IPL Auction 2021: ಟೆಂಪೋ ಡ್ರೈವರ್ ಮಗನ ಬದುಕು ಬದಲಿಸಿದ IPL.. ಈ ಕೋಟಿ ವೀರನ ಮನೆಯಲ್ಲಿ ಕಡುಬಡತನ.. ಟಿವಿಯೂ ಇಲ್ಲ!
IPL Auction 2021: ಚೇತನ್ ಸಕಾರಿಯಾ.. ಎಡಗೈ ವೇಗದ ಬೌಲರ್. ಮೂಲತಃ ಸೌರಾಷ್ಟ್ರದ ಭಾವ್ ನಗರದ ಕ್ರಿಕೆಟಿಗ. ಚೇತನ್ ಹುಟ್ಟಿನಿಂದ ಬಡತನದ ಬೆಗೆಯಲ್ಲೇ ಬಳೆದುಬಂದಿರೋ ಆಟಗಾರ. ಗುಜರಾತಿನ ವರ್ತೇಜ್ ಎಂಬಲ್ಲಿ ಚೇತನ್ ತಂದೆ, ಟೆಂಪೋ ಚಾಲನೆ ಮಾಡಿ ಸಂಸಾರ ನಡೆಸ್ತಿದ್ದಾರೆ. ಮನೆ ಕೂಡ ಸಣ್ಣದ್ದು. ಟಿವಿ ಸಹ ಇರಲಿಲ್ಲ.
ಈ ಬಾರಿಯ ಐಪಿಎಲ್ ಬಿಡ್ಡಿಂಗ್ನಲ್ಲಿ ಟೆಂಪೋ ಚಾಲಕನ ಪುತ್ರನೊಬ್ಬ ರಾತ್ರೋರಾತ್ರಿ ಕೋಟಿವೀರನಾಗಿದ್ದಾನೆ. ಬಡ ಕ್ರಿಕೆಟಿಗನ ಕ್ರಿಕೆಟ್ ಬದುಕನ್ನುಆರ್ಸಿಬಿ ಬದಲಿಸಿದ್ದೇಗೆ? 1 ಕೋಟಿ ರೂಪಾಯಿಗೆ ಬಿಕರಿಯಾಗಿರೋ ಆ ಕ್ರಿಕೆಟಿನ ಸುಂದರ ಕನಸುಗಳೇನು ಎಂಬುದರ ಮಾಹಿತಿ ಇಲ್ಲಿದೆ. ಚೇತನ್ ಸಕಾರಿಯಾ.. ಈ ಕ್ರಿಕೆಟಿಗನ ಹೆಸರು ಐಪಿಎಲ್ ಬಿಡ್ಡಿಂಗ್ಗೂ ಮುನ್ನ ಯಾರಿಗೂ ಗೊತ್ತಿರಲಿಲ್ಲ. ಆದ್ರೆ, 22ವರ್ಷದ ಚೇತನ್ ಸಕಾರಿಯಾ, ಬರೋಬ್ಬರಿ 1.2ಕೋಟಿಗೆ ರಾಜಸ್ಥಾನಕ್ಕೆ ಬಿಕರಿಯಾಗ್ತಿದ್ದಂತೆ ಕ್ರಿಕೆಟ್ ಲೋಕದಲ್ಲಿ ಫುಲ್ ಫೇಮಸ್ ಆಗಿದ್ದಾನೆ. ಈ ಕ್ರಿಕೆಟಿನ ಯಾಶೋಗಾಥೆಯನ್ನೊಮ್ಮೆ ಕೇಳಿದ್ರೆ ನಿಜಕ್ಕೂ ಮನಕಲಕುತ್ತೆ. ಹಾಗಾದ್ರೆ, ಕೋಟಿವೀರನಾಗಿರೋ ಚೇತನ್ ಯಾರು..? ಆತನ ಕ್ರಿಕೆಟ್ ಜರ್ನಿ ಹೇಗಿತ್ತು ಓದಿ.
ಕೋಟಿ ವೀರನ ಮನೆಯಲ್ಲಿ ಕಡುಬಡತನ.. ಟಿವಿಯೂ ಇಲ್ಲ! ಚೇತನ್ ಸಕಾರಿಯಾ.. ಎಡಗೈ ವೇಗದ ಬೌಲರ್. ಮೂಲತಃ ಸೌರಾಷ್ಟ್ರದ ಭಾವ್ ನಗರದ ಕ್ರಿಕೆಟಿಗ. ಚೇತನ್ ಹುಟ್ಟಿನಿಂದ ಬಡತನದ ಬೇಗೆಯಲ್ಲೇ ಬಳೆದುಬಂದಿರೋ ಆಟಗಾರ. ಗುಜರಾತಿನ ವರ್ತೇಜ್ ಎಂಬಲ್ಲಿ ಚೇತನ್ ತಂದೆ, ಟೆಂಪೋ ಚಾಲನೆ ಮಾಡಿ ಸಂಸಾರ ನಡೆಸ್ತಿದ್ದಾರೆ. ಮನೆ ಕೂಡ ಸಣ್ಣದ್ದು. ಟಿವಿ ಸಹ ಇರಲಿಲ್ಲ. ಇದ್ರ ನಡುವೆಯೇ ಚೇತನ್ಗೆ ದೊಡ್ಡ ಕ್ರಿಕೆಟಿಗನಾಗ್ಬೇಕು, ಒಳ್ಳೆಯ ಕೋಚಿಂಗ್ ಪಡೆಯಬೇಕು ಅನ್ನೋ ಹಂಬಲ. ಆದ್ರೆ ಚೇತನ್ ಪಾಲಿಗೆ ಹಣದ ಕೊರತೆ ಕಾಣತೊಡಗಿತ್ತು. ಸ್ನೇಹಿತನ ಮನೆಯಲ್ಲಿ ಹಾಗೂ ಟಿವಿ ಅಂಗಡಿಗಳ ಹೊರಗೆ ನಿಂತು, ಚೇತನ್ ಕ್ರಿಕೆಟ್ನ್ನ ಕಣ್ತುಂಬಿಕೊಳ್ತಿದ್ದ. ಗಲ್ಲಿ ಕ್ರಿಕೆಟ್ ಆಡುವ ಮೂಲಕ ಪ್ರೋಫೆಷನಲ್ ಕ್ರಿಕೆಟ್ ಶುರುಮಾಡಿದ್ದ ಚೇತನ್, ತಮ್ಮ ಅದ್ಭುತ ಬೌಲಿಂಗ್ನಿಂದಾಗಿ ರಾಷ್ಟ್ರೀಯ ತಂಡಕ್ಕೂ ಎಂಟ್ರಿಕೊಟ್ಟ.
