AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಇಂದು 2ನೇ T20 ಪಂದ್ಯ, ಪುಟಿದೇಳುತ್ತಾ ಕೊಹ್ಲಿ ಪಡೆ.. ವೈಫಲ್ಯದಿಂದ ಹೊರಬರ್ತಾರಾ ಆರಂಭಿಕ ಬ್ಯಾಟ್ಸ್​ಮನ್​ಗಳು?

India vs England: ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಕೊರತೆಯನ್ನ ಅನುಭವಿಸ್ತಿರೋದು, ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವು ತಂದಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯುದ್ದಕ್ಕೂ ವಿರಾಟ್, ಬಿಗ್ ಇನ್ನಿಂಗ್ಸ್ ಕಟ್ಟೋದಕ್ಕೆ ಪರದಾಡ್ತಿದ್ದಾರೆ.

India vs England: ಇಂದು 2ನೇ T20 ಪಂದ್ಯ, ಪುಟಿದೇಳುತ್ತಾ ಕೊಹ್ಲಿ ಪಡೆ.. ವೈಫಲ್ಯದಿಂದ ಹೊರಬರ್ತಾರಾ ಆರಂಭಿಕ ಬ್ಯಾಟ್ಸ್​ಮನ್​ಗಳು?
ಇಂಗ್ಲೆಂಡ್​ - ಟೀಂ ಇಂಡಿಯಾ ಆಟಗಾರರು
Follow us
ಪೃಥ್ವಿಶಂಕರ
| Updated By: ರಾಜೇಶ್ ದುಗ್ಗುಮನೆ

Updated on: Mar 14, 2021 | 3:31 PM

ಅಹಮದಬಾದ್​: ಟೆಸ್ಟ್ ಸರಣಿ ಗೆದ್ದು ಉತ್ಸಾಹದಲ್ಲಿದ್ದ ಟೀಂ ಇಂಡಿಯಾಕ್ಕೆ, ಇಂಗ್ಲೆಂಡ್ ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲೇ ಸೋಲಿನ ಗುನ್ನಾ ಕೊಟ್ಟಿತ್ತು. ಇಂದು ನಡೆಯೋ ಎರಡನೇ ಪಂದ್ಯದಲ್ಲಿ ಸೋತ ಮೈದಾನದಲ್ಲೇ ತಿರುಗೇಟು ಕೊಡೋಕೆ ಬ್ಲೂಬಾಯ್ಸ್ ರೆಡಿಯಾಗಿದ್ದಾರೆ. ಮೊದಲ ಟಿ-ಟ್ವೆಂಟಿಯಲ್ಲಿ ಹೀನಾತಿ ಹೀನಾಯ ಸೋಲುಕಂಡಿರೋ, ಟೀಂ ಇಂಡಿಯಾ ಇಂದು ಎರಡನೇ ಪಂದ್ಯವನ್ನ ಆಡಲಿದೆ. ಸೋಲು ಕಂಡಿರೋ ಮೈದಾನದಲ್ಲಿ, ಆಂಗ್ಲರಿಗೆ ತಿರುಗೇಟು ಕೊಡೋಕೆ ಕೊಹ್ಲಿ ಪಡೆ ಭರ್ಜರಿ ತಯಾರಿಯನ್ನ ನಡೆಸ್ತಿದೆ.

ಸೇಡು ತೀರಿಸಿಕೊಳ್ಳೋಕೆ ಕೊಹ್ಲಿ ಪಡೆಯ ಕಾತರ! ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲ ಟಿಟ್ವೆಂಟಿಯಲ್ಲಿ ಟೀಂ ಇಂಡಿಯಾ, ಕೇವಲ 124ರನ್​ಗೆ ಆಲೌಟ್ ಆಗಿತ್ತು. ಭಾರಿ ಅಂತರದ ಸೋಲು ಕಂಡಿದ್ದ ಟೀಂ ಇಂಡಿಯಾ, ಭಾರಿ ಮುಖಭಂಗಕ್ಕೀಡಾಗಿತ್ತು. ಈ ಸೋಲಿನ ಸೇಡಿನ್ನ ತೀರಿಸಿಕೊಳ್ಳೋಕೆ ಸಜ್ಜಾಗಿರೋ ಕೊಹ್ಲಿ ಗ್ಯಾಂಗ್, ಮಾರ್ಗನ್ ಪಡೆಗೆ ಸೋಲಿನ ಮಾರ್ಮಘಾತ ನೀಡೋದಕ್ಕೆ ಬ್ಲೂಬಾಯ್ಸ್ ರೆಡಿಯಾಗಿದೆ.

