ಬರೋಬ್ಬರಿ 9 ಸಿಕ್ಸರ್: ರಾಜಸ್ಥಾನ್ ಆಟಗಾರನ ಸ್ಫೋಟಕ ಶತಕವೂ ಸಾಕಾಗಿಲ್ಲ ಪಾಕ್ ವಿರುದ್ಧ ಗೆಲ್ಲಲು
Liam Livingstone: ಲಿವಿಂಗ್ಸ್ಟನ್ಗೆ ಯಾವೊಬ್ಬ ಬ್ಯಾಟ್ಸ್ಮನ್ ಸಾಥ್ ನೀಡಲಿಲ್ಲ. ನಾಯಕ ಇಯಾನ್ ಮಾರ್ಗನ್ ಕೂಡ 16 ರನ್ಗೆ ಔಟ್ ಆದರು. ಆದರೂ ಪಾಕ್ ಬೌಲರ್ಗಳ ಬೆವರಿಳಿಸಿದ ಲಿವಿಂಗ್ಸ್ಟನ್ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್, 6 ಬೌಂಡರಿ ಸಿಡಿಸಿ 103 ರನ್ ಚಚ್ಚಿದರು.
ಇಂಗ್ಲೆಂಡ್ (England) ವಿರುದ್ಧದ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಹೀನಾಯ ಸೋಲು ಅನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಪಾಕಿಸ್ತಾನ (Pakistan) ತಂಡ ಮೊದಲ ಟಿ-20 ಪಂದ್ಯಗಳಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. ನಾಯಕ ಬಾಬರ್ ಅಜಾಂ (Babar Azam) ಅವರ ಅದ್ಭುತ ಬ್ಯಾಟಿಂಗ್ ಜೊತೆಗೆ ಶಾಹಿನ್ ಆಫ್ರಿದಿಯ ಸಮಯೋಚಿತ ಬೌಲಿಂಗ್ ನೆರವಿನಿಂದ ಪಾಕ್ ಮೊದಲ ಟಿ-20 ಪಂದ್ಯದಲ್ಲಿ 31 ರನ್ಗಳ ಜಯ ಸಾಧಿಸಿದೆ. ಇತ್ತ ಇಂಗ್ಲೆಂಗ್ ತಂಡದ ಪರ ಲ್ಯಾಮ್ ಲಿವಿಂಗ್ಸ್ಟನ್ (Liam Livingstone) ಸ್ಫೋಟಕ ಶತಕ ಸಿಡಿಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ.
ಪಾಕಿಸ್ತಾನ ನೀಡಿದ್ದ ಬರೋಬ್ಬರಿ 233 ರನ್ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಧದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಡೇವಿಡ್ ಮಲನ್ 1, ಜೇಸನ್ ರಾಯ್ 32, ಜಾನಿ ಬೈರ್ಸ್ಟೊ 11, ಮೊಯೀನ್ ಅಲಿ 1 ಹೀಗೆ ಪ್ರಮುಖ ಬ್ಯಾಟ್ಸ್ಮನ್ಗಳೇ ಪೆವಿಲಿಯನ್ ಸೇರಿಕೊಂಡರು. ಹೀಗೆ ಒಂದುಕಡೆ ವಿಕೆಟ್ ಉರುಳುತ್ತಿದ್ದರೆ ಇತ್ತ ಐಪಿಎಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದ ಲ್ಯಾಮ್ ಲಿವಿಂಗ್ಸ್ಟನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವಿಗೆ ಹೋರಾಟ ನಡೆಸುತ್ತಿದ್ದರು.
That was something else…@liaml4893, take a bow ?
Scorecard/clips: https://t.co/pmRWQnkYRg
??????? #ENGvPAK ?? @IGcom pic.twitter.com/Irkr9V8Qnz
— England Cricket (@englandcricket) July 16, 2021
ಆದರೆ ಲಿವಿಂಗ್ಸ್ಟನ್ಗೆ ಯಾವೊಬ್ಬ ಬ್ಯಾಟ್ಸ್ಮನ್ ಸಾಥ್ ನೀಡಲಿಲ್ಲ. ನಾಯಕ ಇಯಾನ್ ಮಾರ್ಗನ್ ಕೂಡ 16 ರನ್ಗೆ ಔಟ್ ಆದರೆ, ಲೆವಿಸ್ ಗ್ರೆಗರಿ 10 ರನ್ಗೆ ಸುಸ್ತಾದರು. ಆದರೂ ಪಾಕ್ ಬೌಲರ್ಗಳ ಬೆವರಿಳಿಸಿದ ಲಿವಿಂಗ್ಸ್ಟನ್ ಕೇವಲ 43 ಎಸೆತಗಳಲ್ಲಿ ಬರೋಬ್ಬರಿ 9 ಸಿಕ್ಸರ್, 6 ಬೌಂಡರಿ ಸಿಡಿಸಿ 103 ರನ್ ಚಚ್ಚಿದರು. ಇಂಗ್ಲೆಂಡ್ 19.2 ಓವರ್ನಲ್ಲಿ 201 ರನ್ಗೆ ಆಲೌಟ್ ಆಗುವ ಮೂಲಕ ಸೋಲುಕಂಡಿತು. ಪಾಕ್ ಪರ ಶಾಹಿನ್ ಅಫ್ರಿದಿ ಮತ್ತು ಶದಾಬ್ ಖಾನ್ ತಲಾ 3 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ಆರಂಭದಲ್ಲೇ ಸ್ಫೋಟಕ ಆಟ ಶುರುಮಾಡಿತು. ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಂ ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದರು. ಮೊದಲ ವಿಕೆಟ್ಗೇ ಈ ಜೋಡಿ 150 ರನ್ಗಳ ಕಾಣಿಕೆ ನೀಡಿತು.
ರಿಜ್ವಾನ್ 41 ಎಸೆತಗಳಲ್ಲಿ 63 ರನ್ ಬಾರಿಸಿದರೆ, ಬಾಬರ್ 49 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿ 85 ರನ್ ಗಳಿಸಿದರು. ಫಖರ್ ಜಮಾನ್ 26 ಮತ್ತು ಹಫೀಜ್ 24 ರನ್ ಗಳಿಸಿ 20 ಓವರ್ನಲ್ಲಿ ತಂಡದ ಮೊತ್ತವನ್ನು 232 ರನ್ಗೆ ತಂದಿಟ್ಟು ಎದುರಾಳಿಗೆ ಕಠಿಣ ಸವಾಲು ನೀಡಿದರು.
ಪಾಕಿಸ್ತಾನ 31 ರನ್ಗಳ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ-20 ಪಂದ್ಯ ಜುಲೈ 18 ರಂದು ಭಾನುವಾರ ನಡೆಯಲಿದೆ.
IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್
(Liam Livingstone 42-ball hundred not enough as England fail to reach Pakistan target)
Published On - 7:53 am, Sat, 17 July 21