IPL 20 ರೋಚಕ ಚುಟುಕು ಸುದ್ದಿಗಳು: ಕೊಹ್ಲಿಯೇ ಬೆಸ್ಟ್ ಬ್ಯಾಟ್ಸ್‌ಮನ್, ಹೀಗಂದಿದ್ದು ಯಾರು?
ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ.. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗುಣಗಾನ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದು, ಸ್ಮಿತ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದಾರೆ. ಕ್ವಾರಂಟೈನ್ ಮುಗಿಸಿದ ಕೇನ್ ಸನ್ರೈಸರ್ಸ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ 6 ದಿನಗಳ ಹೋಟೆಲ್ ಕ್ವಾರಂಟೈನ್ ಮುಗಿಸಿದ್ದಾರೆ. ಅಲ್ಲದೇ, ನಿನ್ನೆ ಪ್ರಾಕ್ಟೀಸ್ ಸೆಷನ್ಗೆ ಹಾಜರಾದ ಕೇನ್ ವಿಲಿಯಮ್ಸನ್, ಮುತ್ತಯ್ಯ ಮುರಳೀಧನ್ರಿಂದ ಕೋಚಿಂಗ್ ಪಡೆದ್ರು. A […]
ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ.. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗುಣಗಾನ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದು, ಸ್ಮಿತ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದಾರೆ.
ಕ್ವಾರಂಟೈನ್ ಮುಗಿಸಿದ ಕೇನ್ ಸನ್ರೈಸರ್ಸ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ 6 ದಿನಗಳ ಹೋಟೆಲ್ ಕ್ವಾರಂಟೈನ್ ಮುಗಿಸಿದ್ದಾರೆ. ಅಲ್ಲದೇ, ನಿನ್ನೆ ಪ್ರಾಕ್ಟೀಸ್ ಸೆಷನ್ಗೆ ಹಾಜರಾದ ಕೇನ್ ವಿಲಿಯಮ್ಸನ್, ಮುತ್ತಯ್ಯ ಮುರಳೀಧನ್ರಿಂದ ಕೋಚಿಂಗ್ ಪಡೆದ್ರು.
A blizzard in the desert ?
Find out how, #OrangeArmy ?#KeepRising #Dream11IPL #IPL2020 pic.twitter.com/uMIakS1m9b
— SunRisers Hyderabad (@SunRisers) September 10, 2020
ಹಿಂದಿಯಲ್ಲಿ ಮಾತನಾಡಿದ ಜಿಮ್ಮಿ ನ್ಯೂಜಿಲೆಂಡ್ ತಂಡದ ಆಲ್ರೌಂಡರ್ ಜಿಮ್ಮಿ ನಿಶಾಮ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಸೇರಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಮಾತನಾಡಿರೋ ಜಿಮ್ಮಿ ನಿಶಾಮ್, ನಾನು ಹಾಜರಾಗಿದ್ದೇನೆ ಎಂದು ಘೋಷಿಸಿದ್ದಾರೆ..
▶️ for surprise??#SaddaPunjab #Dream11IPL @JimmyNeesh https://t.co/9d94v6eadx pic.twitter.com/upUY9A7V3G
— Kings XI Punjab (@lionsdenkxip) September 9, 2020
ಪಾಂಡೆ ಪಡೆಗೆ ಗೆಲುವು ಇತ್ತೀಚೆಗೆ ನಡೆದ ಸನ್ರೈಸರ್ಸ್ ತಂಡದ ಅಭ್ಯಾಸ ಪಂದ್ಯದಲ್ಲಿ ಮನೀಷ್ ಪಾಂಡೆ ಪಡೆ 16 ರನ್ಗಳ ಗೆಲುವು ಸಾಧಿಸಿದೆ. ಮನೀಷ್ ಇಲೆವೆನ್ 6 ವಿಕೆಟ್ಗೆ 146 ರನ್ ಗಳಿಸಿದ್ರೆ, ಭುವನೇಶ್ವರ ಪಡೆ 8ವಿಕೆಟ್ಗೆ 131 ರನ್ ಗಳಿಸ್ತು.
ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸ ಪಂದ್ಯ ಐಪಿಎಲ್ ಸೀಸನ್ 13ಕ್ಕೆ ಸಖತ್ ತಯಾರಿ ನಡೆಸ್ತಿರೋ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಅಭ್ಯಾಸ ಪಂದ್ಯವಾಡಿದ್ರು. ಶಿಖರ್ ಧವನ್ ಇಲೆವೆನ್ ಹಾಗೂ ಶ್ರೇಯಸ್ ಐಯ್ಯರ್ ಇಲೆವೆನ್ ತಂಡಗಳ ನಡುವೆ ಪಂದ್ಯ ನಡೀತು
?️ Highlight Reel ?️
Big sixes, elegant boundaries, top deliveries, and swift fielding ??
?| Here's all the action from our intra-squad practice match.#Dream11IPL #YehHaiNayiDilli @SevensStadium pic.twitter.com/H54rFI6QXi
— Delhi Capitals (@DelhiCapitals) September 9, 2020
ಚೆನ್ನೈ ಪರ ಆಡೋದು ನನ್ನ ಕನಸು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದೇ ಅದೃಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡದಲ್ಲಿ ಆಡೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ.
ರಾಯಲ್ಸ್ ಹಿಟ್ಟರ್ಸ್! ಈ ಬಾರಿಯ ಐಪಿಎಲ್‌ನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ರಾಜಸ್ಥಾನ ರಾಯಲ್ಸ್ ಕೂಡ ಒಂದಾಗಿದ್ದು, ಭಾರಿ ತಯಾರಿಯನ್ನ ನಡೆಸ್ತಿದೆ. ತಂಡದ ಎಲ್ಲಾ ಆಟಗಾರರು ಪವರ್ ಹಿಟ್ಟರ್ ಅನ್ನೋ ವಿಡಿಯೋವನ್ನ ರಾಯಲ್ಸ್ ಶೇರ್ ಮಾಡಿದೆ.
ಡಿಕಾಕ್ ಸಮರಾಭ್ಯಾಸ ಮುಂಬೈ ಇಂಡಿಯನ್ಸ್ ತಂಡ ಡ್ಯಾಶಿಂಗ್ ಓಪನರ್ ಕ್ವಿಂಟೆನ್ ಡಿಕಾಕ್, ಭರ್ಜರಿ ತಯಾರಿಯನ್ನ ನಡೆಸ್ತಿದ್ದಾರೆ. ಅಬುಧಾಬಿ ಕ್ರೀಡಾಂಗಣದಲ್ಲಿ ಡಿಕಾಕ್, ರಾತ್ರಿ ಸೆಷನ್ ವೇಳೆ ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರು.
? Quinton de Kock looks in sizzling form ???#OneFamily #MumbaiIndians #MI #Dream11IPL @QuinnyDeKock69 pic.twitter.com/9veiSgOIMM
— Mumbai Indians (@mipaltan) September 10, 2020
ಆಫ್ರಿಕಾ ಕ್ರಿಕೆಟ್ ಮಂಡಳಿ ಅಮಾನತು ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ ಮಂಡಳಿ ಆಡಳಿತಕ್ಕೆ ಸಂಬಂಧಿಸಿದಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ಸರ್ಕಾರ ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಅಮಾನತು ಮಾಡಿ, ಕ್ರಿಕೆಟ್ ಮಂಡಳಿದ ಮೇಲೆ ಹಿಡಿತ ಸಾಧಿಸಿದೆ.
ಅಬುದಾಬಿಯಲ್ಲಿ ಸ್ಯಾನಿಟೈಸ್ ಯುಎಇನಲ್ಲಿ ಕೊರೊನಾ ಸುರಕ್ಷತೆಗಾಗಿ ಬಿಸಿಸಿಐ ಹಲವು ಮುನ್ನೆಚರಿಕೆ ಕ್ರಮಗಳನ್ನ ವಹಿಸ್ತಿದೆ. ಅಬುಧಾಬಿ ಕ್ರೀಡಾಂಗಣ.. ಡ್ರೆಸ್ಸಿಂಗ್ ರೂಮ್ ಮತ್ತು ನೆಟ್ಸ್ ಸೇರಿದಂತೆ ಪಿಚ್ನಲ್ಲಿ ಆಗಾಗ ಸೈನಿಟೈಸ್ ಮಾಡಲಾಗ್ತಿದೆ..
ಕೆಕೆಆರ್ಗೆ ಸಮಸ್ಯೆಯಿಲ್ಲ! ಇಂಗ್ಲೆಂಡ್ ಹಾಗೂ ಆಸಿಸ್ ಆಟಗಾರರು ಕೆಕೆಆರ್ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೆಕೆಆರ್ ತಂಡದ ಸಿಇಒ ಹೇಳಿದ್ದಾರೆ. ಸೆ.23ಕ್ಕೆ ಮೊದಲ ಪಂದ್ಯವಿದ್ದು, ಆಟಗಾರರು 6ದಿನ ಕ್ವಾರಂಟೈನ್ ಅವಧಿ ಮುಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸೀಸನ್ ಅದ್ಭುತವಾಗಿರಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತವಾಗಿರಲಿದೆ ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರೋ ಕನ್ನಡಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಇದರ ಜೊತೆಗೆ ಟೀಮ್ ಇಂಡಿಯಾದಲ್ಲಿ ಮತ್ತೆ ಅವಕಾಶ ಪಡೆಯೋ ವಿಶ್ವಾಸವನ್ನ ಉತ್ತಪ್ಪ ವ್ಯಕ್ತಪಡಿಸಿದ್ದಾರೆ.
ಡೆಲ್ಲಿ ಕಲರ್ಫುಲ್ ಫೋಟೋಶೂಟ್! ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಲರ್ಫುಲ್ ಫೋಟೋ ಸೆಷನ್ ನಡೆಸಿದೆ. ನಾಯಕ ಶ್ರೇಯಸ್ ಐಯ್ಯರ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡ, ಪೃಥ್ವಿ ಶಾ ಸೇರಿದಂತೆ ಕ್ಯಾಪಿಟಲ್ಸ್ ಆಟಗಾರರು ಕ್ಯಾಮರಾ ಲೆನ್ಸ್ ಮುಂದೆ ಡಿಫರೆಂಟ್ ಡಿಫರೆಂಟ್ ಪೋಸ್ಗಳನ್ನ ನೀಡಿದ್ರು.
ಮನೀಶ್ಗೆ ಬರ್ತ್ಡೇ ಸಂಭ್ರಮ ಸನ್ರೈಸರ್ಸ್ ಹೈದ್ರಾಬಾದ್ ತಂಡದಲ್ಲಿರೋ ಸ್ಟಾರ್ ಬ್ಯಾಟ್ಸ್‌ಮನ್ ಕನ್ನಡಿಗ ಮನೀಷ್ ಪಾಂಡೆ, 31ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಆಟಗಾರರು, ಕೇಕ್ ಕಟ್ ಮಾಡಿ ಮನೀಷ್ ಪಾಂಡೆ ಹುಟ್ಟುಹಬ್ಬನ್ನ ಆಚರಿಸಿ ಎಂಜಾಯ್ ಮಾಡಿದ್ರು.
ಆಟಗಾರರಿಗೆ ಕಾಡೋದಿಲ್ಲ ಕೊರೊನಾ! ಯುಎಇನಲ್ಲಿ ನಡೆಯಲಿರೊ ಐಪಿಎಲ್‌ನಲ್ಲಿ ಪಾಲ್ಗೊಂಡಿರುವ ಆಟಗಾರರ ಕಾರ್ಯಕ್ಷಮತೆ ಮೇಲೆ ಕೊರೊನಾ ಸೋಂಕು ಯಾವುದೇ ರೀತಿಯ ಪರಿಣಾಮ ಬೀರೊದಿಲ್ಲ ಎಂದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಹಾಗೇ ಆಟಗಾರರ ಕೊವಿಡ್ 19 ಸುರಕ್ಷತಾ ಕ್ರಮಗಳನ್ನ ಪಾಲಿಸುವಂತೆ ತಿಳಿಸಿದ್ದಾರೆ.