ವೈಫಲ್ಯದಿಂದ ಹೊರಬರ್ತಾರಾ ಆರಂಭಿಕ ಬ್ಯಾಟ್ಸ್​ಮನ್​ಗಳು? ಮೊದಲ ಪಂದ್ಯದ ಸೋಲಿಗೆ ಮುಖ್ಯ ಕಾರಣವೇ, ಆರಂಭಿಕ ಬ್ಯಾಟ್ಸ್​ಮನ್​ಗಳು ಕೈಕೊಟ್ಟಿದ್ದು. ಶಿಖರ್ ಧವನ್, ಕೆ.ಎಲ್.ರಾಹುಲ್ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಒಂದಕ್ಕಿ ದಾಟದೇ ಪೆವಿಲಿಯನ್ ಸೇರಿದ್ರು. ಇಂದಿನ ಪಂದ್ಯದಲ್ಲೂ ಬ್ಲೂಬಾಯ್ಸ್ ಇದೇ ಮಿಸ್ಟೇಕ್ ಮಾಡಿದ್ರೆ, ಸೋಲು ಕಟ್ಟಿಟ್ಟಬುತ್ತಿ. ಆದ್ರಿಂದ, ಆರಂಭಿಕ ಬ್ಯಾಟ್ಸ್​ಮನ್​ಗಳು ಅತೀ ದೊಡ್ಡ ಮೈದಾನದಲ್ಲಿ ಎಚ್ಚರಿಕೆ ಆಟವಾಡಬೇಕಿದೆ.

ಇಂಗ್ಲೆಂಡ್ ಸರಣಿಯಲ್ಲಿ 3 ಬಾರಿ ವಿರಾಟ್ ಡಕೌಟ್! ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಕೊರತೆಯನ್ನ ಅನುಭವಿಸ್ತಿರೋದು, ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವು ತಂದಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯುದ್ದಕ್ಕೂ ವಿರಾಟ್, ಬಿಗ್ ಇನ್ನಿಂಗ್ಸ್ ಕಟ್ಟೋದಕ್ಕೆ ಪರದಾಡ್ತಿದ್ದಾರೆ. ಅಲ್ಲದೇ, ಇಂಗ್ಲೆಂಡ್ ವಿರುದ್ಧ ಒಟ್ಟು ಮೂರು ಬಾರಿ ವಿರಾಟ್ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದು ಸ್ವತಃ ಕೊಹ್ಲಿಯನ್ನೇ ಚಿಂತೆಗೀಡು ಮಾಡಿದೆ. ಹಾಗೇ ವಿರಾಟ್ ಫಾರ್ಮ್ ಕಂಡುಕೊಳ್ಳೋಕೆ ಪರದಾಡ್ತಿರೋ, ಇಂಗ್ಲೆಂಡ್ ಪ್ಲಸ್ ಪಾಯಿಂಟ್ ಆಗಿದೆ.

ಎರಡನೇ ಟಿ-ಟ್ವೆಂಟಿಗೆ ಎಂಟ್ರಿಕೊಡ್ತಾರಾ ರೋಹಿತ್? ಮೊದಲ ಟಿ-ಟ್ವೆಂಟಿಯಲ್ಲಿ ರೋಹಿತ್ ಶರ್ಮಾರನ್ನ ತಂಡದಿಂದ ಕೈಬಿಟ್ಟಿರೋ ಭಾರಿ ವಿವಾದಕ್ಕೆ ಕಾರಣವಾಗಿದೆ. ಫಾರ್ಮ್ನಲ್ಲಿದ್ದ ರೋಹಿತ್ರನ್ನ ಕೈಬಿಟ್ಟಿದ್ಯಾಕೆ ಅಂತ ಅಭಿಮಾನಿಗಳು ಸೇರಿದಂತೆ ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡ್ತಿದ್ದಾರೆ. ಹಿಟ್ಮ್ಯಾನ್ಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದ್ದ ಕೊಹ್ಲಿ, ಎರಡನೇ ಟಿ-ಟ್ವೆಂಟಿಗೆ ತಂಡದಲ್ಲಿ ಅವಕಾಶ ನೀಡ್ತಾರಾ ಅನ್ನೋದೇ ಕುತೂಹಲ ಮೂಡಿಸಿದೆ. ಇನ್ನೂಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರೋ ಸಾಧ್ಯತೆಯಿದೆ.

ಇನ್ನೂ ಮೊದಲ ಟಿ-ಟ್ವೆಂಟಿ ಭರ್ಜರಿ ಗೆಲುವು ಸಾಧಿಸಿರೋ ಮಾರ್ಗನ್ ಪಡೆ, ಇಂದಿನ ಪಂದ್ಯದಲ್ಲೂ ಕೊಹ್ಲಿಗೆ ಗುನ್ನಾ ಕೊಡೋ ವಿಶ್ವಾಸದಲ್ಲಿದೆ.. ಒಟ್ನಲ್ಲಿ ಸೂಪರ್ ಸಂಡೇ ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಬ್ಲೂಬಾಯ್ಸ್ ಗೆಲುವಿನ ಕೇಕೆ ಹಾಕ್ತಾರಾ ಅನ್ನೋದನ್ನ ಕಾದುನೋಡ್ಬೇಕಿದೆ.

ಇದನ್ನೂ ಓದಿ: India vs England: ಕನ್ನಡಿಗ ಕೆ.ಎಲ್​ ರಾಹುಲ್​ ಸೂಪರ್‌ಮ್ಯಾನ್ ಫೀಲ್ಡಿಂಗ್​ಗೆ ನೆಟ್ಟಿಗರಿಂದ ಶಹಬ್ಬಾಸ್​ಗಿರಿ.. ವಿಡಿಯೋ ನೋಡಿ!

ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