅವರು ಭುವನೇಶ್ವರ್ ಕುಮಾರ್, ಚಹಾಲ್, ಕುಲ್ದೀಪ್ ಅವರಂತಹ ಅನುಭವಿ ಬೌಲರ್​ಗಳ ಬೌಲಿಂಗ್​ಗೆ ಮನಬಂದಂತೆ ಬ್ಯಾಟ್ ಬೀಸಿದ್ದರು.

ಟೀಮ್ ಇಂಡಿಯಾ ಜುಲೈ 18 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ತಮ್ಮ ಶ್ರೀಲಂಕಾ ಪ್ರವಾಸವನ್ನು ಆರಂಭಿಸಲಿದೆ. ನಂತರ ಜುಲೈ 25 ರಿಂದ ಜುಲೈ 29 ರವರೆಗೆ ಮೂರು ಪಂದ್ಯಗಳ ಟಿ 20 ಸರಣಿಯನ್ನು ಆಡಲಿದೆ. ಏಕದಿನ ಮತ್ತು ಟಿ 20 ಐ ಸರಣಿಯ ಎಲ್ಲಾ ಪಂದ್ಯಗಳು ಪ್ರಸಿದ್ಧ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್

ಬರೋಬ್ಬರಿ 9 ಸಿಕ್ಸರ್: ರಾಜಸ್ಥಾನ್ ಆಟಗಾರನ ಸ್ಫೋಟಕ ಶತಕವೂ ಸಾಕಾಗಿಲ್ಲ ಪಾಕ್ ವಿರುದ್ಧ ಗೆಲ್ಲಲು

(Russel Arnold said the game-changers from india vs sri lanka series)