AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs KKR Predicted Playing 11: ಸನ್​ರೈಸರ್ಸ್​ಗೆ ನೈಟ್ ರೈಡರ್ಸ್ ಎದುರಾಳಿ; ಇಂದಿನ ಪಂದ್ಯದ ಸಂಭಾವ್ಯ ಆಟಗಾರರು ಇವರು

ಎರಡು ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿರುವ ಕೋಲ್ಕತ್ತಾ ತಂಡ, 2016ರ ಚಾಂಪಿಯನ್ಸ್ ಸನ್​ರೈಸರ್ಸ್ ತಂಡವನ್ನು ಎದುರಿಸಲಿದ್ದಾರೆ. ಇಂದಿನ ಪಂದ್ಯಾಟವು ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ.

SRH vs KKR Predicted Playing 11: ಸನ್​ರೈಸರ್ಸ್​ಗೆ ನೈಟ್ ರೈಡರ್ಸ್ ಎದುರಾಳಿ; ಇಂದಿನ ಪಂದ್ಯದ ಸಂಭಾವ್ಯ ಆಟಗಾರರು ಇವರು
ಸನ್​ರೈಸರ್ಸ್ ಹೈದರಾಬಾದ್ ವರ್ಸಸ್ ಕೋಲ್ಕತ್ತಾ ನೈಟ್ ರೈಡರ್ಸ್
TV9 Web
| Updated By: ganapathi bhat|

Updated on:Apr 05, 2022 | 12:41 PM

Share

ಐಪಿಎಲ್ 2021ರ ಮೂರನೇ ಪಂದ್ಯಾಟದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಡಲಿದ್ದಾರೆ. ಎರಡು ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿರುವ ಕೋಲ್ಕತ್ತಾ ತಂಡ, 2016ರ ಚಾಂಪಿಯನ್ಸ್ ಸನ್​ರೈಸರ್ಸ್ ತಂಡವನ್ನು ಎದುರಿಸಲಿದ್ದಾರೆ. ಇಂದಿನ ಪಂದ್ಯಾಟವು ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ.

ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸನ್​ರೈಸರ್ಸ್ ತಂಡ ಉತ್ತಮ ಆಟವನ್ನೇ ಆಡಿತ್ತು. ಸಂತುಲಿತ ತಂಡ, ತನ್ನ ಒಗ್ಗಟ್ಟಿನ ಪ್ರದರ್ಶನದ ಮೂಲಕ ಪ್ಲೇ ಆಫ್ ಹಂತವನ್ನುಪ್ರವೇಶಿಸಿತ್ತು. ಈ ವಿಶ್ವಾಸ ಸನ್​ರೈಸರ್ಸ್ ತಂಡಕ್ಕೆ ವರವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಟೀಂ ಸದೃಢವಾಗಿದೆ. ಡೇವಿಡ್ ವಾರ್ನರ್, ಕೇನ್ ವಿಲಿಯಮ್​ಸನ್, ನಟರಾಜನ್, ಭುವನೇಶ್ವರ್ ಕುಮಾರ್, ಮನೀಶ್ ಪಾಂಡೆ ಮುಂತಾದ ಆಟಗಾರರು ಪಂದ್ಯ ಗೆಲ್ಲುವ ಪ್ರದರ್ಶನ ನೀಡೇ ನೀಡುತ್ತಾರೆ ಎಂಬ ನಂಬಿಕೆ, ನಿರೀಕ್ಷೆಗಳನ್ನು ಅಭಿಮಾನಿಗಳು ಇರಿಸಿಕೊಂಡಿದ್ದಾರೆ.

ಮತ್ತೊಂದೆಡೆ, ಕೋಲ್ಕತ್ತಾ ತಂಡ ಕೂಡ ಉತ್ತಮ ಆಟಗಾರರನ್ನು ಹೊಂದಿದೆ. ಇಯಾನ್ ಮಾರ್ಗನ್ ನಾಯಕತ್ವ, ರಸೆಲ್ ವೇಗದ ಆಟ ತಂಡಕ್ಕೆ ವರವಾಗಬಹುದು. ದಿನೇಶ್ ಕಾರ್ತಿಕ್, ಶುಭ್​ಮನ್ ಗಿಲ್ ಆಟ ಕೂಡ ತಂಡ ಗೆಲ್ಲಿಸಬಹುದಾಗಿದೆ. ಶಕೀಬ್ ಅಲ್ ಹಸನ್ ಆಲ್ರೌಂಡ್ ಆಟ ನಂಬಿಕಸ್ಥ ಎಂಬುದು ಕೂಡ ಕ್ರಿಕೆಟ್ ಅಭಿಮಾನಿಗಳ ನಂಬಿಕೆಯಾಗಿದೆ.

ಸನ್​ರೈಸರ್ಸ್ ಹೈದರಾಬಾದ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಡೇವಿಡ್ ವಾರ್ನರ್ (ನಾಯಕ) 2) ವೃದ್ಧಿಮಾನ್ ಸಹಾ 3) ಮನೀಶ್ ಪಾಂಡೆ 4) ಕೇನ್ ವಿಲಿಯಮ್ಸನ್ 5) ವಿಜಯ್ ಶಂಕರ್ 6) ಅಬ್ದುಲ್ ಸಮದ್ 7) ಮೊಹಮ್ಮದ್ ನಬಿ 8) ರಶೀದ್ ಖಾನ್ 9) ಭುವನೇಶ್ವರ್ ಕುಮಾರ್ 10) ಸಂದೀಪ್ ಶರ್ಮಾ 11) ಟಿ.ನಟರಾಜನ್

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಶುಭ್​ಮನ್ ಗಿಲ್ 2) ರಾಹುಲ್ ತ್ರಿಪಾಠಿ 3) ನಿತೀಶ್ ರಾಣಾ 4) ಇಯೊನ್ ಮೋರ್ಗಾನ್ (ನಾಯಕ) 5) ದಿನೇಶ್ ಕಾರ್ತಿಕ್ 6) ಆಂಡ್ರೆ ರಸ್ಸೆಲ್ 7) ಶಕೀಬ್ ಅಲ್ ಹಸನ್ / ಸುನಿಲ್ ನರೈನ್ 8) ಹರ್ಭಜನ್ ಸಿಂಗ್ 9) ಪ್ಯಾಟ್ ಕಮ್ಮಿನ್ಸ್ 10) ಪ್ರಸಾದ್ ಕೃಷ್ಣ 11) ವರುಣ್ ಚಕ್ರವರ್ತಿ

ಇದನ್ನೂ ಓದಿ: Shubman Gill IPL 2021 KKR Team Player: ಟೀಂ ಇಂಡಿಯಾದ ಭವಿಷ್ಯದ ನಾಯಕನೆನಿಸಿಕೊಂಡಿರುವ ಗಿಲ್​, ಕೆಕೆಆರ್​ನ ಪ್ರಮುಖ ಬ್ಯಾಟಿಂಗ್ ಅಸ್ತ್ರ!

ಇದನ್ನೂ ಓದಿ: Bhuvneshwar Kumar IPL 2021 SRH Team Player: ತೆಂಡೂಲ್ಕರ್​ರನ್ನು ಮೊಟ್ಟ ಮೊದಲ ಬಾರಿಗೆ ಸೊನ್ನೆಗೆ ಔಟ್ ಮಾಡಿದ ಭುವನೇಶ್ವರ್ ಹೈದರಾಬಾದ್​ನ ಪ್ರಮುಖ ಬೌಲಿಂಗ್ ಅಸ್ತ್ರ

Published On - 5:45 pm, Sun, 11 April 21

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