AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England, 2nd Test, Day 1, LIVE Score: ಹಿಟ್​ಮ್ಯಾನ್ ರೋಹಿತ್ ಅಮೋಘ ಶತಕ, ಭಾರತ 300/6

India vs England 2nd Test Live Score: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ದಿನ ಓಪನರ್ ರೋಹಿತ್ ಶರ್ಮ ಬಾರಿಸಿದ ಅಮೋಘ ಶತಕ (161) ಭಾರತವನ್ನು ಅಪಾಯದಿಂದ ಮಾಡಿ ಗೌರವಯುತ ಮೊತ್ತ ಗಳಿಸಲು ನೆರವಾಗಿದೆ

India vs England, 2nd Test, Day 1, LIVE Score: ಹಿಟ್​ಮ್ಯಾನ್ ರೋಹಿತ್ ಅಮೋಘ ಶತಕ, ಭಾರತ 300/6
ರೋಹಿತ್ ಶರ್ಮಾ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Feb 15, 2021 | 3:53 PM

Share

ಚೆನೈ: ಆಂಗ್ಲರ ಶಿಸ್ತಿನ ದಾಳಿಯೆದುರು ನಿರ್ಭೀತ ಮತ್ತು ಲೀಲಾಜಾಲ ಬ್ಯಾಟಿಂಗ್ ಪ್ರದರ್ಶನ ನೀಡಿ ಹಿಟ್​ಮ್ಯಾನ್ ರೋಹಿತ್ ಶರ್ಮ ಬಾರಿಸಿದ ಆಧಿಕಾರಯುತ ಶತಕ ಭಾರತ ಮತ್ತು ಇಂಗ್ಲೆಂಡ್ ನಡುವೆ ಚೆನೈಯಲ್ಲಿ ಇಂದು ಶುರುವಾದ ಎರಡನೇ ಟೆಸ್ಟ್​ನ ಮೊದಲ ದಿನದಾಟದ ವೈಶಿಷ್ಟ್ಯತೆಯಾಗಿತ್ತು.

ವೇಗ ಮತ್ತು ಸ್ಪಿನ್ ದಾಳಿಗಳೆರಡನ್ನೂ ಅತ್ಯಂತ ಸಮರ್ಥವಾಗಿ ಎದುರಿಸಿ ಆಡಿದ ಶರ್ಮ ಟೆಸ್ಟ್​ ಕ್ರಿಕೆಟ್​​ನಲ್ಲಿ ತಮ್ಮ 7 ನೇ ಶತಕವನ್ನು ದಾಖಲಿಸಿದರು.

ಅವರ ಶತಕ 131 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್​ಗಳೊಂದಿಗೆ ಬಂದಿತು. ಅಂತಿಮವಾಗಿ ಶರ್ಮ 161 ರನ್ (18 ಬೌಂಡರಿ 2 ಸಿಕ್ಸರ್) ಗಳಿಸಿ ಜ್ಯಾಕ್ ಲೀಚ್​ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮುನ್ನ ಅವರು 4ನೇ ವಿಕೆಟ್​ಗೆ ಉಪನಾಯಕ ಅಜಿಂಕ್ಯಾ ರಹಾನೆ ಜೊತೆ 162 ರನ್ ಪೇರಿಸಿದರು. ರಹಾನೆ ಉಪಯುಕ್ತ 67 (9 ಬೌಂಡರಿ) ರನ್​ಗಳ ಕಾಣಿಕೆ ನೀಡಿದರು.

ರೋಹಿತ್ ಶರ್ಮ ಅವರ ಎಲ್ಲ 7 ಟೆಸ್ಟ್​ ಶತಕಗಳು ಭಾರತದಲ್ಲೇ ದಾಖಲಾಗಿವೆ.

