Milkha Singh Death: ‘ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್ ನಿಧನಕ್ಕೆ ಫರ್ಹಾನ್ ಅಖ್ತರ್ ಸಂತಾಪ
Bhag Milkha Bhag: ಮಿಲ್ಖಾ ಸಿಂಗ್ ನಿಧನಕ್ಕೆ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕಂಬನಿ ಮಿಡಿದಿದ್ದಾರೆ. ‘ಭಾಗ್ ಮಿಲ್ಖಾ ಭಾಗ್’ ಸಿನಿಮಾದಲ್ಲಿ ಮಿಲ್ಖಾ ಸಿಂಗ್ ಪಾತ್ರವನ್ನು ಫರ್ಹಾನ್ ಅಖ್ತರ್ ಮಾಡಿದ್ದರು.
ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಮಿಲ್ಖಾ ಸಿಂಗ್ ಅವರು ಶುಕ್ರವಾರ (ಜೂ.18) ಮಧ್ಯರಾತ್ರಿ ನಿಧನರಾದರು. ಅವರ ಅಗಲಿಕೆಗೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮಿಲ್ಖಾ ಸಿಂಗ್ ಜೀವನವನ್ನು ಆಧರಿಸಿ ‘ಭಾಗ್ ಮಿಲ್ಖಾ ಭಾಗ್’ ಸಿನಿಮಾ ತಯಾರಾಗಿತ್ತು. 2013ರಲ್ಲಿ ಬಂದ ಆ ಸಿನಿಮಾದಲ್ಲಿ ಮಿಲ್ಖಾ ಸಿಂಗ್ ಪಾತ್ರವನ್ನು ಫರ್ಹಾನ್ ಅಖ್ತರ್ ಮಾಡಿದ್ದರು. ಆ ಚಿತ್ರಕ್ಕೆ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ ಗೆದ್ದಿತ್ತು. ಆ ಚಿತ್ರದ ಮೂಲಕ ಮಿಲ್ಖಾ ಸಿಂಗ್ ಬದುಕಿನ ಸ್ಫೂರ್ತಿದಾಯಕ ಕಥೆ ಅನೇಕರಿಗೆ ತಿಳಿಯುವಂತಾಗಿತ್ತು. ಈಗ ಮಿಲ್ಖಾ ಸಿಂಗ್ ನಿಧನಕ್ಕೆ ಫರ್ಹಾನ್ ಮರುಗಿದ್ದಾರೆ.
ಫರ್ಹಾನ್ ಅಖ್ತರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ಪ್ರೀತಿಯ ಮಿಲ್ಖಾ ಅವರೇ, ನೀವು ಇಲ್ಲ ಎಂಬುದನ್ನು ನನ್ನೊಳಗಿನ ಒಂದು ಮನಸ್ಸು ಒಪ್ಪಿಕೊಳ್ಳುತ್ತಲೇ ಇಲ್ಲ. ಪ್ರಾಯಶಃ ನಿಮ್ಮಿಂದ ಪಡೆದುಕೊಂಡ ಹಠಮಾರಿ ಮನಸ್ಸು ಅದು. ಏನನ್ನಾದರೂ ಶುರು ಮಾಡಿದರೆ ಬಿಡಲೇಬಾರದ ಎಂಬ ಮನಸ್ಸು. ನಿಜ ಏನೆಂದರೆ, ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಯಾಕೆಂದರೆ ನೀವು ಹೃದಯವಂತ, ಪ್ರೀತಿಪೂರ್ವಕ, ವಿನಯವಂತ ವ್ಯಕ್ತಿ ಆಗಿದ್ರಿ’ ಎಂದು ಫರ್ಹಾನ್ ಅಖ್ತರ್ ಬರೆದುಕೊಂಡಿದ್ದಾರೆ.
View this post on Instagram
‘ನೀವು ಒಂದು ಆಲೋಚನೆಯ ಪ್ರತಿನಿಧಿ. ನೀವು ಒಂದು ಕನಸಿನ ಪ್ರತಿನಿಧಿ. ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯು ಒಬ್ಬ ಮನುಷ್ಯನನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ನೀವು ಪ್ರತಿನಿಧಿಸಿದ್ದೀರಿ. ನಮ್ಮ ಜೀವನಕ್ಕೆ ನೀವು ಹೃದಯಸ್ಪರ್ಶಿ ಆಗಿದ್ರಿ. ತಂದೆಯಾಗಿ, ಸ್ನೇಹಿತನಾಗಿ ನಿಮ್ಮನ್ನು ಪಡೆದ ಆತ್ಮೀಯರೇ ಧನ್ಯರು. ಇನ್ನುಳಿದವರಿಗೆ ನಿಮ್ಮ ಜೀವನದ ಕಥೆಯೇ ದೊಡ್ಡ ಸ್ಫೂರ್ತಿ. ತುಂಬು ಹೃದಯದಿಂದ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಫರ್ಹಾನ್ ಅಖ್ತರ್ ಅವರು ಮಿಲ್ಖಾ ಸಿಂಗ್ಗೆ ನುಡಿ ನಮನ ಸಲ್ಲಿಸಿದ್ದಾರೆ.
I had spoken to Shri Milkha Singh Ji just a few days ago. Little did I know that it would be our last conversation. Several budding athletes will derive strength from his life journey. My condolences to his family and many admirers all over the world.
— Narendra Modi (@narendramodi) June 18, 2021
ಮಿಲ್ಖಾ ಸಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ಕೆಲವೇ ದಿನಗಳ ಹಿಂದೆ ನಾನು ಮಿಲ್ಖಾ ಸಿಂಗ್ ಅವರೊಂದಿಗೆ ಮಾತನಾಡಿದ್ದೆ. ಆಗ, ಇದು ನಮ್ಮ ಕೊನೆಯ ಸಂಭಾಷಣೆ ಎಂದು ನನಗೆ ತಿಳಿದಿರಲಿಲ್ಲ. ಅನೇಕ ಕ್ರೀಡಾಪಟುಗಳು ಮಿಲ್ಖಾ ಅವರ ಜೀವನ ಪ್ರಯಾಣದಿಂದ ಸ್ಫೂರ್ತಿ ಪಡೆಯುತ್ತಾರೆ. ಅವರ ಕುಟುಂಬಕ್ಕೆ ಮತ್ತು ಪ್ರಪಂಚದಾದ್ಯಂತ ಇರುವ ಅವರ ಅನೇಕ ಅಭಿಮಾನಿಗಳಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: