ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ, ರಣರಂಗವಾಯ್ತು ಕ್ರೀಡಾಂಗಣ; ವಿಡಿಯೋ
Lionel Messi's India Trip: ಲಿಯೋನೆಲ್ ಮೆಸ್ಸಿ 3 ದಿನಗಳ ಭಾರತ ಪ್ರವಾಸಕ್ಕಾಗಿ ಕೋಲ್ಕತ್ತಾಕ್ಕೆ ಆಗಮಿಸಿ, ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಆದರೆ ಕೇವಲ 10 ನಿಮಿಷಗಳಲ್ಲೇ ನಿರ್ಗಮಿಸಿದ್ದರಿಂದ, ಭಾರಿ ಮೊತ್ತ ನೀಡಿ ಬಂದಿದ್ದ ಅಭಿಮಾನಿಗಳು ತೀವ್ರ ಹತಾಶೆಗೊಂಡರು. ಆಕ್ರೋಶಗೊಂಡ ಅಭಿಮಾನಿಗಳು ಕ್ರೀಡಾಂಗಣದೊಳಗೆ ನುಗ್ಗಲು ಯತ್ನಿಸಿ, ಆಸನಗಳನ್ನು ಎಸೆದು ಗಲಭೆ ಸೃಷ್ಟಿಸಿದರು. ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು.
ಲಿಯೋನೆಲ್ ಮೆಸ್ಸಿ 3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಅವರು ಇಂದು ಕೋಲ್ಕತ್ತಾಗೆ ಆಗಮಿಸಿ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಆದರೆ ಮೆಸ್ಸಿ ಕೇವಲ 10 ನಿಮಿಷ ಕ್ರೀಡಾಂಗಣದಲಿದ್ದು, ಅಲ್ಲಿಂದ ತೆರಳಿದ್ದಾರೆ. ಮೆಸ್ಸಿ ನೋಡಲೆಂದೆ 5000 ದಿಂದ 50000 ಸಾವಿರದವರೆಗೆ ಟಿಕೆಟ್ ಕೊಟ್ಟು ಸ್ಟೇಡಿಯಂಗೆ ಬಂದವರು, ಮೆಸ್ಸಿಯನ್ನ ನೋಡಲಾಗದೇ ಹತಾಶೆಯಿಂದ ಸ್ಟೇಡಿಯಂನ ವಿಐಪಿ ಗೇಟ್ನಿಂದ ಮೈದಾನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಕೋಪಗೊಂಡು ಆಸನಗಳನ್ನ ಮೈದಾನಕ್ಕೆ ಎಸೆದಿದ್ದಾರೆ. ಅಭಿಮಾನಿಗಳನ್ನ ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಅಭಿಮಾನಿಗಳು ಕೈಗೆ ಸಿಕ್ಕಸಿಕ್ಕದ್ದನ ಭದ್ರತಾಪಡೆಗಳ ಮೇಲೆ ಬಿಸಾಡಿದ್ದು, ಸಿಬ್ಬಂದಿ ಗಾಯಗೊಂಡಿದ್ದಾರೆ.
Latest Videos
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು

