ಮನೆಯ ಹೊಸ ಅತಿಥಿಯೊಂದಿಗೆ ರೇಸಿಗಿಳಿದ ಧೋನಿ! ಈ ರನ್ನಿಂಗ್ ರೇಸ್ನಲ್ಲಿ ಗೆದ್ದಿದ್ಯಾರು ಗೊತ್ತಾ? ವಿಡಿಯೋ ನೋಡಿ
ಇತ್ತೀಚೆಗೆ ಮನೆಗೆ ಬಂದಿರುವ ಹೊಸ ಅತಿಥಿಯೊಂದಿಗೆ ಧೋನಿ ರೇಸಿಗಿಳಿದಿದ್ದಾರೆ. ಸ್ವತಃ ಈ ವಿಡಿಯೋವನ್ನು ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಕಾರಣ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ತಮ್ಮ ರಾಂಚಿ ಫಾರಂ ಹೌಸ್ನಲ್ಲಿ ತಮ್ಮ ಅಚ್ಚುಮೆಚ್ಚಿನ ಪ್ರಾಣಿಗಳ ಜೊತೆ ಕೂಲ್ ಕೂಲ್ ಆಗಿದ್ದಾರೆ. ಅವುಗಳನ್ನು ಮುದ್ದಾಡುತ್ತಾ ಆನಂದಿಂದ ಸಮಯ ಕಳೆಯುತ್ತಿದ್ದಾರೆ. ಹೀಗೆ ಹೆಂಡತಿ ಮಕ್ಕಳೊಂದಿಗೆ ತಮ್ಮ ಫಾರಂ ಹೌಸ್ನಲ್ಲಿರುವ ಧೋನಿ, ಇತ್ತೀಚೆಗೆ ಮನೆಗೆ ಬಂದಿರುವ ಹೊಸ ಅತಿಥಿಯೊಂದಿಗೆ ರೇಸಿಗಿಳಿದಿದ್ದಾರೆ. ಸ್ವತಃ ಈ ವಿಡಿಯೋವನ್ನು ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈಗ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಟೀಂ ಇಂಡಿಯಾ ಆಟಗಾರನಾಗಿ, ನಾಯಕನಾಗಿ ಒಂದೂವರೆ ದಶಕಗಳ ಕಾಲ ಎಂ.ಎಸ್.ಧೋನಿ, ಭಾರತೀಯ ಕ್ರಿಕೆಟ್ಗೆ ಮರೆಯಲಾಗದಷ್ಟು ಕೊಡುಗೆ ನೀಡಿದ್ದಾರೆ. ಟೀಂ ಇಂಡಿಯಾ ಸದ್ಯ ದೂರವಿರುವ ಧೋನಿ, ನಮಗೆಲ್ಲ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಿಂದ ಕೊಂಚ ದೂರವೇ ಇದ್ದಾರೆ. ಅವರ ಅಭಿಮಾನಿಗಳಿಗೆ ಧೋನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬೇಕೆಂದರೆ ಸಾಕ್ಷಿ ಧೋನಿಯ ಸಾಮಾಜಿಕ ಜಾಲತಾಣದ ಖಾತೆಯನ್ನು ಹುಡುಕಬೇಕು. ಸಾಕ್ಷಿಯೂ ಕೂಡ ಅಭಿಮಾನಿಗಳಿಗೆ ಬೇಕಾಗಿರುವ ಮಾಹಿತಿಯನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆಯೇ ಸಾಕ್ಷಿ ಇಂದೂ ಕೂಡ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅದನ್ನು ವೀಕ್ಷಿಸಿದ ನೆಟ್ಟಿಗರು ಧೋನಿಯ ಮಗುವಿನ ಮನಸ್ಸನ್ನು ಕಂಡು ಖುಷಿ ಪಟ್ಟಿದ್ದಾರೆ.
