IND vs SL: ಭಾರತ- ಶ್ರೀಲಂಕಾ ನಡುವಿನ ಸರಣಿಯನ್ನು ಫೇಸ್‌ಬುಕ್‌ನಲ್ಲೂ ವೀಕ್ಷಿಸಬಹುದು! ಹೇಗೆ ಗೊತ್ತಾ?

IND vs SL: ಪಂದ್ಯದ ಮುಖ್ಯಾಂಶಗಳು ಹಾಗೂ ಅತ್ಯುತ್ತಮ ವಿಕೆಟ್‌ಗಳು, ಅತ್ಯುತ್ತಮ ಕ್ಯಾಚ್‌ಗಳು, ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ಫೇಸ್‌ಬುಕ್ ವಾಚ್ ಮೂಲಕ ನೋಡಬಹುದು.

IND vs SL: ಭಾರತ- ಶ್ರೀಲಂಕಾ ನಡುವಿನ ಸರಣಿಯನ್ನು ಫೇಸ್‌ಬುಕ್‌ನಲ್ಲೂ ವೀಕ್ಷಿಸಬಹುದು! ಹೇಗೆ ಗೊತ್ತಾ?
ಟೀಂ ಇಂಡಿಯಾ
Follow us
TV9 Web
| Updated By: preethi shettigar

Updated on: Jul 17, 2021 | 8:02 AM

ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿ (ಏಕದಿನ, ಟಿ 20) ಜುಲೈ 18 ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ ಶ್ರೀಲಂಕಾದ ಸಿಬ್ಬಂದಿಗೆ ತಗಲಿದ ಕೊರೊನಾ ಸೋಂಕಿನಿಂದಾಗಿ ಏಕದಿನ ಸರಣಿ ಸ್ವಲ್ಪ ತಡವಾಗಿ ಪ್ರಾರಂಭವಾಗಲಿದೆ. ಏಕದಿನ ಸರಣಿಯು ಜುಲೈ 12 ರಿಂದ ಪ್ರಾರಂಭವಾಗಲಿದೆ. ತೀರಾ ಇತ್ತೀಚೆಗೆ, ಸೋನಿ ಚಾನೆಲ್ ಸರಣಿಯ ನೇರ ಪ್ರಸಾರವನ್ನು ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಆದರೆ, ಸೋನಿ ಚಾನೆಲ್ ಈ ನಿಟ್ಟಿನಲ್ಲಿ ಫೇಸ್‌ಬುಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಫಲವಾಗಿ ಶ್ರೀಲಂಕಾ ಸರಣಿಗೆ ಸಂಬಂಧಿಸಿದ ಮುಖ್ಯಾಂಶಗಳು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಲು ಫೇಸ್‌ಬುಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಭಾರತ ಘೋಷಿಸಿದೆ. ಮೂರು ಏಕದಿನ ಮತ್ತು ಮೂರು ಟಿ 20 ಗಳ ಮುಖ್ಯಾಂಶಗಳು ಮತ್ತು ವೀಡಿಯೊಗಳನ್ನು ಫೇಸ್‌ಬುಕ್ ವಾಚ್ ಮೂಲಕ ವೀಕ್ಷಿಸಬಹುದು ಎಂದು ಸೋನಿ ಚಾನೆಲ್ ತಿಳಿಸಿದೆ.

