Indian Tigers & Tigresses: ಭಾರತೀಯ ಫುಟ್‌ಬಾಲ್‌ನಲ್ಲಿ ಹೊಸ ಯುಗ ಆರಂಭ..!

Indian Tigers & Tigresses: ಈ ಪ್ರತಿಭಾನ್ವೇಷಣೆಯು ಭಾರತದಾದ್ಯಂತ 50,000 ಶಾಲೆಗಳಿಂದ 2 ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಜುಲೈನಲ್ಲಿ ನಡೆಯಲಿರುವ ಫುಟ್ಬಾಲ್ ತರಬೇತಿ ಶಿಬಿರದಲ್ಲಿ ಈ ಈವೆಂಟ್​ ಮೂಲಕ ಆಯ್ಕೆಯಾದ ಟಾಪ್ 200 ಯುವಕರು ಪಾಲ್ಗೊಳ್ಳಲಿದ್ದಾರೆ.

Indian Tigers & Tigresses: ಭಾರತೀಯ ಫುಟ್‌ಬಾಲ್‌ನಲ್ಲಿ ಹೊಸ ಯುಗ ಆರಂಭ..!
ಫುಟ್ಬಾಲ್ ಪ್ರತಿಭೆಗಳ ಅನ್ವೇಷಣೆ
Follow us
|

Updated on:Apr 10, 2024 | 4:58 PM

ದೇಶದ ನಂಬರ್-1 ಸುದ್ದಿ ನೆಟ್‌ವರ್ಕ್ ಟಿವಿ9, ‘ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್’ (Indian Tigers & Tigresses) ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಯುವ ಫುಟ್‌ಬಾಲ್ (football) ಪ್ರತಿಭೆಗಳ ಹುಡುಕಾಟಕ್ಕಾಗಿ ಬೃಹತ್ ವೇದಿಕೆಯನ್ನು ಸಿದ್ದಪಡಿಸಿದೆ. ಈ ಈವೆಂಟ್ ಭಾರತದ 14 ವರ್ಷದೊಳಗಿನ ಫುಟ್ಬಾಲ್ ಪ್ರತಿಭೆಗಳಿಗೆ ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಅದರಂತೆ ಇಂದು ಅಂದರೆ ಏಪ್ರಿಲ್ 10ರ ಬುಧವಾರದಂದು ಟಿವಿ9 ಇಂಗ್ಲಿಷ್ ನ್ಯೂಸ್ ಬ್ರ್ಯಾಂಡ್ ನ್ಯೂಸ್ 9, ಅನೇಕ ಪ್ರಸಿದ್ಧ ಜರ್ಮನ್ ಫುಟ್ಬಾಲ್ ಆಟಗಾರರ ಉಪಸ್ಥಿತಿಯಲ್ಲಿ ಗ್ರೇಟರ್ ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಈವೆಂಟ್​ಗೆ ಅದ್ಧೂರಿ ಚಾಲನೆ ನೀಡಿದೆ.

ಟಿವಿ9 ನೆಟ್‌ವರ್ಕ್, ಪ್ರತಿಷ್ಠಿತ ಜರ್ಮನ್ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದರಿಂದ ಭಾರತದ ಯುವ ಫುಟ್ಬಾಲ್ ಆಟಗಾರರಿಗೆ ಉತ್ತಮ ಅವಕಾಶ ಸಿಗಲಿದ್ದು, ಭಾರತದ ಫುಟ್ಬಾಲ್ ಪ್ರತಿಭೆಯನ್ನು ಪ್ರದರ್ಶಿಸಲು ವಿಶ್ವ ದರ್ಜೆಯ ವೇದಿಕೆಯಾಗಿದೆ. ಈ ಕಾರ್ಯಕ್ರಮದಲ್ಲಿ 14 ವರ್ಷದೊಳಗಿನ ಯುವ ಫುಟ್ಬಾಲ್ ಆಟಗಾರರು ಸ್ಪರ್ಧಿಸಲಿದ್ದು, ಇದು ಭಾರತದಲ್ಲಿನ ಅತಿದೊಡ್ಡ ಫುಟ್ಬಾಲ್ ಪ್ರತಿಭಾ ಬೇಟೆಯಾಗಲಿದೆ.

