India vs England: ಇಂಗ್ಲೆಂಡ್​ ವಿರುದ್ಧದ ಎರಡನೇ T20ಗೂ ಮೊದಲು ಟೀಂ ಇಂಡಿಯಾದಲ್ಲಿ ಮೇಜರ್​ ಸರ್ಜರಿ?

India vs England: ಮೊದಲ ಟಿ20ಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲಲು ಆರಂಭಿಕರ ವಿಫಲತೆಯೇ ಪ್ರಮುಖ ಕಾರಣ ಎನ್ನಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾದ ಹಿಟ್‌ಮ್ಯಾನ್ ಎರಡನೇ ಟಿ20 ಪಂದ್ಯಕ್ಕೆ ಪುನರಾಗಮನವನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

India vs England: ಇಂಗ್ಲೆಂಡ್​ ವಿರುದ್ಧದ ಎರಡನೇ T20ಗೂ ಮೊದಲು ಟೀಂ ಇಂಡಿಯಾದಲ್ಲಿ ಮೇಜರ್​ ಸರ್ಜರಿ?
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Mar 14, 2021 | 4:29 PM

ಅಹಮದಬಾದ್​:ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟಿ20 ಸರಣಿಯ ಎರಡನೇ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳ ತಯಾರಿ ಜೋರಾಗಿ ಸಾಗಿದೆ. ಭಾರತ ಸೇಡು ತೀರಿಸಿಕೊಳ್ಳೋಕೆ ಪ್ರಯತ್ನಿಸಿದರೆ, ಇಂಗ್ಲೆಂಡ್ ತನ್ನ ಮುನ್ನಡೆ ಹೆಚ್ಚಿಸಲು ಹವಣಿಸುತ್ತಿದೆ. ಮೊದಲ ಟಿ20 ಯ ಸೋಲಿನ ನಂತರ, ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದವು. ಅಭಿಮಾನಿಗಳು ಮತ್ತು ವಿಮರ್ಶಕರ ಪ್ರಶ್ನೆಗಳು ನಾಯಕ ವಿರಾಟ್ ಕೊಹ್ಲಿಯನ್ನು ಇನ್ನಿಲ್ಲದಂತೆ ಕಾಡಿದವು. ಇಂತಹ ಪರಿಸ್ಥಿತಿಯಲ್ಲಿ, ಎರಡನೇ ಟಿ20 ಯಲ್ಲಿ ಭಾರತೀಯ ತಂಡದ ಆಡುವ ಹನ್ನೊಂದರ ಬಳಗ ಸ್ವಲ್ಪ ಬದಲಾಗುವ ಸಾಧ್ಯತೆಗಳಿವೆ.

ಆಡುವ ಇಲೆವೆನ್‌ನಲ್ಲಿ ದೊಡ್ಡ ಬದಲಾವಣೆ? ರೋಹಿತ್ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ಎರಡನೇ ಟಿ20 ಪಂದ್ಯದಲ್ಲಿ ಭಾರತ ಆಡುವ ಇಲೆವೆನ್‌ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಬಹುದು. ಸಹಜವಾಗಿ, ಮೊದಲ ಟಿ20 ಪಂದ್ಯದ ಟಾಸ್ ಸಮಯದಲ್ಲಿ ಮೊದಲ ಎರಡು ಪಂದ್ಯಗಳಿಂದ ರೋಹಿತ್​ ಹೊರಗುಳಿಯಲ್ಲಿದ್ದಾರೆ ಎಂದು ವಿರಾಟ್ ಹೇಳಿದ್ದರು. ಆದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ.

