Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ

ಚಾಹಲ್, ಹಾರ್ದಿಕ್, ಶಿಖರ್‌ ಧವನ್​​ ಬಳಿಕ ಇದೀಗ ಟೀಮ್​​ ಇಂಡಿಯಾದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್​​ ಕೂಡ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇಶಾನಿ ಜೋಹರ್​​ರಿಂದ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಸುಮಾರು ಮೂರು ವರ್ಷದ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ.

Rahul Chahar divorce: ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟರ್​​ ಬಾಳಲ್ಲಿ ಬಿರುಕು; ವಿಚ್ಛೇದನ ಘೋಷಣೆ
ರಾಹುಲ್ ಚಾಹರ್, ಇಶಾನಿ
Image Credit source: timesnownews

Updated on: Feb 20, 2026 | 10:10 PM

ಬೆಂಗಳೂರು, ಫೆಬ್ರವರಿ 20: ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡದ ಸ್ಪಿನ್ನರ್ ರಾಹುಲ್ ಚಾಹರ್ (Rahul Chahar)​​ ಅವರು ತಮ್ಮ ಪತ್ನಿ ಇಶಾನಿ ಜೋಹರ್​​ರಿಂದ ವಿಚ್ಛೇದನ (divorce) ಪಡೆದಿದ್ದಾರೆ. ಈ ಬಗ್ಗೆ ಖುದ್ಧು ರಾಹುಲ್ ಚಾಹರ್​​ ಸೋಶಿಯಲ್ ​ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. ಆ ಮೂಲಕ ಮೂರು ವರ್ಷದ ದಾಂಪತ್ಯ ಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ.

2022ರ ಮಾರ್ಚ್​ 9ರಂದು ಗೋವಾದಲ್ಲಿ ಇಶಾನಿ ಜೋಹರ್​​ರೊಂದಿಗೆ ರಾಹುಲ್ ಚಾಹರ್​ ಮದುವೆಯಾಗಿದ್ದರು. ಆ ಮೂಲಕ ಸಿಎಸ್‌ಕೆ ಸ್ಟಾರ್ ತಮ್ಮ 22ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ 4ನೇ ವಾರ್ಷಿಕೋತ್ಸವಕ್ಕೂ ಮುನ್ನವೇ ವಿಚ್ಛೇದನ ಘೋಷಿಸಿದ್ದಾರೆ. 2021ರಲ್ಲಿ ಭಾರತ ತಂಡದ ಪರ ಕೊನೆಯ ಬಾರಿ ರಾಹುಲ್ ಚಾಹರ್​ ಪಂದ್ಯ ಆಡಿದ್ದರು.

ರಾಹುಲ್ ಚಾಹರ್ ಇನ್ಸ್ಟಾ ಪೋಸ್ಟ್‌


ಈ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್‌ ಹಂಚಿಕೊಂಡಿರುವ ಟೀಮ್ ಇಂಡಿಯಾ ಆಟಗಾರ ರಾಹುಲ್ ಚಾಹರ್, ‘ನಾನು ನನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು, ನನ್ನ ಮೌಲ್ಯವನ್ನು ಅರಿಯುವ ಮೊದಲು ಮತ್ತು ನಾನು ಬಯಸಿದ ಜೀವನ ತಿಳಿಯುವ ಮೊದಲೇ ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಂಡೆ’.

ಇದನ್ನೂ ಓದಿ: Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್​​ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು?

‘ಅದಾದ ಬಳಿಕ ನಾನು ನಿರೀಕ್ಷಿಸದ ಅನೇಕ ಪಾಠಗಳು ನನ್ನ ಬದುಕಿನಲ್ಲಿ ಎದುರಾದವು. ಕಳೆದ ಹದಿನೈದು ತಿಂಗಳು ನ್ಯಾಯಾಲಯದ ಕೋಣೆಗಳಲ್ಲಿ ಕಳೆದೆ. ಅಲ್ಲಿ ನಾನು ಸಹನೆ, ದೃಢತೆ ಮತ್ತು ಸತ್ಯದ ಶಕ್ತಿಯನ್ನು ಕಲಿತೆ. ಇಂದು ನನ್ನ ಜೀವನದ ಆ ಅಧ್ಯಾಯ ಅಧಿಕೃತವಾಗಿ ಮುಕ್ತಾಯಗೊಳ್ಳುತ್ತಿದೆ. ಸೂಕ್ತ ಕಾನೂನು ಪ್ರಕ್ರಿಯೆಯ ನಂತರ, ನನ್ನ ಜೀವನದ ಈ ಹಂತ ಅಂತ್ಯವಾಗಿದೆ’ ಎಂದರು.

‘ನಾನು ಈ ಅಧ್ಯಾಯವನ್ನು ಕೋಪದಿಂದಲೂ ಅಥವಾ ಪಶ್ಚಾತ್ತಾಪದಿಂದ ಕೊನೆಗೊಳಿಸುವುದಿಲ್ಲ, ಬದಲಾಗಿ ಸ್ಪಷ್ಟತೆಯೊಂದಿಗೆ ಅಂತ್ಯಗೊಳಿಸುತ್ತೇನೆ. ಕೆಲವು ಸಂಬಂಧಗಳು ಸದಾಕಾಲ ಇರಲು ಆಗಲ್ಲ, ಅವು ನಮ್ಮನ್ನು ಎಚ್ಚರಿಸಲು, ಪಾಠ ಕಲಿಸಲು ಮತ್ತು ಬದಲಾವಣೆಗೊಳಿಸಲು ಬರುತ್ತವೆ’ ಎಂದಿದ್ದಾರೆ.

ಇದನ್ನೂ ಓದಿ: IND vs SA: ಅಮ್ಮನಿಗೆ ಯಾರಿಗೆ ಸಪೋರ್ಟ್​ ಮಾಡ್ಬೇಕು ಎಂಬುದೇ ಗೊಂದಲ!

‘ಇದು ಅಂತ್ಯವಲ್ಲ. ಇದು ಮುಕ್ತಯ. ಒಂದು ಹೊಸ ಆರಂಭ. ಇಂದಿನಿಂದ ನನ್ನ ಪ್ರತಿಯೊಂದೂ ನಿರ್ಧಾರ ಸ್ವಾಭಿಮಾನ, ಶಾಂತಿ ಮತ್ತು ಉತ್ತಮ ಆಯ್ಕೆಗಳ ಮೇಲೆ ನಿಂತಿರುತ್ತದೆ ಎಂಬ ಭರವಸೆ ಇದೆ. ನಾನು ಮುಂದೆ ತೆಗೆದುಕೊಂಡು ಹೋಗುವುದು ಕೋಪವಲ್ಲ, ಕಲಿತ ಪಾಠ, ಗೌರವ ಮತ್ತು ಧೈರ್ಯ ಮಾತ್ರ’ ಎಂದು ರಾಹುಲ್ ಚಾಹರ್ ವಿಚ್ಛೇದನದ ವಿಚಾರ ಹಂಚಿಕೊಂಡಿದ್ದಾರೆ.

ಮತ್ತಷ್ಟ ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:26 pm, Fri, 20 February 26

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us