ಜೀವಾ ಕೈಯಲ್ಲಿ ಧೋನಿ ಸ್ಕೆಚ್ ತನ್ನ ತಂದೆಯ ಸ್ಕೆಚ್ ಹಿಡಿದುಕೊಂಡಿರುವ ಜೀವಾಗೆ, ಚಿತ್ರದಲ್ಲಿ ಇರುವುದು ಯಾರೆಂದು ಸಾಕ್ಷಿ ಕೇಳಿದಾಗ, ಇದು ಪಪ್ಪಾ ಎಂದಿದ್ದಾಳೆ. ಅದು ನಿನ್ನ ಅಪ್ಪ ಅನ್ನೋದು ಗ್ಯಾರಂಟಿಯಾ ಎಂದು ಸಾಕ್ಷಿ ಕೇಳಿದಾಗ ಪ್ರತಿಕ್ರಿಯಿಸಿದ ಜೀವಾ, ಮಹೇಂದ್ರ ಸಿಂಗ್ ಧೋನಿ ಎಂದಿದ್ದಾಳೆ.
ಬೂಮ್ರಾ ಯಾರ್ಕರ್ ಎಸೆಯಬೇಡ! ಮಹೇಂದ್ರ ಸಿಂಗ್ ಧೋನಿಗೆ ನಾನು ಯಾರ್ಕರ್ ಎಸೆಯುತ್ತೀನಿ ಅನ್ನೋ ನಂಬಿಕೆಯಿರಲಿಲ್ಲ. ಹೀಗಾಗಿ ನನಗೆ ಯಾರ್ಕರ್ ಎಸೆಯಬೇಡಿ ಎಂದಿದ್ರು ಅಂತಾ, ಜಸ್ಪ್ರೀತ್ ಬೂಮ್ರಾ ಹೇಳಿದ್ದಾರೆ. ಅಷ್ಟೇ ಅಲ್ಲ.. ಯಾರ್ಕರ್ ಎಸೆದ ಬಳಿಕ ಸ್ವತಃ ಧೋನಿಯೇ ಬೂಮ್ರಾರನ್ನ ಹಾಡಿ ಹೊಗಳಿದ್ರಂತೆ.
ಶಾರುಖ್ ಫುಲ್ ಖುಷ್! ಸಿಪಿಎಲ್ನಲ್ಲಿ ತನ್ನ ಮಾಲೀಕತ್ವ ಟಿಕೆಆರ್ ತಂಡ ಚಾಂಪಿಯನ್ ಆಗಿರೋದು ಶಾರುಖ್ ಖಾನ್ ಫುಲ್ ಖುಷ್ ಆಗಿದ್ದಾರೆ. ಹಾಗೆಯೇ ಸಿಪಿಎಲ್ನಂತೆ ಐಪಿಎಲ್ನಲ್ಲೂ ನಮ್ಮ ತಂಡ ಚಾಂಪಿಯನ್ ಆಗಲಿ ಅಂತ ಶಾರುಖ್ ಹೇಳಿದ್ದಾರೆ.
ಸ್ವೀಡನ್ಗೆ ಜಾಂಟಿ ಕೋಚ್ ಕಿಂಗ್ಸ್ ಇಲೆವೆನ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರೋ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಸ್ವೀಡನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಬಂಧ ಸ್ವೀಡನ್ ಕ್ರಿಕೆಟ್ ಒಕ್ಕೂಟದೊಂದಿಗೆ ಜಾಂಟಿ ಸಹಿ ಹಾಕಿದ್ದಾರೆ.