India vs New Zealand, WTC Final 2021, Day 4: ನಿಲ್ಲದ ಮಳೆ; ನಾಲ್ಕನೇ ದಿನದ ಆಟವೂ ರದ್ದು!

India vs New Zealand: ನಿನ್ನೆ (ಜೂನ್ 20) ಭಾರತ 217 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಆ ಬಳಿಕ, ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿತ್ತು.

India vs New Zealand, WTC Final 2021, Day 4: ನಿಲ್ಲದ ಮಳೆ; ನಾಲ್ಕನೇ ದಿನದ ಆಟವೂ ರದ್ದು!
4ನೇ ದಿನದಾಟಕ್ಕೆ ವರುಣನ ಅಡ್ಡಿ

| Edited By: ganapathi bhat

Jun 21, 2021 | 7:58 PM

ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟ ಕೂಡ ಮಳೆಯ ಕಾರಣದಿಂದ ಇಂದು ರದ್ದಾಗಿದೆ. ನಿನ್ನೆ (ಜೂನ್ 20) ಭಾರತ 217 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಆ ಬಳಿಕ, ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿತ್ತು. ಇಂದು ಒಂದು ಬಾಲ್ ಆಟ ಕೂಡ ನಡೆಯದ ಕಾರಣ ಮೂರನೇ ದಿನದಾಟದ ರನ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲ ದಿನದಾಟ ಮಳೆಯ ಕಾರಣದಿಂದ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಮೂರನೇ‌ ದಿನವಾದ ನಿನ್ನೆ ಮಳೆಯಿಂದ ಸ್ವಲ್ಪ ಅಡ್ಡಿಯಾದರೂ ಬಹುತೇಕ ಪೂರ್ತಿ ದಿನ ಪಂದ್ಯ ನಡೆದಿತ್ತು. ಹಾಗಾಗಿ, ಪಂದ್ಯದ ಎಲ್ಲಾ ನಿರೀಕ್ಷೆಗಳಿಗೂ ಮೀರಿ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನದ ಅಡ್ಡಿಯಿಲ್ಲದೆ, ಪಂದ್ಯ ನಡೆಯಲಿ ಎಂಬ ಆಶಯವೇ ಹೆಚ್ಚಾಗಿತ್ತು. ಆದರೆ, ದುರಾದೃಷ್ಟವಷಾತ್ ಇಂದು ಕೂಡ ಆಟ ನಡೆದಿಲ್ಲ.

ಪಂದ್ಯದ ಸಂಪೂರ್ಣ ಅಪ್ಡೇಟ್​ಗಳು ಈ ಕೆಳಗೆ ಲಭ್ಯವಿದೆ. ಓದಿರಿ..

LIVE NEWS & UPDATES

The liveblog has ended.
 • 21 Jun 2021 07:51 PM (IST)

  ನಾಲ್ಕನೇ ದಿನದಾಟ ಸ್ಥಗಿತ

  ನಿರಂತರ ಮಳೆಯ ಕಾರಣದಿಂದ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ನಾಲ್ಕನೇ ದಿನದಾಟವೂ ಸ್ಥಗಿತಗೊಂಡಿದೆ. ಮಳೆಯ ಕಾರಣದಿಂದ ಪಂದ್ಯದ ಆರಂಭವೇ ವಿಳಂಬವಾಗಿತ್ತು. ಆದರೂ ಸುಮಾರು 5 ಗಂಟೆಗಳ ಕಾಲ ಮಳೆಯ ಬಿಡುವಿಗೆ, ಆಟದ ಅವಕಾಶಕ್ಕೆ ಕಾಯಲಾಗಿತ್ತು. ಆದರೂ, ಹವಾಮಾನ ಸಹಕಾರ ನಿಡಿಲ್ಲ. ಹೀಗಾಗಿ ಇಂದಿನ ಆಟ ಸ್ಥಗಿತಗೊಳಿಸಲಾಗಿದೆ. ಇಂದು ಒಂದು ಬಾಲ್​ ಕೂಡ ಆಟ ಆಡದ ಕಾರಣ ತಂಡದ ಮೊತ್ತ ನಿನ್ನೆಯಷ್ಟೇ ಇವೆ. ಯಾವುದೇ ಬದಲಾವಣೆ ಇಲ್ಲ. ನ್ಯೂಜಿಲ್ಯಾಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಭಾರತಕ್ಕಿಂತ 116 ರನ್ ಹಿಂದಿದೆ.

