AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lionel Messi in India: ಮುಖ್ಯ ಸಂಘಟಕ ಸತಾದ್ರು ದತ್ತ ಬಂಧನ; ಅಭಿಮಾನಿಗಳಿಗೆ ಟಿಕೆಟ್ ಹಣ ಮರು ಪಾವತಿ

Messi India Visit Turns Nightmare:14 ವರ್ಷಗಳ ಬಳಿಕ ಭಾರತಕ್ಕೆ ಬಂದ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿಗೆ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಳಪೆ ಸಿದ್ಧತೆಗಳಿಂದಾಗಿ ಭಾರಿ ನಿರಾಸೆಯಾಗಿದೆ. ಅಭಿಮಾನಿಗಳ ಗಲಾಟೆಗೆ ಕಾರಣವಾದ ಸಂಘಟಕ ಸತಾದ್ರು ದತ್ತನನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆಗೆ ಕ್ಷಮೆ ಕೇಳಿದ್ದು, ಉನ್ನತ ಮಟ್ಟದ ತನಿಖೆ ಘೋಷಿಸಿದ್ದಾರೆ. ಟಿಕೆಟ್ ಹಣ ಮರುಪಾವತಿಸಲಾಗುವುದು.

Lionel Messi in India: ಮುಖ್ಯ ಸಂಘಟಕ ಸತಾದ್ರು ದತ್ತ ಬಂಧನ; ಅಭಿಮಾನಿಗಳಿಗೆ ಟಿಕೆಟ್ ಹಣ ಮರು ಪಾವತಿ
Messi
ಪೃಥ್ವಿಶಂಕರ
|

Updated on:Dec 13, 2025 | 4:19 PM

Share

3 ದಿನಗಳ ಪ್ರವಾಸಕ್ಕೆಂದು ಬರೋಬ್ಬರಿ 14 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದಿರುವ ಫುಟ್ಬಾಲ್ ಲೆಜೆಂಡ್ ಲಿಯೋನಲ್ ಮೆಸ್ಸಿಗೆ (Lionel Messi) ಪ್ರವಾಸದ ಮೊದಲ ದಿನವೇ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಭಾರತೀಯ ಅಭಿಮಾನಿಗಳನ್ನು ಕಾಣಲು ಸಂತಸದಿಂದಲೇ ಭಾರತಕ್ಕೆ ಬಂದಿರುವ ಮೆಸ್ಸಿಗೆ ಸಂಘಟಕರ ಕಳಪೆ ಸಿದ್ಧತೆಗಳು ಆಘಾತ ನೀಡಿವೆ. ವಾಸ್ತವವಾಗಿ ಮೆಸ್ಸಿ 3 ದಿನಗಳ ಪ್ರವಾಸದ ಅಂಗವಾಗಿ ಮೊದಲ ದಿನವಾದ ಇಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ( Kolkata Salt Lake Stadium) ಭೇಟಿ ನೀಡಿದ್ದರು. ಇತ್ತ ಅಭಿಮಾನಿಗಳು ಕೂಡ ಬೆಳಿಗ್ಗೆಯಿಂದಲೇ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಆದರೆ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಘಟಕರ ಕಳಪೆ ವ್ಯವಸ್ಥೆಯಿಂದಾಗಿ ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆಯಿತು. ಇದರಿಂದ ಕ್ರೀಡಾಂಗಣದಲ್ಲಿ ಗದ್ದಲ ಸೃಷ್ಟಿಯಿತು.

ಮುಖ್ಯ ಸಂಘಟಕರ ಬಂಧನ, ಟಿಕೆಟ್ ಹಣ ವಾಪಸ್

ಇದೀಗ ಈ ಅಹಿತಕರ ಘಟನೆಗೆ ಸಂಘಟಕರ ಕಳಪೆ ವ್ಯವಸ್ಥೆಯೇ ಕಾರಣ ಎನ್ನಲಾಗುತ್ತಿದ್ದು, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸರಿಯಾದ ವ್ಯವಸ್ಥೆ ಮಾಡದೆ ಈ ರೀತಿಯ ಅಹಿತಕರ ಘಟನೆಗೆ ಕಾರಣರಾಗಿರುವ ಮೆಸ್ಸಿ ಅವರ ಇಂಡಿಯಾ ಗೋಟ್ ಟೂರ್ 2025 ರ ಮುಖ್ಯ ಸಂಘಟಕರಾದ ಸತಾದ್ರು ದತ್ತ ಅವರನ್ನು ಬಂಧಿಸಲಾಗಿದೆ. ಹಾಗೆಯೇ ಮಾರಾಟವಾದ ಎಲ್ಲಾ ಟಿಕೆಟ್‌ಗಳ ಹಣವನ್ನು ಅಭಿಮಾನಿಗಳಿಗೆ ಮರುಪಾವತಿಸಲಾಗುವುದು ಎಂದು ಸಂಘಟಕರು ಲಿಖಿತವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