ಸಾರ್ವಜನಿಕರಿಗೆ ಹತ್ತಿರವಾಗುವುದಾಗಿ ಫೇಸ್‌ಬುಕ್ ಹೇಳಿಕೊಂಡಿದೆ ಈ ಒಪ್ಪಂದದೊಂದಿಗೆ ಸಾಮಾಜಿಕ ವೀಡಿಯೊಗಳಲ್ಲಿ ತನ್ನ ಪಾಲನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಫೇಸ್‌ಬುಕ್ ಬಹಿರಂಗಪಡಿಸಿದೆ. ಫೇಸ್‌ಬುಕ್ ವಾಚ್ ಪ್ರಸ್ತುತ ಮೊಬೈಲ್, ಡೆಸ್ಕ್‌ಟಾಪ್ ಮತ್ತು ಫೇಸ್‌ಬುಕ್ ಟಿವಿ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದೆ. ಪಂದ್ಯದ ಮುಖ್ಯಾಂಶಗಳು ಹಾಗೂ ಅತ್ಯುತ್ತಮ ವಿಕೆಟ್‌ಗಳು, ಅತ್ಯುತ್ತಮ ಕ್ಯಾಚ್‌ಗಳು, ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ಫೇಸ್‌ಬುಕ್ ವಾಚ್ ಮೂಲಕ ನೋಡಬಹುದು. ಈ ವಿಷಯದೊಂದಿಗೆ ಸಾರ್ವಜನಿಕರಿಗೆ ಹತ್ತಿರವಾಗುವುದಾಗಿ ಫೇಸ್‌ಬುಕ್ ಹೇಳಿಕೊಂಡಿದೆ. ಶಿಖರ್ ಧವನ್ ನೇತೃತ್ವದ ಯಂಗ್ ಟೀಮ್ ಇಂಡಿಯಾ ಜುಲೈ 18 ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಮುಂದಿನ ಟಿ 20 ಸರಣಿ ಜುಲೈ 25 ರಿಂದ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶ್ರೀಲಂಕಾದಲ್ಲಿ 61 ಪಂದ್ಯಗಳನ್ನು ಆಡಿದೆ ಜುಲೈ 28, 2012 ರಿಂದ ಭಾರತ ಶ್ರೀಲಂಕಾದಲ್ಲಿ ಒಂದು ಏಕದಿನ ಪಂದ್ಯವನ್ನು ಕಳೆದುಕೊಂಡಿಲ್ಲ. ಶ್ರೀಲಂಕಾದಲ್ಲಿ ಸತತ 8 ಏಕದಿನ ಪಂದ್ಯಗಳ ಗೆಲುವಿನ ಹಾದಿಯನ್ನು ಟೀಮ್ ಇಂಡಿಯಾ ಮುಂದುವರಿಸಿದೆ. ಶ್ರೀಲಂಕಾದಲ್ಲಿ ಸತತ ಇಷ್ಟೊಂದು ಏಕದಿನ ಪಂದ್ಯಗಳನ್ನು ಬೇರೆ ಯಾವ ಸಂದರ್ಶಕ ತಂಡವೂ ಗೆದ್ದಿಲ್ಲ. 2017 ರಲ್ಲಿ ಟೀಮ್ ಇಂಡಿಯಾ ಶ್ರೀಲಂಕಾವನ್ನು 5-0 ಅಂತರದಿಂದ ಸೋಲಿಸಿತು. ಧವನ್ ಯುವ ತಂಡವನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಅವರಂತಹ ಆಟಗಾರರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಇದುವರೆಗೆ ಟೀಮ್ ಇಂಡಿಯಾ ಶ್ರೀಲಂಕಾದಲ್ಲಿ 61 ಪಂದ್ಯಗಳನ್ನು ಆಡಿದೆ. ಇದರಲ್ಲಿ 28 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 27 ಪಂದ್ಯಗಳಲ್ಲಿ ಸೋತಿದ್ದಾರೆ. ಅಲ್ಲದೆ, 6 ಪಂದ್ಯಗಳಲ್ಲಿ ಫಲಿತಾಂಶ ತಿಳಿದಿಲ್ಲ. ಶ್ರೀಲಂಕಾದಲ್ಲಿ ಇದುವರೆಗೆ ಹೆಚ್ಚಿನ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಭಾರತ ಹೊಂದಿದೆ. ಬೇರೆ ಯಾವ ತಂಡವೂ ಇಷ್ಟು ಪಂದ್ಯಗಳನ್ನು ಗೆದ್ದಿಲ್ಲ.

ಇದನ್ನೂ ಓದಿ: IND vs SL: ನಾನು ಎಲ್ಲ ಮಾದರಿಯ ಕ್ರಿಕೆಟ್​ಗೆ ರೆಡಿ ಎಂದ ಟೀಮ್ ಇಂಡಿಯಾದ ಸ್ಟಾರ್ ಬೌಲರ್

ಕ್ವಾರಂಟೀನ್ ನಿಯಮಗಳನ್ನು ಬದಲಿಸದಿದ್ದರೆ ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುವುದು ಕಷ್ಟವಾಗುತ್ತದೆ: ಮೈಕೆಲ್ ವಾನ್