ಮೊದಲ ಟಿ20ಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲಲು ಆರಂಭಿಕರ ವಿಫಲತೆಯೇ ಪ್ರಮುಖ ಕಾರಣ ಎನ್ನಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾದ ಹಿಟ್‌ಮ್ಯಾನ್ ಎರಡನೇ ಟಿ20 ಪಂದ್ಯಕ್ಕೆ ಪುನರಾಗಮನವನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಮೊದಲ ಟಿ20 ಪಂದ್ಯದಲ್ಲಿ 12 ಎಸೆತ ಎದುರಿಸಿದ ಶಿಖರ್ ಧವನ್ ಕೇವಲ 4 ರನ್ ಗಳಿಸಿದರು. ಹೀಗಾಗಿ ಫಾರ್ಮ್​ನಲ್ಲಿಲ್ಲದ ಶಿಖರ್ ಧವನ್ ಬದಲಿಗೆ ರೋಹಿತ್ ತಂಡದಲ್ಲಿ ಸ್ಥಾನ ಪಡೆಯಬಹುದು.

3 ಸ್ಪಿನ್ನರ್‌ಗಳಲ್ಲಿ ಒಬ್ಬರನ್ನು ತೆಗೆದುಹಾಕುವ ಗುಮಾನಿ? 3 ಸ್ಪಿನ್ನರ್‌ಗಳಲ್ಲಿ ಒಬ್ಬರನ್ನು ತೆಗೆದುಹಾಕುವ ಗುಮಾನಿ ಎದ್ದಿದೆ. ಮೊದಲ ಟಿ20 ಪಂದ್ಯದಲ್ಲಿ ಸ್ಪಿನ್ನರ್‌ಗಳು ಅಷ್ಟೇನೂ ಪರಿಣಾಮಕಾರಿ ಎನಿಸಲಿಲ್ಲ. ಹಾಗಾಗಿ ಒಬ್ಬ ಸ್ಪಿನ್ನರ್​ನನ್ನು ತಂಡದಿಂದ ಕೈಬಿಟ್ಟು ಮತ್ತೊಬ್ಬ ವೇಗದ ಬೌಲರ್​ ಆದ ದೀಪಕ್ ಚಹರ್ ಬೌಲಿಂಗ್​ ವಿಭಾಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಅಕ್ಷರ್ ಪಟೇಲ್ ಅಥವಾ ವಾಷಿಂಗ್ಟನ್ ಸುಂದರ್ ಇಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸಿ, ಒಬ್ಬರ ಬದಲಿಗೆ ದೀಪಕ್ ಚಹರ್ ಅವರನ್ನು ಮೈದಾನದಕ್ಕಿಳಿಸಲ್ಲಿದ್ದಾರೆ ಕೊಹ್ಲಿ.

ಬೇರೆ ಬದಲಾವಣೆಗಳಿಲ್ಲ! ಈ 2 ಬದಲಾವಣೆಗಳ ಹೊರತಾಗಿ, ಇತರ ಎಲ್ಲಾ ಸ್ಲಾಟ್‌ಗಳಲ್ಲಿ ಬದಲಾವಣೆಯ ವ್ಯಾಪ್ತಿಯು ನಗಣ್ಯ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಇಂದು ಸಂಜೆ 7 ರಿಂದ ನಡೆಯಲಿದೆ.

ಎರಡನೇ ಟಿ20 ಗಾಗಿ ಟೀಂ ಇಂಡಿಯಾ ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ / ಅಕ್ಷರ್ ಪಟೇಲ್, ದೀಪಕ್ ಚಹರ್, ಭುವನೇಶ್ವರ ಕುಮಾರ್, ಯುಜ್ವೇಂದ್ರ ಚಾಹಲ್, ಶಾರ್ದುಲ್ ಠಾಕೂರ್

ಇದನ್ನೂ ಓದಿ:India vs England: ಇಂದು 2ನೇ T20 ಪಂದ್ಯ, ಪುಟಿದೇಳುತ್ತಾ ಕೊಹ್ಲಿ ಪಡೆ.. ವೈಫಲ್ಯದಿಂದ ಹೊರಬರ್ತಾರಾ ಆರಂಭಿಕ ಬ್ಯಾಟ್ಸ್​ಮನ್​ಗಳು?

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?