View this post on Instagram
ಹೊಸ ಹೊಸ ಅತಿಥಿಗಳು ಬಂದಿಳಿಯುತ್ತಿದ್ದಾರೆ ಧೋನಿಗೆ ಬೈಕ್‌ಗಳ ಬಗ್ಗೆ ಎಷ್ಟು ಒಲವಿದೆ ಎಂಬುದು ನಿಮಗೆ ಗೊತ್ತೆ ಇದೆ. ಧೋನಿ ಕ್ರಿಕೆಟ್ ಅನ್ನು ಎಷ್ಟು ಇಷ್ಟಪಡುತ್ತಾರೋ ಹಾಗೆಯೇ ಅವರಿಗೆ ಪ್ರಾಣಿಗಳ ಮೇಲೂ ಅಷ್ಟೊಂದು ಪ್ರೀತಿ ಇದೆ. ಧೋನಿ ಫಾರ್ಮ್ ಹೌಸ್ಗೆ ಇತ್ತೀಚೆಗೆ ಹೊಸ ಹೊಸ ಅತಿಥಿಗಳು ಬಂದಿಳಿಯುತ್ತಿದ್ದಾರೆ. ಈಗ ಅವರ ಮಗಳು ಅಂದರೆ ಜೀವಾ ಸಿಂಗ್ ಧೋನಿ ಕೂಡ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿದ್ದಾಳೆ. ಜೀವಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಜೀವಾಗಾಗಿ ಮನೆಗೆ ಬಂದಿರುವ ಹೊಸ ಅತಿಥಿಯನ್ನು ಕಾಣಬಹುದಾಗಿದೆ.
ಧೋನಿಯ ಮನೆಯಲ್ಲಿ ಆಗಲೇ 4 ಸಾಕು ನಾಯಿಗಳಿದ್ದವು. ಮತ್ತು ಇತ್ತೀಚೆಗೆ ಅವರು ತನಗಾಗಿ ಒಂದು ದೊಡ್ಡ ಕುದುರೆಯನ್ನು ಸಹ ಖರೀದಿಸಿದ್ದರು. ಅದಕ್ಕೆ ಅವರು ಚೇತಕ್ ಎಂದು ಹೆಸರು ಕೂಡ ಇಟ್ಟಿದ್ದಾರೆ. ಆದರೆ, ತನಗಾಗಿ ಕುದುರೆಯನ್ನು ಪಡೆಯುವುದರ ಹೊರತಾಗಿ, ಧೋನಿ ತನ್ನ ಮಗಳು ಜೀವಾಗೆ ಒಂದು ಸಣ್ಣ ಕುದುರೆಯನ್ನು ಸಹ ಉಡುಗೂರೆಯಾಗಿ ನೀಡಿದ್ದಾರೆ.
ರಾಂಚಿಯಲ್ಲಿ ಧೋನಿ ಕುಟುಂಬ ಐಪಿಎಲ್ 2021 ಮಿಡ್‌ವೇ ಮುಂದೂಡಿದ್ದರಿಂದ, ಧೋನಿ ಈ ದಿನಗಳಲ್ಲಿ ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿದ್ದಾರೆ. ಧೋನಿಯ ಫಾರ್ಮ್ ಹೌಸ್ ಮತ್ತು ಸಾಕು ಪ್ರಾಣಿಗಳಲ್ಲಿ ಬೈಕುಗಳು ಮತ್ತು ದೊಡ್ಡ ವಾಹನಗಳ ಸಂಗ್ರಹವಿದೆ. ಇದಲ್ಲದೆ ಧೋನಿ ತಮ್ಮ ಫಾರ್ಮ್ ಹೌಸ್ನಲ್ಲಿ ಸಾವಯವ ಕೃಷಿಯನ್ನು ಸಹ ಪ್ರಾರಂಭಿಸಿದ್ದಾರೆ.
ಐಪಿಎಲ್ 2021 ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಪುನರಾರಂಭಗೊಳ್ಳಲಿದೆ. ನಂತರ ಧೋನಿ ತಮ್ಮ ತಂಡದ ಸಿಎಸ್‌ಕೆ ಉಳಿದ ಮಿಷನ್ ಪೂರ್ಣಗೊಳಿಸಲು ಮತ್ತೆ ಯುಎಇ ತಲುಪಲಿದ್ದಾರೆ. ಕಳೆದ ಋತುವಿನಲ್ಲಿ ಸಿಎಸ್ಕೆ ಐಪಿಎಲ್ ಇತಿಹಾಸದಲ್ಲಿ ತಮ್ಮ ಕೆಟ್ಟ ಹಂತವನ್ನು ಕಂಡ ಯುಎಇ ಅದೇ ಸ್ಥಳವಾಗಿದೆ. ಈ ಬಾರಿ ಧೋನಿಗೆ ಅಲ್ಲಿಯೇ ಪ್ರದರ್ಶನದ ಮೇಲೆ ಕಲೆ ತೊಳೆಯಲು ಅವಕಾಶವಿದೆ.