ರಸ್ತೆ ಅಪಘಾತದಲ್ಲಿ ರಾಜ್ಯದ ಖ್ಯಾತ ಫುಟ್ಬಾಲ್ ಪಟು ಮೃತ್ಯು; ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ

ಯುವಕರ ಕನಸು ನನಸಾಗಲಿದೆ

ಇನ್ನು ಈ ಬಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್, ‘ನ್ಯೂಸ್ 9 ಆಯೋಜಿಸುತ್ತಿರುವ ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್ ಟ್ಯಾಲೆಂಟ್ ಹಂಟ್ ಈವೆಂಟ್ ಮೂಲಕ ಫುಟ್‌ಬಾಲ್ ಪ್ರತಿಭೆಗಳನ್ನು ಅನ್ವೇಷಿಸಲು ಮತ್ತು ಉತ್ತೇಜಿಸಲು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇದು ಭಾರತೀಯ ಫುಟ್ಬಾಲ್ ಅನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲ್ಲಿದ್ದು, ಭಾರತದ ಫುಟ್ಬಾಲ್ ಆಟಗಾರರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ. ಇದರಿಂದಾಗಿ ಯುವಜನರಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆಯನ್ನು ನೀಡುತ್ತದೆ ಮತ್ತು ಚಿಕ್ಕ ವಯಸ್ಸಿನಲ್ಲಿ ಅವರ ವೃತ್ತಿಜೀವನದ ಪ್ರಮುಖ ಪ್ರಗತಿಗೆ ಅವಕಾಶವನ್ನು ನೀಡುತ್ತದೆ. ಇದರಿಂದ ಪ್ರತಿಭಾವಂತ ಆಟಗಾರರಿಗೆ ಹೆಚ್ಚು ಅವಕಾಶಗಳು ಸಿಗಲಿವೆ ಎಂದರು.

ಏಪ್ರಿಲ್​ನಿಂದ ಜುಲೈವರೆಗೆ

ಈ ಟ್ಯಾಲೆಂಟ್ ಹಂಟ್ ಏಪ್ರಿಲ್​ನಿಂದ ಜುಲೈವರೆಗೆ ನಡೆಯಲಿದೆ. 20 ಕೋಟಿ ವೀಕ್ಷಕರನ್ನು ತಲುಪುವುದು ವಾಹಿನಿಯ ಉದ್ದೇಶವಾಗಿದ್ದು, ಈ ಈವೆಂಟ್​ ಅನ್ನು ಟಿವಿ 9 ಡಿಜಿಟಲ್‌ನಲ್ಲಿಯೂ ಪ್ರಸಾರ ಮಾಡಲಾಗುತ್ತದೆ. ಈ ಫ್ಲಾಟ್​ಫಾರ್ಮ್​ ಈಗಾಗಲೇ 100 ದಶಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು, ಯುಟ್ಯೂಬ್​ ಚಾನೆಲ್‌ಗಳು ಸೇರಿದಂತೆ ಟಿವಿ9 ವಾಹಿನಿಯ ಇತರ ಭಾಷಾ ವೇದಿಕೆಗಳಲ್ಲಿ ಇದನ್ನು ಹೋಸ್ಟ್ ಮಾಡಲಾಗುತ್ತದೆ.

