ನಂ.1 ಟೆಸ್ಟ್ ತಂಡ ಭಾರತವನ್ನ ಮಣಿಸಿದ ನ್ಯೂಜಿಲೆಂಡ್ಗೆ ಶತಕದ ಗೆಲುವಿನ ಸಂಭ್ರಮ
ವೆಲ್ಲಿಂಗ್ಟನ್: ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 10 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾವನ್ನ ಮಣಿಸಿದೆ. ವೆಲ್ಲಿಂಗ್ಟನ್ನಲ್ಲಿ ನಡೆದ 4ನೇ ದಿನದಾಟದಲ್ಲಿ ಮೊದಲ ಒಂದೂವರೆ ಗಂಟೆ ಅವಧಿಯಲ್ಲಿ ಭಾರತದ 6 ವಿಕೆಟ್ಗಳನ್ನ ಪಡೆದ ನ್ಯೂಜಿಲೆಂಡ್, ಕೊಹ್ಲಿ ಸೈನ್ಯಕ್ಕೆ ಸೋಲುಣಿಸ್ತು. 4ನೇ ದಿನದಾಟ ಆರಂಭಿಸಿದ ಉಪನಾಯಕ ಅಜಿಂಕ್ಯಾ ರಹಾನೆ ಹೆಚ್ಚು ಒತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಕ್ರೀಸ್ನಲ್ಲಿ ನೆಲೆನಿಂತು ತಂಡದ […]
ವೆಲ್ಲಿಂಗ್ಟನ್: ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 10 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾವನ್ನ ಮಣಿಸಿದೆ. ವೆಲ್ಲಿಂಗ್ಟನ್ನಲ್ಲಿ ನಡೆದ 4ನೇ ದಿನದಾಟದಲ್ಲಿ ಮೊದಲ ಒಂದೂವರೆ ಗಂಟೆ ಅವಧಿಯಲ್ಲಿ ಭಾರತದ 6 ವಿಕೆಟ್ಗಳನ್ನ ಪಡೆದ ನ್ಯೂಜಿಲೆಂಡ್, ಕೊಹ್ಲಿ ಸೈನ್ಯಕ್ಕೆ ಸೋಲುಣಿಸ್ತು.
4ನೇ ದಿನದಾಟ ಆರಂಭಿಸಿದ ಉಪನಾಯಕ ಅಜಿಂಕ್ಯಾ ರಹಾನೆ ಹೆಚ್ಚು ಒತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಕ್ರೀಸ್ನಲ್ಲಿ ನೆಲೆನಿಂತು ತಂಡದ ಸ್ಕೋರ್ ಹೆಚ್ಚಿಸಿಬೇಕಿದ್ದ ಉಪನಾಯಕ ರಹಾನೆ 29ರನ್ಗಳಿಸಿ ಔಟಾದ್ರು. ಇನ್ನು ಪ್ರಾಕ್ಟೀಸ್ ಪಂದ್ಯದಲ್ಲಿ ಶತಕ ಸಿಡಿಸಿದ ಆಧಾರದ ಮೇಲೆ ಹನುಮ ವಿಹಾರಿಗೆ ಕೊಹ್ಲಿ, ಈ ಪಂದ್ಯದಲ್ಲಿ ಚಾನ್ಸ್ ನೀಡಿದ್ರು. ಆದ್ರೆ, ಮೊದಲ ಇನ್ನಿಂಗ್ಸ್ನಲ್ಲಿ ಒಂದಂಕಿ ರನ್ಗೆ ಸುಸ್ತಾಗಿದ್ದ ಹನುಮ, 2ನೇ ಇನ್ನಿಂಗ್ಸ್ನಲ್ಲಿ 15ರನ್ಗೆ ವಿಕೆಟ್ ಒಪ್ಪಿಸಿದ್ರು.