14 ವರ್ಷಗಳ ನಂತರ ಮೆಸ್ಸಿ ಭಾರತ ಭೇಟಿ; ಸಚಿನ್, ಕೊಹ್ಲಿ ಜೊತೆ ಕ್ರಿಕೆಟ್ ಆಡಲಿರುವ ಫುಟ್ಬಾಲ್ ಲೆಜೆಂಡ್

ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದದ್ದಾರೂ ಏನು?

ವಾಸ್ತವವಾಗಿ ಮೆಸ್ಸಿಯನ್ನು ಕಾಣಲು ದುಬಾರಿ ಹಣ ನೀಡಿ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಇದಕ್ಕೆ ಕಾರಣ ಮೆಸ್ಸಿ ಕೆಲವೇ ಕೆಲವು ನಿಮಿಷಗಳ ಕಾಲ ಮೈದಾನದಲ್ಲಿದ್ದು, ಅಲ್ಲಿಂದ ತೆರಳಿರುವುದು. ಅಲ್ಲದೆ ಕ್ರೀಡಾಂಗಣಕ್ಕೆ ಮೆಸ್ಸಿ ಆಗಮನಿಸಿದಾಗ ಅವರ ಸುತ್ತ ಮುತ್ತ ಭಾರಿ ಜನಸಮೂಹ ಇದ್ದಿದ್ದರಿಂದ ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳಿಗೆ ಮೆಸ್ಸಿಯನ್ನು ನೋಡಲು ಸಾಧ್ಯವಾಗಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ಮೈದಾನದತ್ತ ತಾವು ತಂದಿದ್ದ ನೀರಿನ ಬಾಟಲ್​ಗಳು ಹಾಗೂ ಗ್ಯಾಲರಿಯಲ್ಲಿ ಅಳವಡಿಸಿದ್ದ ಚೇರ್​ಗಳನ್ನು ತೂರಿದ್ದಾರೆ. ಹಾಗೆಯೇ ಗೇಟ್​ಗಳನ್ನು ಮುರಿದು ಅಭಿಮಾನಿಗಳು ಮೈದಾನದತ್ತ ಓಡಿದ್ದಾರೆ. ಇತ್ತ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸಂಘಟಕರು ಅಲ್ಲಿಂದ ಕಾಲ್ಕಿತ್ತಿದ್ದು, ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ.

ತನಿಖಾ ಸಮಿತಿ ರಚನೆ; ಮಮತಾ ಬ್ಯಾನರ್ಜಿ

ಇನ್ನು ಈ ಅಹಿತಕರ ಘಟನೆಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇಂದು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಘಟನೆಯಿಂದ ನಾನು ತೀವ್ರವಾಗಿ ದುಃಖಿತಳಾಗಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ಈ ದುರದೃಷ್ಟಕರ ಘಟನೆಗಾಗಿ ಲಿಯೋನೆಲ್ ಮೆಸ್ಸಿ, ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಅವರ ಅಭಿಮಾನಿಗಳಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಹಾಗೆಯೇ ನಿವೃತ್ತ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಆಶಿಮ್ ಕುಮಾರ್ ರೇ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇರಲಿದ್ದಾರೆ. ವಿವರವಾದ ತನಿಖೆ ನಡೆಸುವುದು, ಜವಾಬ್ದಾರಿಯನ್ನು ವಹಿಸುವುದು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸರಿಪಡಿಸುವ ಕ್ರಮಗಳನ್ನು ಸೂಚಿಸುವ ಕಾರ್ಯವನ್ನು ಈ ಸಮಿತಿಗೆ ವಹಿಸಲಾಗಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Sat, 13 December 25

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?