ಫುಟ್ಬಾಲ್ ದಿಗ್ಗಜರ ಉಪಸ್ಥಿತಿ

ಈ ವಿಶೇಷ ಕಾರ್ಯಕ್ರಮದಲ್ಲಿ ಜರ್ಮನಿಯ ಫುಟ್ಬಾಲ್ ದಂತಕಥೆಗಳೂ ಭಾಗವಹಿಸಲಿದ್ದಾರೆ. ಜರ್ಮನ್ ಫುಟ್‌ಬಾಲ್ ಅಸೋಸಿಯೇಷನ್‌ ಅಂತರಾಷ್ಟ್ರೀಯ ಮಾಧ್ಯಮದ ಅಧ್ಯಕ್ಷರಾದ ಕೈ ಡ್ಯಾಮ್‌ಹೋಲ್ಜ್, ಬುಂಡೆಸ್ಲಿಗಾದಿಂದ ಪೀಟರ್ ಲೈಬಲ್, RIESPO ನ ಸಿಇಒ ಗೆರ್ಹಾರ್ಡ್ ರೀಡ್ಲ್, ಏಷ್ಯಾ ಮತ್ತು ಯುರೋಪ್‌ನಲ್ಲಿ ಮಹಿಳಾ ಫುಟ್‌ಬಾಲ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಜೂಲಿಯಾ ಫಾರ್, ಜರ್ಮನ್ ಇಂಟರ್‌ನ್ಯಾಶನಲ್ ಫುಟ್‌ಬಾಲ್ ಅಸೋಸಿಯೇಷನ್‌ನ ಡಾ. ಅನ್ಸೆಮ್ ಕುಚ್ಲಾ, ಸ್ಟ್ರೈಕರ್‌ಲ್ಯಾಬ್ಸ್ ಸಿಇಒ ಫಿಲಿಪ್ ಕ್ಲೋಕಲ್ ಮತ್ತು ವ್ಯಾಲೆಂಟಿನಾ ಪುಟ್ಜ್ ಈವೆಂಟ್‌ನಲ್ಲಿ ಭಾಗವಹಿಸಲಿದ್ದಾರೆ.

ಆಸ್ಟ್ರೀಯಾ- ಜರ್ಮನಿಗೆ ಪ್ರವಾಸ

ಈ ಪ್ರತಿಭಾನ್ವೇಷಣೆಯು ಭಾರತದಾದ್ಯಂತ 50,000 ಶಾಲೆಗಳಿಂದ 2 ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಜುಲೈನಲ್ಲಿ ನಡೆಯಲಿರುವ ಫುಟ್ಬಾಲ್ ತರಬೇತಿ ಶಿಬಿರದಲ್ಲಿ ಈ ಈವೆಂಟ್​ ಮೂಲಕ ಆಯ್ಕೆಯಾದ ಟಾಪ್ 200 ಯುವಕರು ಪಾಲ್ಗೊಳ್ಳಲಿದ್ದಾರೆ. ಶಿಬಿರದಿಂದ ಒಟ್ಟು 20 ಆಟಗಾರರು ಮತ್ತು 20 ಸ್ಟ್ಯಾಂಡ್‌ಬೈ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ. ಈ ಆಟಗಾರರು ಸೌಹಾರ್ದ ಪಂದ್ಯಗಳಲ್ಲಿ ಭಾಗವಹಿಸಲು ಅಂತರರಾಷ್ಟ್ರೀಯ ಮಾನ್ಯತೆಗಾಗಿ ಆಸ್ಟ್ರೀಯಾ ಮತ್ತು ಜರ್ಮನಿಗೆ ಪ್ರಯಾಣಿಸುತ್ತಾರೆ. 15 ದಿನಗಳವರೆಗೆ ಅಲ್ಲಿಯೇ ಇರುತ್ತಾರೆ. ಆ ಬಳಿಕ ಈ 40 ಯುವ ಪ್ರತಿಭೆಗಳನ್ನು 17 ಆಗಸ್ಟ್ 2024 ರಂದು ಜರ್ಮನ್ ಸೂಪರ್‌ಕಪ್ ಫೈನಲ್‌ನಲ್ಲಿ 65,000 ಅಭಿಮಾನಿಗಳ ಮುಂದೆ ಗೌರವಿಸಲಾಗುತ್ತದೆ. ಅಲ್ಲದೆ ಇವರು ಯುರೋಪಿಯನ್ ಕ್ಲಬ್‌ಗಳೊಂದಿಗೆ ಹಲವಾರು ಸೌಹಾರ್ದ ಪಂದ್ಯಗಳನ್ನು ಆಡುತ್ತಾರೆ ಮತ್ತು ಖ್ಯಾತ ಫುಟ್‌ಬಾಲ್ ಆಟಗಾರರನ್ನು ಭೇಟಿ ಮಾಡುವ ಅವಕಾಶವನ್ನು ಪಡೆಯುತ್ತಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Wed, 10 April 24

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್