ಸಹೋದರ ಆತ್ಮಹತ್ಯೆ.. ಮುಖವನ್ನೂ ನೋಡದ ಚೇತನ್! ಕಳೆದ ವರ್ಷ ಸೌರಾಷ್ಟ್ರ ರಣಜಿ ತಂಡಕ್ಕೂ ಪಾದಾರ್ಪಣೆ ಮಾಡಿದ್ದ ಚೇತನ್, ಕರಾರುವಾಕ್ ಬೌಲಿಂಗ್ನಿಂದ ಎದುರಾಳಿಗಳಿಗೆ ಕಂಟಕವಾಗಿದ್ದ. ಪ್ರತಿ ಪಂದ್ಯದಲ್ಲೂ ಅತ್ಯಾದ್ಭುತ ಬೌಲಿಂಗ್ ಮಾಡ್ತಿದ್ದ ಚೇತನ್, ಸೈಯದ್ ಮುಷ್ತಾಕ್ ಅಲಿ ಟಿ-ಟ್ವೆಂಟಿ ತಂಡಕ್ಕೂ ಎಂಟ್ರಿಕೊಟ್ಟಿದ್ದ. ಟಿ-ಟ್ವೆಂಟಿಯಲ್ಲೂ ಕಮಾಲ್ ಮಾಡಿದ್ದ ಚೇತನ್, ವಿದರ್ಭ ವಿರುದ್ಧದ ಪಂದ್ಯದಲ್ಲಿ 11ರನ್ ನೀಡಿ 5ವಿಕೆಟ್ ಪಡೆದು ಮಿಂಚಿದ್ದ.
ಇನ್ನೂ ಕಳೆದ ಜನವರಿಯಲ್ಲಿ ಸೈಯದ್ ಮುಷ್ತಾಕ್ ಅಲಿ ಟೂರ್ನಿ ಆಡ್ತಿರೋ ವೇಳೆ, ಚೇತನ್ ಸಹೋದರ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ದುರದೃಷ್ಟ ಅಂದ್ರೆ, ಸಹೋದರನ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಮುಟ್ಟಿಸಲೇ ಇಲ್ಲ. ಟೂರ್ನಿ ಮುಗಿಸಿಬಂದು ರಾಹುಲ್ ಎಲ್ಲಿ ಎಂದು ಕೇಳಿದಾಗ, ಹೊರಗಡೆ ಹೋಗಿದ್ದಾನೆ ಎಂದಷ್ಟೇ ಹೇಳುತ್ತಿದ್ದರು. ಅವನ ಅಗಲಿಕೆ ನಷ್ಟ ತುಂಬಲು ಸಾಧ್ಯವಿಲ್ಲ. ಇಂದು ಐಪಿಎಲ್ ತಂಡಕ್ಕೆ ಆಯ್ಕೆಯಾಗಿದ್ದು ತಿಳಿದಿದ್ದರೆ ರಾಹುಲ್ ತುಂಬಾ ಸಂತಸ ಪಡುತ್ತಿದ್ದ ಎಂದು ಚೇತನ್ ಹೇಳಿದ್ದಾರೆ.
ಯುಎಇನಲ್ಲಿ ಆರ್ಸಿಬಿ ನೆಟ್ ಬೌಲರ್ ಆಗಿದ್ದ ಚೇತನ್! ಇನ್ನೂ ಐಪಿಎಲ್ನಲ್ಲಿ 1.2ಕೋಟಿ ರಾಜಸ್ಥಾನಕ್ಕೆ ಸೇಲ್ ಆಗಿರೋ ಚೇತನ್, ಉತ್ತಮ ಪ್ರದರ್ಶನ ನೀಡೋ ಉತ್ಸಾಹ ತೋರಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಯುಎಇಯಲ್ಲಿ ನಡೆದ ಕಳೆದ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ತಂಡದ ನೆಟ್ ಬೌಲರ್ ಆಗಿ ಚೇತನ್ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸೈಮನ್ ಕಾಟಿಚ್ ಹಾಗೂ ಮೈಕ್ ಹೆಸ್ಸನ್ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ. ಹಾಗೇ ಐಪಿಎಲ್ನಿಂದ ಬಂದ ಹಣದಲ್ಲಿ ಒಂದು ಒಳ್ಳೆಯ ಮನೆಯನ್ನ ಖರೀದಿ ಮಾಡ್ಬೇಕು ಅನ್ನೋದು ಚೇತನ್ ಆಸೆಯಾಗಿದೆ.