 • 21 Jun 2021 06:13 PM (IST)

  ಆಟವಿಲ್ಲದೆ ಮೊದಲ ಸೆಷನ್ ಮುಕ್ತಾಯ

  ಸೌಥಾಂಪ್ಟನ್​ನಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಮಳೆ ಭಾರೀ ಸಮಸ್ಯೆ ತಂದೊಡ್ಡಿದೆ. ನಾಲ್ಕನೇ ದಿನವಾದ ಇಂದೂ ಕೂಡ ಹವಾಮಾನ ಆಟಕ್ಕೆ ಸೂಕ್ತವಾಗಿಲ್ಲ. ಮಳೆ ಸುರಿಯುತ್ತಿದೆ. ಹೀಗಾಗಿ, ಮೊದಲ ಸೆಷನ್​ ಆಟ ಆಡದೇ ಮುಕ್ತಾಯಗೊಂಡಿದೆ. ಊಟದ ವಿರಾಮದ ಬಳಿಕವೂ ಪಂದ್ಯ ಆರಂಭವಾಗಿಲ್ಲ. ಮಳೆ ಬಿಟ್ಟಿಲ್ಲವಾದ್ದರಿಂದ ಪಂದ್ಯ ಆರಂಭ ವಿಳಂಬವಾಗುತ್ತಲೇ ಇದೆ.

 • 21 Jun 2021 04:35 PM (IST)

  ಇನ್ನೂ ಆರಂಭವಾಗಿಲ್ಲ ಪಂದ್ಯ!

  ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಇನ್ನೂ ಕೂಡ ಆರಂಭವಾಗಿಲ್ಲ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಈಗ ಗಂಟೆ ನಾಲ್ಕು ಕಳೆದಿದೆ. ಮಳೆ ಇನ್ನೂ ಕಡಿಮೆಯಾದಂತಿಲ್ಲ. ಈ ದಿನ ಮಳೆ ತೊಂದರೆ ಕೊಡಬಹುದು ಎಂದು ಮೊದಲೇ ಹೇಳಲಾಗಿತ್ತು. ಮೊದಲ ದಿನದಿಂದಲೂ ಹವಾಮಾನ ಮ್ಯಾಚ್​ಗೆ ಅಡ್ಡಿಯಾಗುತ್ತಲೇ ಇತ್ತು. ಇಂದಿನ ದಿನ ಮುಂದೇನಾಗಲಿದೆ ಎಂದು ಕಾದುನೋಡಬೇಕಿದೆ. ನಿನ್ನೆಯ ದಿನದಾಟದ ಸಂಪೂರ್ಣ ಮಾಹಿತಿ ಇಲ್ಲಿದೆ. ನೋಡಬಹುದು: ಐಸಿಸಿ ವಿಶ್ವ ಟೆಸ್ಸ್ ಚಾಂಪಿಯನ್​ಶಿಪ್- ಮೂರನೇ ದಿನದಾಟದ ಸಂಪೂರ್ಣ ಮಾಹಿತಿ

 • 21 Jun 2021 03:27 PM (IST)

  ಸೌಥಾಂಪ್ಟನ್ ಹೀಗಿದೆ

  ಮಳೆಯಿಂದಾಗಿ ಸೌಥಾಂಪ್ಟನ್ ಮೈದಾನ ಸಪ್ಪೆಯಾಗಿ ಕಾಣುತ್ತಿದೆ. ಭಾರತ ಹಾಗೂ ನ್ಯೂಜಿಲ್ಯಾಂಡ್ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಕೇಳಬೇಕಿದ್ದ ಮೈದಾನ ಮಳೆಯಿಂದ ಮೌನವಾಗಿದೆ. ನಾಲ್ಕನೇ ದಿನದಾಟ ಹೇಗೆ ಸಾಗಲಿದೆ, ಮಳೆ ಬಿಡಬಹುದಾ ಎಂದು ಕಾದುನೋಡಬೇಕಿದೆ.

  ಐಸಿಸಿ ಟ್ವಿಟರ್ ಖಾತೆ ಹಂಚಿಕೊಂಡ ಸೌಥಾಂಪ್ಟನ್ ಮೈದಾನದ ಈ ಹೊತ್ತಿನ ಚಿತ್ರ..

