IND vs SL: ಇವರಿಬ್ಬರು ಕ್ರೀಸ್​ನಲ್ಲಿ ಇದ್ದಿದ್ದರೆ ಈ ಪಂದ್ಯ 15 ಓವರ್​ನಲ್ಲೇ ಮುಗಿಯುತ್ತಿತ್ತು ಎಂದು ಧವನ್

India vs Sri lanka 1st ODI: ಪಂದ್ಯ ಮುಗಿದ ಬಳಿಕ ಚೊಚ್ಚಲ ಬಾರಿಗೆ ಕ್ಯಾಪ್ಟನ್ ಪಟ್ಟತೊಟ್ಟ ನಾಯಕ ಧವನ್ ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

IND vs SL: ಇವರಿಬ್ಬರು ಕ್ರೀಸ್​ನಲ್ಲಿ ಇದ್ದಿದ್ದರೆ ಈ ಪಂದ್ಯ 15 ಓವರ್​ನಲ್ಲೇ ಮುಗಿಯುತ್ತಿತ್ತು ಎಂದು ಧವನ್
Dhawan
Follow us
TV9 Web
| Updated By: Vinay Bhat

Updated on: Jul 19, 2021 | 7:26 AM

ಕೊಲಂಬೊದಲ್ಲಿ ನಡೆದ ಶ್ರೀಲಂಕಾ (Sri lanka) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ (Shikhar Dhawan) ನೇತೃತ್ವದ ಟೀಮ್ ಇಂಡಿಯಾ (India) 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯಂಗ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯ ಮುಗಿದ ಬಳಿಕ ಚೊಚ್ಚಲ ಬಾರಿಗೆ ಕ್ಯಾಪ್ಟನ್ ಪಟ್ಟತೊಟ್ಟ ನಾಯಕ ಧವನ್ ಆಟಗಾರರ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

“ನಮ್ಮ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅನಾನುಭವಿಗಳು ಎಂಬುದನ್ನು ಎಲ್ಲೂ ತೋರ್ಪಡಿಸಿಲ್ಲ. ವಿಕೆಟ್ ಸ್ವಲ್ಪ ಟರ್ನ್ ಆಗುತ್ತದೆ ಎಂಬುದು ತಿಳಿದಿತ್ತು. 10 ಓವರ್​ಗಳ ಬಳಿಕ ನಮ್ಮ ಮೂವರೂ ಸ್ಪಿನ್ನರ್​ಗಳು ಸಿಕ್ಕ ಅವಕಾಶವನ್ನು ಸಂಪೂರ್ಣ ಉಪಯೋಗಿಸಿಕೊಂಡರು” ಎಂದು ಹೇಳಿದ್ದಾರೆ.

“ನಾವು ಬ್ಯಾಟಿಂಗ್ ಆರಂಭಿಸಿದಾಗ ಮತ್ತೊಂದು ಬದಿಯಿಂದ ನೋಡಲು ತುಂಬಾನೆ ಖುಷಿಯಾಗುತ್ತಿತ್ತು. ನಮ್ಮಲ್ಲಿ ಬಲಿಷ್ಠ ಬ್ಯಾಟಿಂಗ್ ಬಲವಿದೆ. ಐಪಿಎಲ್ ಆಡಿದ ಸಾಕಷ್ಟು ಅನುಭವ ಯುವ ಆಟಗಾರರಿಗಿದ್ದು, ನಂಬಿಕೆ ಉಳಿಸಿಕೊಳ್ಳುತ್ತಿದ್ದಾರೆ. ಪೃಥ್ವಿ ಶಾ ಮತ್ತು ಇಶಾನ್ ಕಿಶನ್​ಗೆ ಪಂದ್ಯವನ್ನು ಮುಗಿಸುವ ಜವಾಬ್ದಾರಿ ನೀಡಿದರೆ ಅವರು 15 ಓವರ್​ಗಳಲ್ಲೇ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದರು” ಎಂದು ಇಬ್ಬರ ಆಟವನ್ನು ಹೊಗಳಿದರು.

ಸಾಕಷ್ಟು ಕುತೂಹಲ ಕೆರಳಿಸಿದ್ದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿತು. ಆವಿಶ್ಕಾ ಫೆರ್ನಾಂಡೊ 33 ರನ್ ಗಳಿಸಿದರೆ, ಭನುಕಾ 27 ರಬ್​ಗ ಔಟ್ ಆದರು. ರಾಜಪಕ್ಷ 24, ಧನಂಜಯ ಡಿ ಸಿಲ್ವಾ 14, ಅಸಲಂಕಾ 38 ಮತ್ತು ನಾಯಕ ದಸನ್ ಶನಕ 39 ರನ್ ಬಾರಿಸಿ ದೊಡ್ಡ ಮೊತ್ತ ಕಲೆಹಾಕದೆ ನಿರ್ಗಮಿಸಿದರು.

ಕೊನೆಯಲ್ಲಿ ಕರುಣರತ್ನೆ 35 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದ ಪರಿಣಾಮ ತಂಡದ ಮೊತ್ತ 250ರ ಗಡಿ ದಾಟಿತು. ಲಂಕಾ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಬಾರಿಸಿತು. ಭಾರತ ಪರ ಚಹಾರ್, ಚಹಾಲ್, ಕುಲ್ದೀಪ್ ತಲಾ 2 ಮತ್ತು ಪಾಂಡ್ಯ ಬ್ರದರ್ಸ್ ತಲಾ 1 ವಿಕೆಟ್ ಕಿತ್ತರು.

263 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಪೃಥ್ವಿ ಶಾ ಸ್ಫೋಟಕ ಆರಂಭ ಒದಗಿಸಿದರು. ಕೇವಲ 24 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 43 ರನ್ ಚಚ್ಚಿದರು. ನಂತರ ಇಶಾನ್ ಕಿಶನ್ ಹಾಗೂ ನಾಯಕ ಧವನ್ ಅಮೋಘ ಇನ್ನಿಂಗ್ಸ್ ಕಟ್ಟಿದರು. ಶತಕದ ಜೊತೆಯಾಟ ಆಡಿದ ಈ ಜೋಡಿ ತಂಡದ ಗೆಲುವನ್ನು ಹತ್ತಿರ ಮಾಡಿತು.

ಕಿಶನ್ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಬಾರಿಸಿ 59 ರನ್ ಸಿಡಿಸಿದರೆ, ಧವನ್ 95 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು. ಮನೀಶ್ ಪಾಂಡೆ 26 ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 31 ರನ್ ಬಾರಿಸಿದರು. ಭಾರತ 36.4 ಓವರ್​​ನಲ್ಲೇ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಜಯ ಸಾಧಿಸಿತು.

IND vs SL: ಇಂಜುರಿ ನಡುವೆಯೂ ಅಬ್ಬರಿಸಿದ ಪೃಥ್ವಿ ಶಾ; ಲಂಕಾ ಬೌಲರ್​ಗಳಿಗೆ ಬೌಂಡರಿಗಳ ಉಡುಗೂರೆ ನೀಡಿದ ದ್ರಾವಿಡ್ ಶಿಷ್ಯ

ಬಟ್ಲರ್ ಅರ್ಧ ಶತಕ; ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಸರಣಿ ಸಮ ಮಾಡಿಕೊಂಡ ಇಂಗ್ಲೆಂಡ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್