Ind vs Eng 1st ODI: ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಗೆಲ್ಲುವ ಭರವಸೆ

ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್​ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಂತುಲಿತ ಪ್ರದರ್ಶನ ತೋರಿದ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ಕೈವಶಮಾಡಿಕೊಳ್ಳುವ ಭರವಸೆ ನೀಡಿದೆ.

Ind vs Eng 1st ODI: ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಸರಣಿ ಗೆಲ್ಲುವ ಭರವಸೆ
ಭಾರತಕ್ಕೆ ಗೆಲುವು-ಆಟಗಾರರ ಸಂಭ್ರಮ
Follow us
TV9 Web
| Updated By: ganapathi bhat

Updated on:Apr 05, 2022 | 1:17 PM

ಪುಣೆ: ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 66 ರನ್​ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಂತುಲಿತ ಪ್ರದರ್ಶನ ತೋರಿದ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ಕೈವಶಮಾಡಿಕೊಳ್ಳುವ ಭರವಸೆ ನೀಡಿದೆ. ಕ್ರೀಸಿಗಿಳಿದ ದಾಂಡಿಗರು ಉತ್ತಮ ಮೊತ್ತ ಪೇರಿಸುವಲ್ಲಿ ಸಾಮರ್ಥ್ಯ ತೋರಿದರೆ, ಬೌಲರ್​ಗಳು ಇಂಗ್ಲೆಂಡ್ ಆಟಗಾರರನ್ನು ಅಲ್ಪ ಮೊತ್ತಕ್ಕೆ ಹೊಡೆದುರುಳಿಸಲು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ಗಳಷ್ಟೇ ಕಳೆದುಕೊಂಡು 317 ರನ್ ಗಳಿಸಿತು. ಆರಂಭಿಕರಾಗಿ ಕ್ರೀಸ್​ಗಿಳಿದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. 106 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 98 ರನ್ ಕಲೆಹಾಕಿದ ಧವನ್ ಕೇವಲ 2 ರನ್​ಗಳಿಂದ ಶತಕ ವಂಚಿತರಾದರು. ಉತ್ತಮ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಕಪ್ತಾನನ ಆಟವಾಡಿ ತಂಡಕ್ಕೆ 56 ರನ್​ಗಳ ಕೊಡುಗೆ ನೀಡಿದರು. ರಾಹುಲ್ ಕೂಡ ನಿರಾಸೆ ಮೂಡಿಸಲಿಲ್ಲ. 43 ಎಸೆತಗಳಲ್ಲಿ 62 ರನ್ ಕೂಡಿಸಿದರು.

ನಾಲ್ಕನೇ ವಿಕೆಟ್​ಗೆ ಜೊತೆಯಾದ ಕೃನಾಲ್ ಪಾಂಡ್ಯ ತಾವು ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲೇ ಭರವಸೆ ಮೂಡಿಸಿದರು. ಹಾರ್ದಿಕ್ ಪಾಂಡ್ಯ ಸಹೋದರ, ಕೃನಾಲ್ 31 ಎಸೆತಗಳಲ್ಲಿ 58 ರನ್ ಬಾರಿಸುವ ಮೂಲಕ ಪಾದಾರ್ಪಣೆಯ ಪಂದ್ಯಾಟದಲ್ಲಿ ಅತಿ ವೇಗವಾಗಿ ಅರ್ಧ ಶತಕ ಪೂರೈಸಿದ ಆಟಗಾರ ಎನಿಸಿಕೊಂಡರು.

ಇಂಗ್ಲೆಂಡ್ ಪರ ಬೌಲರ್​ಗಳು ಹೇಳಿಕೊಳ್ಳುವಂಥಾ ಪ್ರದರ್ಶನವೇನೂ ತೋರಲಿಲ್ಲ. ಸ್ಟೋಕ್ಸ್ ಮಾತ್ರ 8 ಓವರ್​ಗಳಲ್ಲಿ 4.20 ಎಕನಮಿಯಲ್ಲಿ ಕೇವಲ 34 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿ ಇಂಗ್ಲೆಂಡ್​ಗೆ ನೆರವಾದರು. ಉಳಿದ ಎಸೆತಗಾರರು ಭಾರತೀಯ ದಾಂಡಿಗರ ಹೊಡೆತಕ್ಕೆ ಸಿಲುಕಿ ಸುಸ್ತಾದರು. ಯಶಸ್ವಿ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ, ಇಂಗ್ಲೆಂಡ್​ಗೆ 318 ರನ್ ಗುರಿ ನೀಡಿತು.

ಉತ್ತಮ ಮೊತ್ತದ ಬೆನ್ನತ್ತಿದ ಇಂಗ್ಲೆಂಡ್​ಗೆ ಉತ್ತಮ ಆರಂಭವೇನೋ ಒದಗಿತು. ಆದರೆ ಮಧ್ಯಮ ಕ್ರಮಾಂಕ ಪ್ರಯೋಜನಕಾರಿ ಆಟವಾಡಲಿಲ್ಲ. ಇಂಗ್ಲೆಂಡ್ ಪರ ಉತ್ತಮ ಆಟವಾಡಿದ ಜೇಸನ್ ರಾಯ್ 46 ಹಾಗೂ ಬೇರ್​ಸ್ಟೋ 66 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ ಸಹಿತ 94 ರನ್ ಕೂಡಿಸಿದರು. ಈ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಬಹುದೇನೋ ಎಂದು ಅಂದುಕೊಳ್ಳುವಂತೆ ಆಡಿದರು. ಆದರೆ ಅವರಿಬ್ಬರ ಹೊರತಾಗಿ ಉಳಿದ ಆಟಗಾರರು 30 ರನ್ ಗಳಿಸುವುದರೊಳಗೆ ಸುಸ್ತಾಗಿ ಬಿಟ್ಟರು. ಭಾರತೀಯ ಸಂಘಟಿತ ದಾಳಿಗೆ ಶರಣಾದರು.

ಭಾರತದ ಪರವಾಗಿ ಪ್ರಸಿದ್ಧ್ ಕೃಷ್ಣ 4, ಶಾರ್ದೂಲ್ ಠಾಕುರ್ 3 ಹಾಗೂ ವೇಗಿ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ನಿಂದ ಗಮನ ಸೆಳೆದ ಕೃನಾಲ್ ಪಾಂಡ್ಯ, 10 ಓವರ್​ಗಳನ್ನೂ ಎಸೆದು 5.9 ಎಕನಮಿಯಲ್ಲಿ 59 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಬೌಲಿಂಗ್​ನಲ್ಲೂ ಉತ್ತಮ ಆಟವನ್ನೇ ಕಾಣಿಸಿದರು.

ಇದನ್ನೂ ಓದಿ: Ind vs Eng 1st ODI: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಕೃನಾಲ್ ಪಾಂಡ್ಯ ಭಾವುಕರಾಗಿ ಅತ್ತುಬಿಟ್ಟರು!

ಇದನ್ನೂ ಓದಿ: India vs England: ಟಿ20 ಇನ್ನಿಂಗ್ಸ್ ಆರಂಭಿಸುವ ವಿರಾಟ್​ ಕೊಹ್ಲಿ ನಿರ್ಧಾರದಿಂದ ಆರ್​ಸಿಬಿಗೆ ಲಾಭ: ಮೈಕಲ್ ವಾನ್

Published On - 10:25 pm, Tue, 23 March 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್