 • 21 Jun 2021 03:24 PM (IST)

  ನಿನ್ನೆ ಮಿಂಚಿದ ಆಟಗಾರರು ಇವರು

  ಭಾರತ- ನ್ಯೂಜಿಲ್ಯಾಂಡ್ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟವಾದ ನಿನ್ನೆ ಭಾರತ 217 ರನ್​ಗೆ ಆಲ್​ಔಟ್ ಆಯಿತು. ಭಾರತದ ಪರವಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಉತ್ತಮ ಆಟವಾಡುವ ನಿರೀಕ್ಷೆ ಇತ್ತು. ಆದರೆ, ಇಬ್ಬರೂ ಕೂಡ ಅರ್ಧಶತಕ ಗಳಿಸುವ ಅಂಚಿನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ನ್ಯೂಜಿಲ್ಯಾಂಡ್ ಪರ ಬೌಲರ್ ಕೈಲ್ ಜಾಮಿಸನ್ 5 ವಿಕೆಟ್ ಪಡೆದು ಮಿಂಚಿದರು. ನಂತರ ನ್ಯೂಜಿಲ್ಯಾಂಡ್ ಬ್ಯಾಟ್ಸ್​ಮನ್ ಡೆವಾನ್ ಕಾನ್ವೆ 54 ರನ್ ಗಳಿಸಿ ಅರ್ಧಶತಕ ಪೂರೈಸಿ ಔಟ್ ಆದರು. ಇದೀಗ, ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.

  ಜಾಮಿಸನ್ ಆಟದ ರೋಚಕ ಕ್ಷಣಗಳು ಇಲ್ಲಿದೆ:

 • 21 Jun 2021 03:06 PM (IST)

  ನಿಲ್ಲದೆ ಮಳೆ; ಪಂದ್ಯ ಆರಂಭ ವಿಳಂಬ

  ನಾಲ್ಕನೇ ದಿನದಾಟಕ್ಕೂ ವರುಣ ಅವಕೃಪೆ ತೋರಿದ್ದಾನೆ. ಸೌಥಾಂಪ್ಟನ್​ನಲ್ಲಿ ಮಳೆ ನಿಂತಿಲ್ಲ. ಹಾಗಾಗಿ ಪಂದ್ಯ ಆರಂಭ ತಡವಾಗಿ ಆಗಲಿದೆ. ಇಂದಿನ ಹವಾಮಾನ ವರದಿ ಕೂಡ ಪಂದ್ಯ ಆಡಲು ಸೂಕ್ತ ವಾತಾವರಣ ಇರುವುದು ಅನುಮಾನ ಎಂದೇ ಹೇಳಿತ್ತು. ಮಳೆ ಬರುವ ನಿರೀಕ್ಷೆ ಇತ್ತು. ಅದರಂತೆ ಇಂದಿನ ಪಂದ್ಯಕ್ಕೆ ಈಗ ಮಳೆ ಅಡ್ಡಿಯಾಗಿದೆ. ಮಳೆ ಕಡಿಮೆ ಆಗುವುದನ್ನೇ ಆಟಗಾರರು ಕಾಯುತ್ತಿದ್ದಾರೆ. ಕಳೆದ ಮೂರು ದಿನದಲ್ಲಿ ಆಟಕ್ಕಿಂತ ಮಳೆಯೇ ಪ್ರಾಬಲ್ಯ ತೋರಿದೆ ಎಂಬಂತಾಗಿದೆ.

  ಒಂದು ಗಂಟೆಗೂ ಮೈದಾನ ಹೀಗಿತ್ತು:

 • 21 Jun 2021 03:01 PM (IST)

  ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ

  ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಂಪೂರ್ಣ ಲೈವ್ ಮಾಹಿತಿಗಳು ಇಲ್ಲಿ ನಿಮಗೆ ಲಭ್ಯವಿರುತ್ತದೆ. ಪಂದ್ಯದ ಕುತೂಹಲವನ್ನು ಅಕ್ಷರಗಳಲ್ಲಿ ನೀವು ಆಸ್ವಾದಿಸಬಹುದು. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ- ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿದಿದ್ದು. ಯಾರು ಗೆಲ್ಲುತ್ಥಾರೆ, ಪಂದ್ಯದಲ್ಲಿ ಏನೇನು ದಾಖಲೆ, ಬೆಳವಣಿಗೆಗಳು ಆಗುತ್ತವೆ ಎಂದು ಇಲ್ಲಿ ಮಾಹಿತಿ ಪಡೆಯಬಹುದು. ಟಿವಿ9 ಡಿಜಿಟಲ್​ನಲ್ಲಿ ಕ್ರಿಕೆಟ್​ಗಾಗಿ ವಿಶೇಷ ಪುಟ ತೆರೆಯಲಾಗಿದೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಹಲವು ವಿಶೇಷ ಮಾಹಿತಿಗಳನ್ನು ಓದಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ಟಿವಿ9 ಡಿಜಿಟಲ್- ಕ್ರಿಕೆಟ್

Published On - Jun 21,2021 7:55 PM

Follow us on

Most Read Stories

Click on your DTH Provider to Add TV9 Kannada