212 ದಕ್ಷಿಣ ಆಫ್ರಿಕಾ ವಿರುದ್ಧ, ರಾಂಚಿಯಲ್ಲಿ 2019-29 177 ವೆಸ್ಟ್​ ಇಂಡೀಸ್ ವಿರುದ್ಧ ಕೊಲ್ಕತಾ 2013-14 176 ದಕ್ಷಿಣ ಆಪ್ರಿಕಾ ವಿರುದ್ಧ ವೈಜಾಗ್ 2019-20 127 ದಕ್ಷಿಣ ಆಫ್ರಿಕಾ ವಿರುದ್ಧ 2019-20 111 ವೆಸ್ಟ್​ ಇಂಡೀಸ್ ವಿರುದ್ಧ ಮುಂಬೈ 2013-14 102 ಶ್ರೀಲಂಕಾ ವಿರುದ್ಧ ನಾಗ್ಪುರ್ 2017-19 161 ಇಂಗ್ಲೆಂಡ್ ವಿರುದ್ಧ ಚೆನೈಯಲ್ಲಿ ಇಂದು (2021)

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಆರಂಭ ಕೆಟ್ಟದಾಗಿತ್ತು. ಶುಭ್ಮನ್ ಗಿಲ್ ಖಾತೆ ತೆರೆಯದೆ ಎರಡನೇ ಓವರಿನಲ್ಲಿ ಔಟಾದರು. ನಂತರ ರೋಹಿತ್, ಚೇತೇಶ್ವರ ಫೂಜಾರಾ ಒಂದಿಗೆ ಎರಡನೇ ವಿಕೆಟ್​ಗೆ 85 ರನ್ ಸೇರಿಸಿದರು. ಪೂಜಾರಾ 21 ರನ್ ಗಳಿಸಿ ಜ್ಯಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು.

ಭಾರತದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು, ಆದರೆ ಅವರು ಸೊನ್ನೆಗೆ ಔಟಾಗಿ ನಿರಾಶೆಗೊಳಿಸಿದರು. ಅವರನ್ನು ಆಫ್-ಸ್ಪಿನ್ನರ್ ಮೋಯಿನ್ ಅಲಿ ಔಟ್ ಮಾಡಿದರು.

ಕೊಹ್ಲಿ ಔಟಾದ ನಂತರ ಜೊತೆಗೂಡಿದ ರೋಹಿತ್ ಮತ್ತು ರಹಾನೆ ಅಮೋಘ ಹೊಂದಾಣಿಕೆಯ ಪ್ರದರ್ಶನ ನೀಡಿ 162 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಭಾರತವನ್ನು ಅಪಾಯದಿಂದ ಪಾರು ಮಾಡಿದರು.

ರಹಾನೆ ಔಟಾದ ನಂತರ ಕ್ರೀಸಿಗೆ ಬಂದ ಅಶ್ವಿನ್ ಬಹಳ ಹೊತ್ತು ನಿಲ್ಲದೆ 13 ರನ್ ಗಳಿಸಿ ಔಟಾದರು. ದಿನದಾಟ ಕೊನೆಗೊಂಡಾಗ 33 ರನ್ ಗಳಿಸಿದ ರಿಷಭ್ ಮತ್ತು 5 ರನ್ ಗಳಿಸಿರುವ ಅಕ್ಸರ್ ಪಟೇಲ್ ಆಡುತ್ತಿದ್ದರು.

ಪ್ರವಾಸಿಗರ ಪರ ಯಶಸ್ವೀ ಬೌಲರ್​ಗಳೆನಿಸಿದ ಮೋಯಿನ್ ಅಲಿ ಮತ್ತು ಜ್ಯಾಕ್ ಲೀಚ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್: 300/6 ( ರೋಹಿತ್ ಶರ್ಮ 161, ಅಜಿಂಕ್ಯಾ ರಹಾನೆ 67, ಚೇತೇಶ್ವರ್ ಪೂಜಾರಾ 21, ಪಂತ್ ಬ್ಯಾಟಿಂಗ್ 33, ಜ್ಯಾಕ್ ಲೀಚ್ 2/78 ಮತ್ತು ಮೋಯಿನ ಅಲಿ 2/112)

Published On - 5:37 pm, Sat, 13 February 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