ಇನ್ನು 7ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದಿದ್ದ ರಿಷಬ್ ಪಂತ್ 4 ಬೌಂಡ್ರಿ ಸಹಿತ 25ರನ್ಗಳಿಸಿದ್ರೆ, ರವಿಚಂದ್ರನ್ ಅಶ್ವಿನ್ 4ರನ್ಗೆ ಪೆವಿಲಿಯನ್ ಸೇರಿದ್ರು. ಇಶಾಂತ್ ಶರ್ಮಾ 12ರನ್ಗಳಿಸಿದ್ರೆ, ಜಸ್ಪ್ರೀತ್ ಬೂಮ್ರಾ ಸೊನ್ನೆ ಸುತ್ತಿದ್ರು. ಈ ಮೂಲಕ ಭಾರತ ದ್ವಿತೀಯ ಇನ್ನಿಂಗ್ಸ್ನಲ್ಲಿ 191ರನ್ಗಳಿಗೆ ವಿಕೆಟ್ ಒಪ್ಪಿಸ್ತು. ಈ ಮೂಲಕ ನ್ಯೂಜಿಲೆಂಡ್ಗೆ ಭಾರತ 9ರನ್ಗಳ ಗುರಿಯನ್ನ ನೀಡುತ್ತೆ.
ಕೊಹ್ಲಿ ಪಡೆ ಮೇಲೆ ಡೆಡ್ಲಿ ಅಟ್ಯಾಕ್: ದ್ವಿತೀಯ ಇನ್ನಿಂಗ್ಸ್ನಲ್ಲೂ ಕೊಹ್ಲಿ ಪಡೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಕಿವೀಸ್ ಬೌಲರ್ಗಳು ಕೊಹ್ಲಿ ಪಡೆಗೆ ಶಾಕ್ ಕೊಟ್ರು. ಟಿಮ್ ಸೌಥಿ ದ್ವಿತೀಯ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ದರ್ಬಾರ್ ನಡೆಸಿದ್ರು. ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದ್ರೆ, ಕಾಲಿನ್ ಗ್ರ್ಯಾಂಡ್ ಹೋಮ್ ಒಂದು ವಿಕೆಟ್ ಪಡೀತಾರೆ.
ಭಾರತ ನೀಡಿದ್ದ 9ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಪರ ಟಾಮ್ ಲಾಥಮ್ ಅಜೇಯ 7ರನ್ ಮತ್ತು ಟಾಮ್ ಬ್ಲಂಡೆಲ್ ಅಜೇಯ 2ರನ್ಗಳಿಸಿದ್ರು. ಈ ಮೂಲಕ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದಲ್ಲಿ ಗೆದ್ದು ವಿಜಯೋತ್ಸವನ್ನ ಆಚರಿಸ್ತು.
ನ್ಯೂಜಿಲೆಂಡ್ಗೆ ಶತಕದ ಗೆಲುವಿನ ಸಂಭ್ರಮ: ನ್ಯೂಜಿಲೆಂಡ್ ತಂಡಕ್ಕೆ 100 ಟೆಸ್ಟ್ ಪಂದ್ಯ ಗೆಲುವು ಇದಾಗಿದ್ದು, ಕೇನ್ ಪಡೆಯನ್ನ ಖುಷಿಯನ್ನ ದುಪ್ಪಟ್ಟು ಮಾಡಿತ್ತು. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈ ಭರ್ಜರಿ ಗೆಲುವಿನ ಮೂಲಕ ನ್ಯೂಜಿಲೆಂಡ್ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದಂತಾಗಿದೆ. ವೆಲ್ಲಿಂಗ್ಟನ್ ಅಂಗಳದಲ್ಲಿ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ಗಳನ್ನ ಕಬಳಿಸಿದ ಟೀಮ್ ಸೌಥಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. ನಂಬರ್ ಒನ್ ಟೆಸ್ಟ್ ತಂಡ ಭಾರತವನ್ನ ಮಣಿಸಿರುವ ನ್ಯೂಜಿಲೆಂಡ್ ವೆಲ್ಲಿಂಗ್ಟನ್ನಲ್ಲಿ ಶತಕದ ಗೆಲುವಿನ ಸಂಭ್ರಮಾಚರಣೆ ಮಾಡಿದೆ.