ಪುಣೆ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ವೇಗದ ಅರ್ಧ ಶತಕ ಸಿಡಿಸಿದ ಕೃನಾಲ್ ಪಾಂಡ್ಯ, ಇನ್ನಿಂಗ್ಸ್ ನಡುವೆ ಮಾತನಾಡುತ್ತಾ ಖುಷಿಯಿಂದ ಅತ್ತುಬಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದ, ಇಂದು (ಮಾರ್ಚ್ 23) ಮೊದಲ ಪಂದ್ಯಾಟ ನಡೆಯುತ್ತಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ಗೆ ಇಳಿದಿತ್ತು. ಟೆಸ್ಟ್ ಹಾಗೂ ಟಿ20 ಸರಣಿಯ ಗೆಲುವಿನ ಉತ್ಸಾಹದಲ್ಲಿ ಭಾರತೀಯ ದಾಂಡಿಗರು ಫೀಲ್ಡ್ಗೆ ಇಳಿದಿದ್ದರು. ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇಬ್ಬರೂ ಉತ್ತಮ ಆಟದ ಜೊತೆಯಾಟವನ್ನು ತಂಡಕ್ಕೆ ನೀಡಿದರು. ಬಳಿಕ, ಒನ್ ಡೌನ್ಗೆ ಇಳಿದ ನಾಯಕ ಕೊಹ್ಲಿ ಕೂಡ ಅರ್ಧಶತಕದ ಆಟ ಪ್ರದರ್ಶಿಸಿದರು. ನಂತರ ಬಂದ ರಾಹುಲ್ ಕೂಡ 62 ರನ್ ಬಾರಿಸಿ ಭಾರತ ಉತ್ತಮ ಮೊತ್ತ ಪೇರಿಸುವಲ್ಲಿ ಸಹಕರಿಸಿದರು.
ಮಿಡಲ್ ಆರ್ಡರ್ನಲ್ಲಿ ಕಣಕ್ಕಿಳಿದ ಕೃನಾಲ್ ಪಾಂಡ್ಯ ಇಂದು ಮೊದಲ ಏಕದಿನ ಪಂದ್ಯ ಆಡಿದರು. 31 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ಗಳ ಸಹಿತ 58 ರನ್ ಕಲೆಹಾಕಿದರು. ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡಿದ ಆಟಗಾರನೊಬ್ಬ ವೇಗದ ಅರ್ಧ ಶತಕ ಬಾರಿಸಿದ ದಾಖಲೆಯನ್ನು ಕೃನಾಲ್ ಪಾಂಡ್ಯ ತಮ್ಮ ತೆಕ್ಕೆಗೆ ಸೆಳೆದುಕೊಂಡರು.
This is all heart ??
A teary moment for ODI debutant @krunalpandya24 post his brilliant quick-fire half-century??@hardikpandya7 #TeamIndia #INDvENG @Paytm pic.twitter.com/w3x8pj18CD
— BCCI (@BCCI) March 23, 2021
ಭಾವುಕರಾಗಿ ಅತ್ತ ಕೃನಾಲ್ ಪಾಂಡ್ಯ
ಡೆಬ್ಯುಟ್ ಪಂದ್ಯಾಟದಲ್ಲಿ ಅತ್ಯಂತ ವೇಗವಾಗಿ ಅರ್ಧ ಶತಕ ಸಿಡಿಸಿದ ಆಟಗಾರನಾಗಿ ಇಂದು ಕೃನಾಲ್ ಪಾಂಡ್ಯ ದಾಖಲೆ ನಿರ್ಮಿಸಿದರು. 187ರ ಸ್ಟ್ರೈಕ್ ರೇಟ್ನಲ್ಲಿ ಅವರು ಅರ್ಧಶತಕ ಬಾರಿಸಿದರು.
ಭಾರತದ ಮೊದಲ ಇನ್ನಿಂಗ್ಸ್ ಬಳಿಕ ಮಾತನಾಡಿದ ಕ್ರುನಾಲ್, ‘This is for my father’ ಎನ್ನುತ್ತಾ ಮಾತು ಮುಂದುವರಿಸದೆ ಅತ್ತುಬಿಟ್ಟರು. ಸಂದರ್ಶನವನ್ನು ಅರ್ಧಕ್ಕೆ ನಿಲ್ಲಿಸಿ ಅಳುತ್ತಾ ತೆರಳಿದ ಕೃನಾಲ್ ಪಾಂಡ್ಯರನ್ನು ಸಹೋದರ ಹಾರ್ದಿಕ್ ಪಾಂಸ್ಯ ಸಮಾಧಾನಿಸಿದರು.
— Maqbool (@im_maqbool) March 23, 2021
ಮೊದಲ ಪಂದ್ಯದಲ್ಲಿ, ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿ, ದಾಖಲೆಯನ್ನೂ ಮಾಡಿದ ಖುಷಿಗೆ ಕೃನಾಲ್ ಪಾಂಡ್ಯ ಅತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೃನಾಲ್ ಪಾಂಡ್ಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ.
ಇದನ್ನೂ ಓದಿ: IND vs ENG 1st ODI Live: ಶತಕ ವಂಚಿತ ಧವನ್, ಭಾರತ 317/5
India vs England: T20 ಕ್ರಿಕೆಟ್ನಲ್ಲಿ ಕೊಹ್ಲಿ, ರಾಹುಲ್ಗಿಂತ ವೇಗವಾಗಿ 1000 ರನ್ ಪೂರೈಸಿದ ಡೇವಿಡ್ ಮಲನ್
Published On - 7:06 pm, Tue, 23 March 21