ICC WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ವಿವರ

| Updated By: ganapathi bhat

Updated on: Jun 15, 2021 | 7:44 PM

ನ್ಯೂಜಿಲೆಂಡ್ ವಿರುದ್ಧ ಜೂನ್ 18ರಂದು ಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಫೈನಲ್ ಟೆಸ್ಟ್ ಪಂದ್ಯ ನಡೆಯಲಿದೆ. ತಂಡದಲ್ಲಿ ಸ್ಥಾನ ಗುಟ್ಟಿಸಿಕೊಂಡಿರುವ ಆಟಗಾರರ ವಿವರ ಇಲ್ಲಿದೆ.

ICC WTC Final: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೆ ಭಾರತ ತಂಡ ಪ್ರಕಟ; ತಂಡದಲ್ಲಿ ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ವಿವರ
ಟೀಂ ಇಂಡಿಯಾ
Follow us on

ದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಭಾರತ ತಂಡ ಪ್ರಕಟವಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 14 ಆಟಗಾರರ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಯಾವೆಲ್ಲಾ ಕ್ರಿಕೆಟಿಗರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ನ್ಯೂಜಿಲೆಂಡ್ ವಿರುದ್ಧ ಜೂನ್ 18ರಂದು ಫೈನಲ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಫೈನಲ್ ಟೆಸ್ಟ್ ಪಂದ್ಯ ನಡೆಯಲಿದೆ. ತಂಡದಲ್ಲಿ ಸ್ಥಾನ ಗುಟ್ಟಿಸಿಕೊಂಡಿರುವ ಆಟಗಾರರ ವಿವರ ಇಲ್ಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ
ಶುಭಮನ್ ಗಿಲ್
ಚೇತೇಶ್ವರ ಪೂಜಾರ
ವಿರಾಟ್ ಕೊಹ್ಲಿ (ನಾಯಕ)
ಅಜಿಂಕ್ಯಾ ರಹಾನೆ (ಉಪನಾಯಕ)
ಹನುಮ ವಿಹಾರಿ
ರಿಷಬ್ ಪಂತ್
ವೃದ್ಧಿಮಾನ್ ಸಹಾ
ಆರ್. ಅಶ್ವಿನ್
ರವೀಂದ್ರ ಜಡೇಜಾ
ಜಸ್ಪ್ರೀತ್ ಬೂಮ್ರಾ
ಇಶಾಂತ್ ಶರ್ಮಾ
ಮೊಹಮ್ಮದ್ ಶಮಿ
ಉಮೇಶ್ ಯಾದವ್
ಮೊಹಮ್ಮದ್ ಸಿರಾಜ್

ಈ ಮೊದಲು ತಂಡದ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತೋ ತಂಡವು ಅದಕ್ಕಿಂತ ಸಂಪೂರ್ಣ ಭಿನ್ನವಾಗೇನೂ ಪ್ರಕಟವಾಗಿಲ್ಲ. ಆದರೆ, ತಂಡದಲ್ಲಿ ಓಪನರ್​ಗಳಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಇದ್ದಿತ್ತು. ಅದಕ್ಕೀಗ ಉತ್ತರ ಲಭಿಸಿದೆ. ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ತಂಡದಲ್ಲಿ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಹಾಗೂ ಐಪಿಎಲ್​ನಲ್ಲಿ ಕಡಿಮೆ ರನ್​ಗಳಿಸಿದ್ದ ಶುಬ್​ಮನ್ ಗಿಲ್​ಗೆ ತಂಡದಲ್ಲಿ ಸ್ಥಾನ ಸಿಗುವ ಬಗ್ಗೆ ಅನುಮಾನಗಳಿದ್ದವು. ಬದಲಾಗಿ ಮಯಾಂಕ್ ಅಗರ್ವಾಲ್ ಸ್ಥಾನ ಪಡೆಯಬಹುದು ಎನ್ನಲಾಗಿತ್ತು. ಆದರೆ, ಆ ನಿರೀಕ್ಷೆಗಳು ಈಗ ಸುಳ್ಳಾಗಿವೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.

ಚೇತೇಶ್ವರ್ ಪೂಜಾರ ಒನ್ ಡೌನ್, ನಂತರ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ರಿಷಭ್ ಪಂತ್, ವೃದ್ಧಿಮಾನ್ ಸಹಾ ತಂಡದಲ್ಲಿದ್ದಾರೆ. ಆದರೆ, ಸಹಾ ಬಹುತೇಕ ಆಡಲು ಅವಕಾಶ ಪಡೆದುಕೊಳ್ಳುವುದು ಅನುಮಾನವಾಗಿದೆ.

ಬೌಲಿಂಗ್ ವಿಭಾಗದಲ್ಲಿ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರಿಗೂ ಸ್ಥಾನ ನೀಡಲಾಗಿದೆ. ಹನುಮ ವಿಹಾರಿ ಕೂಡ ತಂಡದಲ್ಲಿದ್ದಾರೆ. ಆದರೆ, ಅವರಿಗೂ ಪ್ಲೇಯಿಂಗ್ ಇಲೆವೆನ್ ಒಳಗೆ ಅವಕಾಶ ಸಿಗುತ್ತಾ ಎಂದು ನೋಡಬೇಕಿದೆ. ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮದ್ ಶಮಿ, ಉಮೇಶ್ ಯಾದವ್ ಹಾಗೂ ಮೊಹಮದ್ ಸಿರಾಜ್ ಈ ಆರು ಜನ ವೇಗಿಗಳು ತಂಡವನ್ನು ಬಲಿಷ್ಠವಾಗಿಸಲಿದ್ದಾರೆ. ಆದರೆ, ಇವರಲ್ಲಿ ಮೂವರು ಪ್ಲೇಯಿಂಗ್ ಇಲೆವೆನ್​ಗೆ ಸೇರಿಕೊಳ್ಳಬಹುದು.

ಇದನ್ನೂ ಓದಿ: ICC World Test Championship final: ಐತಿಹಾಸಿಕ ವಿಶ್ವ ಕ್ರಿಕೆಟ್​ ಟೆಸ್ಟ್​ ಫೈನಲ್​ ಪಂದ್ಯಕ್ಕೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ

WTC Final: ಡಬ್ಲ್ಯೂಟಿಸಿ ಫೈನಲ್​ಗೂ ಮುನ್ನ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಹತ್ತರ ಬದಲಾವಣೆಗೆ ಮುಂದಾದ ಐಸಿಸಿ!

Published On - 7:16 pm, Tue, 15 June 21